Homeಅಂಕಣಗಳುಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

ಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

- Advertisement -
- Advertisement -

| ಮಲ್ಲಿ |

ಮೋದಿಯ ಲೋಕಸಂಚಾರದ ಫಲಾನುಭವಿಗಳು: ಅಂಬಾನಿ ಮತ್ತು ಅದಾನಿ

ಮೋದಿ ವಿದೇಶ ಪ್ರವಾಸ ಕೈಗೊಂಡಾಗ ಸಾಕಷ್ಟು ಸಲ ಅನಿಲ್ ಅಂಬಾನಿ ಮತ್ತು ಗೌತಮ್ ಅದಾನಿ ಜೊತೆಗಿದ್ದು, ಭೇಟಿಯಾದ ದೇಶಗಳ ಕಂಪನಿಗಳ ಜೊತೆಗೆ  ಇವರಿಬ್ಬರ ಕಂಪನಿಗಳು ಕನಿಷ್ಠ 18 ಪ್ರಮುಖ ಡೀಲ್‍ಗಳಿಗೆ ಸಹಿ ಹಾಕಿವೆ….. ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ.

ತಮ್ಮ ಅಧಿಕಾರವಧಿಯ ಮೊದಲ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 41 ಸಲ ವಿದೇಶ ಪ್ರವಾಸ ಮಾಡಿದ್ದು, 52 ದೇಶಗಳನ್ನು ಸಂದರ್ಶಿಸಿದ್ದಾರೆ. ಈ ಪ್ರವಾಸದ ಒಟ್ಟು ಅವಧಿ 165 ದಿನಗಳು. ಇದಕ್ಕಾಗಿ ಅವರು 355 ಕೋಟಿ ರೂ ಖರ್ಚು ಮಾಡಿದ್ದು, ಅದು ತೆರೆಗೆದಾರನ ಹಣವಾಗಿದೆ. ಬಹುಪಾಲು ವಿದೇಶಿ ಭೇಟಿಗಳಲ್ಲಿ ಅವರ ಜೊತೆ ಅಂಬಾನಿ, ಅದಾನಿ ಇದ್ದು, 16 ರಾಷ್ಟ್ರಗಳಲ್ಲಿ ಇವರಿಬ್ಬರ ಕಂಪನಿಗಳು 18 ಡೀಲ್‍ಗಳಿಗೆ ಸಹಿ ಹಾಕಿವೆ. ಇದರಲ್ಲಿ ಅದಾನಿ ಕಂಪನಿಗಳು 13 ಮತ್ತು ಅನಿಲ್ ಅಂಬಾನಿಯ ಕಂಪನಿ 5 ಡೀಲ್‍ಗಳಿಗೆ ಸಹಿ ಹಾಕಿವೆ. ಇಲ್ಲಿ ಅಂತಹ ಡೀಲ್‍ಗಳ ಕೆಲವನ್ನು ಇಲ್ಲಿ ನೀಡಿದ್ದೇವೆ.

ರಕ್ಷಣೆ

ಫ್ರಾನ್ಸ್

ಮೋದಿ ಭೇಟಿ: ಏಪ್ರಿಲ್ 09-12-2015 ಮತ್ತು  ಜೂನ್ 02-03-2017 (ಅನಿಲ್ ಅಂಬಾನಿ)

ಡೀಲ್ ದಿನ: ಮಾರ್ಚ್ 28-2015

ಮೋದಿ ರಫೇಲ್ ಡೀಲ್ ಘೋಷಿಸುವ 12 ದಿನ ಮೊದಲು ಅನಿಲ್ ಅಂಬಾನಿಯ ಆಗತಾನೇ ಹುಟ್ಟಿದ ಕಂಪನಿಯೊಂದು ಡಸಾಲ್ಟ್ ಕಂಪನಿಯೊಂದಿಗೆ ರಫೇಲ್ ಡೀಲ್ ಭಾಗವಾಗಿ ಒಪ್ಪಂದ ಮಾಡಿಕೊಂಡಿತು. ಅನುಭವಿ ಸರ್ಕಾರಿ ಎಚ್‍ಎಎಲ್ ಕಂಪನಿಯನ್ನು ತಿರಸ್ಕರಿಸಿ ಅಂಬಾನಿಯ ಅನನನುಭವಿ ಕಂಪನಿಯನ್ನು ರಿಲೆಯನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಪ್ರಧಾನಿ ಮೋದಿಯೇ ಕಾರಣ ಎಂಬ ಆರೋಪವಿದೆ. ಎರಡು ವರ್ಷಗಳಲ್ಲಿ ರಫೇಲ್ ವಿಮಾನಗಳು ಭಾರತಕ್ಕೆ ತಲುಪಬೇಕಿತ್ತು. ಇನ್ನೂ ಒಂದೂ ವಾಯುಸೇನೆಗೆ ದೊರೆತಿಲ್ಲ.

