Homeಮುಖಪುಟಬಿಜೆಪಿಯ ಕರ್ನಾಟಕದ ಮಾಜಿ ಚೌಕಿದಾರನೇ ಚೋರ್?

ಬಿಜೆಪಿಯ ಕರ್ನಾಟಕದ ಮಾಜಿ ಚೌಕಿದಾರನೇ ಚೋರ್?

- Advertisement -
- Advertisement -

ಚೌಕಿದಾರರು ಎಂದೇಳಿಕೊಂಡು ಓಡಾಡುತ್ತಿರುವ ಬಿಜೆಪಿ ನಾಯಕರ ಹಗರಣಗಳು ಒಂದೊದೇ ಹೊರಬರುತ್ತಿದ್ದು ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳಿಧರರಾವ್ ಮೇಲೆ ಕೇಸ್ ಬುಕ್ ಮಾಡಲು ಕೋರ್ಟ್ ಆದೇಶ ನೀಡಿದೆ.

ಇದು ನಿಜಕ್ಕೂ ಗಾಬರಿಗೊಳಿಸುವ ಆರೋಪ. ಕರ್ನಾಟಕದ ಉಸ್ತುವಾರಿಯಾಗಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಮುರಳಿಧರ ರಾವ್ ಆರೋಪಿಗಳಲ್ಲೊಬ್ಬರು. ಇರುವ ಆರೋಪವಾದರೂ ಎಂಥದ್ದು? ನಿಮ್ಮನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ನಿಗಮ/ಮಂಡಳಿಯೊಂದರ ಅಧ್ಯಕ್ಷನನ್ನಾಗಿಸುತ್ತೇವೆಂದು 2.17 ಕೋಟಿ ರೂ.ಗಳನ್ನು ಪಡೆದಿದ್ದಾರೆ ಮತ್ತು ಆ ರೀತಿ ನೇಮಕ ಮಾಡಿದ ಆದೇಶವಿದ್ದಂತೆ ಬರೆಯಲಾಗಿದ್ದ ಪತ್ರಕ್ಕೆ ಅಂದು ವಾಣಿಜ್ಯ ಇಲಾಖೆಯ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್‍ರ ಫೋರ್ಜರಿ ಸಹಿಯನ್ನೂ ಮಾಡಲಾಗಿತ್ತೆಂಬ ಆರೋಪ. ಈ ಪ್ರಕರಣದಲ್ಲಿ ಮುರಳಿಧರರಾವ್ ಮತ್ತಿತರರ ಮೇಲೆ ಐಪಿಸಿ ಸೆಕ್ಷನ್ 406 (ನಂಬಿಕೆಗೆ ಕ್ರಿಮಿನಲ್ ದ್ರೋಹ), 420 (ವಂಚನೆ), 468, 471 (ಫೋರ್ಜರಿ), 506 (ಕ್ರಿಮಿನಲ್ ಬೆದರಿಕೆ) ಮತ್ತು 120-ಬಿ (ಕ್ರಿಮಿನಲ್ ಸಂಚು) ಮತ್ತು ಸಿಆರ್‍ಪಿಸಿಯ ಸೆಕ್ಷನ್ 156(3)ರ ಅಡಿಯಲ್ಲಿ ಮೊಕದ್ದಮೆಯ ದಾಖಲು ಮಾಡಲಾಗಿದೆ.

ತೆಲಂಗಾಣದ ಚಂಪಾಪೇಟೆಯ ನಿವಾಸಿ ಮಹಿಪಾಲ್ ರೆಡ್ಡಿಯವರ ಪತ್ನಿ ಟಿ.ಪ್ರವರ್ಣಾ ರೆಡ್ಡಿಯವರು ನೀಡಿದ ಈ ದೂರನ್ನು ಹೈದ್ರಾಬಾದ್‍ನ ಸರೂರ್‍ನಗರ ಠಾಣೆಯಲ್ಲಿ ದಾಖಲಿಸಲಾಗಿದೆ. ಸದರಿ ಎಫ್‍ಐಆರ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆಯೆಂಬುದು ಗಮನಾರ್ಹ. ದೂರುದಾರರ ಪ್ರಕಾರ 2015ರಲ್ಲೇ ಈಶ್ವರ್ ರೆಡ್ಡಿ, ಕೃಷ್ಣ ಕಿಶೋರ್ ಎಂಬುವವರು ಮುರಳೀಧರರಾವ್‍ರಲ್ಲಿ ಕರೆದುಕೊಂಡು ಹೋಗಿ ಈ ಡೀಲ್ ಕುದುರಿಸಿದರು. ಇದರಲ್ಲಿ ಸ್ಥಳೀಯ ಬಿಜೆಪಿ ನಾಯಕ ಮಂಡ ರಾಮಚಂದ್ರ ರೆಡ್ಡಿ ಮತ್ತು ಅವರ ಸಹಚರರಾದ ಎಸ್.ಚಂದ್ರಶೇಖರ ರೆಡ್ಡಿ, ಬಾಬಾ, ಶ್ರೀಕಾಂತ್, ಜಿ.ಶ್ರೀನಿವಾಸ್ ಇವರೆಲ್ಲರೂ ಮುರಳೀಧರರಾವ್ ಜೊತೆಗೆ ಶಾಮೀಲಾಗಿದ್ದರು ಎಂದು ಹೇಳಲಾಗಿದೆ. ಇವರುಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ, ಔಷಧಿಗಳ ರಫ್ತನ್ನು ಉತ್ತೇಜಿಸುವ ಫಾರ್ಮಾ ಎಕ್ಸಿಲ್ ಎಂಬ ಸಂಸ್ಥೆಯ ಅಧ್ಯಕ್ಷರನ್ನಾಗಿ ದೂರುದಾರರನ್ನು ನೇಮಿಸಿದ, ನಿರ್ಮಲಾ ಸೀತಾರಾಮನ್‍ರ ಸಹಿ ಇದ್ದ ಪತ್ರವನ್ನೂ ತೋರಿಸಿದ್ದರು ಎನ್ನಲಾಗಿದೆ.

ಆರೋಪವನ್ನು ನಿರಾಕರಿಸಿರುವ ಮುರಳೀಧರರಾವ್, ಈ ಬಗ್ಗೆ ದೂರುದಾರರು ತನ್ನನ್ನು ಫೋನಿನಲ್ಲಿ ಸಂಪರ್ಕಿಸಿದ್ದು ನಿಜವೆಂತಲೂ, ಆರೋಪಿಗಳಲ್ಲಿ ಕೆಲವರನ್ನು ತನ್ನ ಕೆಲಸದ ಕಾರಣಕ್ಕೆ ಬಲ್ಲೆನೆಂತಲೂ ಹೇಳಿದ್ದಾರೆ. ಆದರೆ ಈ ಕೇಸು ಅಥವಾ ಹಣಕಾಸಿನ ವ್ಯವಹಾರ ತನಗೆ ಗೊತ್ತಿಲ್ಲವೆಂದು ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಒಟ್ಟಿನಲ್ಲಿ ತಾವು ಚೌಕಿದಾರರೆಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನಾಯಕರುಗಳಲ್ಲಿ ಒಬ್ಬರ ನಂತರ ಒಬ್ಬರು ಹಗರಣಗಳಲ್ಲಿ ಆರೋಪಿಯಾಗುತ್ತಿರುವುದು ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ಮುಜುಗರವನ್ನಂತೂ ತರುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...