Homeನಿಜವೋ ಸುಳ್ಳೋFactcheck: ಕಲಬುರಗಿಯಲ್ಲಿ ಯಡಿಯೂರಪ್ಪ ಮೂರೇ ತಿಂಗಳಲ್ಲಿ ವಿಮಾನ ನಿಲ್ದಾಣ ಕಟ್ಟಿದರೆ? ನಿಜವೇನು?

Factcheck: ಕಲಬುರಗಿಯಲ್ಲಿ ಯಡಿಯೂರಪ್ಪ ಮೂರೇ ತಿಂಗಳಲ್ಲಿ ವಿಮಾನ ನಿಲ್ದಾಣ ಕಟ್ಟಿದರೆ? ನಿಜವೇನು?

- Advertisement -
- Advertisement -

ಫ್ಯಾಕ್ಟ್‌ಚೆಕ್‌

ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಕಲಬುರಗಿ ಜಿಲ್ಲೆಯಲ್ಲಿ 40 ವರ್ಷಕ್ಕಿಂತ ಹೆಚ್ಚು ಕಾಲದಿಂದ ಆಡಳಿತ ನಡೆಸುತ್ತಿತ್ತು. ಆದರೆ ಒಂದೇ ಒಂದು ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಾಗಲಿಲ್ಲ. ಇಂದು ಕಲಬುರ್ಗಿಯಲ್ಲಿ ವಿಮಾಣ ನಿಲ್ದಾಣವಾಗಿದೆ, ನರೇಂದ್ರ ಮೋದಿ ಮತ್ತು ಯಡಿಯೂರಪ್ಪನವರಿಗೆ ಧನ್ಯವಾದಗಳು ಎಂದು ‘ಪೋಸ್ಟ್ ಕಾರ್ಡ್ ಕನ್ನಡ’ ವಾದ ಮಾಡಿದೆ.

ಪೋಸ್ಟ್‌ ಕಾರ್ಡ್‌‌ನ ಆ ಸುಳ್ಳು ಸುದ್ದಿಇಯನ್ನು 826 ಜನ ಷೇರ್‌ ಮಾಡಿದ್ದು ಎರಡು ಸಾವಿರದಷ್ಟು ಜನ ಲೈಕ್‌ ಮಾಡಿದ್ದಾರೆ.

ಆದರೆ ವಾಸ್ತವವೇನು?

ನವೆಂಬರ್ 22ರಂದು ಕಲಬುರಗಿಯ ಶ್ರೀನಿವಾಸ ಸರಡಗಿ ಗ್ರಾಮದ ಬಳಿ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ಘಾಟನೆ ಮಾಡಿದರು. ಆಗ ಅಲ್ಲಿದ್ದ ಬಹಳಷ್ಟು ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆಯವರಿಗೆ ಜೈಕಾರ ಕೂಗಿದರು. ಇದು ಯಡಿಯೂರಪ್ಪನವರಿಗೆ ಮುಜುಗರ ಉಂಟಾಯಿತು. ಆ ಕಾರ್ಯಕರ್ತರು ಹಾಗೇಕೆ ಮಾಡಿದರು?

ಇದನ್ನು ಓದಿ: ಯಡಿಯೂರಪ್ಪನವರ ಎದುರೆ ಖರ್ಗೆಗೆ ಜೈಕಾರ : ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಗದ್ದಲ

ಸತ್ಯ ಏನಂದರೆ, ಮಲ್ಲಿಕಾರ್ಜುನ ಖರ್ಗೆಯವರ ಅವಿರತ ಪ್ರಯತ್ನವಿಲ್ಲದಿದ್ದರೆ ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವೇ ಇಲ್ಲವೆಂದು ಕಲಬುರ್ಗಿಯ ಸಣ್ಣ ಮಕ್ಕಳನ್ನು ಕೇಳಿದರೂ ಹೇಳುತ್ತಾರೆ. ಅದಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅವರು ಸಂಸದರಾಗಿದ್ದಾಗ 2016ರ ನವೆಂಬರ್ 5ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಖರ್ಗೆಯವರು ಒಂದು ವರ್ಷದಲ್ಲಿ ಕಾಮಗಾರಿ ಮುಗಿಸುವಂತೆ ತಾಕೀತು ಮಾಡಿದ್ದರು ಮಾತ್ರವಲ್ಲದೇ ಅಗತ್ಯವಿದ್ದ 109 ಕೋಟಿ ರೂಗಳನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದರು.

ಖರ್ಗೆ ಭೇಟಿ ನೀಡಿದ್ದ ಪತ್ರಿಕಾ ವರದಿ

ಅಲ್ಲದೇ ಕಳೆದ ವರ್ಷ ಆಗಸ್ಟ್ 25ರಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ ಅವರು ಈ ಬಾರಿ ಸೋತ ಕಾರಣ, ಪೂರ್ಣಗೊಂಡ ವಿಮಾನ ನಿಲ್ದಾಣವನ್ನು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ಘಾಟಿಸಿದ್ದಾರೆ ಅಷ್ಟೇ ಹೊರತು ಆ ನಿಲ್ದಾಣ ನಿರ್ಮಾಣದ ಪೂರ್ಣ ಶ್ರೇಯ ಖರ್ಗೆಯವರಿಗೆ ಸಲ್ಲಬೇಕು. ಪೋಸ್ಟ್‌ ಕಾರ್ಡ್‌ ನ್ಯೂಸ್‌ ಫೇಕ್‌ ಆಗಿದೆ.

ಡೆಕ್ಕನ್‌ ಹೆರಾಲ್ಡ್‌ ವರದಿ

ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡು ಕೇವಲ ಮೂರು ತಿಂಗಳಾಗಿದೆ ಅಷ್ಟೇ. ಅಷ್ಟೊಂದು ಕಡಿಮೆ ಸಮಯದಲ್ಲಿ ವಿಮಾನ ನಿಲ್ದಾಣ ಕಟ್ಟಲಿಕ್ಕೆ ಸಾಧ್ಯವಿಲ್ಲ. ಆದರೂ ಅದರ ಕ್ರೆಡಿಟ್‌ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಹಾಗಾಗಿಯೇ ಸಿಟ್ಟೆಗೆದ್ದ ಆ ಕಾರ್ಯಕರ್ತರು ಖರ್ಗೆ ಪರ ಘೋಷಣೆ ಕೂಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...