Homeಅಂಕಣಗಳುಮೋಡದ ಮರೆಯಲ್ಲಿ ಮೋದಿ

ಮೋಡದ ಮರೆಯಲ್ಲಿ ಮೋದಿ

ಸಾಹಿತ್ಯದ ಲೋಕದ ಜೈನ ವಿದ್ವಾಂಸರಾದ ಹಂಪನಾ ಅವರು ಮಠಮಂದಿರಗಳು ಭಯೋತ್ಪಾದನೆಯ ಕೇಂದ್ರಗಳಾಗದಿರಲಿ ಎಂದಿದ್ದಾರೆ.

- Advertisement -
- Advertisement -

ಬಾಲಾಕೋಟ್ ಕಾರ್ಯಾಚರಣೆಯನ್ನು ಮೋಡದ ಮರೆಯಲ್ಲಿ ಮಾಡಿ ಪಾಕಿಸ್ತಾನಕ್ಕೆ ಚಳ್ಳೆಹಣ್ಣು ತಿನ್ನಿಸಿದೆ ಎಂದು ನಮ್ಮ ಭವ್ಯ ಭಾರತದ ಪ್ರಧಾನಿ ಭೂಗತಲೋಕದ ಕಿಡಿಗೇಡಿಯಂತೆ ಬಾಯಿ ಬಿಟ್ಟಿದ್ದಾರಲ್ಲಾ. ಇದನ್ನು ಕೇಳಿದ ಇಡೀ ಭಾರತವಷ್ಟೆ ಅಲ್ಲ. ಬಾಂಗ್ಲಾ, ಪಾಕಿಸ್ತಾನ ಕೂಡ ನಗಾಡಿದವಂತೆ. ಇದೇ ಮೋದಿ ಪ್ರಧಾನಿಯಾದ ಆರಂಭದಲ್ಲಿ ನಮ್ಮ ಪುರಾತನ ಆಯುರ್ವೇದ ಪಂಡಿತರು ಪ್ಲಾಸ್ಟಿಕ್ ಸರ್ಜರಿಯಲ್ಲಿ ಪರಿಣಿತರಾಗಿದ್ದರು. ಆ ಕಾರಣಕ್ಕೆ ಆನೆಮರಿ ತಲೆಯನ್ನು ಗಣೇಶನಿಗೆ ಜೋಡಿಸಿ ಕೆಲವೇ ದಿನಗಳಲ್ಲಿ ಗಣೇಶ ಮಾತನಾಡುವಂತೆ ಮಾಡಿದರು ಎಂದಾಗ, ಇಡೀ ಭಾರತವೇ ಅಯ್ಯೋ ಮುಂಡೆದೆ ಎಂದು ಲೊಚಗರೆದಿತ್ತು. ಆ ಪುರಾಣ ಹಾಳುಬಿದ್ದೋಗಲಿ ಮೋಡ ಮುಸುಕಿದ್ದರೆ ಯುದ್ಧ ವಿಮಾನಗಳು ಮತ್ತು ರೆಡಾರ್ ಸಂದೇಶಗಳು ಬಂದಾಗುತ್ತವೆ ಎಂದು ಭಾವಿಸಿರುವ ಈತ, ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಜರ್ಮನ್ ಶೆಪರ್ಡ್ ನಾಯಿಯ ಬಗ್ಗೆ ತಿಳಿದುಕೊಂಡಿಲ್ಲ ಅನ್ನಿಸುತ್ತದೆ. ಹಾಗೆ ನೋಡಿದರೆ ಸದರಿ ಮೇಧಾವಿ ಯಾವುದರ ಬಗ್ಗೆಯೂ ನಿಖರವಾಗಿ ತಿಳಿದು ಕೊಂಡಿಲ್ಲ. ಅದಕ್ಕೆ ಪ್ರೆಸ್‍ಮೀಟು ಗಳಿಗೆ ಹೆದರಿ ರುವುದು ಅಕಸ್ಮಾತ್ ಸಂದರ್ಶನ ವಿದ್ದರೆ ತಾನೇ ಪ್ರಶ್ನೆ ಕಳಿಸಿ, ಏಕಪಾತ್ರಾಭಿನಯ ಮಾಡುವುದು ಇನ್ನೊಂದು ಜೋಕ್ ಎಂದರೆ ಈತ ಪಾಕಿಸ್ತಾನಕ್ಕೆ ಹೋಗಿದ್ದು ಕೂಡ ಮೋಡದ ಮರೆಯಲ್ಲಂತಲ್ಲಾ ಥೂತ್ತೇರಿ.

