Homeರಂಜನೆಕ್ರೀಡೆವಿಶ್ವಕಪ್ ಕ್ರಿಕೆಟ್‍ನ ಟೀಮ್ ಆಫ್ ಟೂರ್ನಿಮೆಂಟ್ 11ರಲ್ಲಿ ಭಾರತದ ರೋಹಿತ್, ಬೂಮ್ರಾಗೆ ಸ್ಥಾನ. ಕೊಹ್ಲಿಗಿಲ್ಲ ಅದೃಷ್ಟ

ವಿಶ್ವಕಪ್ ಕ್ರಿಕೆಟ್‍ನ ಟೀಮ್ ಆಫ್ ಟೂರ್ನಿಮೆಂಟ್ 11ರಲ್ಲಿ ಭಾರತದ ರೋಹಿತ್, ಬೂಮ್ರಾಗೆ ಸ್ಥಾನ. ಕೊಹ್ಲಿಗಿಲ್ಲ ಅದೃಷ್ಟ

- Advertisement -
- Advertisement -

2019ರ ವಿಶ್ವಕಪ್ ಕ್ರಿಕೆಟ್ ಮುಗಿದಿದೆ. ಇಂಗ್ಲೆಂಡ್ ವಿಜಯಿಯಾದರೆ, ನ್ಯೂಜಿಲೆಂಡ್ ರನ್ನರ್ ಅಪ್ ಆಗಿದೆ. ಈಗ ಐಸಿಸಿಯು ಟೀಮ್ ಆಫ್ ಟೂರ್ನಿಮೆಂಟ್ ಅನ್ನು ಪ್ರಕಟಿಸಿದೆ. ಅಂದರೆ ಈ ವಿಶ್ವಕಪ್ ನಲ್ಲಿ ಭಾಗವಹಿಸಿದ ಎಲ್ಲಾ ರಾಷ್ಟ್ರಗಳ ಅತ್ಯುತ್ತಮ ಆಟಗಾರರನ್ನು ಒಳಗೊಂಡ 11+1 ಜನರ ತಂಡ. ಇದರಲ್ಲಿಯೂ ನಾಯಕ, ಉಪನಾಯಕ, ಆರಂಭಿಕ ಆಟಗಾರರು, ಕೀಪರ್, ಫೀಲ್ಡರ್ ಮತ್ತು ಬೌಲರ್‍ಗಳು ಇರುತ್ತಾರೆ.
ಈ 12ರ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಮತ್ತು ಬೌಲರ್ ಜಸ್ಪ್ರಿತ್ ಬೂರ್ಮಾ ಸ್ಥಾನ ಪಡೆದಿದ್ದಾರೆ.

ಆದರೆ ಉತ್ತಮ ಆಟವಾಡಿದ ವಿರಾಟ್ ಕೊಹ್ಲಿಗೆ ಪಟ್ಟಿಯಲ್ಲಿ ಸ್ಥಾನ ಲಭ್ಯವಾಗಿಲ್ಲ. ಅವರ ಸ್ಥಾನವನ್ನು ಇಂಗ್ಲೆಂಡಿನ ಆರಂಭಿಕ ಆಟಗಾರ ಜೇಸನ್ ರಾಯ್ ಆಕ್ರಮಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ವಿರಾಟ್ ಮತ್ತು ಜೇಸನ್ ರಾಯ್ ಇಬ್ಬರೂ ಒಟ್ಟು 443 ರನ್ ಗಳನ್ನು ಗಳಿಸಿದ್ದಾರೆ. ಆದರೆ ಜೇಸನ್ 7 ಪಂದ್ಯಗಳಿಂದ ಒಟ್ಟು 63.29 ಸರಾಸರಿ ಪ್ರದರ್ಶನವಿದ್ದರೆ ಕೊಹ್ಲಿ 9 ಪಂದ್ಯಗಳಿಂದ 55.38ರ ಸರಾಸರಿ ಪ್ರದರ್ಶನವಿದೆ. ಹಾಗಾಗಿ ಕೊಹ್ಲಿಯನ್ನು ಹಿಂದಿಕ್ಕಿ ಜೇಸನ್ ರಾಯ್ ಪಟ್ಟಿ ಸೇರಿದ್ದಾರೆ.

ಪಟ್ಟಿಯಲ್ಲಿರುವ ಆಟಗಾರರು ಮತ್ತು ಅವರ ಸಾಧನೆಗಳ ನೋಟ

1 ರೋಹಿತ್ ಶರ್ಮಾ: ಭಾರತದ ಆರಂಭಿಕ ಬ್ಯಾಟ್ಸ್‍ಮನ್ ಹಿಟ್ ಮ್ಯಾನ್ ಎಂದೇ ಖ್ಯಾತರಾದ ರೋಹಿತ್ ಟೂರ್ನಿಯ ಆರಂಭಿಕ ಆಟಗಾರರಾಗಿದ್ದಾರೆ. ಉಪನಾಯಕನ ಸ್ಥಾನವನ್ನು ಪಡೆದಿದ್ದಾರೆ. ಒಟ್ಟು ಟೂರ್ನಿಯಲ್ಲಿ 9 ಪಂದ್ಯಗಳಿಂದ ಅತ್ಯಧಿಕ 648 ರನ್ ಸಿಡಿಸಿರುವ ರೋಹಿತ್ 5 ಶತಕ ಮತ್ತು 1 ಅರ್ಧ ಶತಕ ದಾಖಲಿಸಿದ್ದಾರೆ. ಶೇ.80ರ ಸರಾಸರಿ ಇದೆ.

