ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಫೀಲ್ಡಿಂಗ್ ನಿರ್ಬಂಧಗಳನ್ನು ಮೀರಿದ ಕಾರಣಕ್ಕಾಗಿಯೇ ಧೋನಿಯ ರನ್ ಔಟ್ ಆಯಿತೇ? ಇಲ್ಲಿದೆ ಸತ್ಯ

ಮಹತ್ವದ ಸೆಮಿಫೈನಲ್ ನಲ್ಲಿ ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತವನ್ನು ನಾಲ್ಕನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ್ದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆ ಪಂದ್ಯದ ಸೋಲಿನಲ್ಲಿ ಮಹೇಂದ್ರ ಸಿಂಗ್ ಧೋನಿಯವರ ರನ್ ಔಟ್ ಪ್ರಮುಖ ಪಾತ್ರ ವಹಿಸಿತ್ತು. ರನ್ ಔಟ್ ಆದಾಗ ಧೋನಿ ಅಂಗಳದಲ್ಲಿಯೇ ಕಣ್ಣೀರಾಕಿದ್ದನ್ನು ಅಭಿಮಾನಿಗಳು ಮರೆತಿಲ್ಲ.

ಇದೇ ಸಂದರ್ಭದಲ್ಲಿ ಅಂಪೈರ್ ಗಳ ತಪ್ಪಿನಿಂದಾಗಿ ರನ್ ಔಟ್ ಆಗಿದೆ, 48ನೇ ಓವರ್ ನಲ್ಲಿ ಲಾಕೀ ಫರ್ಗೂಸನ್ ನ ಎಸೆತವನ್ನು ಧೋನಿ ಬಾರಿಸಿದ ಹೊಡೆತದಲ್ಲಿ ಎರಡನೇ ರನ್ ಗಾಗಿ ಧೋನಿ ಓಡುತ್ತಿದ್ದಾಗ ಮಾರ್ಟಿನ್ ಗುಪ್ಟಿಲ್ ನೇರವಾಗಿ ವಿಕೆಟ್ ಗೆ ಬಾಲ್ ಎಸೆದ ಕಾರಣ ಆದ ರನ್ ಔಟ್ ನ ಬಾಲ್ ಕ್ರಮಬದ್ಧವಾಗಿಲ್ಲ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೂರನೇ ಪವರ್ ಪ್ಲೆ (41-50 ಓವರ್) ನಲ್ಲಿ ಐದಕ್ಕಿಂತ ಹೆಚ್ಚು ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗೆ ನಿಲ್ಲುವಂತಿಲ್ಲ ಎಂಬ ಐಸಿಸಿ ನಿಯಮವಿದ್ದರೂ ಸಹ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಔಟಾದ 48.3ನೇ ಬಾಲ್ ನಲ್ಲಿ ಆರು ಜನ ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗಿದ್ದರು ಅಂಪೈರ್ ಗಮನಿಸಿಲ್ಲ ಎಂಬ ಸ್ಕ್ರೀನ್ ಶಾಟ್ ಎಲ್ಲಾ ಕಡೆ ಹರಿದಾಡಿದೆ.

ಸಿ.ಎನ್.ಎನ್ ನ್ಯೂಸ್18ನ ನಿರೂಪಕ ಆನಂದ್ ನರಸಿಂಹನ್ ರವರು ಆ ಸ್ಕ್ರೀನ್ ಶಾಟ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ “ಮೂರನೇ ಪವರ್ ಪ್ಲೆ ನಲ್ಲಿ 6 ಜನ ಫೀಲ್ಡರ್ ಗಳು ಸರ್ಕಲ್ ನಿಂದ ಹೊರಗಿರುವುದು ಹೇಗೆ? ಅಂಪೈರ್ ಗಳ ಈ ಮಹಾ ಅಪರಾಧಕ್ಕೆ ಶಿಕ್ಷೆ ಇಲ್ಲವೇ? ಸೆಮಿ ಫೈನಲ್ ನಲ್ಲೇ ಹೀಗಾದರೆ ಹೇಗೆ ಎಂದು ಬರೆದಿದ್ದರು.