*****

ಇಂತಹ ಮೋದಿ ಇನ್ನೂ ಹದಿನೈದು ವರ್ಷ ಪ್ರಧಾನಿಯಾಗಿರಬೇಕು ಎಂದು ಭೈರಿಗೆ ಹಿಡಿದುಕೊಂಡಿರುವ ಸಂತೆಶಿವರದ ಚೆಡ್ಡಿ ಭೈರಣ್ಣನಿಗೆ, ನ್ಯಾಯಪಥದ ಪಂಚಕನ್ಯೆಯರು ಭೈರನ ಕೆನ್ನೆಗೆ ಸರಿಯಾಗಿ ತಪರಾಕಿ ಹಾಕಿದ್ದಾರಲ್ಲಾ. ಇವರೆಲ್ಲರ ಅನುಭವ ಏನೆಂದರೆ ಇದು ಅಗ್ರಹಾರದ ಹಾಳುಬಿದ್ದ ವಠಾರದಲ್ಲಿ ತನ್ನದೇ ಕಗ್ಗದ ರಾಶಿಯಲ್ಲಿ ಹುದುಗಿರುವ ಮುದಿಗೊಡ್ಡು. ಇದಕ್ಕೆ ಎಷ್ಟು ಬೈದರೂ ಅಷ್ಟೆ ಎಂದು ಸುಮ್ಮನಾದರಂತಲ್ಲಾ. ಚೆಡ್ಡಿ ಭೈರಣ್ಣ ಮಹಿಳೆಯರನ್ನೇನು ದ್ವೇಷ ಮಾಡುವುದಿಲ್ಲ. ಅವರಿಗೆ ಕರ್ತವ್ಯಗಳನ್ನು ನಿರ್ದೇಶಿಸುತ್ತಾನೆ ಅಷ್ಟೆ. ಈತನ ಗೊಡ್ಡು ಸಾಹಿತ್ಯದಲ್ಲಿ ವಿಧವೆಯರು ಮದುವೆಯಾದರೆ ನಿರಂತರ ಗರ್ಭಪಾತವಾಗುತ್ತದೆ. ಧಾಟುವಿನಲ್ಲಿ ಒಕ್ಕಲಿಗರ ಹುಡುಗನನ್ನ ಮದುವೆಯಾದ ಬ್ರಾಹ್ಮಣ ಪುರೋಹಿತನ ಮಗಳು ಸತ್ತುಹೋಗುತ್ತಾಳೆ. ಅಸ್ಪøಶ್ಯತೆ ಅವಮಾನದಿಂದ ಸಿಡಿದೆದ್ದ ಮೋಹನದಾಸ ಕೆರೆಗಳನ್ನು ಸ್ಫೋಟಿಸುತ್ತಾನೆ. ಹೀಗೆ ತನ್ನದೆ ಚೆಡ್ಡಿ ಕುಲುಮೆಯಲ್ಲಿ ಕಾಯಿಸಿ, ಕುಟ್ಟಿ ಕಟ್ಟಿದ ಪುಸ್ತಕಗಳ ರಾಶಿಯಿಂದ ಹೆಕ್ಕಿ ತೆಗೆಯಲು ಒಂದೇ ಒಂದು ಮಾನವೀಯ ಗುಣದ ಸಾಲಿಲ್ಲವಂತಲ್ಲಾ. ಆದರೂ ಈತ ಭಾರತದ ಜನಪ್ರಿಯ ಲೇಖಕ. ಏಕೆಂದರೆ ಅಕ್ಷರದ ಗುತ್ತಿಗೆ ಹಿಡಿದ ಪುರೋಹಿತರ ಕಪಾಟಿನಲ್ಲಿ ಈತನವೇ ಪುಸ್ತಕಗಳು. ಕೆರೆಯುತ್ತಿರುವವನೂ ಅವನೆ, ಓದುತ್ತಿರುವವರೂ ಅವರೆ. ಹುಟ್ಟ ಚೆಡ್ಡಿಗಳು ಚಟ್ಟದವರೆಗೂ ಚೆಡ್ಡಿಗಳಾಗಿರುತ್ತವೆ ಎಂಬುದಕ್ಕೆ, ಭೈರಣ್ಣನೇ ಉದಾಹರಣೆಯಂತಲ್ಲಾ ಥೂತ್ತೇರಿ.

