Homeಮುಖಪುಟಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

ಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

- Advertisement -
- Advertisement -

|ಜಯಪ್ರಕಾಶ್ ಶೆಟ್ಟಿ. ಹೆಚ್ |
ಸಹಪ್ರಾಧ್ಯಾಪಕರು, ತೆಂಕನಿಡಿಯೂರು.ಉಡುಪಿ.

2008ರ ನವೆಂಬರ್‍ನಲ್ಲಿ ನಾನು ನಿರೀಕ್ಷೆಯೇ ಮಾಡಿರದ ರಾಜಕೀಯ ಪ್ರೇರಿತವಾದ ಅಕಸ್ಮಾತ್ ವರ್ಗಾವಣೆಯೊಂದು ನನಗೆ ನಾನು ಈ ಹಿಂದೆ ಕಂಡಿರದ ಹಾವೇರಿಯ ಹಿರೇಕೆರೂರಿನ ದುರ್ಗಮ್ಮನ ಕೆರೆಯನ್ನು ಕಾಣಿಸುವ ಜೊತೆಗೆ ನೇರನಡೆನುಡಿಯ ಗೆಳೆಯನೊಬ್ಬನನ್ನೂ ಕಾಣಿಸಿತ್ತು. ನೀರಿರದ ಊರಿಗೆ ನನ್ನನ್ನು ಎತ್ತಿ ಎಸೆಯುವ ಕೇಡಿಗರ ಧಾವಂತದಲ್ಲಿ ತುಂಬಿದ ಕೆರೆಯಿರುವ ಊರಿಗೆ ಹೋಗಿ ಬಿದ್ದ ನನಗೆ ಅರಿಯದ ಊರಿನ ಅನಾಥನೆಂಬ ಆತಂಕವೇ ಬಾಧಿಸದಂತೆ ಮನುಷ್ಯಪ್ರೀತಿಯ ನೆರಳೂ ಸಿಕ್ಕಿತ್ತು. ಸಂಸಾರದಿಂದ ದೂರವಿದ್ದ ಸಂಕಟ ಇದ್ದುದು ನಿಜವಿದ್ದರೂ ನಾನಾಗ ಜೀವಪರ ಚಿಂತನೆಯ ಆಲೋಚನೆಗಳನ್ನು ನಿರ್ಭೀತವಾಗಿ ಹಂಚಿಕೊಳ್ಳುತ್ತಿದ್ದ ಸಮಾನಮನಸ್ಕನೊಬ್ಬನ ಗೆಳೆತನದ ಮೂಲಕ ಬರಡು ನೆಲದಿಂದ ಕಿಂಚಿತ್ತಾದರೂ ಪಾರಾದ ಸುಖವನ್ನೂ ಅನುಭವಿಸಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಶೇರು, ಬಡ್ಡಿ, ಚೀಟಿ, ಹೊಲ ಮನಿ, ಸೈಟು ಇವ್ಯಾವುದರ ಗೋಜಿಗೆ ಬೀಳದೆ ವೃತ್ತಿ ಮತ್ತು ವಿದ್ಯಾರ್ಥಿಗಳ ಜೊತೆಗೆ ಅಪಾರವಾಗಿ ಬದುಕನ್ನು ಪ್ರೀತಿಸುತ್ತಿದ್ದ ಅಸಲಿ ಮೇಷ್ಟರೊಬ್ಬರ ಗೆಳೆತನ ಉಂಡಿದ್ದೆ. ಹೀಗೆ ಅಂದು ಬೆಸೆದುಕೊಂಡ ಗೆಳೆಯ ಜೋಗುರನೆಂಬ ಆ ಪ್ರೀತಿಯ ಕೊಂಡಿ ಮತ್ತೆಂದೂ ಕಳಚಿಕೊಂಡಿರಲಿಲ್ಲ.

