Homeಕರ್ನಾಟಕIBPSMosa ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ: ಎಚ್.ಡಿ.ಕೆ

IBPSMosa ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ: ಎಚ್.ಡಿ.ಕೆ

- Advertisement -
- Advertisement -

ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರ್ಕಾರ IBPS ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಜೊತೆಗೆ ಮುಂಚೆ ಇದ್ದ domicile ನಿಯಮವನ್ನು ವಾಪಾಸ್ ತರಲಾಗಿಲ್ಲ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ. #IBPSMosa ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮಿಸ್ಟರ್ ಸಿ.ಟಿ ರವಿಯವರೆ, ಯಾವನೋ ಹಿಂದಿಯವನಿಗೆ ತೊಂದ್ರೆ ಆಯ್ತು ಅಂತ ಬಂದಿದ್ದೀರಲ್ಲಾ, ಅದೇ #IBPSMosa #karnatakajobsforkannadigas ಅಭಿಮಾನಿಗಳು ಆದಾಗ ನಿಮ್ಮ ಧ್ವನಿ ಸತ್ತು ಹೋಗಿತ್ತಾ..?? ಕನ್ನಡಿಗರು ಗುಲಾಮಗಿರಿಯಲ್ಲಿ ಬಾಳಿದವರಲ್ಲ ಆದ್ರೆ ನಿಮ್ಮಂತವರನ್ನ ನೋಡಿದ್ರೆ ಅಸಹ್ಯ ಆಗುತ್ತೆ. ದಯವಿಟ್ಟು ನಾನು ಕನ್ನಡಿಗ ಅಂತ ಎಲ್ಲೂ ಹೇಳ್ಕೊಂಡು ಓಡಾಡ್ಬೇಡಿ. ಎಂದು ಅರುಣ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ವ್ಯಕ್ತಿ/ಪಕ್ಷ/ಸರಕಾರ ನಮ್ಮದೆಂಬ ಕೊಂಡಾಟದಿಂದ ಅವು ತಪ್ಪು ಹೆಜ್ಜೆ ಇಟ್ಟಾಗಲೂ ಎಚ್ಚರಿಸದೇ ಇರುವುದು ಅವುಗಳಿಗೆ ನಾವು ಮಾಡುವ ದ್ರೋಹವೇ ಸರಿ. ಕೇಂದ್ರದ ಭಾಷಾನೀತಿ ಏನೇನೂ ಚೆನ್ನಾಗಿಲ್ಲ. ಇದರಿಂದ #IBPSMosa ವಾಗುತ್ತಿದೆ. ನಮ್ಮ ಸರಕಾರವಲ್ಲವೇ ಎಂದು ಮೌನವಹಿಸದೇ ಎಚ್ಚರಿಸಬೇಕಾದ ಸಮಯವಿದು. ಮಮಕಾರ ಅತಿಯಾದರೆ ಅಪಾಯ ಎಂದು ಸಾತ್ವಿಕ್ ಎನ್ ವಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಬ್ಯಾಂಕಿಂಗ್ ಹುದ್ದೆಯಲ್ಲಿ ಕನ್ನಡಿಗರು ಇರಬೇಕಾಗಿದ್ದು ಗ್ರಾಹಕರ ಹಿತದೃಷ್ಟಿಯಿಂದ ಅತ್ಯಗತ್ಯ ಈ ಬಗ್ಗೆ ಕನ್ನಡಿಗರು ಬರಿಯ ಸಾಮಾಜಿಕ ಮಾಧ್ಯಮ ಹೋರಾಟ ಮಾಡಿದ್ರೆ ಸಾಕಗೊಲ್ಲ ಬೀದಿ ಹೋರಾಟ ಅಗತ್ಯ. ನಿರುದ್ಯೋಗಿ ಯುವಜನರ ಸಂಘಟನೆ ಹೋರಾಟ ಅಗತ್ಯ ಎಂದು ಕೃಷಿಕ್ ಎ.ವಿ ಟ್ವೀಟ್ ಮಾಡಿದ್ದಾರೆ.

ಕನ್ನಡಿಗರು ಈ 25 ಬಿಜೆಪಿ ಸಂಸದರನ್ನ ಎಷ್ಟು ಪರಿಣಾಮಕಾರಿಯಾಗಿ ತರಾಟೆಗೆ ತಗೋತಾರೋ ಅಷ್ಟು ಕನ್ನಡಿಗರ ಘನತೆ ಭಾರತದಲ್ಲಿ ಹೆಚ್ಚುತ್ತೆ…!! ಎಂದು ಶಂಕರನಾರಾಯಣರವರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...