Homeಮುಖಪುಟಬಿಜೆಪಿಯತ್ತ ಕೆ.ಎನ್. ರಾಜಣ್ಣ ಚಿತ್ತ?

ಬಿಜೆಪಿಯತ್ತ ಕೆ.ಎನ್. ರಾಜಣ್ಣ ಚಿತ್ತ?

- Advertisement -
- Advertisement -

| ಕೆ.ಈ.ಸಿದ್ದಯ್ಯ |

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಲೋಪದೋಷಗಳನ್ನು ಕಟುವಾಗಿ ಟೀಕಿಸಿದರೂ ಕೆ.ಎನ್.ರಾಜಣ್ಣ ಮಾತ್ರ ಬಿಜೆಪಿ ಮುಖಂಡರ ಜೊತೆ ಕುಚುಕು ಕುಚುಕು ಗೆಳೆಯರಾಗಿದ್ದಾರೆ. ಒಂದು ಮೂಲದ ಪ್ರಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತುಮಕೂರಿನ ಕೆ.ಎನ್.ಆರ್ ಮನೆಗೆ ಹಲವು ಬಾರಿ ಭೇಟಿ ನೀಡಿ ಚರ್ಚೆ ಮಾಡಿಯೂ ಹೋಗಿದ್ದಾರೆ.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬೇಲಿ ಮೇಲೆ ಕೂತಿದ್ದಾರೆ. ಯಾವುದೇ ಕ್ಷಣದಲ್ಲಿ ಹೇಗಾದರೂ ಹೊರಳಬಹುದು ಎಂಬುದು ಅವರ ಲೆಕ್ಕಾಚಾರ. ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ ನಂತರ ಕೆ.ಎನ್.ರಾಜಣ್ಣ ನಡೆ ನಿಗೂಢವಾಗಿದೆ. ಒಮ್ಮೆ ‘ಕಮಲಮುಖಿ’ಯೂ ಮತ್ತೊಮ್ಮೆ ‘ಕೈ’ಮುಗಿಯುವುದು ಮಾಡುತ್ತಲೇ ಬರುತ್ತಿದ್ದಾರೆ.

ಹಿಂದೆ ಜೆಡಿಎಸ್‍ನಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಡಾ.ಎಂ.ಆರ್.ಹುಲಿನಾಯ್ಕರ್ ತಮ್ಮ ಶ್ರೀದೇವಿ ಮೆಡಿಕಲ್ ಕಾಲೇಜಿಗೆ ಅನುಮತಿ ಪಡೆಯಲು ಬಿಜೆಪಿ ಸೇರ್ಪಡೆ ಯಾಗಿದ್ದರು. ಈಗ ಕೆ.ಎನ್.ರಾಜಣ್ಣ ಕೂಡ ತಮಗೆ ಎದುರಾಗಿರುವ ಅಡ್ಡಿಆತಂಕಗಳ ನಿವಾರಣೆಗೆ ಬಿಜೆಪಿ ಸೇರಿದರೆ ಅಚ್ಚರಿ ಇಲ್ಲ. ಇದಕ್ಕೆ ಇತ್ತೀಚಿನ ಬೆಳವಣಿಗೆಗಳು ಮತ್ತು ಅವರ ನಡೆಗಳೇ ಸಾಕ್ಷಿ. ಲೋಕಸಭಾ ಚುನಾವಣೆಯ ಸಮಯದಲ್ಲಿ ಜಿ.ಎಸ್.ಬಸವರಾಜು ಜೊತೆ ಫೋಟೋ ತೆಗೆಸಿಕೊಂಡು ತನ್ನ ಕಡುವೈರಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಭಿನ್ನ ಸಂದೇಶ ರವಾನಿಸಿದ್ದರು. ಬಳಿಕ ಯಡಿಯೂರಪ್ಪರ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಕೆ.ಎನ್.ಆರ್ ಹಾಜರಿದ್ದರು. ಮತ್ತೊಂದು ಕಾರ್ಯಕ್ರಮದಲ್ಲೂ ಬಿ.ಎಸ್.ಯಡಿಯೂರಪ್ಪ ಜೊತೆ ವೇದಿಕೆ ಹಂಚಿಕೊಂಡರು. ಇದೇ ಕಾರಣಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ರಾಜಣ್ಣ ಅವರನ್ನು ಕೆಳಗಿಳಿಸುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಲಿಲ್ಲ..

