ರಾಕಿಂಗ್‌ ಸ್ಟಾರ್‌ ಯಶ್‌ ಸೃಷ್ಟಿಸಿದ ಇಂಪ್ಯಾಕ್ಟ್‌ಗೆ ಒಲಿದ ಜಿಕ್ಯೂ ಪ್ರಶಸ್ತಿ ಗರಿ

ಅಮೆರಿಕದ ನ್ಯೂಯಾರ್ಕ್ ಮೂಲದ ಅಂತಾರಾಷ್ಟ್ರೀಯ ಜಿಕ್ಯೂ ಪುರುಷರ ಮಾಸ ಪತ್ರಿಕೆ, ದಿ ಜಿಕ್ಯೂ ಇಂಡಿಯಾದ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ (The GQ 50 Most Influential Young Indians ) ಪಟ್ಟಿಯಲ್ಲಿ ನಟ, ರಾಕಿಂಗ್ ಸ್ಟಾರ್ ಯಶ್ ಸ್ಥಾನ ಪಡೆದುಕೊಂಡಿದ್ದಾರೆ. ಸೋಮವಾರ ಸಂಜೆ  ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ, ಪ್ರಶಸ್ತಿ ಸ್ವೀಕರಿಸಿದರು.

19 ದೇಶಗಳಲ್ಲಿ ದಿ ಜಿಕ್ಯೂ ಮಾಸಪತ್ರಿಕೆ ೨೦೧೯ರ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಆಯ್ಕೆಯಾಗಿದ್ದಾರೆ. ಬಾಲಿವುಡ್ ನಿರ್ದೇಶಕ ಕರಣ್‌ ಜೋಹರ್‌, ಯಶ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂತಸವನ್ನು ಯಶ್‌ ಟ್ವಿಟ್ಟರ್‌, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಯುವ ಮನಸುಗಳು ಸೃಷ್ಟಿಸಿದ ಸಂಚಲನ, ಆಲೋಚನೆ, ಬದಲಾವಣೆ, ಯೋಜನೆಯನ್ನು ಪರಿಗಣಿಸಿ, ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿ ನಾಯಕರಿಗೆ ಜಿಕ್ಯೂ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿದೆ. ವಿಶೇಷ ಅಂದ್ರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ 50 ಯುವ ಭಾರತೀಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ದಿ ಜಿಕ್ಯೂ ಕಾರ್ಯಕ್ರಮ ಮಾಡಿದೆ.

ಸುಮಾರು 50 ಕ್ಷೇತ್ರಗಳಲ್ಲಿ ಪ್ರಭಾವ ಬೀರಿದ ಸಾಧನೆಯ ಪಟ್ಟಿಯಲ್ಲಿ ಭಾರತೀಯ ಚಿತ್ರರಂಗದಿಂದ ಆಯ್ಕೆಯಾಗಿರುವ ಏಕೈಕ ಸ್ಟಾರ್‌ ನಟ, ಅದು ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್‌ ಚಿತ್ರದ ಮೂಲಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಶ್‌ ಪ್ರಭಾವ ಬೀರಿದ್ದರು. ಚೊಚ್ಚಲ ಬಹುಭಾಷಾ ಚಿತ್ರದಿಂದ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ. ಗಳಿಸಿ ದಾಖಲೆ ಮಾಡಿದ್ದರು. ಪ್ರಾದೇಶಿಕ ಸ್ಟಾರ್‌ ಆಗಿರುವ ಯಶ್‌ ದೇಶದ ಮಾರುಕಟ್ಟೆಯನ್ನು ಕ್ರಮಿಸಿದ್ದು ಚಿತ್ರೋದ್ಯಮಕ್ಕೆ ಮಾದರಿಯಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ದೊರಕಿಸಿ ಕೊಟ್ಟಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here