ನಾನೇ ಒಂದು ಜುಮ್ಲಾ : ಗೋಡ್ಸೆ ಜೊತೆ ಒಂದು ಕಾಲ್ಪನಿಕ ಸಂದರ್ಶನ

| ಲೋಕೇಶ್ ಮಾಲ್ತಿ ಪ್ರಕಾಶ್ | ಜೆ.ಎನ್.ಯು.ಎಸ್.ಯು ಮಾಜಿ ಅಧ್ಯಕ್ಷ

ಭಾರತದಲ್ಲಿ 2014ರಿಂದ ದೇಶಭಕ್ತ ಸರ್ಕಾರ ಬಂದ ಮೇಲೆ, ತಾನು ಮತ್ತು ತನ್ನ ಸಾಹಸಗಳ ಬಗ್ಗೆ ಭಾರತದಲ್ಲಿ ಹೊಸ ಆಸಕ್ತಿ ಹುಟ್ಟಿದೆ ಎಂಬ ಸುದ್ದಿ ಕಳೆದೆರಡು ವರ್ಷಗಳ ಹಿಂದೆ ನಾಥುರಾಮ್ ಗೋಡ್ಸೆಯನ್ನು ತಲುಪಿತು. ಉಲ್ಲಸಿತನಾದ ಗೋಡ್ಸೆ ಭೂಮಿಗೆ ತಲುಪಲು ಟ್ರಾವೆಲ್ ವೀಸಾಕ್ಕೆ ಅರ್ಜಿ ಹಾಕಿದ. ಆದರೆ ಒಪ್ಪಿಗೆ ಪಡೆಯಲು ಹಲವಾರು ಅಡೆತಡೆ ಎದುರಾದವು. ಅದ್ಹೇಗೋ ಅಧಿಕಾರಿಗಳ ‘ರೆಡ್‍ಟೇಪ್’ ಬಾಹು ಯಮಲೋಕಕ್ಕೂ ಚಾಚಿತು.

ಕೈ ಬೆಚ್ಚಗಿಲ್ಲದೇ ಈ ಬಾಬುಗಳು ಗೋಡ್ಸೆ ಫೈಲನ್ನು ಮುಂದಕ್ಕೆ ಹೋಗಲು ಬಿಡಲೇ ಇಲ್ಲ. ಆದರೂ ಅದ್ಹೇಗೋ ಸ್ವಲ್ಪ ಮುಂದಕ್ಕೆ ಚಲಿಸಿದಾಗ ಕಾಂಗ್ರೆಸ್ ದುಷ್ಟನಾಗಿದ್ದ ಉನ್ನತ ಅಧಿಕಾರಿಗೆ ಈ ಗೋಡ್ಸೆ ಭೂಮಿಗೆ ಬರುವುದು ಇಷ್ಟವಾಗಲಿಲ್ಲ. ಗೋಡ್ಸೆ ಸ್ವರ್ಗ ಮತ್ತು ಭೂಮಿಯಲ್ಲಿರುವ ಕೆಲವು ಎಳೆಗಳನ್ನು ಎಳೆದ. ಅಂತಿಮವಾಗಿ ಭೂಮಿಯ ಮೇಲಿನ ಭಯಂಕರ ಹೆಣ್ಣುಮಗಳೊಬ್ಬಳು ಶಾಪ ಕೊಟ್ಟ ಪರಿಣಾಮವಾಗಿ ಆ ಉನ್ನತ ಅಧಿಕಾರಿ ಅಲ್ಲಿಂದ ವರ್ಗಾವಣೆಗೊಂಡ! ಹಾಂ, ಗೋಡ್ಸೆಗೆ ಭಾರತಕ್ಕೆ ಟ್ರಾವೆಲ್ ವೀಸಾ ಸಿಕ್ಕೇ ಬಿಡ್ತು. ಗೋಡ್ಸೆ ಕೇದಾರನಾಥದ ಗುಹೆಯೊಂದರಲ್ಲಿ ‘ಸಮಾಧಿ’ ಸ್ಥಿತಿಗೆ ತೆರಳುವ ಮುನ್ನ ನನಗೆ ಆತನ ಸಂದರ್ಶನ ಮಾಡುವ ಅವಕಾಶ ಸಿಕ್ಕಿತು. ಆ ಸಂದರ್ಶನದ ಕೆಲವು ತುಣುಕುಗಳು ನಿಮಗಾಗಿ:

