Homeಮುಖಪುಟಸೈನಿಕರ ಬಲಿಕೊಟ್ಟು ಅವರ ಹೆಸರಿನಲ್ಲಿ ವೋಟು ಕೇಳುವವರಿಗೆ ಮತ ನೀಡಬೇಡಿ.- ಹುತಾತ್ಮ ಯೋಧನ ಪತ್ನಿ

ಸೈನಿಕರ ಬಲಿಕೊಟ್ಟು ಅವರ ಹೆಸರಿನಲ್ಲಿ ವೋಟು ಕೇಳುವವರಿಗೆ ಮತ ನೀಡಬೇಡಿ.- ಹುತಾತ್ಮ ಯೋಧನ ಪತ್ನಿ

- Advertisement -
- Advertisement -

ನಾನು ಮೊನ್ನೆ ನಮ್ಮ ಪ್ರಧಾನಿಗಳ ಭಾಷಣ ಕೇಳಿದೆ. ಪ್ರಧಾನಿಗಳು ಮೊದಲ ಬಾರಿ ಮತಚಲಾಯಿಸುವವರನ್ನು ಉದ್ದೇಶಿಸಿ ನಮ್ಮ ದೇಶದ ಸೈನಿಕರ ಮೇಲೆ ಫುಲ್ವಾಮಾದಲ್ಲಿ ಆದ ಹಲ್ಲೆಯನ್ನು ನೆನಪಿಸಿಕೊಳ್ಳಿ, ಅದರ ನಂತರ ಆದ ಬಾಲಾಕೋಟ್‍ನಲ್ಲಿ ಭಾರತೀಯ ಸೈನ್ಯ ಮಾಡಿದ ಸರ್ಜಿಕಲ್ ಸ್ಟ್ರೈಕ್ ನೆನಪಿಸಿಕೊಳ್ಳಿ, ನೀವು ಮತಚಲಾಯಿಸುವಾಗ ಹುತಾತ್ಮರಾದ ಸೈನಿಕರನ್ನು, ಸರ್ಜಿಕಲ್ ಸ್ಟ್ರೈಕ್ ಮಾಡಿದ ಶೂರಯೋಧರನ್ನು ಗಮನದಲ್ಲಿಟ್ಟುಕೊಂಡು ಮತಚಲಾಯಿಸಿ ಎಂದು ಯುವಜನತೆಗೆ ಅಪೀಲ್ ಮಾಡಿದರು.

