HomeUncategorizedವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಹೆಚ್ಚು! ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!

ವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಹೆಚ್ಚು! ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!

ಕನ್ನಯ್ಯಕುಮಾರ್ ಸ್ಪರ್ಧಿಸಿದ್ದ ಬೇಗುಸ್‍ರಾಯ್, ಆಪ್‍ನ ಅತಿಶಿ ಸ್ಪರ್ಧಿಸಿದ್ದ ಪೂರ್ವ ದೆಹಲಿ ಕ್ಷೇತ್ರಗಳಲ್ಲೂ ಈ ಮತ ವ್ತ್ಯತ್ಯಾಸ ಕಂಡು ಬರುತ್ತಿದೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಕಲಬುರ್ಗಿಯಲ್ಲಿ ಮತ ಏಣಿಕೆ ಮುಗಿದ ನಂತರ ಲೆಕ್ಕ ಹಾಕಿದಾಗ, ಮತದಾನ ಆಗಿದ್ದಕ್ಕಿಂತ ಎಣಿಕೆ ಆದ ಮತಗಳು ಹೆಚ್ಚಿದ್ದವು! ಇದನ್ನು ಅಲ್ಲಿನ ‘ಪ್ರಜಾವಾಣಿ’ ವಿಸ್ತಾರವಾಗಿ ವರದಿ ಮಾಡಿತ್ತು. ಈಗ ನ್ಯೂಸ್‍ಕ್ಲಿಕ್ ಪೋರ್ಟಲ್ ಉತ್ತರ ಭಾರತದ ಎಂಟು ಆಯ್ದ ಕ್ಷೇತ್ರಗಳಲ್ಲಿ ತನಿಖೆ ನಡೆಸಿದ್ದು, ಎಲ್ಲ ಕಡೆ ವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಜಾಸ್ತಿ ಇವೆ! ಈ ಕುರಿತು ಚುನಾವಣಾ ಆಯೋಗ ಉತ್ತರಿಸಲೇಬೇಕು ಎಂದು ಮೂವರು ಮಾಜಿ ಚುನಾವಣಾ ಆಯುಕ್ತರು ಒತ್ತಾಯಿಸಿದ್ದಾರೆ….

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗದು. ಸರಿ ಒಪ್ಪೋಣ. ಆದರೆ ನಿರ್ದಿಷ್ಠ ಪಕ್ಷವೊಂದಕ್ಕೆ ಮೊದಲೇ ಮತ ಚಲಾಯಿಸಿದ ಮತಯಂತ್ರಗಳನ್ನು ತಂದು ತುರುಕಲು ಸಾಧ್ಯವೇ ಎಂಬ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ. ಈಗ ನ್ಯೂಸ್‍ಕ್ಲಿಕ್ ಪೋರ್ಟಲ್ ಮಾಡಿರುವ ತನಿಖೆ ಈ ಪ್ರಶ್ನೆಗಳನ್ನು ಎತ್ತಿದೆ ಮತ್ತು ಈ ಕುರಿತು ಧ್ವನಿ ಎತ್ತಿರುವ ಮೂವರು ಮಾಜಿ ಚುನಾವಣಾ ಆಯುಕ್ತರು ಆಯೋಗ ಈ ಕುರಿತು ಗೊಂದಲಗಳನ್ನು ಕೂಡಲೇ ಬಹೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೌಂಟಿಂಗ್‍ನಲ್ಲಿ ಹೆಚ್ಚಾಗಿದ್ದು ಹೇಗೆ?
ಈ ಪ್ರಶ್ನೆಯನ್ನು ಪ್ರಜಾಪ್ರಭುತ್ವ ಗೌರವಿಸುವ ಎಲ್ಲರೂ ಕೇಳಲೇಬೇಕಾಗಿದೆ. ಉತ್ತರಪ್ರದೇಶ, ಬಿಹಾರ್, ದೆಹಲಿ ಮತ್ತು ಮಧ್ಯಪ್ರದೇಶದ ಹಲವಾರು ಕ್ಷೇತ್ರಗಳಲ್ಲಿ ಈ ವ್ಯತ್ಯಾಸ ಕಂಡು ಬಂದಿದೆ. ಅವುಗಳಲ್ಲಿ ಎಂಟು ಕ್ಷೇತ್ರಗಳ ತನಿಖೆ ಮಾಡಿದಾಗ ಇದು ಸತ್ಯ ಎಂಬುದು ಸಾಬೀತಾಗಿದೆ. ಅದರಲ್ಲಿ ಪ್ರತಿಷ್ಠಿತ ಎನಿಸಿದ್ದ ಪಾಟ್ನಾ ಸಾಹೀಬ್, ಜೆಹಲ್ನಾಬಾದ್ ಮತ್ತು ಬೇಗುಸರಾಯ್ ಕ್ಷೇತ್ರಗಳೂ ಸೇರಿವೆ. ವೋಟ್ ಆದ ಮತಗಳಿಗಿಂತ ಕೌಂಟ್ ಆದ ಮತಗಳು ಹೆಚ್ಚಿವೆ, ಒಂದು ಕಡೆ ವೋಟ್ ಆದ ಮತಗಳಿಗಿಂತ ಕೌಂಟ್ ಆದ ಮತ ಕಡಿಮೆಯೂ ಇದೆ. ಈ ವ್ಯತ್ಯಾಸವೇ ಗೋಲ್‍ಮಾಲ್ ನಡೆದಿರಬಹುದು ಎಂಬ ದಟ್ಟ ಸಂಶಯಕ್ಕೆ ಕಾರಣವಾಗಿದೆ.