ಪ್ರಶ್ನೆ: ಮಿ. ಗೋಡ್ಸೆ, ಹಲವಾರು ದಶಕಗಳ ನಂತರ ಮತ್ತೆ ಹೆಡ್‍ಲೈನಿನಲ್ಲಿರುವುದು ಹೇಗನಿಸುತ್ತೆ?
ಗೋಡ್ಸೆ: ಸೂಪರ್, ಗ್ರೇಟ್! ಇಂತಹ ಒಂದು ಅವಕಾಶ ಮಾಡಿಕೊಟ್ಟ ಸಾಧ್ವಿಗೆ ಥ್ಯಾಂಕ್ಸ್ ಹೇಳ ಬಯಸುತ್ತೇನೆ. ದೇಶಭಕ್ತರು ಅಧಿಕಾರಕ್ಕೆ ಬಂದಾಗಿನಿಂದ ನನಗೊಂದು ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ಭರವಸೆಯಲ್ಲಿದ್ದೆ. ನಿಮಗೆ ಗೊತ್ತಾ, ಭೂಮಿಯ ಮೇಲೆ ನಿನಗಿಂತ ನನಗೆ ಹೆಚ್ಚು ಭಕ್ತರಿದ್ದಾರೆ ಎಂದು ನಾನು ಹಿಟ್ಲರ್‍ಗೇ ಚಾಲೆಂಜ್ ಮಾಡಿ ಬಂದಿದ್ದೇನೆ. ಅವನು ಇದರಲ್ಲಿ ಸೋತರೆ, ಗೋಮೂತ್ರ ಕುಡಿಯಲೇಬೇಕು. ಗೋಮೂತ್ರವಷ್ಟೇ ನಿನ್ನನ್ನು ನಿಜವಾದ ಆರ್ಯನನ್ನಾಗಿ ಮಾಡಬಲ್ಲದು ಎಂದು ಅವನಿಗೆ ಹೇಳಿದ್ದೇನೆ ಕೂಡ…

ಪ್ರ: ಆದರೆ, ಪ್ರಧಾನಿ ತಮಗೆ ಅಸಂತೋಷವಾಗಿದೆ ಎಂದಿದ್ದಾರೆ, ಅವರು ತಮ್ಮ ಹೃದಯದಿಂದ ಸಾದ್ವಿಯನ್ನು ಕ್ಷಮಿಸಲ್ಲವಂತೆ..
ಗೋಡ್ಸೆ: ಅವರು ಪಿಎಂ. ಅವರು ಬಹಳಷ್ಟು ಜನರನ್ನು ಓಲೈಸಬೇಕಾಗುತ್ತೆ. ಅದು ಡೆಮಾಕ್ರಸಿಯ ಧ್ವನಿ… ನೀವು ಎಲ್ಲರನ್ನು ಸಂತುಷ್ಟಗೊಳಿಸಬೇಕಾಗುತ್ತೆ.

ಪ್ರಶ್ನೆ: ಸಾಧ್ವಿಯನ್ನು ಎಂದೂ ಕ್ಷಮಿಸಲ್ಲ ಅಂದಿದ್ದಾರೆ ಅಂದಮೇಲೆ, ಸಾಧ್ವಿ ಏನೋ ಘನಘೋರ ತಪ್ಪು ಮಾಡಿರಬೇಕಲ್ಲ?
ಗೋಡ್ಸೆ: ಇದು ಎಲೆಕ್ಷನ್ ಟೈಮ್. ಎಲೆಕ್ಷನ್ ಟೈಮ್ ಅಂದರೆ ‘ಜುಮ್ಲಾ ಟೈಮ್’…

ಪ್ರಶ್ನೆ: ಅಂದ್ರೆ ಪಿಎಂ ಸುಮ್ಮನೇ ಒಂದು ‘ಜುಮ್ಲಾ’ ಹೊಡೀತಿದ್ದಾರೆ ವಿನಹ ಸತ್ಯವನ್ನಲ್ಲ?
ಗೋಡ್ಸೆ: ಜನರನ್ನು ಇದು ಸತ್ಯ ಅಂತಾ ನಂಬಿಸ್ತೀವಲ್ಲ, ಅದೇ ಸತ್ಯ…