ಈಗ ಇಬ್ಬರು ಮಾಜಿ ಕಬಡ್ಡಿ ಪಟುಗಳು ಒಂದಾಗಿ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಅದು ಸಹಕಾರಿ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದಾರೆ. ಹಾಗಾದರೆ ಸೊಗಡು ಶಿವಣ್ಣ ಪತ್ರಿಕಾಗೋಷ್ಟಿಯಲ್ಲಿ ಯಾಕೆ? ಎಂಬ ಪತ್ರಕರ್ತರ ಪ್ರಶ್ನೆಗೆ ಶಿವಣ್ಣ ಸಹಕಾರಿ ಅಂದ್ರು. ಅದ್ಯಾವಾಗಿನಿಂದ ಸೊಗಡು ಶಿವಣ್ಣ ‘ಸಹಕಾರಿ’ ಆದರೋ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಲೋಪದೋಷಗಳನ್ನು ಕಟುವಾಗಿ ಟೀಕಿಸಿದರೂ ಕೆ.ಎನ್.ರಾಜಣ್ಣ ಮಾತ್ರ ಬಿಜೆಪಿ ಮುಖಂಡರ ಜೊತೆ ಕುಚುಕು ಕುಚುಕು ಗೆಳೆಯರಾಗಿದ್ದಾರೆ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದರೂ ಅದರ ಬಗ್ಗೆ ರಾಜಣ್ಣ ಚಕಾರ ಎತ್ತಲಿಲ್ಲ. ಕಾಂಗ್ರೆಸ್ ತಾನು ಯಾರನ್ನು ವಿರೋಧಿಸುತ್ತದೆಯೋ ಆ ಪಕ್ಷದೊಂದಿಗೆ ಕೆಎನ್.ಆರ್ ಹೆಚ್ಚು ಸಖ್ಯ ಬೆಳೆಸಿದರೂ ಕ್ರಮ ಕೈಗೊಳ್ಳಲಿಲ್ಲ. ಒಂದು ಮೂಲದ ಪ್ರಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತುಮಕೂರಿನ ಕೆ.ಎನ್.ಆರ್ ಮನೆಗೆ ಹಲವು ಬಾರಿ ಭೇಟಿ ನೀಡಿ ಚರ್ಚೆ ಮಾಡಿಯೂ ಹೋಗಿದ್ದಾರೆ.