ಸ್ವೀಡನ್

ಡೀಲ್ ದಿನ: ಮಾರ್ಚ್ 22-2015 (ಅಂಬಾನಿ)

ಸ್ವೀಡನ್ ಪ್ರಧಾನಿಯ ಭಾರತ ಭೇಟಿ: ಫೆಬ್ರುವರಿ 13, 2016

ಡೀಲ್ ದಿನ : ಸೆಪ್ಟೆಂಬರ್ 1, 2017 (ಅದಾನಿ)

ಪ್ರಧಾನಿ ಭೇಟಿ: ಏಪ್ರಿಲ್ 16-18,  2018

ಇಲ್ಲಿ ಅಂಬಾನಿಯ ಕಂಪನಿ ಸ್ವೀಡನ್ನಿನ SAAB ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಭಾರತೀಯ ನೌಕಾದಳಕ್ಕೆ ಉನಮ್ಯಾನಡ್ ಏರಿಯಲ್ ವೆಹಿಕಲ್ (ಯುಎವಿ) ಪೂರೈಸುವ ಜವಾಬ್ದಾರಿ ಹೊರುತ್ತದೆ. ಪ್ರತಿ ಸಾಧನದ ಬೆಲೆ 1 ಸಾವಿರ ಕೋಟಿ.

ಅದೇ ಸ್ವೀಡನ್ ಕಂಪನಿಯೊಂದಿಗೆ ಸಿಂಗಲ್ ಎಂಜಿನ್ ಏರ್‍ಕ್ರಾಫ್ಟ್ ತಯಾರಿಸುವ 60 ಸಾವಿರ ಕೋಟಿ ಮೊತ್ತದ ಡೀಲ್‍ಗೆ ಅದಾನಿ ಸಹಿ ಮಾಡಿದ್ದಾರೆ.

ಹೀಗೆ ಪ್ರಧಾನಿ ನೀಡಿದ 16 ದೇಶಗಳ  ಕಂಪನಿಗಳ ಜೊತೆಗೆ ಅಂಬಾನಿ ಮತ್ತು ಅದಾನಿಯ ಕಂಪನಿಗಳು ಡೀಲ್ ಮಾಡಿಕೊಳ್ಳುತ್ತವೆ. ಇಸ್ರೇಲ್, ರಷ್ಯಾ, ಅಮೆರಿಕ, ಜಪಾನ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಮೊಜಾಂಬಿಕ್, ಇರಾನ್, ಒಮನ್, ಬಾಂಗ್ಲಾ ದೇಶಗಳಿಗೆ ಪ್ರಧಾನಿ ಭೇಟಿ ನೀಡಿದಾಗ ಅವರ ಜತೆ ಅಂಬಾನಿ ಅಥವಾ ಅದಾನಿ ಅಥವಾ ಇಬ್ಬರೂ ಇರುತ್ತಿದ್ದರು.

ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ. ವಿಚಿತ್ರ ಎಂದರೆ ಡಿಫೆನ್ಸ್ ಸಲಕರಣೆಗಳಲ್ಲಿ ಯಾವುದೇ ಅನುಭವ ಇಲ್ಲದ ಅಂಬಾನಿ, ಅದಾನಿ ಕಂಪನಿಗಳಿಗೆ ಪ್ರಧಾನಿಯ ಪ್ರಭಾವದಿಂದ ಡಿಫೆನ್ಸ್ ಡೀಲ್‍ಗಳು ಸಿಕ್ಕಿವೆ!

 ಪಾಕ್ ಜತೆಗೂ ಚಕ್ಕಂದ!

ಮಾತೆತ್ತಿದ್ದರೆ ಪಾಕ್ ವಿರುದ್ಧ ಹರಿಹಾಯುವ ಮೋದಿ ಮತ್ತು ಅವರ ಭಕ್ತರಿಗೆ ಇದೇ ಅದಾನಿ ಪಾಕ್ ಜೊತೆಗೆ ಹಲವು ವಾಣಿಜ್ಯ ವ್ಯಹಾರ ಹೊಂದಿದ್ದಾರೆ. ಪ್ರಧಾನಿ ಏಕಾಏಕಿ 2015 ಡಿಸೆಂಬರ್ 25ರಂದು ಪಾಕ್‍ಗೆ ಭೇಟಿ ನೀಡಿದಾಗ ಅವರ ಜೊತೆ ಅದಾನಿಯೂ ಇದ್ದ! ಅದರ ಹಿಂದಿನ ವರ್ಷವೇ ಅದಾನಿ 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಡೀಲ್‍ಗೆ ಸಹಿ ಹಾಕಿದ್ದರು. ಎರಡು ದೇಶಗಳ ನಡುವಿನ ತಿಕ್ಕಾಟದ ಕಾರಣಕ್ಕೆ ಆ ಯೋಜನೆ ನೆನೆಗುದಿಗೆ ಬಿದ್ದಿದೆ.

ಮೋದಿ ಗುಜರಾತಿನ ಮುಖ್ಯಮಂತ್ರಿ ಆದಾಗಿನಿಂದ ಅದಾನಿಯ ಕಂಪನಿ ಕ್ರಮೇಣ ಮುನ್ನೆಲೆಗೆ ಬಂದಿದೆ. ಪ್ರಧಾನಿಯಾದ ಮೇಲಂತೂ ಅದಾನಿಯ ಆದಾಯ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಇನ್ನು ಸಾಲದ ಸುಳಿಯಲ್ಲಿದ್ದ ಅನಿಲ್ ಅಂಬಾನಿ ಚೇತರಿಸಿಕೊಳ್ಳಲೂ ಮೋದಿ ನೆರವಾಗಿದ್ದಾರೆ.

(ಆಧಾರ: ನ್ಯೂಸ್‍ಕ್ಲಿಕ್)

ಅನುವಾದ: ಮಲ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...