Homeಮುಖಪುಟತೀವ್ರ ಮಾಲಿನ್ಯದ ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಧಿಕ್ಕರಿಸಿ ಬಿಜೆಪಿ ಪಕ್ಷದ ಕಚೇರಿ ಕಾಮಗಾರಿ ಚಾಲ್ತಿಯಲ್ಲಿದೆ..

ತೀವ್ರ ಮಾಲಿನ್ಯದ ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಧಿಕ್ಕರಿಸಿ ಬಿಜೆಪಿ ಪಕ್ಷದ ಕಚೇರಿ ಕಾಮಗಾರಿ ಚಾಲ್ತಿಯಲ್ಲಿದೆ..

- Advertisement -
- Advertisement -

ನವೆಂಬರ್ 4 ರಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಕೇಂದ್ರ ಸರ್ಕಾರ ಮತ್ತು ದೆಹಲಿ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳನ್ನು ಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತ್ತು. ಅದಕ್ಕಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ನಿರ್ಮಾಣ ಅಥವಾ ಕಟ್ಟಡ ಧ್ವಂಸ ಚಟುವಟಿಕೆಗಳನ್ನು ನಿಷೇಧಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಫೆಬ್ರವರಿ 2018 ರಲ್ಲಿ ದೀನ್ ದಯಾಳ್ ಉಪಾಧ್ಯಾಯ (ಡಿಡಿಯು) ಮಾರ್ಗದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಉದ್ಘಾಟಿಸಿದ ಬಿಜೆಪಿ ಪಕ್ಷಕ್ಕೆ ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ಹೆಚ್ಚುವರಿ 2.18 ಎಕರೆಗಳನ್ನು ಮಂಜೂರು ಮಾಡಿತ್ತು.

ನವೆಂಬರ್ 15 ರಂದು ನ್ಯೂಸ್‌ಲಾಂಡ್ರಿ ಈ ಸ್ಥಳಕ್ಕೆ ಭೇಟಿ ನೀಡಿದಾಗ, ಡಜನ್‌ಗಟ್ಟಲೆ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ. ಸ್ಥಳದ ಕಾವಲುಗಾರ ರಾಜು ಸಿಂಗ್ ಅವರು ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ಹೇಳುತ್ತಾರೆ. “ಇದು ಎಲ್ & ಟಿ ಕೆಲಸ. ಅವರು ಅತಿಥಿಗೃಹವನ್ನು ನಿರ್ಮಿಸುತ್ತಿದ್ದಾರೆ, ಕೆಲಸವು ಸ್ವಲ್ಪ ಸಮಯದವರೆಗೆ ನಿಂತುಹೋಗಿತ್ತು, ಆದರೆ ಇದು ಕಳೆದ 2-3 ದಿನಗಳಿಂದ ಪುನರಾರಂಭವಾಯಿತು” ಎನ್ನುತ್ತಾರೆ.

ಬಿಜೆಪಿ ಕಚೇರಿಯ ಕಾಮಗಾರಿ ನಡೆಯುತ್ತಿರುವುದು

ಒಳಗಿನಿಂದ ಲಾಕ್ ಆಗಿರುವ ಮತ್ತೊಂದು ಗೇಟ್‌ನ ಕಾವಲುಗಾರ ಸುಮಿತ್ ಕೂಡ ನ್ಯೂಸ್‌ಲಾಂಡ್ರಿಗೆ ಈ ಸ್ಥಳದಲ್ಲಿ ಕೆಲಸ ನಡೆಯುತ್ತಿದೆ ಮತ್ತು ಅದನ್ನು ಎಲ್ ಅಂಡ್ ಟಿ ಕಾರ್ಯಗತಗೊಳಿಸುತ್ತಿದೆ ಎಂದು ಹೇಳಿದರು.

