Homeಮುಖಪುಟಅಕ್ಟೋಬರ್ 21ರಂದು ಮಹಾರಾಷ್ಟ್ರ, ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ: 24ಕ್ಕೆ ಫಲಿತಾಂಶ

ಅಕ್ಟೋಬರ್ 21ರಂದು ಮಹಾರಾಷ್ಟ್ರ, ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ: 24ಕ್ಕೆ ಫಲಿತಾಂಶ

ಕರ್ನಾಟಕದ 15 ಸ್ಥಾನಗಳಿಗೆ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದ್ದು 24 ಕ್ಕೆ ಫಲಿತಾಂಶ ಪ್ರಕಟವಾಗಲಿದೆ

- Advertisement -
- Advertisement -

ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆಗಳಿಗೆ ಇಂದು ಕೇಂದ್ರ ‌ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ.

ಚುನಾವಣಾ ಆಯುಕ್ತರಾದ ಸುನೀಲ್ ಅರೋರರವರು ಇಂದು ಪತ್ರಿಕಾಗೋಷ್ಟಿಯಲ್ಲಿ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು ಅಕ್ಟೋಬರ್ 24ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಕೆ ಆರಂಭ:  ಸೆಪ್ಟಂಬರ್ 27 ರಿಂದ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 04

ನಾಮಪತ್ರ ಪರಿಶೀಲನೆ: ಅಕ್ಟೋಬರ್ 05

ನಾಮಪತ್ರ ವಾಪಸ್ ಪಡೆಯಲು ಅವಕಾಶ: ಅಕ್ಟೋಬರ್ 07ರವರೆಗೆ

ಚುನಾವಣೆ: ಅಕ್ಟೋಬರ್ 21

ಫಲಿತಾಂಶ: ಅಕ್ಟೋಬರ್ 24

ಹರಿಯಾಣ 90 ಸ್ಥಾನಗಳಿಗೆ ಮತ್ತು ಮಹಾರಾಷ್ಟ್ರದ 288 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 8.9 ಕೋಟಿ ಮತದಾರರು ಮಹಾರಾಷ್ಟ್ರದಲ್ಲಿದ್ದಾರೆ. ಹರಿಯಾಣ 1.82 ಕೋಟಿ ಮತದಾರರಿದ್ದಾರೆ.

ಉಪಚುನಾವಣೆಗಳು

ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡಯಲಿರುವ ಉಪಚುನಾವಣೆಯ ದಿನಾಂಕವನ್ನು ಸಹ ಪ್ರಕಟಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಆರಂಭ:  ಸೆಪ್ಟಂಬರ್ 23 ರಿಂದ

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟಂಬರ್ 30

ನಾಮಪತ್ರ ಪರಿಶೀಲನೆ: ಅಕ್ಟೋಬರ್ 01

ನಾಮಪತ್ರ ವಾಪಸ್ ಪಡೆಯಲು ಅವಕಾಶ: ಅಕ್ಟೋಬರ್ 03ರವರೆಗೆ

ಚುನಾವಣೆ: ಅಕ್ಟೋಬರ್ 21

ಫಲಿತಾಂಶ: ಅಕ್ಟೋಬರ್ 24

ಕರ್ನಾಟಕದ 15 ಸ್ಥಾನಗಳಿಗೆ ಸೇರಿದಂತೆ ಅರುಣಚಲ ಪ್ರದೇಶದ 02, ಅಸ್ಸಾಂನ 04, ಬಿಹಾರ್ 05, ಚತ್ತೀಸ್ ಘಡದ 04, ಗುಜರಾತ್ ನ 04, ಹಿಮಾಚಲ ಪ್ರದೇಶದ 02 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರು ರಾಜಿನಾಮೆ ನೀಡಿದ ಕಾರಣಕ್ಕಾಗಿ ಸ್ಪೀಕರ್ ರವರು ಅವರನ್ನು ಅನರ್ಹರನ್ನಾಗಿ ಘೋಷಿಸಿದ್ದರು. ಅದರಲ್ಲಿ ಈಗ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಈ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗಳು 28 ಲಕ್ಷ ಖರ್ಚು ಮಾಡಬಹುದೆಂಬ ಮಿತಿ ವಿಧಿಸಲಾಗಿದೆ.

ಪರಿಸರ ಸ್ನೇಹಿ ವಸ್ತುಗಳನ್ನು ಚುನಾವಣೆಯಲ್ಲಿ ಬಳಸಲು ಅಭ್ಯರ್ಥಿಗಳಲ್ಲಿ ಆಯೋಗ ಮನವಿ ಮಾಡಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...