ವಿಶಿಷ್ಟವಾಗಿ ತನ್ನ ಜನ್ಮದಿನ ಆಚರಿಸಿಕೊಂಡ ಈ ಶಿಕ್ಷಕಿಯ ವಿಡಿಯೋ ನೋಡಿದರೆ ಭೇಷ್ ಎನ್ನುತ್ತೀರಿ

ಹೌದು ಜನ್ಮದಿನ ಎನ್ನುವುದು ಒಂದು ಖಾಸಗಿ ಸಂಭ್ರಮವೇ ಸರಿ. ಆದರೂ ಬಹಳಷ್ಟು ಜನರ ತಮ್ಮ ಹುಟ್ಟಿದ ಹಬ್ಬವನ್ನು ಸ್ಮರಣೀಯವಾಗಿಸಲು ಸಾಕಷ್ಟು ಖರ್ಚು ಮಾಡುತ್ತಾರೆ. ಇನ್ನು ಕೆಲವರು ಸಮಾಜಕ್ಕೆ ಒಳಿತಾಗಲೆಂದು ವೃದ್ಧಾಶ್ರಮ, ಅನಾಥಾಲಯಗಳ ಮಕ್ಕಳ ಜೊತೆ ತಮ್ಮ ಜನ್ಮದಿನ ಆಚರಿಸಿಕೊಂಡು ಅಲ್ಲಿರುವವರಿಗೆ ಸಿಹಿ, ಊಟ, ಉಡುಗೊರೆ ನೀಡುವುದು ಕಂಡುಬಂದಿದೆ. ಕೆಲವರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಆದರೆ ಈ ಸರ್ಕಾರಿ ಶಾಲಾ ಶಿಕ್ಷಕಿ ಮಾತ್ರ ತನ್ನ ಹುಟ್ಟು ಹಬ್ಬದ ಮೂಲಕ ಇಡೀ ಜಗತ್ತನ್ನು ರಕ್ಷಿಸುವ ಅದ್ಭುತ ಪಾಠ ಕಲಿಸಿದ್ದಾರೆ. ಅದೇನೆಂದು ಕೂತೂಹಲವೇ? ಈ ವಿಡಿಯೋ ನೋಡಿ.

ನೋಡಿದ್ದೀರಲ್ಲ, ಈ ಶಿಕ್ಷಕಿ ಹುಟ್ಟುಹಬ್ಬದಂದು ತನ್ನ ಮಕ್ಕಳಿಗೆ ಚಾಕೊಲೇಟ್ ಜೊತೆಗೆ ಒಂದೊಂದು ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಗಿಡಮರಗಳನ್ನು ಬೆಳೆಸುವುದು ಎಷ್ಟು ಮಹತ್ವದ ಕೆಲಸ ಎಂಬುದನ್ನು ಸರಳವಾಗಿ ತೋರಿಸಿದ್ದಾರೆ. ಬರ, ಉಷ್ಣಾಂಶ ಹೆಚ್ಚಳ, ಕುಡಿಯುವ ನೀರಿಗಾಗಿ ಹಾಹಕಾರ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಹೆಚ್ಚೆಚು ಮರಗಿಡಗಳನ್ನು ಬೆಳೆಸುವುದು, ಅರಣ್ಯ ಮತ್ತು ಪರಿಸರವನ್ನು ರಕ್ಷಿಸುವುದು ಅನಿವಾರ್ಯ ಕೆಲಸವಾಗಿದೆ. ಅದನ್ನು ಸಣ್ಣ ಮಟ್ಟದಲ್ಲಿ ಮಾಡಿ ತೋರಿಸಿದ ಈ ಶಿಕ್ಷಕಿಗೆ ಒಂದು ಶರಣು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here