ಪ್ರಶ್ನೆ: ಕೆಲವು ಜನ ಹೇಳ್ತಾರೆ, ನೀನು ದೇಶಭಕ್ತ ಅಂತಾ. ಅದು ಜುಮ್ಲಾನಾ, ಸತ್ಯವಾ?
ಗೋಡ್ಸೆ: ಅದು ವೀಕ್ಷಕನ (ಅಬ್ಸರ್ವರ್) ಮೇಲೆ ಅವಲಂಬಿತ…

ಪ್ರಶ್ನೆ: ಅಂದರೆ ಹಾಗೇ ಹೇಳತಿರೋ ವ್ಯಕ್ತಿ ಮೇಲಲ್ಲ…
ಗೋಡ್ಸೆ: ಅದು ಆತನ ಪಾಲಿಗೆ ಜುಮ್ಲಾ. ಆತನಿಗೆ ಗೊತ್ತು ತಾನೊಂದು ಜುಮ್ಲಾ ಹೊಡಿತಿದ್ದೀನಿ ಅಂತಾ. ಆದರೆ ಅದನ್ನು ಸತ್ಯ ಅಂತಾ ಸ್ವೀಕರಿಸ್ತಾರೆ ಅಂತಾನೂ ಆತನಿಗೆ ಗೊತ್ತಿರುತ್ತೆ. ಅದೇ ಜುಮ್ಲಾದ ಶಕ್ತಿ. ಅದು ಪಿಎಂ ತಮ್ಮ ಹೃದಯದಿಂದ ( ಅದಕ್ಕೂ ಹೃದಯ ಬೇಕು) ಯಾರನ್ನೋ ಕ್ಷಮಿಸುತ್ತಿದ್ದಾರೆ ಅನ್ನೋ ಬಿಂಬವೂ ಹೌದು, ಪಿಎಂ ತನ್ನ ಹೃದಯದಿಂದ ಕ್ಷಮಿಸಲ್ಲ ಅನ್ನುವ ಸತ್ಯವೂ ಹೌದು…

ಪ್ರಶ್ನೆ: ನಿನ್ನ ಬಗ್ಗೆ ನಿನಗೆ ಏನು ಅನಿಸುತ್ತೆ? ನೀನು ದೇಶಭಕ್ತನಾ?
ಗೋಡ್ಸೆ: ನಾನೊಬ್ಬ ಜುಮ್ಲಾ, ನಾನೊಂದು ಜುಮ್ಲಾ…

ಪ್ರಶ್ನೆ: ಅಂದರೆ ಇದೆಲ್ಲ ಒಂದು ಸುಳ್ಳಿನ ಕಂತೆ?
ಗೋಡ್ಸೆ: ಅದು ಸುಳ್ಳಿನ ಕಂತೆಯಲ್ಲ, ಅದು ‘ಫೀಲ್ ಗುಡ್’ ಭಾವ.. ಜುಮ್ಲಾದಿಂದ ನಿನಗೆ ಒಂದು ಆಹ್ಲಾದಕರ ಭಾವ ಆವರಿಸುತ್ತೆ, ಅದೇ ಜುಮ್ಲಾದ ಉದ್ದೇಶವೂ ಕೂಡ. ಅಚ್ಛೇ ದಿನ್ ಅಂದರೆ ಅದೇ…ಪಕೋಡಾ ಮಾರ್ತಾ ಮಾರ್ತಾ, ಗಾಡಿ ತೊಳಿತಾ ತೊಳಿತಾ ಅಥವಾ ಚಾ ಮಾರ್ತಾ ಮಾರ್ತಾ ನಿನಗೆ ‘ಫೀಲ್ ಗುಡ್’ ಎಂಬ ಸಂತೋಷದ ಭಾವ ಉಂಟಾಗುತ್ತೆ. ಕೊಲ್ಲೋ ಮೂಲಕವೂ ನೀನು ‘ಫೀಲ್‍ಗುಡ್’ ಆನಂದ ಪಡಿಬಹುದು. ಒಳ್ಳೆಯ ಭಾವನೆಗಳಿಗಿಂತ ಈ ‘ಫಿಲ್‍ಗುಡ್’ನ ಸೆನ್ಸೆಷನ್ ಇದೆಯಲ್ಲ, ಇದು ಬಹಳ ಬಹಳ ದೊಡ್ಡದು. ನಾನಿಲ್ಲಿ ಶಬ್ದಗಳ ಆಟ ಆಡ್ತಿಲ್ಲ. ಭಾರತೀಯ ಫಿಲಾಸಫಿಯಲ್ಲಿ ಎಲ್ಲವೂ ಮಾಯೆಯೇ. ಅದರರ್ಥ ಇಡೀ ವಿಶ್ವವೇ ಒಂದು ನಹಾನ್ ಜುಮ್ಲಾ. ನೀನು ಈಗಾಗಲೇ ಜುಮ್ಲಾಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದೀಯಾ. ಒಂದಿಷ್ಟು ಜುಮ್ಲಾ ಸೇರಿಸಿದ್ದಕ್ಕೆ ನನ್ನನ್ನು ಏಕೆ ದೂಷಣೆ ಮಾಡ್ತೀಯಾ? ಒಂದೇ ದಾರಿ ಅಂದರೆ ನ್ಯಾಯ ಪಡೆಯುವುದಲ್ಲ ಮುಕ್ತಿ ಪಡೆಯುವುದು. ಅದೊಂದು ಮರೀಚಿಕೆ.