 

*****

ಕರ್ನಾಟಕದ ರಾಜಕಾರಣದ ವಿಷಯಕ್ಕೆ ಬರುವುದಾದರೆ, ಕೋಡುಗಳಿಲ್ಲದ ಕುರುಬರ ಟಗರಿನ ಕಾಳಗ ಶಾನೆ ಜೋರಾಗಿದೆಯಲ್ಲಾ, ಜೆಡಿಎಸ್‍ನಿಂದ ವಿಶ್ವನಾಥ, ಬಿಜೆಪಿಯಿಂದ ಈಶ್ವರಪ್ಪ, ಕಾಂಗ್ರೆಸ್‍ನಿಂದ ಸಿದ್ದರಾಮಯ್ಯ ಈ ಮೂರು ಜನರ ಕುರಿಗಾಹಿ ಜಗಳದಂತ ಮಾತುಗಳನ್ನು ಕೇಳಿದರೆ, ಈ ರಾಜ್ಯದಲ್ಲಿ ಇನ್ನಾರೂ ಇಲ್ಲವೆ ಅನ್ನಿಸುತ್ತಿದೆಯಲ್ಲಾ. ಸಿದ್ದರಾಮಯ್ಯನೇ ಹೇಳಿದಂತೆ ಈಶ್ವರಪ್ಪನ ನಾಲಿಗೆ ಮತ್ತು ಮೆದುಳಿನ ನಡುವೆ ಲೂಸ್ ಕಾಂಟ್ಯಾಕ್ಟಿದೆ. ಇನ್ನ ವಿಶ್ವನಾಥ ಹೊಟ್ಟೆಕಿಚ್ಚಿನವನು. ಅದಕ್ಕೆ ವಿಶ್ವನಾಥ ಸಕಾರಣ ಒದಗಿಸಬಲ್ಲರು. ಆದರೆ ಸಿದ್ದು ಕತೆ ಅದಲ್ಲ. ಬರಲಿರುವ ರಿಸಲ್ಟಿನಿಂದ ಭಾರತ ಮತ್ತು ಕರ್ನಾಟಕದಲ್ಲಿ ಏನಾದರೂ ಆಗಬಹುದು ಆಗಿನ ದಾಳಗಳನ್ನ ಈಗಲೇ ರೆಡಿಮಾಡಿಕೊಳ್ಳುತ್ತಿರುವ ಸಿದ್ದು ವ್ಯಸನ ಏನೆಂದರೆ ಮತ್ತೆ ಮುಖ್ಯಮಂತ್ರಿಯಾಗುವುದು. ಸಿದ್ದರಾಮಯ್ಯ ಎಡೂರಪ್ಪನಂತಾಡುವುದು ಕೆಲವು ಕಾಂಗೈಗಳಲ್ಲೇ ಇರಿಸು ಮುರುಸಾಗಿದೆಯಂತಲ್ಲಾ. ಐದು ವರ್ಷ ಪೂರೈಸಿದ ಹೆಗ್ಗಳಿಕೆಯನ್ನು ಮುಂದಿಟ್ಟುಕೊಂಡು ನಮ್ಮ ಮುಂದಿನ ಮುಖ್ಯಮಂತ್ರಿ ಒಬ್ಬ ದಲಿತ ಎನ್ನಲು ಸಿದ್ದರಾಮಯ್ಯಗೇನಾಗಿದೆ. ಆಗ ಹಿಂದೆ ಖರ್ಗೆಯನ್ನ ಮುಖ್ಯಮಂತ್ರಿ ಮಾಡಿ ಎಂದಿದ್ದ ದೇವೇಗೌಡರು ಅನಾವರಣಗೊಳ್ಳುತ್ತಾರೆ, ಕಾಂಗ್ರೆಸ್‍ನ ದೊಡ್ಡ ಋಣವೊಂದು ಪರಿಹಾರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಎಡೂರಪ್ಪನ ಟೀಮೂ ಕೂಡ ಆಪರೇಷನ್ ಕತ್ತರಿಯನ್ನು ಬಿಸಾಡುತ್ತವಲ್ಲಾ, ಥೂತ್ತೇರಿ!

