Homeಅಂತರಾಷ್ಟ್ರೀಯಮೋದಿ ಸರ್ಕಾರದ ನಿರ್ಬಂಧದ ನಡುವೆಯೂ ಕೇಜ್ರಿವಾಲ್‌ ಡೆನ್ಮಾರ್ಕ್‌ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ.. ಹೇಗೆ ಗೊತ್ತಾ?

ಮೋದಿ ಸರ್ಕಾರದ ನಿರ್ಬಂಧದ ನಡುವೆಯೂ ಕೇಜ್ರಿವಾಲ್‌ ಡೆನ್ಮಾರ್ಕ್‌ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ.. ಹೇಗೆ ಗೊತ್ತಾ?

- Advertisement -
- Advertisement -

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅಕ್ಟೋಬರ್ 11ರ ಶುಕ್ರವಾರದಂದು ಡೆನ್ಮಾರ್ಕ್‌‌ನಲ್ಲಿ ನಡೆಯಲಿರುವ ಸಿ40  ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅರೇ ಅದಕ್ಕೆ ಮೋದಿ ಸರ್ಕಾರ ಅನುಮತಿ ನಿರಾಕರಿಸಿದೆ ಅಲ್ಲವೇ, ಮತ್ತೆ ಹೇಗೆ ಭಾಗವಹಿಸಲು ಸಾಧ್ಯ ಎಂದು ಕೇಳುತ್ತೀರಾ? ಸಾಧ್ಯವಿದೆ..

ಇಂದು ತಾಂತ್ರಿಕ ಯುಗವಾಗಿರುವುದರಿಂದ ಡೆನ್ಮಾರ್ಕ್‌‌ಗೆ ಅರವಿಂದ್ ಕೇಜ್ರಿವಾಲ್‌ ಹೋಗದೆಯೂ ಕೂಡ ಭಾಗವಹಸಿಲಿದ್ದಾರೆ. ಹೇಗೆಂದರೆ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: ಡೆನ್ಮಾರ್ಕ್‌‌ನಲ್ಲಿ ಕೇಜ್ರಿವಾಲ್ ಭಾಷಣಕ್ಕೆ ಮೋದಿ ಸರ್ಕಾರದ ಅಡ್ಡಿ…

ದೆಹಲಿಯಲ್ಲಿ ಶೇ.25% ರಷ್ಟು ಮಾಲಿನ್ಯವನ್ನು ನಿಯಂತ್ರಿಸಿರುವುದು ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರದ ಸಾಧನೆಯಾಗಿದೆ. ಈ ಹಿನ್ನೆಲೆಯಲ್ಲಿಯೇ ಅವರನ್ನು ಸಿ-40 ಶೃಂಗಸಭೆಯಲ್ಲಿ ಭಾಷಣ ಮಾಡಲು ಆಹ್ವಾನಿಸಲಾಗಿತ್ತು. ಆದರೆ ಮೋದಿ ಸರ್ಕಾರ ಪ್ರೊಟೋಕಾಲ್ ನೆಪಹೇಳಿ ಅದಕ್ಕೆ ಅವಕಾಶಕೊಟ್ಟಿರಲಿಲ್ಲ. ಇದು ರಾಜಕೀಯ ಪ್ರೇರಿತ ನಿರಾಕರಣೆಯಾಗಿದೆ, ಮೋದಿ ಕೇಜ್ರಿವಾಲ್‌ ಮೇಲೆ ವಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದು ಹಲವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಮೋದಿ ಸರ್ಕಾರ ಎಷ್ಟೇ ಪ್ರಯತ್ನ ಪಟ್ಟು ಕೇಜ್ರಿವಾಲ್‌ ಡೆನ್ಮಾರ್ಕ್‌‌ಗೆ ಹೋಗುವುದನ್ನು ತಡೆದರೂ ಈಗ ಅವರು ಭಾಷಣ ಮಾಡುವುದನ್ನು ತಡೆಯಲಾಗುವುದಿಲ್ಲ. ದೆಹಲಿಯಲ್ಲಿ ಕುಳಿತೇ ಕೇಜ್ರಿವಾಲ್‌ ಡೆನ್ಮಾರ್ಕ್‌‌ನಲ್ಲಿ ಭಾಗವಹಿಸುವ ಹಲವು ರಾಷ್ಟ್ರದ ಪ್ರತಿನಿಧಿಗೆ ಪರಿಸರ ರಕ್ಷಣೆ ಪಾಠ ಹೇಳಲಿದ್ದಾರೆ..  ಆ ಮೂಲಕ ಮೋದಿಯನ್ನು ಈ ವಿಚಾರದಲ್ಲಿ ಕೇಜ್ರಿವಾಲ್‌ ಹಿಂದಿಕ್ಕಿದ್ದಾರೆ ಎಂದೇ ಹೇಳಬಹುದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...