ಎಲ್.ಸಿ.ಎ ತೇಜಸ್ ಯುದ್ದ ವಿಮಾನದಲ್ಲಿ ಹಾರಾಟ ನಡೆಸಿ ಪುಳಕಿತರಾದ ರಾಜನಾಥ್ ಸಿಂಗ್..

ಸೈನಿಕ ಸಮವಸ್ತ್ರದಲ್ಲಿ, ಆಕ್ಸಿಜನ್ ಮಾಸ್ಕ್, ಹೆಲ್ಮೆಟ್ ಹಾಕಿ ಪೈಲಟ್ ಹಿಂಬದಿಯ ಸೀಟ್‌ನಲ್ಲಿ ಕುಳಿತ 68 ವರ್ಷದ ರಾಜನಾಥ್ ಸಿಂಗ್ ಎಲ್.ಸಿ.ಎ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಪುಳಕಿತಗೊಂಡಿದ್ದಾರೆ. ಆ ಮೂಲಕ ಭಾರತದಲ್ಲೇ ತಯಾರಿಸಿದ ಯುದ್ಧ ವಿಮಾನದಲ್ಲಿ ಹಾರಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾತ್ರರಾಗಿದ್ದಾರೆ.

ಎಲ್.ಸಿ.ಎ ತೇಜಸ್ ಯುದ್ಧ ವಿಮಾನವು ಇಂದು ಬೆಳಿಗ್ಗೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತು.

“ವಿಮಾನವು ತುಂಬಾ ನಯವಾಗಿದೆ ಮತ್ತು ಆರಾಮದಾಯಕವಾಗಿದೆ. ನಾನು ರೋಮಾಂಚನಗೊಂಡೆ. ತೇಜಸ್ ಅನ್ನು ನಾವೇ ತಯಾರಿಸಿದ್ದರಿಂದ ಹೆಮ್ಮೆಯಾಗುತ್ತಿದೆ ಎಂದು ಸಿಂಗ್ ಹೇಳಿದರು. “ಆಗ್ನೇಯ ಏಷ್ಯಾದ ಹಲವು ದೇಶಗಳು ತೇಜಸ್ ವಿಮಾನವನ್ನು ಖರೀದಿಸಲು ಆಸಕ್ತಿ ತೋರಿಸಿವೆ” ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ ನಡೆಯಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಉತ್ಪನ್ನಗಳ ಪ್ರದರ್ಶನದಲ್ಲಿ ಸಿಂಗ್ ಭಾಗವಹಿಸಲಿದ್ದಾರೆ.

ಕಳೆದ ಶುಕ್ರವಾರ, ತೇಜಸ್ ಗೋವಾದಲ್ಲಿ “ಸುರಕ್ಷಿತ ಲ್ಯಾಂಡಿಂಗ್” ಅನ್ನು ಯಶಸ್ವಿಯಾಗಿ ನಿರ್ವಹಿಸಿದ ಭಾರತದ ಮೊದಲ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು ನೌಕಾಪಡೆಯೊಂದಿಗೆ ಜೆಟ್ ಸೇವೆ ನೀಡುವ ಸಾಮರ್ಥ್ಯ ಹೊಂದಿದೆ.

ಭಾರತೀಯ ವಾಯುಪಡೆಯು (ಐಎಎಫ್) ಈಗಾಗಲೇ ತೇಜಸ್ ವಿಮಾನವನ್ನು ಸೇರಿಸಿಕೊಂಡಿದೆ. ಎಲ್‌ಸಿಎಯ ನೌಕಾ ಆವೃತ್ತಿಯು ಇನ್ನು ಅಭಿವೃದ್ಧಿ ಹಂತದಲ್ಲಿದೆ.

ಆರಂಭದಲ್ಲಿ ಭಾರತೀಯ ವಾಯುಪಡೆಯು 40 ತೇಜಸ್ ವಿಮಾನಗಳಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ (ಎಚ್‌ಎಎಲ್) ಬೇಡಿಕೆಯಿಟ್ಟಿತ್ತು. ನಂತರ ಎಚ್‌ಎಎಲ್‌ಗೆ ಮತ್ತೊಂದು ಬ್ಯಾಚ್ ನಲ್ಲಿ ರೂ.50,000 ಕೋಟಿ ರೂ ವೆಚ್ಚದಲ್ಲಿ 83 ತೇಜಸ್ ಗಳನ್ನು ಖರೀದಿಸಲು ಮುಂದಾಗಿದೆ.

ಈ ವರ್ಷದ ಜನವರಿಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಹಿಂದಿನ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ರವರು ಸುಖೋಯ್ -30 ಫೈಟರ್ ಜೆಟ್‌ನಲ್ಲಿ ವಿಹಾರಕ್ಕೆ ತೆರಳಿದ ಎರಡನೇ ಭಾರತೀಯ ಮಹಿಳಾ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here