Homeಅಂತರಾಷ್ಟ್ರೀಯತುಮಕೂರಿಗೆ ಬಂದ ಅಮೇರಿಕದ ಗನ್ನು.. ಭಾರತದಲ್ಲಿ ನಿಷೇಧವಾಗಿದ್ದರೂ ನುಸುಳಿದ್ದು ಹೇಗೆ?

ತುಮಕೂರಿಗೆ ಬಂದ ಅಮೇರಿಕದ ಗನ್ನು.. ಭಾರತದಲ್ಲಿ ನಿಷೇಧವಾಗಿದ್ದರೂ ನುಸುಳಿದ್ದು ಹೇಗೆ?

- Advertisement -
- Advertisement -

ತುಮಕೂರು ಒಂದು ರೀತಿಯಲ್ಲಿ ಯಾವಾಗಲೂ ಶಾಂತಿಯಿಂದ ಕೂಡಿರುವ ನಗರವೆಂಬ ಭಾವನೆ ಎಲ್ಲಾ ಜನಸಾಮಾನ್ಯರಲ್ಲೂ ಇತ್ತು. ಆದರೆ ಇತ್ತಿಚಿಗೆ ಆ ರೀತಿಯ ಭಾವನೆ ಕಡಿಮೆಯಾಗುತ್ತಿದೆ. ಕಾರಣ ನಗರದಲ್ಲಿ ಹೆಚ್ಚುತ್ತಿರುವ ಅಪರಾಧಗಳು. ಎಷ್ಟೇ ಅಧಿಕಾರಗಳೂ ಬಂದು ಹೋದರೂ ಸಹ ಅಪರಾಧಗಳು ಕಡಿಮೆಯಾದಂತೆ ಕಾಣುತ್ತಿಲ್ಲ. ಇದಕ್ಕೆ ತುಮಕೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲವು ಆತಂಕಕಾರಿ ಘಟನೆಗಳೇ ಕಾರಣ.

ಕಳೆದ ವರ್ಷ ಒಂದು ಬೆಳಗ್ಗಿನ ಜಾವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಡೆದ ಮಾಜಿ ಮೇಯರ್ ರವಿಕುಮಾರ್ ಭೀಕರ ಕೊಲೆ ನಗರದಲ್ಲಿ ತಲ್ಲಣ ಉಂಟು ಮಾಡಿತ್ತು. ಅದಿನ್ನು ಮರೆಯುವ ಮುನ್ನವೇ ಇತ್ತಿಚಿಗೆ ತುಮಕೂರಿನಲ್ಲಿ ಭಾರತದಲ್ಲಿ ನಿಷೇಧಿತವಾಗಿರುವ ಏರ್ಗನ್ ಅನುಮಾನಸ್ಫದವಾಗಿ ಸಿಕ್ಕಿದ್ದು ಜನ ಸಾಮಾನ್ಯರ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲೆ ನಗರದಲ್ಲಿ ಮತ್ತೊಂದು ಕೊಲೆಯ ಸಂಚು ನಡೆದಿದೆಯಾ ಎಂಬ ಅನುಮಾನಗಳು, ತರ್ಕವಿಲ್ಲದ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಜಯನಗರ ಮತ್ತು ತಿಲಕ್‍ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತಿಚಿಗೆ ಸೆಬ್ಟಂಬರ್ 5ರಂದು ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ಮುಗಿಸಿ ರಾತ್ರಿ ಗಸ್ತಿನಲ್ಲಿದ್ದ ಜಯನಗರ ಠಾಣೆ ಪೋಲಿಸರಿಗೆ ಉಪ್ಪಾರಹಳ್ಳಿ ಮುಖ್ಯರಸ್ತೆಯ ಸೆಕ್ರೆಡ್‍ಹಾರ್ಟ್ ಶಾಲೆ ಮುಂಭಾಗದಿಂದ ಗೆದ್ದಲಹಳ್ಳಿ ಕಡೆಗೆ ಹೋಗುತ್ತಿರುವ ಮಾರುತಿ 800 ಕಾರು ಅನುಮಾನಸ್ಪದವಾಗಿ ಕಂಡು ತಡೆದು ವಿಚಾರಿಸಿದ್ದಾರೆ.