ಜೋಗುರರು ನನ್ನಂತಹ ಕೆಲವೇ ಮಂದಿ ಸ್ನೇಹಿತರಿಗಷ್ಟೇ ಪರಿಚಿತರಲ್ಲ. ಸಮಾಜಶಾಸ್ತ್ರದ ಉಪನ್ಯಾಸಕನಾಗಿ, ಹವ್ಯಾಸಿ ಪತ್ರಕರ್ತ, ಕತೆಗಾರ, ಸಮೂಹಪರ ಚಿಂತನೆಯ ಬರಹಗಾರ, ಅತ್ಯುತ್ತಮ ವಾಗ್ಮಿಯಾಗಿ ತನ್ನನ್ನು ಗುರುತಿಸಿಕೊಂಡ ಜೋಗುರ ಕನ್ನಡದ ಓದುಗರಿಗೆ ಚಿರಪರಿಚಿತರು. ಸಾವಿಗೆ ಸಮೀಪದಲ್ಲಿದ್ದಾಗಲೂ ಅಕ್ಷರ ಮತ್ತು ಬದುಕುಗಳೆರಡರ ಅಪಾರಪ್ರೀತಿಯಲ್ಲಿ ಜೀವಂತವಾಗಿ ಉಳಿದವರು. ಈ ಲೋಕದ ಸಾಮಾಜಿಕ ಆಗುಹೋಗುಗಳು ಮತ್ತು ರಾಜಕೀಯದ ಸೂಕ್ಷ್ಮಗಳ ಕುರಿತಂತೆ ಅನೇಕ ಜನಪರ ಚಳುವಳಿಗಳಲ್ಲಿ ಸಮಾನಮನಸ್ಕರೊಂದಿಗೆ ಪ್ರಗತಿಪರ ವಿವೇಕದೊಂದಿಗೆ ಬೆರೆಯುತ್ತಿದ್ದವರು. ಸಂವೇದನೆಗಳು ಸತ್ತು ಮತಿಹೀನ ಉದ್ರೇಕಗಳೇ ಮಿಂಚುತ್ತ್ತಿರುವ ಜಗತ್ತಿನಲ್ಲಿ ಒಬ್ಬ ಬರಹಗಾರನಿಗೆ ಇರುವ ಹೊಣೆಗಾರಿಕೆಯ ಮಹತ್ವವನ್ನು ಅರಿತವರು.

ಮನುಷ್ಯನಾಗಿ ಸ್ವಯಂ ಕಷ್ಟದ ಬದುಕನ್ನು ಬದುಕಿದ ಅನುಭವದ ಹಿನ್ನೆಲೆಯುಳ್ಳ ಜೋಗುರರು ಬಡತನದ ಬಗೆಗೆ ಎಂದೂ ಅವಹೇಳನ ಮಾಡಿದವರಲ್ಲ. ಈ ನೆಲದ ಜಾತಿಜಾಡ್ಯದ ಪರ ವಹಿಸಿದ ಸಣ್ಣತನದವರೂ ಅಲ್ಲ. ಜಾತಿಯನ್ನು ವಿರೋಧಿಸಿದ ಜೋಗುರರು ಸ್ವಯಂ ಅಂತಹ ಉದಾಹರಣೆಯಾಗಿ ಬದುಕಿದವರು. ಮಾತನ್ನು ಕೃತಿಯಾಗಿಸುವ ಬಸವಪರಂಪರೆಯ ನಿಜ ವಾರಸುದಾರನಂತೆ ಜಾತಿಯ ಕಕ್ಷೆಯನ್ನು ಮೀರಿ ವಿವಾಹ ಸಂಬಂಧವನ್ನು ಹೊಂದಿದ್ದಷ್ಟೇ ಅಲ್ಲ, ಅದನ್ನು ಅತ್ಯಂತ ಪ್ರೀತಿಯಿಂದ ಬದುಕಿದವರು. ಆದರೆ ಜೋಗುರರ ಬರಹಗಳನ್ನು ಗಮನಿಸುವುದಾದರೆ ಆ ಬರಹಗಳಲ್ಲಿ ಇರುವ ವ್ಯವಸ್ಥೆಯನ್ನು ನಿರಾಕರಿಸಲೇಬೇಕೆಂಬ ಹಟವೇನೂ ಇಲ್ಲ. ಮುಖ್ಯವಾಗಿ ಅವು ಸಾಮಾಜಿಕ ಸ್ವಾಸ್ಥ್ಯದ ಕಡೆಗೆ ಹೆಚ್ಚು ಒಲಿದವುಗಳು. ಅವರ ಅನೇಕ ಬರಹಗಳು ಕೆಲವೊಂದು ಸಾಮಾಜಿಕಸಂಸ್ಥೆಗಳನ್ನು ಅವುಗಳ ಆರೋಗ್ಯಕರ ಸ್ವರೂಪದಲ್ಲಿ ಹಾಗೆಯೇ ಮುಂದುವರೆಯಬೇಕೆಂದು ತಣ್ಣಗೆ ಆಶಿಸುವಂತೆಯೂ ಕಂಡುಬರುತ್ತವೆ. ಕುಟುಂಬ ಸಂಬಂಧ, ಮನುಷ್ಯ ಸಂಬಂಧಗಳ ಆರೋಗ್ಯಕರ ಇರುವಿಕೆಯ ನಿರೀಕ್ಷೆಯಲ್ಲಿ ಸಾಂಸ್ಥಿಕಸ್ವರೂಪಗಳನ್ನು ಒಂದು ಹಂತಗಳಲ್ಲಿ ಅವರ ಬರಹಗಳು ಬೆಂಬಲಿಸುತ್ತವೆ ಕೂಡಾ. ಅದು ಅವರ ಬದುಕಿನ ತರ್ಕವೂ ಆಗಿರುವಂತಿದೆ.