*****

ಇನ್ನ ಕರ್ನಾಟಕದ ಸಾಹಿತ್ಯ ಮತ್ತು ಆಧ್ಯಾತ್ಮಲೋಕಕ್ಕೆ ಬರುವುದಾದರೆ ಸಿರಿಗೆರೆಸ್ವಾಮಿ, ಹಂಪಾನಾ ಇತ್ಯಾದಿ ಜನ ತಮ್ಮ ತಮ್ಮ ಹೇಳಿಕೆಯಿಂದ ಭಯ ಹುಟ್ಟಿಸಿದ್ದಾರಲ್ಲಾ. ಸಿರಿಗೆರೆ ಶ್ರೀಗಳ ಪ್ರಕಾರ ಮಠಮಂದಿರಗಳು ಜಾತಿ ಸಂಘರ್ಷಗಳಾಗುತ್ತಿವೆ. ಇದಂತೂ ನಿಜ. ಸಾದ ಜನಾಂಗದ ಸಿರಿಗೆರೆ ಮಠ ಕಂಡರೆ ನೊಣಬರಿಗಾಗುತ್ತಿಲ್ಲ, ಬಣಜಿಗರಿಗೂ ಅಷ್ಟೇ. ಇನ್ನ ಅದರಲ್ಲಿನ ಪಂಗಡಗಳಿಗೂ ಅಷ್ಟೆ. ‘ಇವ ನಮ್ಮವ’ ಎಂಬ ಭಾವನೆ ಕೊರತೆ ಈ ಮಠದ ಆವರಣದಲ್ಲಿದೆ. ಜಾತಿಮಠದ ತುದಿಯಲ್ಲಿ ಕುಳಿತ ಜಗದ್ಗುರು ಎಲ್ಲ ಜಾತಿಗೂ ಜಗದ್ಗುರುವಾಗುವುದು ಕಷ್ಟ. ಅಷ್ಟಕ್ಕೂ ಸಿರಿಗೆರೆ ಮಠದ ಸಂವಿಧಾನ ಮೀರಿ ನಿವೃತ್ತಿ ವಯಸ್ಸಾದರೂ ಅದನ್ನು ಹತ್ತಿಕ್ಕಿ ಪೀಠದ ಮೇಲಿರುವ ಸಿರಿಗೆರೆ ಶ್ರೀ ತಮ್ಮ ಮಾತುಗಳಿಗೆ ಹಿನ್ನಡೆ ಅನುಭವಿಸುತ್ತಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಜಗದ್ಗುರುಗಳಿರುವ ಈ ನಾಡಿನಲ್ಲಿ ಇನ್ನ ಜಾತಿ ಸಾಮರಸ್ಯ ಮೂಡಿಲ್ಲ. ಅಸ್ಪøಶ್ಯತೆ ಹಾಗೇ ಇದೆ. ಬದಲಾದ ಜಗತ್ತಿನಲ್ಲಿ ಅಕಸ್ಮಾತ್ ಅಂತರ್ಜಾತಿ ಪ್ರೇಮವೇರ್ಪಟ್ಟರೆ ಮರ್ಯಾದೆ ಹತ್ಯೆಗಳು ಜರುಗುತ್ತಿವೆ. ಈ ಎಲ್ಲಾ ಅನಿಷ್ಟಗಳ ಮುಂದುವರಿಕೆಯಲ್ಲಿ ಜಗದ್ಗುರುಗಳ ಪಾಲಿರುವುದನ್ನು ಮರೆಮಾಚಿ ಮಠಮಂದಿರಗಳಿಂದ ಜಾತಿಸಂಘರ್ಷಗಳು ನಡೆಯುತ್ತವೆ ಎನ್ನುವ ಜಗದ್ಗುರುಗಳು ತಾವು ವಾಸ ಮಾಡುವ ಜಾಗದ ರಾಜಕಾರಣಿಗಳಾದ ಆಂಜನೇಯ, ಚಂದ್ರಪ್ಪನನ್ನ ಕರೆದು ಈಗಲೂ ನೀವು ಮನೆಗಳಿಂದ ಹೊರನಿಲ್ಲುವ ಸ್ಥಿತಿ ಇದೆಯೇ ಎಂದು ಕೇಳಬಹುದಲ್ಲಾ, ಥೂತ್ತೇರಿ!!

