Homeಮುಖಪುಟ4 ಬಾರಿ ಶಾಸಕ, 2 ಬಾರಿ ಮಂತ್ರಿಯಾದರೂ ಸ್ವಂತ ಮನೆಯೂ ಇಲ್ಲದ ಸರಳ, ಸಜ್ಜನಿಕೆಯ ಜಮುನಾ...

4 ಬಾರಿ ಶಾಸಕ, 2 ಬಾರಿ ಮಂತ್ರಿಯಾದರೂ ಸ್ವಂತ ಮನೆಯೂ ಇಲ್ಲದ ಸರಳ, ಸಜ್ಜನಿಕೆಯ ಜಮುನಾ ಪ್ರಸಾದ್

- Advertisement -
- Advertisement -

ಭಾರತದಲ್ಲಿ ಭ್ರಷ್ಟ ರಾಜಕಾರಣಿಗಳೇ ತುಂಬಿ ಹೋಗಿದ್ದಾರೆ. ಹೇಳೋದೊಂದು ಮಾಡೋದು ಮತ್ತೊಂದು ಅನ್ನೋದು ರಾಜಕಾರಣಿಗಳಿಗೆ ರೂಢಿಯಾಗಿದೆ. ಕೊಟ್ಟ ಆಶ್ವಾಸನೆಗಳು, ನೀಡಿದ ಭರವಸೆಗಳು, ಮಾಡಿಯೇ ತೀರುತ್ತೇನೆ ಅಂತಾ ಕೊಚ್ಚಿಕೊಂಡ ಬಡಾಯಿ ಮಾತುಗಳನ್ನು ನಂಬುತ್ತಲೇ ಬಂದಿರೋ ನಮ್ಮ ಜನ ಮೂರ್ಖರೇ ಬಿಡಿ. ಜನತೆಗಾಗಿ ಎಲ್ಲಾ ಅನ್ನುತ್ತಲೇ ಎಲ್ಲವನ್ನೂ ಬಾಚಿಕೊಂಡು ಸದ್ದಿಲ್ಲದೇ, ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟಿಸಿ, ಮುಂದಿನ ಮೂರ್ನಾಲ್ಕು ಪೀಳಿಗೆಯವರು ಕುಳಿತು ತಿನ್ನುವಷ್ಟು ಆಸ್ತಿ ಮಾಡಿಟ್ಟಿರುತ್ತಾರೆ. ಐದು ವರ್ಷದ ಅಧಿಕಾರ ಮುಗಿಯುತ್ತಲೇ ದರ್ಬಾರು, ದೌಲತ್ತಿನಿಂದ ಮೆರೆಯೋದೆ.

ಇಂಥ ಜನಪ್ರತಿನಿಧಿಗಳು ಇರೋವಾಗ ರಾಜಕೀಯದಲ್ಲಿ ಪ್ರಾಮಾಣಿಕತೆ ಎಲ್ಲಿಂದ ಬರಬೇಕು..? ಬಡವರಿಗಾಗಿ, ಮಕ್ಕಳಿಗಾಗಿ, ಮಹಿಳಾ ಕಲ್ಯಾಣಕ್ಕಾಗಿ, ಸಾರ್ವಜನಿಕರಿಗಾಗಿ, ಜಿಲ್ಲೆ, ರಾಜ್ಯ, ದೇಶದ ಅಭಿವೃದ್ಧಿಗಾಗಿ ತನ್ನೆಲ್ಲವನ್ನೂ ಅರ್ಪಿಸುವ ಮನೋಭಾವವಂತೂ ತುಂಬಾ ಕಡಿಮೆಯಾಗಿ ಹೋಗಿದೆ. ನಾನು ಚೆನ್ನಾಗಿದ್ದರೆ ಸಾಕು, ನನ್ನ ಕುಟುಂಬ ಸೇಫ್ ಆಗಿದ್ದರೆ ಸಾಕು ಅಂತಾ ಬಯಸುವವರೇ ಅತ್ಯಧಿಕ. ಒಳ್ಳೆಯ ಮನಸ್ಸಿನಿಂದ ಜನರ ಒಳಿತಿಗಾಗಿ, ಸಮಾಜ ಸುಧಾರಣೆಗೆ ಮಿಡಿಯುವ ಹೃದಯವುಳ್ಳ ರಾಜಕಾರಣಿಗಳು ಇರುವುದೇ ವಿರಳ. ಅಂದ ಹಾಗೇ ಇಷ್ಟೆಲ್ಲಾ ಪೀಠಿಕೆ ಯಾಕೆ.. ಅಂದ್ರೆ.. ಭ್ರಷ್ಟ ರಾಜಕಾರಣಿಗಳ ಮಧ್ಯೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಎಲೆ ಮರೆಯ ಕಾಯಿಯಂತೆ ಬದುಕುತ್ತಿರುವ ರಾಜಕಾರಣಿಯೊಬ್ಬರು ಇದ್ದಾರೆ. ಇಷ್ಟು ದಿನ ಅವರ್ಯಾರು, ಏನೂ ಅಂತಲೇ ಯಾರಿಗೂ ತಿಳಿದಿರಲಿಲ್ಲ. ಆದರೀಗ ಅವರ ಪ್ರಾಮಾಣಿಕ ಸೇವೆ, ಬದುಕಿನ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವರೇ ಜಮುನಾ ಪ್ರಸಾದ್ ಬೋಸ್.