ಕೆಲವೇ ಸಮಯ ಒಟ್ಟಿಗೆ ಕೆಲಸ ಮಾಡಿದ ನಾವಿಬ್ಬರೂ ಒಟ್ಟಿಗೇ ವರ್ಗಾವಣೆ ಪಡೆದು ಹಿರೇಕೆರೂರನ್ನು ಬಿಟ್ಟು ನಾನು ಉಡುಪಿಗೆ ಬಂದೆ ಅವರು ಧಾರವಾಡಕ್ಕೆ ಹೋದರು. ಆದರೆ ನಮ್ಮ ಗೆಳೆತನ ಹಾಗೆಯೇ ಉಳಿದಿತ್ತು. ಅವರ ಹಟಕ್ಕೆ ಕಟ್ಟುಬಿದ್ದು ಕಾರವಾರದ ‘ಕರಾವಳಿ ಮುಂಜಾವು’ ದಿನಪತ್ರಿಕೆಯಲ್ಲಿ ನಾನು ಒಂದು ವರ್ಷದ ತನಕ ಅಂಕಣವನ್ನೂ ಬರೆದೆ. ಹೀಗೆ ಸಲುಗೆಯಲ್ಲಿ ಒತ್ತಾಯಿಸಬಲ್ಲ, ಅಷ್ಟೇ ಸಲೀಸಾಗಿ ತಾನು ಕಂಡ ಮಿತಿಯನ್ನು ಹೇಳಬಲ್ಲ ಪ್ರೀತಿಯ ಜೋಗುರ ಇನ್ನಿಲ್ಲವಾದರು ಎಂಬುದು ನನ್ನನ್ನೂ ಒಳಗೊಂಡಂತೆ ಅನೇಕ ಗೆಳೆಯರಿಗೆ ಮರೆಯಲಾರದ ನೋವು. ಆದರೆ ಅಗಲಿ ಹೋದ ಈ ಪ್ರೀತಿಯ ಕರುಳು ನಮ್ಮೊಳಗೆ ಉಳಿಸಿ ಹೋದ ಗೆಳೆತನದ ತೇವ ಮತ್ತು ಅಗಲಿಕೆಯ ನೋವುಗಳಲ್ಲಿ ಆ ಜೀವದ ನೆನಪು ನಮ್ಮೊಳಗೆ ಹಸಿರಾಗಿರಲಿ ಎಂಬುದಷ್ಟೇ ಕರಗಿ ಹೋದ ಗೆಳೆಯನಿಗೆ ನಮ್ಮೆಲ್ಲರ ಹರಕೆ ಎಂದುಕೊಳ್ಳುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನೆ ಕಟ್ಟಲು, ವಾಹನ ಖರೀದಿಸಲು ಇದು ಸುಸಮಯ: ರೆಪೊ ದರ ಕಡಿತಗೊಳಿಸಿದ ಆರ್.ಬಿ.ಐ

ಡಿಸೆಂಬರ್ 05, ಶುಕ್ರವಾರದಂದು ನಡೆದ ಹಣಕಾಸು ನೀತಿ ಸಭೆಯಲ್ಲಿ (MPC) ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇಂದಿನ ಕಡಿತದ ನಂತರ, ಕೇಂದ್ರ ಬ್ಯಾಂಕ್ ಈ...

ಉತ್ತರ ಪ್ರದೇಶ| ದಲಿತ ಯುವಕನ ಮೇಲೆ ಹಲ್ಲೆ; ಬಂದೂಕು ತೋರಿಸಿ ವಿವಸ್ತ್ರಗೊಳಿಸಿದ ಗುಂಪು

ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗುಂಪೊಂದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ಗುಂಪು ದಲಿತ ಯುವಕನನ್ನು ಚಪ್ಪಲಿಯಿಂದ ಹೊಡೆದು, ಮುಷ್ಟಿ, ಕಾಲು ಮತ್ತು...

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ದೇಶೀಯ ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದೆ. ಶುಕ್ರವಾರ ಹಲವಾರು ವಿಮಾನ ನಿಲ್ದಾಣಗಳಲ್ಲಿ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.  ಶುಕ್ರವಾರ (ಡಿಸೆಂಬರ್ 5, 2025) ಮಧ್ಯರಾತ್ರಿಯವರೆಗೆ ಎಲ್ಲಾ...