2 ಜೇಸನ್ ರಾಯ್: ಇಂಗ್ಲೆಂಡ್ ತಂಡದ ಜೇಸನ್ 7 ಪಂದ್ಯಗಳಿಂದ ಒಟ್ಟು 63.29 ಸರಾಸರಿಯಲ್ಲಿ ಒಟ್ಟು 443 ರನ್ ಗಳನ್ನು ಗಳಿಸಿದ್ದಾರೆ.

3 ಕೇನ್ ವಿಲಿಯಮ್ಸನ್: ಮೂರನೇ ಬ್ಯಾಟ್ಸ್ ಮನ್ ಆಗಿ ಸ್ಥಾನ ಪಡೆಯುವ ಮೂಲಕ ನ್ಯೂಜಿಲೆಂಡ್‍ನ ನಾಯಕ ಕೇನ್ ವಿಲಿಯಮ್ಸನ್ ಟೀಮ್ ಆಫ್ ಟೂರ್ನಿಮೆಂಟ್‍ನ ನಾಯಕನೂ ಆಗಿದ್ದಾರೆ. ಶಾಂತ ಸ್ವಭಾವದ ತಾಳ್ಮೆಯ ಮೂರ್ತಿ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. 82.57ರ ಸರಾಸರಿಯಲಿ 578 ರನ್ ಗಳಿಸಿದ್ದಾರೆ

4. ಜ್ಯೂ ರೂಟ್: ಇಂಗ್ಲೆಂಡ್ ತಂಡದ ಜ್ಯೂ ರೂಟ್ 61.77 ಸರಾಸರಿಯಲ್ಲಿ 556 ರನ್ ಸಿಡಿಸಿದ್ದಾರೆ.

5 ಶಕೀಬ್ ಅಲ್ ಹಸನ್: ಬಾಂಗ್ಲಾದೇಶದ ಉದಯೋನ್ಮುಖ ಆಟಗಾರನಾದ ಶಕೀಬ್ 86.57ರ ಸರಾಸರಿಯಲ್ಲಿ 606 ರನ್ ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ 11 ವಿಕೆಟ್ ಸಹ ಕಬಳಿಸಿ ಉತ್ತಮ ಆಲ್‍ರೌಂಡರ್ ಎನಿಸಿಕೊಂಡಿದ್ದಾರೆ.

6 ಬೆನ್ ಸ್ಟೋಕ್ಸ್ : ಇಂಗ್ಲೆಂಡ್‍ನ ಫೈನಲ್ ಪಂದ್ಯದ ಹೀರೋ ಆದ ಇಂಗ್ಲೆಂಡ್‍ನ ಬೆನ್ ಸ್ಟೋಕ್ಸ್ 66.42ರ ಸರಾಸರಿಯಲಿ 465 ರನ್ ಸಿಡಿಸಿದ್ದಲ್ಲದೇ, 7 ವಿಕೆಟ್ ಪಡೆದಿದ್ದಾರೆ.

7 ಅಲೆಕ್ಸ್ ಕ್ಯಾರಿ: ಆಸ್ಟ್ರೇಲಿಯಾ ವಿಕೇಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಈ ತಂಡದ ಕೀಪರ್ ಸ್ಥಾನ ಲಭಿಸಿದೆ. ಒಟ್ಟು ಟೂರ್ನಿಯಲ್ಲಿ 20 ಔಟ್ ಗಳನ್ನು ಮಾಡಿರುವ ಇವರು 375 ರನ್ ಸಹ ಸಿಡಿಸಿದ್ದಾರೆ.

8 ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅತ್ಯುತ್ತಮ ಬೌಲರ್ ಎನಿಸಿದ್ದಾರೆ. 10 ಪಂದ್ಯಗಳಿಂದ 27 ವಿಕೆಟ್ ಗಳಿಸಿ ಸಾಧನೆ ಮಾಡಿದ್ದಾರೆ.

9 ಜೋಫ್ರಾ ಆರ್ಚರ್: ಫೈನಲ್ ಪಂದ್ಯದ ಸೂಪರ್ ಓವರ್ ಬಾಲ್ ಮಾಡಿ ಗೆಲುವು ತಂದುಕೊಟ್ಟ ಇಂಗ್ಲೆಂಡ್‍ನ ಜೋಫ್ರಾ ಆರ್ಚರ್ ಒಟ್ಟು 20 ವಿಕೆಟ್ ಕಬಳಿಸಿದ್ದಾರೆ.

10 ಲಾಕೀ ಫರ್ಗೂಸನ್: ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಭಾರತದ ವಿರುದ್ಧ ಸೆಮಿಫೈನಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಒಟ್ಟು 21 ವಿಕೆಟ್ ಗಳಿಸಿದ್ದಾರೆ.

11 ಜಸ್ಪ್ರೀತ್ ಬೂಮ್ರ: ಭಾರತದ ವೇಗಿ ಜಸ್ಪ್ರೀತ್ ಬೂಮ್ರ 18 ವಿಕೆಟ್ ಗಳಿಸಿ ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಒಟ್ಟು 11 ಜನರಲ್ಲಿ ಇಂಗ್ಲೆಂಡ್ 4 ಆಟಗಾರರು, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ ಇಬ್ಬರು ಆಟಗಾರರು ಮತ್ತ ಬಾಂಗ್ಲಾದೇಶದ ಒಬ್ಬ ಆಟಗಾರರು ಸೇರಿದ್ದಾರೆ. 12ನೇ ಆಟಗಾರನಾಗಿ ನ್ಯೂಜಿಲೆಂಡ್ ನ ಟ್ರೆಂಟ್ ಬೋಲ್ಟ್ ಅನ್ನು ಆರಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read