Homeಮುಖಪುಟಉಳಿದು ಹೋದ ಪ್ರಶ್ನೆ: ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುವುದನ್ನು ಮಾಧ್ಯಮ ಸಂಸ್ಥೆಗಳೇಕೆ ಕೋರ್ಟಿನಲ್ಲಿ ಪ್ರಶ್ನಿಸಲಿಲ್ಲ?

ಉಳಿದು ಹೋದ ಪ್ರಶ್ನೆ: ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುವುದನ್ನು ಮಾಧ್ಯಮ ಸಂಸ್ಥೆಗಳೇಕೆ ಕೋರ್ಟಿನಲ್ಲಿ ಪ್ರಶ್ನಿಸಲಿಲ್ಲ?

- Advertisement -
- Advertisement -

ಮಾಧ್ಯಮ ಸಂಸ್ಥೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ ಹೈಕೋರ್ಟ್ ಆದೇಶ ಇಂದು ಹೊರಬಿದ್ದಿದೆ. ಆದರೆ, ಇದು ಮಾಧ್ಯಮ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ಬದ್ಧತೆಯ ಕುರಿತೂ ಹಲವು ಪ್ರಶ್ನೆಗಳನ್ನು ಎಬ್ಬಿಸುತ್ತಿದೆ.

ರಾಜ್ಯದ ಮತ್ತು ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳೆಲ್ಲವುಗಳ ಮೇಲೆ ಬೆಂ.ದ. ಅಭ್ಯರ್ಥಿ ತೇಜಸ್ವಿ ಸೂರ್ಯ ನಿರ್ಬಂಧದ ಆದೇಶ ತಂದಿದ್ದರು. ತನ್ನ ಮೇಲೆ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸಬಾರದು ಎಂಬುದು ಅವರು ಕೇಸು ಹಾಕಿದ ಉದ್ದೇಶವಾಗಿತ್ತು. ಮೇಲ್ನೋಟಕ್ಕೇ ಅವರು ಮಾನಹಾನಿ ಮಾಡಿಕೊಳ್ಳುವಂತಹ ಪ್ರಕರಣಗಳಲ್ಲಿ ಭಾಗಿಯಾದದ್ದು ಕಾಣುತ್ತಿತ್ತು. ಅದರಲ್ಲೂ ಮಹಿಳೆಯರಿಗೆ ಕಿರುಕುಳ, ವಂಚನೆ ಇತ್ಯಾದಿ ಗಂಭೀರ ಪ್ರಕರಣಗಳು ಅವಾಗಿದ್ದವು.

ಇದನ್ನು ಬಹಿರಂಗಪಡಿಸಿದ ಮಹಿಳೆ, ಆತನಿಂದ ಇಂತಹ ವಂಚನೆಗೊಳಗಾದವರಲ್ಲಿ ತಾನು ಮೊದಲನೆಯವಳೂ ಅಲ್ಲ, ಕೊನೆಯವಳೂ ಅಲ್ಲ ಎಂದೂ ಹೇಳಿದ್ದರು. ಲೋಕಸಭಾ ಅಭ್ಯರ್ಥಿಯಾಗಿ ರಾಷ್ಟ್ರೀಯ ಪಕ್ಷವೊಂದರಿಂದ ನಿಯೋಜಿತಗೊಂಡ ವ್ಯಕ್ತಿಯ ಕುರಿತ ಇಂತಹ ಸುದ್ದಿಗಳು ನಿಜಕ್ಕೂ ಗಾಬರಿಗೊಳಿಸುತ್ತಿದ್ದವು.

ಜೊತೆಗೆ ಈ ಸುದ್ದಿಗಳನ್ನು ತಿಳಿದುಕೊಳ್ಳುವುದು ಮತದಾರರ ಹಕ್ಕೂ ಆಗಿತ್ತು. ಅದನ್ನು ನಿರ್ಬಂಧಿಸಿದ ಕೋರ್ಟ್ ತೀರ್ಪು ಖಂಡನೆಗೆ ಒಳಗಾಗಿತ್ತು. ಆದೇಶ ಬಂದ ಕೆಲ ದಿನಗಳ ನಂತರ ಮೊದಲು ಇಂಡಿಯನ್ ಎಕ್ಸ್‍ಪ್ರೆಸ್ ನಿರ್ಬಂಧ ಖಂಡಿಸಿ ಸಂಪಾದಕೀಯ ಬರೆಯಿತು. ಅದಾದ ಇನ್ನೂ ಕೆಲ ದಿನಗಳ ನಂತರ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಗಳು ಸಂಪಾದಕೀಯ ಬರೆದವು. ಆದರೆ, ಉಳಿದ ಸಂಸ್ಥೆಗಳು ಅದರ ಗೋಜಿಗೇ ಹೋಗಲಿಲ್ಲ.

ಇಲ್ಲೇ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಯಾವೊಂದು ಮಾಧ್ಯಮ ಸಂಸ್ಥೆಯೂ ಇದನ್ನು ಕೋರ್ಟಿನಲ್ಲಿ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಅಂದರೆ ಮಾಧ್ಯಮ ಸಂಸ್ಥೆಗಳು ತಮ್ಮ ಸ್ವಾತಂತ್ರ್ಯದ ಕುರಿತು ಅಷ್ಟು ಗಂಭೀರವಾಗಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ.
ಹೈಕೋರ್ಟ್ ಮೊಕದ್ದಮೆಯಲ್ಲಿ ತೇಜಸ್ವಿ ಪರ ವಕೀಲ ಅಶೋಕ್ ಹಾರನಹಳ್ಳಿ ಅವರು ಮುಂದಿಟ್ಟಿರುವ ವಾದವನ್ನು ನೋಡಿದಾಗಲೂ ಇದು ಉದ್ಭವಿಸುತ್ತದೆ. ಅವರ ಪ್ರಕಾರ ‘ಅರ್ಜಿದಾರರು (ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆಯ ತ್ರಿಲೋಚನ್ ಶಾಸ್ತ್ರಿ) ಅಸಲು ದಾವೆಯ ಪ್ರತಿವಾದಿಗಳಲ್ಲ. ಈ ಪ್ರಕರಣದ ಯಾವೊಬ್ಬ ಪ್ರತಿವಾದಿಯೂ ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿಲ್ಲ’. ಹೌದು ಏಕೆಂದರೆ ಅಸಲು ದಾವೆಯ ಪ್ರತಿವಾದಿಗಳಿಗೆ ಇದು ಅಷ್ಟು ಮುಖ್ಯ ಎನಿಸೇ ಇಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...