ದ್ವೇಷ ಭಾಷಣ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ, ಕಠಿಣ ಶಿಕ್ಷೆ ಪ್ರಸ್ತಾವನೆ

ಕರ್ನಾಟಕ ಸಚಿವ ಸಂಪುಟವು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಯನ್ನು ಅಂಗೀಕರಿಸಿದೆ, ದ್ವೇಷ ಭಾಷಣಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡವನ್ನು ವಿಧಿಸುವ ಕಠಿಣ ಶಿಕ್ಷೆಯ ಪ್ರಸ್ತಾವನೆಯನ್ನು ಈ...

BREAKING NEWS: ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ‘ತಾಂತ್ರಿಕ’ ಅಂತ್ಯ: 1777 ಎಕರೆ ಡಿನೋಟಿಫೈಗೆ ಒಪ್ಪಿದ ಸಚಿವ ಸಂಪುಟ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಹೋರಾಟಕ್ಕೆ ಅಂತಿಮವಾಗಿ ತಾಂತ್ರಿಕ ಜಯವೂ ಸಿಕ್ಕಿದೆ. ಡಿಸೆಂಬರ್ 4, ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...

ಲೈಂಗಿಕ ಕಿರುಕುಳ ಆರೋಪ: ಪಾಲಕ್ಕಾಡ್ ಶಾಸಕನ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರದ ಬೆನ್ನಲ್ಲೇ, ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್ 

ತಿರುವನಂತಪುರಂ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಕೇರಳ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.  ರಾಹುಲ್ ಮಮ್‌ಕೂಟತಿಲ್ ತಮ್ಮ ಶಾಸಕ...

ದಲಿತರು ಒಗ್ಗಟ್ಟಾಗದೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ದಲಿತರು ಒಗ್ಗಟ್ಟಾಗದೆ ಇದ್ದರೆ ಮುನುವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಸಾಧ್ಯವಿಲ್ಲ; ನಾವು ನೂರಿನ್ನೂರು ಜನ ಪ್ರತ್ಯೇಕ ಹೋರಾಟ ಮಾಡಿದರೆ ಪ್ರಯೋಜನವಿಲ್ಲ, ಒಂದು ಕರೆ ಕೊಟ್ಟರೆ ಲಕ್ಷಾಂತರ ಜನರು ಸೇರುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ...

ದಲಿತ ಚಳವಳಿ ಎಲ್ಲ ಶೋಷಿತರನ್ನೂ ಒಳಗೊಂಡಿದೆ; ನಮ್ಮಲ್ಲಿ ಹೊಲೆ-ಮಾದಿಗ ಎಂಬ ಬೇಧವಿಲ್ಲ: ದಸಂಸ ಸಂಚಾಲಕ ಹೆಣ್ಣೂರು ಶ್ರೀನಿವಾಸ್

"ದಲಿತ ಚಳವಳಿ ಯಾವುದೇ ಒಂದು ಜಾತಿಯ ಪರವಾಗಿಲ್ಲ.. ಪೌರ ಕಾರ್ಮಿಕನ ಮಗನನ್ನ ರಾಜ್ಯ ಸಂಚಾಲಕನನ್ನಾಗಿ ಮಾಡಿದೆ. ನಮ್ಮಲ್ಲಿ ಹೊಲೆಯ-ಮಾದಿಗ ಎಂಬ ಬೇಧವಿಲ್ಲ. ಈ ಚಳವಳಿ ಎಲ್ಲ ಶೋಷಿತ ಸಮುದಾಯಗಳನ್ನೂ ಒಳಗೊಂಡಿದೆ" ಎಂದು ಕರ್ನಾಟಕ...

ಚಳಿಗಾಲದ ಅಧಿವೇಶನ: ಸಂಸತ್ತಿನ ಹೊರಗೆ ‘ವಾಯು ಮಾಲಿನ್ಯದ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳಿಂದ ಪ್ರತಿಭಟನೆ

2025 ರ ಸಂಸತ್ತಿನ ಚಳಿಗಾಲದ ಅಧಿವೇಶನವು ನಾಲ್ಕನೇ ದಿನಕ್ಕೆ ಕಾಲಿಡುತ್ತಿದ್ದಂತೆ, ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಹದಗೆಡುತ್ತಿರುವ ವಾಯು ಮಾಲಿನ್ಯದ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸಂಸದರು ಗುರುವಾರ ಲೋಕಸಭೆಯಲ್ಲಿ ಮುಂದೂಡಿಕೆ...

ಭೀಮಾ ಕೋರೆಗಾಂವ್ ಪ್ರಕರಣ: ದೆಹಲಿ ವಿವಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರಲ್ಲಿ ಬಂಧಿಸಲ್ಪಟ್ಟು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಖ್ಯಾತ ಶಿಕ್ಷಣ ತಜ್ಞ ಡಾ....