ಈ ಕುರಿತು ಸುಪ್ರೀಂ ಆದೇಶವಿದ್ದರೂ ಸಹ ನಿರ್ಮಾಣ ಕೆಲಸ ನಡೆಯುತ್ತಿರುವ ಬಗ್ಗೆ ಕೇಳಿದಾಗ, ಬಿಜೆಪಿ ವಕ್ತಾರ ಹರೀಶ್ ಖುರಾನಾ ಅವರು “ಕಾಂಗ್ರೆಸ್ ಪ್ರಧಾನ ಕಚೇರಿ ಕೆಲಸ ನಿಲ್ಲಿಸದಿರುವಾಗ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೆಲಸ ಏಕೆ ನಿಲ್ಲಬೇಕು ಎಂದು ಮರುಪ್ರಶ್ನಿಸಿದ್ದಾರೆ”. “ದೆಹಲಿಯಾದ್ಯಂತ ನಿರ್ಮಾಣ ನಡೆಯುತ್ತಿದ್ದರೆ, ನೀವು ಅದನ್ನು ನಿಲ್ಲಿಸಿ ಎಂದು ಹೇಳುತ್ತೀರಿ?: “ಕಟ್ಟಡವನ್ನು ಮುಚ್ಚಬೇಕು, ಇದರಿಂದ ಧೂಳಿನ ಕಣಗಳು ಗಾಳಿಗೆ ಹೋಗುವುದಿಲ್ಲ. ನಾವು ಅದನ್ನು ಖಚಿತಪಡಿಸಿಕೊಂಡೇ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ಆನಂತರ ಕೋಟ್ಲಾ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಗೆ ನ್ಯೂಸ್‌ಲಾಂಡ್ರಿ ಭೇಟಿ ನೀಡಿದಾಗ, ನಿರ್ಮಾಣ ಸ್ಥಳದಲ್ಲಿ ಸಿಬ್ಬಂದಿಯೊಬ್ಬರು ಈ ಸ್ಥಳದಲ್ಲಿ ಕೆಲಸ ಪ್ರಗತಿಯಲ್ಲಿಲ್ಲ ಎಂದು ಹೇಳಿದರು. ಸೈಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರು ನವೆಂಬರ್ 1 ರಿಂದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು. “ಕಟ್ಟಡದ ಸುತ್ತ ಯಾವುದೇ ಕಾರ್ಮಿಕರು ಕೆಲಸ ಮಾಡುತ್ತಿಲ್ಲ” ಎಂದು ಅವರು ಹೇಳಿದರು.

ಈ ಸೈಟ್‌ನ ಎದುರಿನ ಕಟ್ಟಡದಲ್ಲಿ ಕುಳಿತುಕೊಳ್ಳುವ ಇನ್ನೊಬ್ಬ ಸಿಬ್ಬಂದಿ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. “ಕಟ್ಟಡದ ಹಿಂದೆ ವಾಸಿಸುವ ಕಾರ್ಮಿಕರು, ಈ ತಿಂಗಳ ಆರಂಭದಿಂದಲೂ ಕಾಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.” ಆದರೆ ಕಾಂಕ್ರೀಟ್ ಇಟ್ಟಿಗೆಗಳು ಹೊರಗೆ ಬಿದ್ದಿದ್ದವು ಮತ್ತು ಮರಳು ಸಹ ಇತ್ತು. ಜೊತೆಗೆ ಕಾಮಗಾರಿಯ ದೂಳು ಹೊರಗೆ ಬಾರದಂತೆ ತಡೆಯಲು ಯಾವುದೇ ಕ್ರಮಗಳನ್ನು ಅವರು ಕೈಗೊಂಡಿಲ್ಲ. ಬಿಜೆಪಿ ಕಚೇರಿಯು ಇನ್ನು ಆರಂಭಿಕ ಹಂತದಲ್ಲಿದ್ದರೆ ಕಾಂಗ್ರೆಸ್ ಕಚೇರಿಯು ಅಂತಿಮ ಹಂತದಲ್ಲಿರುವಂತೆ ಕಾಣುತ್ತಿದೆ.

ಕಾಂಗ್ರೆಸ್ ಕಚೇರಿ

ದೆಹಲಿಯ ವಾಯುಮಾಲಿನ್ಯಕ್ಕೆ ಐದು ಪ್ರಮುಖ ಕಾರಣಗಳಲ್ಲಿ ನಿರ್ಮಾಣವು ಒಂದಾಗಿದೆ. ಈ ವರ್ಷದ ಏಪ್ರಿಲ್‌ನಿಂದ ದೆಹಲಿ ಮೂಲದ ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ಮೆಂಟ್ ಮತ್ತು ವಾಟರ್ (ಸಿಇಇಡಬ್ಲ್ಯು) ನಡೆಸಿದ ವಿಶ್ಲೇಷಣೆಯ ಪ್ರಕಾರ, ನಿರ್ಮಾಣವು ರಾಜಧಾನಿಯಲ್ಲಿ ವಾಯುಮಾಲಿನ್ಯದ ಐದನೇ ಅತಿದೊಡ್ಡ ಮೂಲವಾಗಿದೆ ಮತ್ತು ಅದು ಮಾಲಿನ್ಯ ಶೇ.8 ರಷ್ಟು ಕಾರಣವಾಗಿದೆ ಎಂದು ತಿಳಿಸಿದೆ.

ಕೃಪೆ ನ್ಯೂಸ್‌ಲಾಂಡ್ರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’; ಪಂಜಾಬ್‌ ಸಿಎಂ ಭಗವಂತ್ ಮಾನ್

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...