ಹಾಗೆಯೇ ತನ್ನ ಹಳೆಯ ಕಬಡ್ಡಿ ಸ್ನೇಹಿತ ಸೊಗಡು ಶಿವಣ್ಣ ಜೊತೆಗೆ ಹೆಚ್ಚು ನಿಕಟ ಸಂಬಂಧವಿಟ್ಟುಕೊಂಡಿದ್ದಾರೆ. ರಾಜಣ್ಣ ಅವರಿಗೂ ಕಾಂಗ್ರೆಸ್‍ನಲ್ಲಿ ಸಚಿವ ಆಗಬೇಕೆಂಬ ಆಸೆ ಈಡೇರಲಿಲ್ಲ. ಆ ಕಾರಣವನ್ನಿಟ್ಟುಕೊಂಡೇ ಕೆ.ಎನ್.ಆರ್. ಬಿಜೆಪಿಗೆ ಜಿಗಿಯಲು ಸಿದ್ದತೆ ಮಾಡಿಕೊಂಡಿದ್ದಾರೆ. ಬಿಜೆಪಿಗೂ ರಾಜಣ್ಣ ಬೇಕು. ತುಮಕೂರು ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಬಿಜೆಪಿಗೂ ಇದೆ. ಕೆ.ಎನ್.ಆರ್ ಬಿಜೆಪಿಗೆ ಬಂದರೆ ಮಧುಗಿರಿಯ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶವಾಗುತ್ತದೆ. ಇದು ರಾಜಣ್ಣನವರ ನಿರೀಕ್ಷೆಯೂ ಆಗಿದೆ. ಜಿಲ್ಲೆಯ ಕಾಂಗ್ರೆಸ್‍ನಲ್ಲಿ ಯಾರೂ ಕೂಡ ರಾಜಣ್ಣ ಬೆಂಬಲಕ್ಕೆ ನಿಲ್ಲುವುದಿಲ್ಲ. ಡಾ.ಪರಮೇಶ್ವರ್, ಟಿ.ಬಿ.ಜಯಚಂದ್ರ ಹೀಗೆ ಯಾರನ್ನೂ ಅವರು ನಂಬುತ್ತಿಲ್ಲ. ಮಾಜಿ ಸಂಸದ ಮುದ್ದಹನುಮೇಗೌಡರು ಕೆಎನ್‍ಆರ್ ಪರ ನಿಂತರೂ ಯಾವುದೇ ಹುದ್ದೆಯನ್ನು ಕೊಡಿಸುವಷ್ಟು ಶಕ್ತರಲ್ಲ.

ಈ ಎಲ್ಲಾ ಲೆಕ್ಕಾಚಾರಗಳನ್ನು ಇಟ್ಟುಕೊಂಡಿರುವ ಕೆಎನ್‍ಆರ್ ‘ಸಹಕಾರಿ’ಯಲ್ಲದ ಸಹವರ್ತಿಯ ಜೊತೆ ಕೈಜೋಡಿಸಿದ್ದಾರೆ. ಸೊಗಡು ಶಿವಣ್ಣ ಮತ್ತು ರಾಜಣ್ಣ ಜೋಡಿಯಾದರೆ ಅಪ್ಪ ಮಗನನ್ನು ಬಗ್ಗುಬಡಿಯಬಹುದು. ಜಿ.ಎಸ್.ಬಸವರಾಜು ಮತ್ತು ಜ್ಯೋತಿಗಣೇಶ್ ಅವರನ್ನು ಬಿಟ್ಟರೆ ಅವರೊಂದಿಗೆ ಪಕ್ಷದ ಕಾರ್ಯಕರ್ತರ ಬೆಂಬಲ ಅಷ್ಟಾಗಿ ಇಲ್ಲ. ಜೊತೆಗೆ ಸೊಗಡು ಶಿವಣ್ಣ ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಯೂ ಅಲ್ಲ. ಬಸವರಾಜು ಅಷ್ಟು ಸೊಗಡು ಅಪಾಯಕಾರಿಯೂ ಅಲ್ಲ ಎಂಬುದನ್ನು ರಾಜಣ್ಣ ಗಮನದಲ್ಲಿಟ್ಟುಕೊಂಡಿದ್ದು ಬಿಜೆಪಿ ಸೇರಲು ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ.

ರಾಜಣ್ಣ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಹೌದು. ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕು. ಇಲ್ಲದಿದ್ದರೆ ಕಿರಿಕಿರಿ ಅನುಭವಿಸುವುದು ತಪ್ಪುವುದಿಲ್ಲ. ಸರ್ಕಾರ ದಿಢೀರ್ ಎಂದು ಯಾವುದಾದರೂ ಕ್ರಮ ಕೈಗೊಳ್ಳಬಹುದು. ಹೀಗಾಗಿ ರಾಜಣ್ಣ ಅಲ್ಲಿಗೆ ಹೋಗುವುದಿಲ್ಲ ಎಂದು ಹೇಗೆ ಹೇಳುವುದು ಎನ್ನುತ್ತವೆ ಜಿಲ್ಲೆಯ ಕಾಂಗ್ರೆಸ್ ಮೂಲಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...