ಪ್ರಶ್ನೆ: ಜನರಿಗೆ ಮೋಕ್ಷಕ್ಕಿಂತ ನ್ಯಾಯದ ಅಗತ್ಯ ಬಹಳ ಇದೆಯಲ್ಲ?
ಗೋಡ್ಸೆ: ಜನರಿಗೆ ತಮಗೇನೂ ಬೇಕಂತನೇ ಗೊತ್ತಿಲ್ಲ. ನನಗೆ ಜುಮ್ಲಾಗಳೇ ಬೇಕು ಅಂತಾ ಯಾವನಾದರೂ ಹೇಳಿದ್ದಾನಾ? ಇಲ್ಲ, ಆದರೆ ದೇಶಭಕ್ತ ಪಾರ್ಟಿಗೆ ಗೊತ್ತು, ಎಲ್ಲರಿಗೂ ಜುಮ್ಲಾ ಬೇಕು ಅಂತಾ. ಅದಕ್ಕೇ ಅವರು ಯಥೇಚ್ಛವಾಗಿ ಜುಮ್ಲಾಗಳನ್ನು ಒದಗಿಸ್ತಾ ಇದ್ದಾರೆ…7 ದಶಕಗಳಿಂದ ಜಾತ್ಯತೀತ ಸರ್ಕಾರಗಳು ಜನರನ್ನು ಈ ಹಸಿವಿನಿಂದ ಕಾಡಿದವು. ದೇಶಭಕ್ತ ಸರ್ಕಾರವು ಅವರ ಖಾಲಿ ಹೊಟ್ಟಗಳನ್ನು ಜುಮ್ಲಾಗಳಿಂದ ಭರ್ತಿ ಮಾಡಿತು.

ಪ್ರಶ್ನೆ: ನೀನು ಅಲ್ಲಿ ಮೇಲೆ ಮೋಡಗಳಲ್ಲಿ ಇರ್ತೀಯಾ. ಯಾವುದಾದರೂ ಸ್ಯಾಟ್‍ಲೈಟ್ ನಿನ್ನ ಇರುವಿಕೆಯನ್ನ ಪತ್ತೆ ಮಾಡಿದೆಯಾ?
ಗೋಡ್ಸೆ: ಇಲ್ಲವೇ ಇಲ್ಲ, ಸಾಧ್ಯಾನೇ ಇಲ್ಲ. ಮೋಡಗಳಲ್ಲಿ ಬದುಕುವುದರ ಅನುಕೂಲ ಅಂದ್ರೆನೇ ಅದು. ಸ್ಯಾಟ್‍ಲೈಟ್ಸ್ ಮತ್ತು ರೆಡಾರ್‍ಗಳು ಎಂದೂ ನಿನ್ನ ಪತ್ತೆ ಹಚ್ಚಕಾಗಲ್ಲ. ಅದಕ್ಕೇ ಟ್ರಂಪ್‍ಗೆ ಆಕಾಶದಲ್ಲಿ ನನ್ನ ಚಲನವಲನ ಗೊತ್ತಾಗದ ರೀತಿಯಲ್ಲಿ ನಾನು ಭಾರತದಲ್ಲಿ ಬಂದಿಳಿದೆ.
ಇದರ ನಂತರ ಗೋಡ್ಸೆ ತನ್ನ ‘ಸಮಾಧಿ’ಯತ್ತ ಹೊರಟ…

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here