92 ವರ್ಷದ ಜಮುನಾ ಪ್ರಸಾದ್ ಬೋಸ್ ಅವರನ್ನು ಮತ್ತೊಬ್ಬ ಸುಭಾಷ್ ಚಂದ್ರ ಬೋಸ್ ಎಂತಲೇ ಕರೆಯುತ್ತಾರೆ. ಉತ್ತರಪ್ರದೇಶದಲ್ಲಿ ಸುಮಾರು 4 ಬಾರಿ ಶಾಸಕರಾಗಿ ಆಯ್ಕೆಯಾದವರು. 2 ಬಾರಿ ಸಚಿವರಾಗಿಯೂ ಕೆಲಸ ಮಾಡಿದವರು. ಅವರ ಸರಳ ಜೀವನ, ವ್ಯಕ್ತಿತ್ವ, ಪ್ರಾಮಾಣಿಕತೆ, ಸಜ್ಜನಿಕೆ, ನಿಸ್ವಾರ್ಥ ಸೇವೆಯಿಂದಲೇ ಹೆಸರು ಗಳಿಸಿದವರು. ನಾಲ್ಕು ಬಾರಿ ಶಾಸಕರಾದ್ರೂ ಹಣ, ಆಸ್ತಿ ಮಾಡಿಕೊಳ್ಳುವ ಭ್ರಷ್ಟ ಕೆಲಸಕ್ಕೆ ಕೈ ಹಾಕದೇ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಾರೆ.

ಜಮುನಾ ಪ್ರಸಾದ್ ಇಂದಿಗೂ ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದಾರೆ. 1955ರಲ್ಲಿ ಸಹೋದರಿಯ ಮದುವೆಗಾಗಿ ಸ್ವಂತ ಮನೆಯನ್ನೇ ಮಾರಿ, ಮದುವೆ ಮಾಡಿದ್ದರು. ಹೀಗಾಗಿ ಇಂದಿಗೂ ಬಾಡಿಗೆ ಮನೆಯಲ್ಲೇ ಬದುಕುತ್ತಿದ್ದಾರೆ.

ಜಮುನಾ ಪ್ರಸಾದ್ ಶಾಸಕರಾಗಿದ್ದಾಗ ಅವರಿಗೆ ಜೀವನಕ್ಕಾಗಿ ಉಳಿಸಬಹುದಾದಷ್ಟು ಸಂಬಳ ಬರುತ್ತಿತ್ತು. ಆದರೆ ಮನೆಯ ಖರ್ಚಿಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದ ಹಣವನ್ನು ಬಡವರಿಗೆ ಮತ್ತು ಹಣದ ಅವಶ್ಯಕತೆ ಇರುವವರಿಗೆ ಕೊಟ್ಟು ಸಹಾಯ ಮಾಡುತ್ತಿದ್ದರು. ಹೀಗಾಗಿ ಜಮುನಾ ಪ್ರಸಾದ್ ಮತ್ತೆ ಸ್ವಂತ ಮನೆ ಕಟ್ಟಿಕೊಳ್ಳಲೇ ಇಲ್ಲ. ಈಗಲೂ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿರುವ ಜಮುನಾ ಪ್ರಸಾದ್, ಹೆಚ್ಚು ಹಣ ಆಸ್ಪತ್ರೆ, ಔಷಧಿಗಾಗಿ ಖರ್ಚಾಗುತ್ತದೆ. ಆದರೂ ಉಳಿದ ಹಣವನ್ನು ಇಲ್ಲದವರಿಗೆ ಕೊಟ್ಟು ಸಹಕರಿಸುತ್ತಿದ್ದಾರೆ.

ನಿಸ್ವಾರ್ಥ ಸೇವೆ ಸಲ್ಲಿಸಿ, ಪ್ರಾಮಾಣಿಕ ಬದುಕು ಕಟ್ಟಿಕೊಂಡಿರುವ ಇಲ್ಲದವರಿಗಾಗಿ ತುಡಿಯುವ ಅವರನ್ನು ಸ್ಥಳೀಯರು ಸುಭಾಷ್ ಚಂದ್ರ ಬೋಸ್ ಅಂತಲೇ ಕರೆಯುತ್ತಾರೆ. ಯಾವತ್ತೂ ಅವರು ತಮ್ಮ ಹುದ್ದೆಯನ್ನು ಕೆಟ್ಟ ಹಾಗೂ ಭ್ರಷ್ಟ ಕೆಲಸಗಳಿಗೆ ಬಳಕೆ ಮಾಡಿಕೊಂಡಿಲ್ಲ. ಜಮುನಾ ಪ್ರಸಾದ್ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಜನ ಬಯಸುತ್ತಿದ್ದಾರೆ. ವಯಸ್ಸಾಗಿದ್ದರೂ ಅವರು ಜನರ ಕಲ್ಯಾಣಕ್ಕಾಗಿ ದುಡಿಯಬಲ್ಲರು ಎಂಬುದು ಸ್ಥಳೀಯರ ನಂಬಿಕೆ.

ಚುನಾಯಿತರಾಗಿ ಅಧಿಕಾರ ಗದ್ದುಗೆ ಹಿಡಿಯುತ್ತಿದ್ದಂತೆ, ಅಡ್ಡದಾರಿ ಬಳಸಿ, ಹಣ ಗಳಿಸುವ ರಾಜಕಾರಣಿಗಳ ಮಧ್ಯೆ ಸದ್ದಿಲ್ಲದ ನಿಸ್ವಾರ್ಥ ಸೇವೆ ಸಲ್ಲಿಸಿದ ಸರಳ ಜೀವಿ ಜಮುನಾ ಪ್ರಸಾದ್‍ಗೆ ಅಭಿನಂದನೆ ಹೇಳಲೇಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...