Homeಮುಖಪುಟ'ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯಗಳು ಅನುಸರಿಸುವುದಿಲ್ಲ' ಎಂದು ಹೇಳಲು ಸಾಧ್ಯವಿಲ್ಲ: ಕಪಿಲ್ ಸಿಬಲ್

‘ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯಗಳು ಅನುಸರಿಸುವುದಿಲ್ಲ’ ಎಂದು ಹೇಳಲು ಸಾಧ್ಯವಿಲ್ಲ: ಕಪಿಲ್ ಸಿಬಲ್

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ವಿಷಯ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇಂತಹ ಸಮಯದಲ್ಲಿ ಕೋಳಿಕೋಡ್‌ನಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, “ಸಾಂವಿಧಾನಿಕವಾಗಿ ಸಂಸತ್ತು ಅಂಗೀಕರಿಸಿದ ಕಾನೂನನ್ನು ನಾನು ಅನುಸರಿಸುವುದಿಲ್ಲ ಎಂದು ಯಾವುದೇ ಸರ್ಕಾರ ಹೇಳುವುದು ಕಷ್ಟವಾಗುತ್ತದೆ” ಎಂದು ಹೇಳಿದ್ದಾರೆ.

ಸಿಎಎ ವಿರುದ್ಧದ ಹೋರಾಟದಲ್ಲಿ, ಇತರ ಪಕ್ಷಗಳು ಕಾಂಗ್ರೆಸ್ ನೇತೃತ್ವ ವಹಿಸಿಕೊಳ್ಳಲು ಅವಕಾಶ ನೀಡಬೇಕು. ರಾಷ್ಟ್ರೀಯ ರಾಜಕಾರಣದ ವಿಷಯ ಬಂದಾಗ, ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಏಕೆಂದರೆ ಇದು ರಾಷ್ಟ್ರೀಯ ಶಾಸನವಾಗಿದೆ. ಆದ್ದರಿಂದ, ನಾವು ರಾಜಕೀಯ ಲಾಭ ನಷ್ಟಗಳನ್ನು ಬಿಟ್ಟು ರಾಜಕೀಯವಾಗಿ ಒಗ್ಗೂಡಿ ಈ ಯುದ್ಧವನ್ನು ಹೋರಾಡಿ ಗೆಲ್ಲಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇಂದು ಬೆಳಿಗ್ಗೆ ಮಾಡಿದ ಟ್ವೀಟ್‌ನಲ್ಲಿ ಅವರು ಹೊಸ ಪೌರತ್ವ ಕಾನೂನನ್ನು ಅಸಂವಿಧಾನಿಕ ಎಂದು ಕರೆದರು.  ಪ್ರತಿ ರಾಜ್ಯ ವಿಧಾನಸಭೆಯು ನಿರ್ಣಯವನ್ನು ಅಂಗೀಕರಿಸಲು ಮತ್ತು ಅದನ್ನು ಹಿಂತೆಗೆದುಕೊಳ್ಳಲು ಸಾಂವಿಧಾನಿಕ ಹಕ್ಕನ್ನು ಹೊಂದಿದೆ. ಯಾವಾಗ ಸುಪ್ರೀಂ ಕೋರ್ಟ್ ಕಾನೂನು ಸಂವಿಧಾನಬದ್ಧವೆಂದು ಘೋಷಿಸಿದರೆ ಅದನ್ನು ವಿರೋಧಿಸುವುದು ಸಮಸ್ಯೆಯಾಗುತ್ತದೆ” ಹಾಗಾಗಿ ಅದಕ್ಕೂ ಮೀರಿ ಹೋರಾಟ ನಡೆಯಬೇಕಾಗಿದೆ ಎಂದು ಅವರು ಬರೆದಿದ್ದಾರೆ.

ಕಾಂಗ್ರೆಸ್ಸಿನ ಮತ್ತೊಬ್ಬ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್,  ಸಿಬಲ್ ಅವರ ಅಭಿಪ್ರಾಯಗಳನ್ನು ಪುನರುಚ್ಚರಿಸಿದ್ದಾರೆ. “ಪೌರತ್ವ ಕಾನೂನಿನ ಮೇಲೆ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡದಿದ್ದರೆ ಅದು ಕಾನೂನು ಪುಸ್ತಕದಲ್ಲಿ ಉಳಿಯುತ್ತದೆ. ಆಗ ನೀವು ಕಾನೂನನ್ನು ಪಾಲಿಸಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

“ಇದು ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಬಹಳ ಗಂಭೀರವಾದ ಭಿನ್ನಾಭಿಪ್ರಾಯವನ್ನು ಹೊಂದಿರುವ ವಿಷಯವಾಗಿದೆ, ಆದ್ದರಿಂದ ನಾವು ಉನ್ನತ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತೇವೆ” ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...