Homeಮುಖಪುಟಮನಮೋಹನಸಿಂಗ್‍ಗೆ ಕಪ್ಪುಧ್ವಜ ತೋರಿಸಿದ್ದ ಜೆಎನ್‍ಯು ವಿದ್ಯಾರ್ಥಿ ಈಗ ರಾಹುಲ್ ಸಲಹೆಗಾರ!

ಮನಮೋಹನಸಿಂಗ್‍ಗೆ ಕಪ್ಪುಧ್ವಜ ತೋರಿಸಿದ್ದ ಜೆಎನ್‍ಯು ವಿದ್ಯಾರ್ಥಿ ಈಗ ರಾಹುಲ್ ಸಲಹೆಗಾರ!

- Advertisement -
- Advertisement -

ಎಐಸಿಸಿಯು ಇದನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಸದ್ಯ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಜೆಎನ್‍ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರೊಬ್ಬರು ಚುನಾವಣಾ ತಂತ್ರ ಕುರಿತಂತೆ ಸಲಹೆ ನೀಡುತ್ತಿದ್ದಾರೆ. ವಿಚಿತ್ರವೆಂದರೆ ಈ ಸಲಹೆಗಾರ ಹಿಂದೆ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಿದ್ದರು! ಇವರ ಹೆಸರು ಸಂದೀಪ್ ಸಿಂಗ್.

ಸಂದೀಪ್ ಸಿಂಗ್

ಉತ್ತರ ಪ್ರದೇಶದವರಾದ ಸಂದೀಪ್ ಸಿಂಗ್ 2007ರಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಯೆಯಾಗಿದ್ದ ಕಾಮ್ರೇಡ್ ಸಂದೀಪ್‍ಸಿಂಗ್ ಈಗ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ರಾಜಕೀಯ ಸಲಹೆಗಾರರು. ರಾಹುಲ್ ಗಾಂಧಿಯವರ ಸಾರ್ವಜನಿಕ ಭಾಷಣಗಳ ತಯಾರಿಗೆ ಈಗ ಇದೇ ಸಂದೀಪ್ ಸಿಂಗ್ ನೆರವಾಗುತ್ತಿದ್ದಾರೆ.

ಪ್ರಿಯಾಂಕಾಗೆ ಉತ್ತರ ಪ್ರದೇಶದ ಜವಾಬ್ದಾರಿ ನೀಡುವಾಗ ರಾಹುಲ್‍ಗೆ ನೆನಪಾಗಿದ್ದು ಇದೇ ಸಂದೀಪ್ ಸಿಂಗ್. ಸದ್ಯ ಪ್ರಿಯಾಂಕಾ ಗಾಂಧಿಯವರ ಚುನಾವಣಾ ಪ್ರವಾಸದಲ್ಲಿ ಜೊತೆಗಿರುವ ಸಂದೀಪ್ ಸಿಂಗ್ ಸಲಹೆ ನೀಡುವುದರ ಜೊತೆಗೆ ಪಾಲಿಟಿಕಲ್ ಶೋಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಹಿಂದೆ 2005ರಲ್ಲಿ ಆಗಿನ ಯುಪಿಎ ಸರ್ಕಾರದ ಕಾರ್ಪೋರೇಟ್ ಪರ ನೀತಿಗಳನ್ನು ವಿರೋಧಿಸುತ್ತಿದ್ದ ಸಂದೀಪ್ ಸಿಂಗ್ ಆಗಿನ ಪ್ರಧಾನಿ ಮನಮೋಹನಸಿಂಗ್‍ರರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು! ಸಂದೀಪ್‍ಸಿಂಗ್ ಕಮ್ಯುನಿಸ್ಟ್ ಪಾರ್ಟಿ(ಮಾರ್ಕಿಸ್ಟ್-ಲೆನಿನಿಸ್ಟ್)ಯ ವಿದ್ಯಾರ್ಥಿ ಸಂಘಟನೆ AISA ದ ಜೊತೆ ಗುರುತಿಸಿಕೊಂಡು ವಿದ್ಯಾರ್ಥಿ ನಾಯಕರಾದವರು. ಜೆಎನ್‍ಯು ಓದಿನ ನಂತರ ಅವರು ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಕಡೆ ವಾಲಿದರು ಎನ್ನುತ್ತಾರೆ ಅವರ ಸಹಪಾಠಿಗಳು.

