Homeಎಕಾನಮಿಪ್ರಸಕ್ತ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇ.5ಕ್ಕೆ ಕುಸಿಯಲಿದೆ: ಎಸ್‌ಬಿಐ ವರದಿ

ಪ್ರಸಕ್ತ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇ.5ಕ್ಕೆ ಕುಸಿಯಲಿದೆ: ಎಸ್‌ಬಿಐ ವರದಿ

- Advertisement -
- Advertisement -

ಜುಲೈ ಮತ್ತು ಸೆಪ್ಟಂಬರ್‌ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.4.2 ದರದಲ್ಲಿ ಇರಲಿದೆ ಹಾಗೂ 2019-20ನೇ ಇಡೀ ವಿತ್ತ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ. 5ರ ದರಕ್ಕೆ ಕುಸಿಯಲಿದೆ ಎಂದು ಎಂದು ಎಸ್‌ಬಿಐ ( ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ) ಮಂಗಳವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ.

ವರ್ಷದ ಪ್ರಥಮಾರ್ಧದಲ್ಲಿ ಪ್ರಕಟಿಸಿದ್ದ ವರದಿಯಲ್ಲಿ ಇದೆ ಎಸ್.ಬಿ.ಐ, ಪ್ರಸಕ್ತ ವಿತ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇ.6.1ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಈಗ ತನ್ನ ಅಂದಾಜನ್ನು ಮಾರ್ಪಡಿಸಿಕೊಂಡಿರುವ ಅದು, ಮೊದಲು ಅಂದಾಜಿಸಿದ್ದಕ್ಕಿಂತ ಶೇ.1.1ರಷ್ಟು ಕಡಿಮೆ ದರದಲ್ಲಿ ಅಂದರೆ, ಶೇ.5ರಷ್ಟು ದರದಲ್ಲಿ ಮಾತ್ರ ಭಾರತದ ಜಿಡಿಪಿ ಇರಲಿದೆ ಎಂದು ಹೇಳಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಂಬಂಧಿಸಿ ವಿವಿಧ ಆರ್ಥಿಕ ಸಮೀಕ್ಷೆಗಳು ಅಂದಾಜಿಸಿರುವ ಭಾರತದ ಆರ್ಥಿಕ ಬೆಳವಣಿಗೆಗಳಲ್ಲೇ ಎಸ್.ಬಿ.ಐ ನೀಡಿರುವ ದರ ಅತ್ಯಂತ ಕಡಿಮೆಯದ್ದಾಗಿದೆ. ಸದರಿ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ ಆರ್ಥಿಕ ಸೇವಾ ಸಂಸ್ಥೆಯಾದ `ನೊಮುರಾಸ್’ ಕಂಪನಿ ಅಂದಾಜಿಸಿರುವ ಜಿಡಿಪಿ ದರವೇ ಭಾರತದ ಮಟ್ಟಿಗಿನ ಅತಿ ಆಶಾದಾಯಕ ಅಂದಾಜು ಎನ್ನಬಹುದು. ಅದರ ಪ್ರಕಾರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.4.9ರ ದರದಲ್ಲಿ ಇರಲಿದೆ. ಅತಿ ಹೆಚ್ಚಿನ ಅಂದಾಜು ಮಾಪನವು ಕೂಡಾ (ನೊಮುರಾಸ್) ಶೇ.5ನ್ನು ದಾಟದಿರುವುದು ಆತಂಕಕಾರಿ ವಿಷಯ. ಇನ್ನು ಎಸ್.ಬಿ.ಐ ಪ್ರಕಾರ ಈ ದರ ಶೇ.4.2 ಮಾತ್ರ!