ನೂರಾರು ಜನರು ಅಂಪೈರ್ ಗಳ ತಪ್ಪು ಎಂದು  ಈ ಸ್ಕ್ರೀನ್ ಶಾಟ್ ಅನ್ನು ಷೇರ್ ಮಾಡಿದ್ದರು. ಎಂ.ಎಸ್ ಧೋನಿ ಫ್ಯಾನ್ಸ್ ಅಫೀಶಿಯಲ್ ಎನ್ನು 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಟ್ವಿಟ್ಟರ್ ಖಾತೆಯಿಂದಲೂ ಪೋಸ್ಟ ಆಗಿದ್ದಲ್ಲದೇ, ಧೋನಿ ನಾಟ್ ಔಟ್ ಆಗಿದ್ದರೆಂಬ ಯೂಟ್ಯೂಬ್ ವಿಡಿಯೋವೊಂದು ಪೋಸ್ಟ್ ಆಗಿದ್ದು ಅದನ್ನು ಬರೋಬ್ಬರಿ 1 ಕೋಟಿ 30 ಲಕ್ಷ ಜನ ವೀಕ್ಷಿಸಿದ್ದಾರೆ.

ಬಹುಮುಖ್ಯ ಮಾಧ್ಯಮ ಸಂಸ್ಥೆಗಳಾದ ದಿ ಇಂಡಿಯನ್ ಎಕ್ಸ್ ಪ್ರೆಸ್, ಇಂಡಿಯಾ ಟುಡೆ, ಆಜ್ ತಕ್ ಮುಂತಾದವುಗಳು ಸಹ ಫೀಲ್ಡಿಂಗ್ ನಿರ್ಬಂಧದ ಅಂಪೈರ್ ಗಳ ತಪ್ಪಿನಿಂದಾಗಿ ಧೋನಿ ಔಟಾಗಿರುವ ಸಾಧ್ಯತೆಯಿದೆ ಎಂಬ ವರದಿಗಳನ್ನು ಪ್ರಕಟಿಸಿದ್ದವು.

ಹಾಗಾದರೆ ಆ 48ನೇ ಓವರ್ ನಲ್ಲಿ ಆಗಿದ್ದಾದರೂ ಏನು?

ಈ ಕುರಿತು ಸ್ವತಂತ್ರ ಮಾಧ್ಯಮ ಸಂಸ್ಥೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ನಡೆಸಿದೆ. ಸ್ಕ್ರೀನ್ ಶಾಟ್ ನಲ್ಲಿ ಕಾಣುತ್ತಿರುವ ಫೀಲ್ಡರ್ ಗಳ ಗ್ರಾಫಿಕ್ ನಲ್ಲಿ ತಪ್ಪಾಗಿದೆಯೇ ಹೊರತು ಅಂಪೈರ್ ನಿಂದಲ್ಲ ಎಂದು ಕಂಡಬಂದಿದೆ. ಆ ಓವರ್ ನ ಮೂರು ಬಾಲ್ ಗಳಲ್ಲಿ ಏನಾಯಿತು, ಫೀಲ್ಡರ್ ಗಳು ಯಾವ ಯಾವ ಜಾಗದಲ್ಲಿ ನಿಂತಿದ್ದರು ಎಂಬುದನ್ನು ಒಂದೊಂದಾಗಿ ನೋಡೋಣ

ಮೊದಲ ಬಾಲ್ (48.1 ಓವರ್ಸ್)

ಈ ಎಸೆತದಲ್ಲಿ ಐದು ಫೀಲ್ಡರ್ ಗಳು 30 ಯಾರ್ಡ್ ಸರ್ಕಲ್ ನಿಂದ ಹೊರಗಿದ್ದರು. ಅಂದರೆ ಥರ್ಡ್ ಮ್ಯಾನ್, ಡೀಪ್ ಫೈನ್ ಲೆಗ್, ಡೀಪ್ ಪಾಯಿಂಟ್, ಡೀಪ್ ಸ್ಕೇರ್ ಲೆಗ್ ಮತ್ತು ಲಾಂಗ್ ಆನ್ ನಲ್ಲಿ ನಿಂತಿದ್ದರು. ಫರ್ಗೂಸನ್ ಎಸೆದ ಆ ಬಾಲ್ ಅನ್ನು ಧೋನಿ ಸಿಕ್ಸ್ ಸಿಡಿಸಿದ್ದರು.

