ಹಾಸ್ಟೆಲ್‍ಗಳಲ್ಲಿ ಗುಣಮಟ್ಟದ ಸೌಲಭ್ಯಗಳಿಗಾಗಿ ಒತ್ತಾಯಿಸಿ ನಾಳೆ ರಾಜ್ಯಾದ್ಯಂತ ಕೆವಿಎಸ್ ನಿಂದ ಪ್ರತಿಭಟನೆ

ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಹಾಸ್ಟೆಲ್‍ಗಳಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜುಲೈ 18ರ ಗುರುವಾರದಂದು ರಾಜ್ಯದ ನಾನಾ ಭಾಗಗಳಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ಪ್ರತಿಭಟನೆ/ಮನವಿ ನೀಡುವ ಹೋರಾಟವನ್ನು ಹಮ್ಮಿಕೊಂಡಿದೆ ಎಂದು ಸಂಚಾಲಕ ಸರೋವರ್ ಬೆಂಕೀಕೆರೆ ತಿಳಿಸಿದ್ದಾರೆ.

ಹಕ್ಕೊತ್ತಾಯಗಳು

1. ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅರ್ಜಿ ಹಾಕುವ ಎಲ್ಲಾ ವಿದ್ಯಾರ್ಥಿಗಳಿಗೂ ದಾಖಲಾತಿ ಖಾತ್ರಿ ಮಾಡಬೇಕು ಎನ್ನುವ ಆದೇಶವಿದ್ದರೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಅಲ್ಲದೆ ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯದ ದೂರದ ಅಂತರವೂ ಹೆಚ್ಚಿದ್ದು ವಿದ್ಯಾರ್ಥಿಗಳಿಗೆ ಸಹಜವಾಗಿಯೇ ತೊಂದರೆಯಾಗುತ್ತಿದೆ. ಹಾಗಾಗಿ ಈ ಶೈಕ್ಷಣಿಕ ವರ್ಷ ಪ್ರಾರಂಭದ ಮುಂಚಿತವಾಗಿಯೇ ಮೆಟ್ರಿಕ್ ನಂತರದ ವೃತ್ತಿಪರ ಹಾಗೂ ಎಲ್ಲಾ ಪದವಿ ಶಿಕ್ಷಣ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಶಿಫಾರಸ್ಸನ್ನು ಸರ್ಕಾರಕ್ಕೆ ಮಾಡಬೇಕು ಮತ್ತು ಈ ತಕ್ಷಣಕ್ಕೆ ಖಾಸಗಿ ಕಟ್ಟಡಗಳನ್ನಾದರೂ ಬಾಡಿಗೆ ಪಡೆದು ಅರ್ಜಿ ಹಾಕುವ ಎಲ್ಲಾ ವಿದ್ಯಾರ್ಥಿಗಳಿಗೆ 3-4 ವಿದ್ಯಾರ್ಥಿಗಳು ಇರುವಂತ ಅಧ್ಯಾಯನ ಸ್ನೇಹಿ ಕೊಠಡಿಗಳ ವ್ಯವಸ್ಥೆಯನ್ನು ಮಾಡಬೇಕು.

2. ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ತಮ್ಮ ಶೈಕ್ಷಣಿಕ ಪಠ್ಯಗಳು, ನಿಯತಕಾಲಿಕ ಪತ್ರಿಕೆ ಹಾಗೂ ವೈಚಾರಿಕ ಸಾಹಿತ್ಯಗಳ ಪುಸ್ತಕಗಳು ದೊರೆಯುವಂತ ಗ್ರಂಥಾಲಯವನ್ನು ನಿರ್ಮಿಸಬೇಕು.

3. ಬೇಳೆಕಾಳುಗಳು, ಸೊಪ್ಪು ತರಕಾರಿಯುಕ್ತ ಗುಣಮಟ್ಟದ ಆಹಾರದ ಜೊತೆಗೆ, ವಾರಕ್ಕೊಂದು ಮೊಟ್ಟೆ, ಸಿಹಿಯೂಟ, ಬಾಳೆಹಣ್ಣು ಹಾಗೂ 15 ದಿನಕ್ಕೊಮ್ಮೆ ಮಾಂಸದೂಟವನ್ನು ನೀಡಬೇಕು.

4. ನಿಲಯದಲ್ಲಿ ಶುಚಿತ್ವ ಬಹಳ ಮುಖ್ಯವಾಗಿದ್ದು, ನಿಲಯದ ಆವರಣ, ಶೌಚಾಲಯವನ್ನು ನಿತ್ಯ ಶುಚಿ ಮಾಡುವದನ್ನು ಖಾತ್ರಿಗೊಳಿಸಬೇಕು. ಮತ್ತು ಶುಚಿಗೊಳಿಸುವ ನೌಕರರನ್ನು ಘನತೆಯುಕ್ತ ಸಂಬಳದ ಜೊತೆ ಖಾಯಂ ನೌಕಕರನ್ನಾಗಿ ಮಾಡಿಕೊಳ್ಳವ ನಿಟ್ಟಿನಲ್ಲಿ ಇಲಾಖೆಯು ಗಮನಹರಿಸಬೇಕು.

ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಹೈದರಾಬಾದ್‍ನಲ್ಲಿ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ: ಕಾಲೇಜು ಮುಚ್ಚಿದ ಆಡಳಿತ ಮಂಡಳಿ

ಹೈದರಾಬಾದ್ ನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಟಿಐಎಸ್ಎಸ್) ಆಡಳಿತವ ಮಂಡಳಿ ಮತ್ತು ಅಲ್ಲಿನ ವಿದ್ಯಾರ್ಥಿಗಳ ನಡುವೆ ಹಾಸ್ಟೆಲ್ ಫೀಸಿನ ವಿಚಾರಕ್ಕೆ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು ಈಗ ಮುಂದಿನ ಆದೇಶದವರೆಗೆ ಟಿಐಎಸ್ಎಸ್ ಹೈದರಾಬಾದ್ ಕ್ಯಾಂಪಸ್ ನ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇದಾದ ನಂತರ, ‘ಕ್ಯಾಂಪಸ್ ವಿದ್ಯಾರ್ಥಿ ಕ್ರಿಯಾ ಸಮಿತಿ’ ಸದಸ್ಯರು ತಮ್ಮ ಪ್ರತಿಭಟನೆಯನ್ನು ಹಾಸ್ಟೆಲ್‌ಗಳಿಂದ ಮುಂದುವರಿಸುವುದಾಗಿ ಹೇಳಿದ್ದಾರೆ.

ಸದ್ಯಕ್ಕೆ ಟಿಐಎಸ್ಎಸ್ ಹೈದರಾಬಾದ್ ಕ್ಯಾಂಪಸ್ ನಿಂದ ಹಾಸ್ಟೆಲ್ ಅನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಜೊತೆಗೆ ತಿಂಗಳಿಗೆ 8500ರೂನಂತೆ ಆರು ತಿಂಗಳ ಒಂದು ಸೆಮಿಸ್ಟರ್ ನ 52000 ಹಣವನ್ನು ಒಟ್ಟಿಗೆ ಮೊದಲೇ ಕಟ್ಟಬೇಕೆಂದು ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ. ಇಷ್ಟೊಂದು ಶುಲ್ಕ ಹೆಚ್ಚಳ ವನ್ನು ಖಂಡಿಸಿ ಜುಲೈ 8 ರಿಂದಲೂ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಇದರಿಂದ ಕ್ರೋಧಗೊಂಡ ಆಡಳಿತ ಮಂಡಳಿ ಮುಂಬೈ ಶಾಖೆಯ ನಿರ್ದೇಶನದಂತೆ ಕಾಲೇಜುಗಳನ್ನು ಮುಚ್ಚಿದೆ. ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ಊರಿಗೋಗುವಂತೆ ಆದೇಶಿಸಲಾಗಿದೆ. ಅವರ ಪೋಷಕರಿಗೂ ಕೂಡ ಸಂದೇಶ ಕಳುಹಿಸಲಾಗಿದೆ.

ಈ ಧೀರೋದಾತ್ತ ಹೋರಾಟ ನಡೆಸಿದ ನನ್ನ ಗೆಳೆಯರಿಗೆಲ್ಲಾ ಅಭಿನಂದನೆಗಳನ್ನು ತಿಳಿಸುತ್ತೇನೆ. ವಿದ್ಯಾರ್ಥಿಗಳನ್ನು ಸುಲಿಗೆ ಮಾಡುವ ಮೂಲಕ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಸರ್ಕಾರ ಮತ್ತು ಆಡಳಿತ ಮಂಡಳಿಗಳು ಪ್ರಯತ್ನಿಸುತ್ತಿವೆ. ಇಂತಹ ದುರಂತ ಸಮಯದಲ್ಲಿ ವಿದ್ಯಾರ್ಥಿಗಳ ಹೋರಾಟವೊಂದೆ ನಮಗೆ ಬೆಳಕಾಗಿದೆ, ನಾವು ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಕೇವಲ ಇಷ್ಟು ಮಾತ್ರ ಹಾಸ್ಟೆಲ್ ಗಳಲ್ಲಿರುವ ಸಮಸ್ಯೆಗಳಲ್ಲ.ಬಹಳ ಮುಖ್ಯವಾಗಿರುವಂತದ್ದು ಹಾಸ್ಟೆಲ್ ಗಳಲ್ಲಿ ಹೊರಗಿನ‌ ವಿದ್ಯಾರ್ಥಿಗಳು ತುಂಬಾ ಹೆಚ್ಚಿಗೆ ಉಳಿದು ಬಿಟ್ಟಿದೆ,ಅಲ್ಲಿನ ಯಾವುದೇ ಒಂದು ಮೇಲ್ವಿಚಾರಕ ರಾಗಿರಲಿ ಅಥವಾ ಸಹಭಾಗಿ ಯಾಗಿರುವಂತಹ ತಾಲೂಕು ಮೇಲ್ವಿಚಾರಕ ರಾಗಿರಲಿ ಇದರ ಬಗ್ಗೆ ಗಮನವನ್ನು ನೀಡುತ್ತಿಲ್ಲ.ಆ ಹೊರಗಿನ‌ ವಿದ್ಯಾರ್ಥಿಗಳು ಇರಲು ಇವರ ಸಹಕಾರವು ಇದೆ ಎನ್ನುವುದು ಖಚಿತ. ಈ ಗೆಸ್ಟ್ ಸ್ಟೂಡೆಂಟ್ಟ್ಸ್ (ಪ್ರವೇಶವಿಲ್ಲದ ವಿದ್ಯಾರ್ಥಿಗಳು) ಇವರನ್ನು ಹಾಸ್ಟೆಲ್ ನಿಂದ ಹೊರಗೆ ಹಾಕುವಂತೆ ಕೂಡ ಸರ್ಕಾರಕ್ಕೆ ಒತ್ತಾಯ ಮಾಡಬೇಕಾಗಿದೆ.

LEAVE A REPLY

Please enter your comment!
Please enter your name here