ಅಂದಹಾಗೆ ಇಷ್ಟರ ಮಟ್ಟಿಗೆ ಜಿಡಿಪಿ ಕುಸಿತಕ್ಕೆ ಕಾರಣವೇನು..? ಅನ್ನೋದನ್ನು ವರದಿಯಲ್ಲಿ  ತಿಳಿಸಿದೆ. ಕೈಗಾರಿಕೆ ಮತ್ತು ಉದ್ಯಮಗಳಲ್ಲಿ ಆದ ಮಹತ್ತರ ನಷ್ಟ ಹಾಗೂ ಉತ್ಪಾದನೆಯ ಮಟ್ಟ ಕುಸಿದಿರುವುದೇ ಇದಕ್ಕೆ ಕಾರಣ ಎಂದು ಎಸ್‌ಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಟೋಮೊಬೈಲ್‌ ಕ್ಷೇತ್ರ, ವಿಮಾನ ಪ್ರಯಾಣಿಕರಲ್ಲಿ ಇಳಿಕೆ, ಮೂಲಸೌಲಭ್ಯಗಳಲ್ಲಿ ಅಭಿವೃದ್ಧಿಯ ಕೊರತೆ, ಮೂಲ ಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಹೂಡಿಕೆ ಪ್ರಮಾಣ ಇಳಿಕೆ ಇವೆಲ್ಲವೂ ಜಿಡಿಪಿ ದರ ಕುಸಿಯಲು ಕಾರಣ ಎಂದಿರುವ ವರದಿ, ಇದರಿಂದಾಗಿಯೇ ದರ ೪.೨ರಷ್ಟು ಅತ್ಯಂತ ಕಡಿಮೆ ಮಟ್ಟದಲ್ಲಿ ದಾಖಲಾಗುವ ಎಲ್ಲ ಸಾಧ್ಯತೆಗಳು ಇವೆ ಎಂದಿದೆ. ಈ ತ್ರೈಮಾಸಿಕದಲ್ಲಿ ನಿರೀಕ್ಷೆಗು ಮೀರಿ ಜಿಡಿಪಿ ಕುಸಿದಿರುವುದರಿಂದಲೇ ಒಟ್ಟಾರೆ ವರ್ಷದ ಆರ್ಥಿಕ ಬೆಳವಣಿಗೆ ದರ  ಶೇ.5ರಷ್ಟು (ಈ ಮೊದಲು ತಾನು ಅಂದಾಜಿಸಿದ್ದಕ್ಕಿಂತಲು ಶೇ1.1 ರಷ್ಟು ಕಡಿಮೆ) ದಾಖಲಾಗಿದೆ ಎಂದು ಎಸ್‌ಬಿಐ ಹೇಳಿದೆ.

ಇದನ್ನೂ ಓದಿ: ಸುಪ್ರೀಂ ತೀರ್ಪು: ಅನರ್ಹರಿಗೆ ನಿಟ್ಟುಸಿರು, ಬಿಜೆಪಿಗೆ ಇಕ್ಕಟ್ಟು! : ಗಿರೀಶ್ ತಾಳಿಕಟ್ಟೆ

ಕೈಗಾರಿಕೋದ್ಯಮದ ಕ್ಷೀಣಿಸುವಿಕೆಯ ಜೊತೆಗೆ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ, ಪಂಜಾಬ್‌ನಲ್ಲಿ ಉಂಟಾದ ಅತಿವೃಷ್ಟಿ, ಪ್ರವಾಹದಿಂದ ಆದ ಖಾರಿಫ್ ಬೆಳೆ ನಾಶವೂ ಕೃಷಿ ಕ್ಷೇತ್ರದ ಉತ್ಪಾದನಾ ಸಾಮರ್ಥ್ಯವನ್ನು ಕುಗ್ಗಿಸಿರುವುದು ಕೂಡಾ ಜಿಡಿಪಿ ಕುಸಿಯಲು ಕಾರಣವಾಗಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲಾ ದೇಶೀಯ ಮಾನದಂಡಗಳು ಮತ್ತು ಜಾಗತಿಕ ಮಾರುಕಟ್ಟೆಯಲ ಮಂದಗತಿಯ ಬೆಳವಣಿಗೆಯಿಂದಾಗಿ ಬೆಳವಣಿಗೆ ದರ ಕುಸಿಯಲಿದೆ ಎಂಬ ನಿರ್ಧಾರಕ್ಕೆ ತಾನು ಬಂದಿರುವುದಾಗಿ ವರದಿ ಸಮರ್ಥಿಸಿಕೊಂಡಿದೆ.

ಇಷ್ಟೆಲ್ಲಾ ಇಳಿಕೆ, ಆರ್ಥಿಕ ಕುಸಿತದ ಮಧ್ಯೆಯೂ ಟೆಲಿಕಾಂ, ವಿದ್ಯುತ್‌ ಮತ್ತು ಎನ್‌ಬಿಎಫ್‌ಸಿಎಸ್ ಮೇಲೆ ಯಾವುದೇ ಋಣಾತ್ಮಕ ಪ್ರಭಾವ ಬೀರದ ತನ್ನ ನೀತಿಗಳಿಗೆ ಸರ್ಕಾರ ಬದ್ಧವಾಗಿರುವುದು ಅಚ್ಚರಿಯ ಗಮನಾರ್ಹ ಸಂಗತಿ ಎಂದು ವರದಿ ಸಿದ್ದಪಡಿಸಿದ ತಂಡದ ಮುಖ್ಯಸ್ಥೆ ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯ ಕಂಠಿ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...