*****

ಸಾಹಿತ್ಯದ ಲೋಕದ ಜೈನ ವಿದ್ವಾಂಸರಾದ ಹಂಪನಾ ಅವರು ಮಠಮಂದಿರಗಳು ಭಯೋತ್ಪಾದನೆಯ ಕೇಂದ್ರಗಳಾಗದಿರಲಿ ಎಂದುಬಿಟ್ಟಿದ್ದಾರೆ. `ಕನ್ನಡ ಸಾಹಿತ್ಯ ಪಂಪನಿಂದ ಹಿಡಿದು ಹಂಪಾನಾವರೆಗೆ’ ಎಂದು ತಮ್ಮವರ ಕೈಯಿಂದ ಹೊಗಳಿಸಿಕೊಂಡು ಹಾರ, ತುರಾಯಿ, ಪ್ರಶಸ್ತಿಗಳನ್ನು ಪಡೆದಿರುವ ಈ ಹಂಪಾನಾ ಕಾಲದಲ್ಲೇ, ಸಾಹಿತ್ಯ ವೇದಿಕೆಗೆ ಮಠಮಂದಿರಗಳ ಜಗದ್ಗುರುಗಳು ಬಂದು ಆಸೀನರಾಗಿದ್ದು. ಜಾತ್ಯತೀತ ವೇದಿಕೆಗೆ ಜಗದ್ಗುರುಗಳನ್ನ ತಂದ ಅನಿಷ್ಠವೇ ಈ ಹಂಪಾನಾ. ಇವರ ಕಾಲದಲ್ಲಿ ಹಾಳಾದ ಸಾಹಿತ್ಯ ಪರಿಷತ್ತು ಸುಧಾರಿಸಲೇಇಲ್ಲ. ಕುವೆಂಪು ಟ್ರಸ್ಟಿಗೂ ವಕ್ಕರಿಸಿದ ಈತ ಅದಕ್ಕೂ ಭ್ರಷ್ಟತೆ ಕಳಂಕ ಹಚ್ಚಿದವರು. ಅದಿರಲಿ, ಸದ್ಯಕ್ಕೆ ಇವರಿಗೆ ಅದ್ಯಾವ ಮಠ ಬೆದರಿಕೆ ಹಾಕಿತು ಎಂಬುದೇ ಗೊತ್ತಿಲ್ಲ. ಇಷ್ಟಾದರೂ ಹಂಪಾನಾ ಚೆಡ್ಡಿ ಭೈರಣ್ಣನಂತಲ್ಲ. ಅಪ್ಪಟ ಸ್ತ್ರೀವಾದಿ. ಕಮಲಾಹಂಪನಾ ಅವರು ಭಾಷಣ ಮಾಡುತ್ತಿದ್ದಾಗ ಅವರ ಸಾಧಾರಣ ಮಾತಿಗೂ ಬಿರುಸಿನ ಚಪ್ಪಾಳೆ ಬೀಳುತ್ತಿತ್ತು. ತಿರುಗಿ ನೋಡಿದಾಗ ಪತಿ ಹಂಪಾನ ಕಮಲಾ ಮಾತಿಗೆ ಚಪ್ಪಾಳೆ ಚಚ್ಚುತಿದ್ದರಂತಲ್ಲಾ, ಥೂತ್ತೇರಿ!!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಸರಗೋಡು: ಅಣಕು ಮತದಾನದ ವೇಳೆ ಬಿಜೆಪಿ ಚಿಹ್ನೆಯೊಂದಿಗೆ ಹೆಚ್ಚುವರಿ ಸ್ಲಿಪ್ ಮುದ್ರಿಸಿದ ವಿವಿಪ್ಯಾಟ್

0
ಕೇರಳದ ಕಾಸರಗೋಡಿನಲ್ಲಿ ಬುಧವಾರ (ಏ.17) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಮೂರು ವಿವಿ ಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಮಲದ ಚಿಹ್ನೆಯೊಂದಿಗೆ ತಲಾ...