ಈ ಎಂಟು ಕ್ಷೇತ್ರಗಳ ಪೈಕಿ ಕನಿಷ್ಠ ಒಂದರಲ್ಲಿ, ಗೆಲುವಿನ ಅಂತರಕ್ಕಿಂತ ಮತ ವ್ಯತ್ಯಾಸ (ಕೌಂಟ್ ಆದ ಮತಗಳು ಮೈನಸ್ ವೋಟ್ ಆದ ಮತಗಳು)ವೇ ದೊಡ್ಡದಿದ್ದು ಬಹುಪಾಲು ಕ್ಷೇತ್ರಗಳಲ್ಲಿ ಇದು ಸಂಭವಿಸಿರಬಹುದು ಎಂದು ತನಿಖೆ ಉಲ್ಲೇಖಿಸಿದೆ. ಮೇ 23ರ ಏಣಿಕೆಗೂ ಮೊದಲು ಅಕ್ರಮವಾಗಿ ಎವಿಎಂಗಳನ್ನು ಸಾಗಿಸಿದ ವರದಿ ಮತ್ತು ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಇಲ್ಲೇನೋ ಮಸಲತ್ತು ನಡೆದಿದೆ ಎಂಬ ಸಂಶಯವನ್ನು ಈ ತನಿಖೆ ಇನ್ನಷ್ಟು ಗಟ್ಟಿಗೊಳಿಸಿದೆ.

ಮಾಜಿ ಆಯುಕ್ತರ ಆಗ್ರಹ
ಮೂವರು ಮಾಜಿ ಆಯುಕ್ತರು ಇದರ ವಿರುದ್ಧ ಧ್ವನಿ ಎತ್ತಿ ಆಯೋಗ ಕೂಡಲೇ ಈ ಸಂಶಯಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ. 2011-12ರಲ್ಲಿ ಆಯುಕ್ತರಾಗಿದ್ದ ಖುರೇಶಿ, ಇದಕ್ಕೆ ಆಯೋಗದ ಬಳಿ ಕಾರಣಗಳಿರಬಹುದು. ಆದರೆ ಈ ವಿಷಯವಾಗಿ ಯಾರಾದರೂ ಕೋರ್ಟಿಗೆ ಹೋಗೋದು ಒಳ್ಳೆಯದು ಎಂದು ಹೇಳಿದ್ದಾರೆ.

ಖುರೇಷಿ

2006-09ರಲ್ಲಿ ಆಯುಕ್ತರಾಗಿದ್ದ ಗೋಪಾಲಸ್ವಾಮಿ, 2015ರಲ್ಲಿ ಆಯುಕ್ತರಾಗಿದ್ದ ಎಚ್.ಎಸ್ ಬ್ರಹ್ಮ ಕೂಡ ಇದೇ ತರಹದ ಪ್ರಶ್ನೆ ಎತ್ತುವ ಮೂಲಕ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.

ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!
ಪಾಟ್ನಾ ಸಾಹೀಬ್ ಕ್ಷೇತ್ರದಲ್ಲಿ ಬಿಜೆಪಿಯಿಂದ ರವಿಶಂಕರ ಪ್ರಸಾದ್ ಮತ್ತು ಕಾಂಗ್ರೆಸ್‍ನಿಂದ ಶತ್ರುಘನ ಸಿನ್ಹಾ ಸ್ಪರ್ಧಿಸಿದ್ದರು. ಅಲ್ಲಿ 20, 51, 905 ಅರ್ಹ ಮತದಾರರಿದ್ದು, ಮೇ 18ರಂದು ಶೇ 46.34ರಷ್ಟು ಮತದಾನವಾಗಿತ್ತು. ಆದರೆ ಮೇ 23ರಂದು ಏಣಿಕೆ ಮಾಡಿದಾಗ ಅಂಚೆಮತ ಸೇರಿ ರವಿಶಂಕರ ಪ್ರಸಾದ್‍ಗೆ 6,07,506, ಶತ್ರುಘ್ನ ಸಿನ್ಹಾಗೆ 3,22, 849 ಮತ್ತು ನೋಟಾ ಸೇರಿ ಇತರೆ 45,709 ಮತ ಲಭಿಸಿವೆ.

ಅಂದರೆ ಆಯೋಗದ ಪ್ರಕಾರ 9,82,285 ಮತಗಳು ದಾಖಲಾಗಿವೆ. ಶೆಕಡಾವಾರು ಮತದಾನದ ಪ್ರಕಾರ, 9,50,852 ಮತಗಳು ಹಾಕಲ್ಪಟ್ಟಿವೆ. ಈ ಹೆಚ್ಚುವರಿ 31,433 ಮತಗಳು ಎಲ್ಲಿಂದ ಬಂದವು?