ಕೇಳಿ ತುಂಬಾ ದುಃಖವಾಯಿತು. ನನ್ನ ಪ್ರಶ್ನೆ, ಇಂದು ರಾಜಕೀಯ ಮಾಡಲು, ಚುನಾವಣೆಗಳಲ್ಲಿ ಗೆಲ್ಲಲು, ಹುತಾತ್ಮರಾದ ಸೈನಿಕರನ್ನು, ಧೈರ್ಯ ತೋರಿದ ಶೂರಯೋಧರನ್ನು ಬಳಸಿಕೊಳ್ಳಬೇಕೇ? ಚುನಾವಣೆಗಳಲ್ಲಿ ಗೆಲ್ಲಲು ನಮ್ಮ ಯೋಧರನ್ನು ಬಳಸಿಕೊಳ್ಳುವುದು ತಪ್ಪಲ್ಲವೇ? ಪ್ರಧಾನಿಗಳು ದೇಶಕ್ಕೆ ಹೇಳಬೇಕಾದದ್ದೇನೆಂದರೆ, ಹುತಾತ್ಮರಾದ 40 ಸೈನಿಕರನ್ನು ಉಳಿಸಲು ನೀವು ಏನು ಮಾಡಿದಿರಿ? ನಮ್ಮ ಗೂಢಚರ್ಯೆಯ ಸಂಸ್ಥೆಗಳು ಇದರ ಜವಾಬ್ದಾರಿ ಹೊರಬೇಕಲ್ಲವೇ? ಹೌದು ನೀವು ಏರ್‍ಸ್ಟ್ರೀಕ್ ಮಾಡಿಸಿದಿರಿ, ಆದರೆ ಅದನ್ನು ನಮ್ಮ 40 ಸೈನಿಕರು ಹತರಾಗುವುದಕ್ಕಿಂತ ಮುಂಚೆ ಯಾಕೆ ಮಾಡಲಾಗಲಿಲ್ಲ. ಇಂಟೆಲಿಜೆನ್ಸ್‍ದಿಂದ ಮಾಹಿತಿ ಪಡೆದು ಫುಲ್ವಾಮಾ ಹಲ್ಲೆ ಆಗದಂತೆ ಅದಕ್ಕಿಂತ ಮುಂಚೆಯೇ ಸರ್ಜಿಕಲ್ ಸ್ಟ್ರೈಕ್ ಮಾಡಬಹುದಿತ್ತಲ್ಲ? ಯಾಕೆ ಮಾಡಲಿಲ್ಲ? ನಿಮಗೆ ಇದೊಂದು ವಿಕ್ಟರಿ ಆಗಿ ಕಾಣಿಸುತ್ತಿದೆ ಆದರೆ ನನಗೆ ಇದು ಒಂದು ದೊಡ್ಡ ವೈಫಲ್ಯವೆಂದೇ ಕಾಣಿಸುತ್ತಿದೆ. 40 ಜನರು ಹುತಾತ್ಮರಾಗುವುದು ಸಣ್ಣ ಮಾತಲ್ಲ. ಇದು ದೇಶಕ್ಕೆ ಒಂದು ದೊಡ್ಡ ಆಘಾತ. ಒಂದೇ ಕ್ಷಣದಲ್ಲಿ ಎಷ್ಟೋ ಮಕ್ಕಳು ಅನಾಥರಾದರು, ಎಷ್ಟೋ ತಂದೆತಾಯಿಗಳು ತಮ್ಮ ಮಕ್ಕಳನ್ನು ಕಳೆದುಕೊಂಡರು, ಈಗ ನೀವು ಹೇಳುತ್ತಿರುವುದೇನು? ಮೊದಲ ಬಾರಿ ಮತಚಲಾಯಿಸುವವರು ಅವರ ಹೆಸರಿನಲ್ಲಿ ಮತ ಚಲಾಯಿಸಬೇಕೆಂದು? ಇದಕ್ಕಿಂತ ದುಃಖಕರ ಮತ್ತೇನಿದೆ ದೇಶಕ್ಕೆ?

ವಿಡಿಯೋ ನೋಡಿ

ನಾನು ಮೊದಲ ಬಾರಿ ಮತಚಲಾಯಿಸುವವರಿಗೆ ಮತ್ತು ಇತರರಿಗೆ ವಿನಂತಿ ಮಾಡುತ್ತಿದ್ದೇನೆ. ನೀವು ನಿಮ್ಮ ಮತವನ್ನು ನಮ್ಮ ಸೈನಿಕರ ಸುರಕ್ಷತೆಯ ಜವಾಬ್ದಾರಿ ತೆಗೆದುಕೊಳ್ಳುವ, ಅದನ್ನು ಖಾತ್ರಿಪಡಿಸುವ ರಾಜಕಾರಿಣಿಗಳಿಗೆ ಮತ ನೀಡಿ. ನಮ್ಮ ಸೈನಿಕರ ಬಲಿಕೊಟ್ಟು ಅವರ ಹೆಸರಿನಲ್ಲಿ ವೋಟು ಕೇಳುವವರಿಗೆ ನೀಡಬೇಡಿ. ಜೈ ಹಿಂದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ..’; ಇವಿಎಂ-ವಿವಿಪ್ಯಾಟ್ ಪರಿಶೀಲನೆ ಆದೇಶವನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

0
'ಇವಿಎಂ-ವಿವಿಪ್ಯಾಟ್ ಪರಿಶೀಲನಾ ಅರ್ಜಿ' ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಕಾಯ್ದಿರಿಸಿದ್ದು, 'ಮತ್ತೊಂದು ಸಾಂವಿಧಾನಿಕ ಪ್ರಾಧಿಕಾರದಿಂದ ನಡೆಸಬೇಕಾದ ಚುನಾವಣೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ' ಎಂದು ನ್ಯಾಯಾಲಯವು ಹೇಳಿತು. 2024ರ ಲೋಕಸಭಾ ಚುನಾವಣೆಯ ಎರಡನೇ ಹಂತವು...