2017ರಲ್ಲಿ ಎಡ ಚಿಂತನೆಗಳ ನೂರಾರು ವಿದ್ಯಾರ್ಥಿಗಳು, ಯುವ ನಾಯಕರು ರಾಹುಲ್ ಗಾಂಧಿ ಜೊತೆ ನಿಂತಿರುವುದನ್ನು ಇಲ್ಲಿ ಗಮನಿಸಬೇಕು. ರಾಹುಲ್ ಮಾತುಗಳಲ್ಲಿ ಕೂಡ ಬಂಡವಾಳಶಾಹಿಯ ವಿರುದ್ಧ ಕಟುಟೀಕೆ ಇರುವುದನ್ನು, ಅವರು ಕಲ್ಯಾಣರಾಜ್ಯದ ಬಗ್ಗೆ ಆಸಕ್ತಿ ತೋರುತ್ತಿರುವುದನ್ನು ಗಮನಿಸಬೇಕು. ಇದಕ್ಕೆ ಸಂದೀಪ್ ಸಿಂಗ್ ಕೂಡ ಕಾರಣರು ಎನ್ನಲಾಗುತ್ತಿದೆ.

ಇತ್ತೀಚಿನ ಪ್ರಿಯಾಂಕರ ಟ್ವೀಟ್‍ಗಳಲ್ಲೂ ಇದು ವ್ಯಕ್ತವಾಗಿದೆ. ಪ್ರಿಯಾಂಕಾ ಗಾಂಧಿಯ ಗಂಗಾ ಯಾತ್ರೆಯಲ್ಲಿ ಪಕ್ಕದಲ್ಲಿ ಬಿಜೆಪಿ ತೊರೆದು ಬಂದ ಸಾವಿತ್ರಿಬಾಯಿ ಪುಲೆ ಎಂಬ ದಲಿತ ನಾಯಕಿ ಇರುವಂತೆ ಸಿಂಗ್ ನೋಡಿಕೊಂಡರು ಎನ್ನಲಾಗಿದೆ. ಪ್ರಿಯಾಂಕಾ ಮತ್ತು ಭೀಮ್ ಆರ್ಮಿಯ ಚಂದ್ರಶೇಖರ್ ನಡುವೆ ಭೇಟಿ ಏರ್ಪಡಿಸಿದ್ದು ಕೂಡ ಇದೇ ಸಿಂಗ್.

ಎಡ ಚಿಂತನೆಗಳತ್ತ ವಾಲುವಿಕೆ!?
90ರ ದಶಕದಲ್ಲಿ ಕಾರ್ಪೊರೇಟ್ ಪರ ಆರ್ಥಿಕ ನೀತಿಗಳನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷವೀಗ ರಾಹುಲ್ ನೇತೃತ್ವದಲ್ಲಿ ಎಡ ಚಿಂತನೆಗಳತ್ತ ಒಂದಿಷ್ಟು ವಾಲುತ್ತಿರುವ ಲಕ್ಷಣಗಳಿವೆ. ಕಾಂಗ್ರೆಸ್‍ನ ಪ್ರಣಾಳಿಕೆಯಲ್ಲೂ ಇದನ್ನು ಕಾಣಬಹುದು. ‘ನ್ಯಾಯ್’ ಯೋಜನೆಯಲ್ಲಂತೂ ಇದು ದಟ್ಟವಾಗಿದೆ.

ಇದು ಸಂದೀಪ್ ಸಿಂಗ್‍ರಂತಹ ಎಡ ಚಿಂತನೆಯ ಹಿನ್ನಲೆಯವರ ಸಾಂಗತ್ಯದ ಪರಿಣಾಮ ಎನ್ನಬಹುದು. ಆದರೆ, ನಿಜಕ್ಕೂ ಈ ಜನಸ್ನೇಹಿ ಪಲ್ಲಟದಲ್ಲಿ ಕಾಂಗ್ರೆಸ್ ಮುಂದೆಯೂ ಪ್ರಾಮಾಣಿಕವಾಗಿ ಇರಬಲ್ಲುದೇ ಎಂಬ ಪ್ರಶ್ನೆಯಂತೂ ಕಾಡುತ್ತಿದೆ.
(ಆಧಾರ: ದಿ ಪ್ರಿಂಟ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...