ಎರಡನೇ ಬಾಲ್ (48.2 ಓವರ್ಸ್)

ಈ ಎಸೆತದಲ್ಲಿ ಮಿಡ್ ವಿಕೆಟ್ ನಲ್ಲಿದ್ದ ಫೀಲ್ಡರ್ ಹಿಂದಕ್ಕೆ ಚಲಿಸಿದ್ದಾರೆ ಮತ್ತು ಡೀಪ್ ಫೈನ್ ಲೆಗ್ ನಲ್ಲಿದ್ದ ಫೀಲ್ಡರ್ ಸರ್ಕಲ್ ನ ಒಳಗೆ ಬಂದಿದ್ದಾರೆ. ಈ ಬಾಲ್ ನಲ್ಲಿ ಯಾವುದೇ ರನ್ ಬಂದಿಲ್ಲ.

ಮೂರನೇ ಬಾಲ್ (48.3 ಓವರ್ಸ್)

ಈ ಎಸೆತದಲ್ಲಿಯೇ ಆರು ಜನ ಹೊರಗಿರುವಂತೆ ಮೇಲಿನ ಸ್ಕ್ರೀನ್ ಶಾಟ್ ನಲ್ಲಿ ಆರೋಪಿಸಲಾಗಿದೆ. ಡೀಪ್ ಪಾಯಿಂಟ್, ಡೀಪ್ ಫೈನ್ ಲೆಗ್, ಡೀಪ್ ಸ್ಕ್ವೇರ್ ಲೆಗ್, ಡೀಪ್ ಮಿಡ್ ವಿಕೆಟ್, ಲಾಂಗ್ ಮತ್ತು ಥರ್ಡ್ ಮ್ಯಾನ್ ಎನ್ನಲಾಗಿದೆ.  ಆದರೆ ಆನಂತರ ಥರ್ಡ್ ಮ್ಯಾನ್ ಸರ್ಕಲ್ ಒಳಗೆ ಬಂದು ಶಾರ್ಟ್ ಥರ್ಡ್ ಮ್ಯಾನ್ ಜಾಗಕ್ಕೆ ನಿಂತಿದ್ದಾರೆ.

ಆದರೆ ಗ್ರಾಫಿಕ್ ನಲ್ಲಿ ಇದು ಅಪ್ ಡೇಟ್ ಆಗಿಲ್ಲ. ಹಾಗಾಗಿ ಇದು ಗ್ರಾಫಿಕ್ ಬ್ರಾಡ್ ಕಾಸ್ಟ್ ನ ಸಮಸ್ಯೆಯೇ ಹೊರತು ಅಂಪೈರ್ ದಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಚಿತ್ರದ ಎಡಭಾಗದ ಮೇಲುಭಾಗದಲ್ಲಿ ಶಾರ್ಟ್ ಥರ್ಡ್ ಮ್ಯಾನ್ ಜಾಗದಲ್ಲಿ ಸರ್ಕಲ್ ನ ಒಳಗೆ ಫೀಲ್ಡರ್ ಬಂದು ನಿಂತಿರುವುದನ್ನು ನೀವು ನೋಡಬಹದು. ಹಾಗಾಗಿ ಥರ್ಡ್ ಮ್ಯಾನ್ ಸರ್ಕಲ್ ಒಳಗೆ ಬಂದು ಶಾರ್ಟ್ ಥರ್ಡ್ ಮ್ಯಾನ್ ಜಾಗಕ್ಕೆ ನಿಂತಿರುವುದನ್ನು ಗ್ರಾಫಿಕ್ ಬ್ರಾಡ್ ಕಾಸ್ಟ್ ತೋರಿಸದಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಅಷ್ಟೇ. ಸರ್ಕಲ್ ನಿಂದ ಹೊರಗೆ 5 ಜನರು ಮಾತ್ರ ಇರುವುದು ಖಾತ್ರಿಯಾಗಿದೆ. ಆನಂತರ ಆನಂದ್ ನರಸಿಂಹನ್ ರವರು ಇನ್ನೊಂದು ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

ಒಟ್ಟಿನಲ್ಲಿ ಲಕ್ಷಾಂತರ ಜನ ಸತ್ಯ ಗೊತ್ತಿಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದ ವಾಗ್ವಾದಗಳನ್ನು ನಡೆಸಿದ್ದರು ಎನ್ನುವುದು ಮಾತ್ರ ಸತ್ಯು. ಹಾಗಾಗಿ ಯಾವುದನ್ನು ಫ್ಯಾಕ್ಟ್ ಚೆಕ್ ಮಾಡದೇ ನಂಬಬಾರದು ಎಂಬುದು ಮತ್ತೆ ಸಾಬೀತಾಗಿದೆ.

ಕೃಪೆ: ಆಲ್ಟ್ ನ್ಯೂಸ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here