ಕನ್ನಯ್ಯಕುಮಾರ್ ಸ್ಪರ್ಧಿಸಿದ್ದ ಬೇಗುಸ್‍ರಾಯ್, ಆಪ್‍ನ ಅತಿಶಿ ಸ್ಪರ್ಧಿಸಿದ್ದ ಪೂರ್ವ ದೆಹಲಿ ಕ್ಷೇತ್ರಗಳಲ್ಲೂ ಈ ಮತ ವ್ಯತ್ಯಾಸ ಕಂಡು ಬರುತ್ತಿದೆ.

ಇದು ಕೇವಲ ಅಂಕಗಣಿತದ ತಪ್ಪಾಗಿರಲಾರದು. ಏಕೆಂದರೆ ದೇಶದ ನಾನಾ ಕಡೆಯಿಂದ ಈ ಸಂಶಯಗಳು ಕೇಳಿ ಬಂದಿವೆ. ರಾಜ್ಯದ ಪ್ರತಿಷ್ಠಿತ ಕಲಬುರ್ಗಿ ಕ್ಷೇತ್ರದಲ್ಲೂ ಅಪರಾ ತಪರಾ ಕಂಡುಬಂದಿದೆ.

ಈಗಲಾದರೂ ಚುನಾವಣಾ ಆಯೋಗ ಈ ವ್ಯತ್ಯಾಸಗಳಿಗೆ ಕಾರಣ ನೀಡಲೇಬೇಕು. ಹೆಚ್ಚುವರಿ ಮತಗಳು ಹೇಗೆ ಬಂದವು ಎಂಬುದನ್ನೂ ವಿವರಿಸಬೇಕು….

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಆದರೆ ಆಗಲಿ ಬಿಡಿ. ಗೆದ್ದು ಬಂದರೂ ಅವರು ಮಾಡೋದು ಅಷ್ಟರಲ್ಲೇ ಇದೆ. ಆಯ್ಕೆ ಆದವರೆಲ್ಲ ಖಜಾನೆ ದರೋಡೆ ಮಾಡಿಯೇ ಸಿದ್ಧ. ಮತದಾನ ಮಾಡಿದವರಿಗೆ ನಯಾ ಪೈಸೆ ಲಾಭ ಆಗಿದೆಯೇ. ಮತ ದಾನ ಮಾಡಿ ಮಾಡಿ ಮತದಾರ ಕೆಟ್ಟ.. ಮತ ದಾನ ಮಾಡಿಸಿಕೊಂಡಾವ ಲೂಟಿ ಮಾಡಿ ಮಾಡಿ ಅವನ ವಂಶವೃಕ್ಷ ತಿಂದು ತೇಗಿದರೂ ಹತ್ತಾರು ತಲೆಮಾರುಗಳು ಸುಖವಾಗಿರಬಹುದು ಅಷ್ಟು ದರೋಡೆ ಮಾಡಿ ಪ್ರಜಾಪ್ರಭುತ್ವ ಕೆಟ್ಟ ಹಾಳಾಗೋ ಹಾಗೆ ಮಾಡಿದ. ಯಾವಾನ್ ಗೆದ್ದರೂ ಕಳ್ಳತನ ಮಾಡೋದ್ ತಾನೆ. ಒಬ್ಬನಿಗಾದರೂ ದೇಶದ ಅಭಿವೃದ್ಧಿ ಅಂದರೇನು ಅಂತಾ ಗೊತ್ತಾ..? ಅವರ ಕುಟುಂಬದವರೆಲ್ಲರ ನವರಂಧ್ರಗಳು ಸುಖ ಪಡಬೇಕು. ರೈತರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕು. ವಿಷ ಕುಡಿದು ಸಾಯಬೇಕು. ನಿರುದ್ಯೋಗಿಗಳು ಕೆಲಸ ಇಲ್ಲದೇ ಹುಚ್ಚರಂಥೆ ಅಲೆಯಬೇಕು. ಇದನ್ನು ಬಿಟ್ಟು ಈ ದೇಶದ ಚುನಾವಣೆಯ ನಂತರ ದೇಶ ಬದಲಾಗಿದೆಯೇ..? ಎಲ್ಲಾ ಖಧೀಮರು, ಭ್ರಷ್ಟರು. ಎಂಟು ದಶಕಗಳು ಕಳೆದರೂ ಜನರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿ ಚುನಾವಣೆ ನೆಪಕ್ಕೆ ಮಾತ್ರ. ಇಷ್ಟು ದಶಕಗಳಲ್ಲಿ ಆಯ್ಕೆ ಆಗಿದ್ದವರಲ್ಲಿ ಒಬ್ಬನಾದರೂ ಸಾಚಾ ಇದ್ದರೆ ಎದಿ ಮುಟ್ಟಿ ಕೊಂಡು ಹೇಳಲಿ ನೋಡೋಣ.

  2. ಈ ಸುದ್ದಿಯ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳದೇ ನಂಬುವುದು ಕಷ್ಟ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...