ಆವೇಳೆ ಕಾರಿನಲ್ಲಿದ್ದ ನಾಲ್ವರು ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಅವರನ್ನು ಬಂಧಿಸಿದ ಪೋಲಿಸರು ವಿಚಾರಣೆಗೊಳಪಡಿಸಿ, ವಾಹನ ಪರಿಶೀಲಿಸಿದಾಗ ಕಾರಿನಲ್ಲಿ ಅಮೆರಿಕದ ಎಫ್ ಎಕ್ಸ್ ಬಾಕ್ಸ್ ಡಿಸಿಬಿ 125 ಸೌಂಡ್‍ಲೆಸ್ ಗನ್ ಮತ್ತು ಗುಂಡುಗಳು ಇರುವುದು ಪೋಲಿಸರ ಗಮನಕ್ಕೆ ಬಂದಿದೆ. ಭಾರತದಲ್ಲಿ ಎಫ್.ಎಕ್ಸ್.ಬಾಕ್ಸ್ ಗನ್ ಅನ್ನು ನಿಷೇಧಿಸಲಾಗಿದೆ ಆದರೆ ತುಮಕೂರಿನ ಯುವಕರ ಕೈಗೆ ಈ ಗನ್ ಹೇಗೆ ಬಂತು ಎಂಬುವುದನ್ನು ಪೋಲಿಸರು ಬೇಧಿಸಬೇಕಿದೆ. ಈ ಪ್ರಕರಣದಲ್ಲಿ ಗುಬ್ಬಿ ನಗರದ ನಿವಾಸಿಗಳಾದ ನವೀನ್ ಕುಮಾರ್, ದೇವರಾಜು, ನಟರಾಜು, ರಯಾನ್, ಸುಹೇಲ್ ಎಂಬ ಐದು ಜನರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎನ್ನಲಾಗಿದೆ.

ಬಂಧಿತರಾಗಿರುವ ಐದು ಆರೋಪಿಗಳಲ್ಲಿ ನವೀನ್ ಎಂಬಾತ ಈ ಹಿಂದೆ ಇದೇ ಗನ್ ಬಳಕೆ ಮಾಡಿ ನವಿಲು ಬೇಟೆಯಾಡಿದ್ದ. ಈ ಕುರಿತಂತೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಈತನೇ ಈ ತಂಡವನ್ನು ಮುನ್ನಡೆಸುತ್ತಿದ್ದ ಎಂದು ಹೇಳಲಾಗಿದೆ. ಎಫ್.ಎಕ್ಸ್. ಬಾಕ್ಸ್ ಡಿಸಿಬಿ ಗನ್ ಅನ್ನು ಲೈಸೆನ್ಸ್ ಪಡೆದು ಯುಎಸ್‍ಎ ಅಲ್ಲಿ ಖರೀದಿ ಮಾಡಬೇಕು. ಆದರೆ ಯಾವುದೇ ಪರವಾನಗಿ ಇಲ್ಲದೆ ಈ ಗನ್ ಭಾರತಕ್ಕೆ ಬಂದದ್ದಾರು ಹೇಗೆ? ಎಂಬುದು ನಿಗೂಢವಾಗಿದೆ.

ತುಮಕೂರಿನ ಇಂತಹ ಚಟುವಟಿಕೆಗಳಿಗೆ ಕೆಲವು ರಾಜಕಾರಣಿಗಳ ಕುಮ್ಮಕ್ಕು ಬಲವಾಗಿದೆ ಎಂಬುವ ಮಾತುಗಳು ಕೇಳಿಬರುತ್ತಿದೆ. ಹಾಗಾಗಿ ಇಂತಹ ಪ್ರಕರಣಗಳನ್ನು ನಿಷ್ಠಾವಂತ ಪೋಲಿಸ್ ಅಧಿಕಾರಿಗಳಿಂದ ತನಿಖೆ ಮಾಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ ಇಲ್ಲವಾದಲ್ಲಿ ಗ್ಯಾಂಗ್ ಕಟ್ಟಿಕೊಂಡು ಗನ್ ಹಿಡಿದು ಓಡಾಡುವ ಯುವಜನರ ದಂಡು ಹೆಚ್ಚಾಗಲಿದೆ. ಇಂತಹ ಪ್ರಕರಣಗಳಲ್ಲಿ ಲಾಭ ಪಡೆದುಕೊಳ್ಳಲೆತ್ನಿಸುವ  ರಾಜಕಾರಣಿಗಳು ಸದಾ ಇಂತಹದಕ್ಕಾಗಿಯೇ ಕಾಯುತ್ತಿರುತ್ತಾರೆ. ಈಗಲಾದರೂ ಸಕಾರ ಎಚ್ಚೆತ್ತಕೊಂಡು ತುಮಕೂರು ನಗರವನ್ನು ಅಫರಾದ ಮುಕ್ತ ನಗರವಾಗಿಸುವ ಕಡೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಿಯಾಶೀಲವಾಗಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...