Homeಮನರಂಜನೆಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

ಚಾನೆಲ್ ಚಿತ್ರಾನ್ನ: ಸೀರಿಯಲ್ ತುಂಬ ‘ಮತ್ತೆ ಕಲ್ಯಾಣ’!

- Advertisement -
- Advertisement -

ಅತ್ಯಂತ ಜನಪರ, ಜಾತ್ಯಾತೀತ ನಿಲುವುಗಳ ಮತ್ತು ಸಮತಾ ಭಾವದ ಉದ್ದೇಶ ಇಟ್ಟುಕೊಂಡಿರುವ ‘ಮತ್ತೆ ಕಲ್ಯಾಣ’ ಈಗ ಸಾಂದರ್ಭಿಕ ಎಡವಟ್ಟುಗಳ ಮೂಲಕ ಒಂದಿಷ್ಟು ಜಾಸ್ತಿನೇ ಟೀಕೆಗೊಳಗಾಗಿದೆ.

ಇರಲಿ, ಈಗ ನಾ ಹೇಳಾ ಲೆಕ್ಕದ ಪ್ರಕಾರ, ಸೀರಿಯಲ್‍ಗಳಲ್ಲಿ ‘ಮತ್ತೆ ಕಲ್ಯಾಣ’ ಆಂದೋಲನ ಬಲು ಜೋರಾಗೇ ನಡದೈತಿ… ಆದರೆ, ಸೀರಿಯಲ್‍ಗಳ ನಿರ್ದೇಶಕರಿಗೆ ಮಾತ್ರ ಪಕ್ಕಾ ಗೊತ್ತೈತಿ ‘ಮತ್ತೆ ಕಲ್ಯಾಣ’ ಆದ್ರ ಅಲ್ಲಿಗೆ ಧಾರಾವಾಹಿ ಖತಂ ಅಂತ್ಹೇಳಿ…

ಹೊರಗೆ ನಡೆಯುತ್ತಿರುವ ‘ಮತ್ತೆ ಕಲ್ಯಾಣ’ ಮತ್ತು ಈಗ ನಂಗ ಸೀರಿಯಲ್ ಒಳಗ ಸಿಕ್ಕಿರೋ ‘ಮತ್ತೆ ಕಲ್ಯಾಣ’ಕ್ಕೂ ಬಾಳ ಫರಕ್ (ತರೀಕೆರೆ ಮೇಷ್ಟ್ರು ಈ ನಮ್ ಪದಾನ್ನ ‘ಫರಕು’ ಅಂತಾ ಫೇಮಸ್ ಮಾಡ್ಯಾರ) ಐತಿ.

ಯಾವುದೇ ಮನರಂಜನಾ ಚಾನೆಲ್‍ಗಳಿಗೆ ಹೋಗಿ, ಅಲ್ಲಿರುವ ಕನಿಷ್ಠ ಎರಡು-ಮೂರು ಧಾರಾವಾಹಿಗಳಲ್ಲಿ ಕತೆ ನಿಂತಿರುವುದೇ ‘ಮತ್ತೆ ಕಲ್ಯಾಣ’ ಆಗಲಿ ಎಂಬ ದುರಾಶೆಯ ಮೇಲೆಯೇ! ಸದ್ಯ ಚಾಲ್ತಿಯಲ್ಲಿರುವ ಬಹುಪಾಲು ಸೀರಿಯಲ್‍ಗಳ ಸುತ್ತ ‘ಒಬ್ಬನಿಗಿಬ್ಬರು…’… ಆಗಲೇ ‘ಅವನ’ ಮದುವೆ ಆಗಿದ್ದರೂ ಅದನ್ನು ಮುರಿದು ಇನ್ನೊಂದು ‘ಕಲ್ಯಾಣ’ ಮಾಡಲು ನಡೆಸುವ ಕಸರತ್ತುಗಳೋ ಅಬ್ಬಬ್ಬಾ!

ಈ ಫಾರ್ಮುಲಾ ಜನರಿಗೆ ಬಹಳ ಇಷ್ಟವಾಗಿದೆಯೋ ಏನೋ ಗೊತ್ತಿಲ್ಲ! ಶೇಕಡಾ 70 ರಷ್ಟು ಧಾರಾವಾಹಿಗಳಲ್ಲಿ ಒಬ್ಬ ಹೀರೋ, ಇಬ್ಬರು ಹೀರೊಯಿನ್‍ಗಳು… ಇಬ್ಬರು ಹೀರೊಯಿನ್‍ಗಳಲ್ಲಿ ಒಬ್ಬಳು ಒಳ್ಳೆಯವಳು, ಇನ್ನೊಬ್ಬಳು ಕೆಟ್ಟವಳು! ವಿಚಿತ್ರ ಎಂದರೆ ನನಗೆ ಈ ‘ಕೆಟ್ಟ’ ಪಾತ್ರದ ಹುಡುಗಿಯರೇ ಕೆಲವೊಮ್ಮೆ ಇಷ್ಟ… ಆಹಾಹಾ. ಒಳ್ಳೊಳ್ಳೆ ಜೀನ್ಸ್, ಸಖತ್ ಹೇರ್‍ಸ್ಟೈಲ್, ಬಿಂದಾಸ್ ಮೇಕಪ್….ಆದರೆ ಏನ್ ಮಾಡೋದು ಅದೆಲ್ಲವನ್ನೂ ಈ ಮೆದುಳೇ ಇಲ್ಲದ ನಿರ್ದೇಶಕರು ನೆಗೆಟಿವ್ ಮಾಡಿಟ್ಟಿದ್ದಾರೆ.

ಎಲ್ಲ ಚಾನೆಲ್‍ಗಳಲ್ಲೂ ‘ಒಬ್ಬನಿಗಿಬ್ಬರು’ ಎಂಬ ಆಧಾರದಲ್ಲೇ ಬಹುಪಾಲು ಕತೆಗಳು ಓಡುತ್ತಿವೆ: ರಾಧಾ ರಮಣ, ಕಮಲಿ, ಇಷ್ಟ ದೇವತೆ, ಸೀತಾ ವಲ್ಲಭ, ಬ್ರಹ್ಮಗಂಟು (ಪಾಪ, ಗಂಟು ಬಿದ್ದಿದ್ದ ಎರಡನೇವಳನ್ನು ಡೈರೆಕ್ಟರ್ ಯಾವಾಗಲೋ ಓಡಿಸಿಬಿಟ್ಟ), ಕುಲವಧು……ಈ ಪಟ್ಟಿ ಹಾಗೇ ಬೆಳೆಯುತ್ತ ಹೋಗುತ್ತದೆ.

ಸೀರಿಯಲ್ ನೋಡದವರಿಗೆ ಅನಿಸಬಹುದು: ಅಂದ್ರೆ ಎಲ್ಲ ಕತೆ ಒಂದೇನಾ ಎಂದು… ನೋ ನೋ, ಅದರಲ್ಲೂ ಪರ್ಮುಟೇಷನ್ ಮತ್ತು ಕಾಂಬಿನೇಷನ್ ಇರ್ತಾವೆ… ಮುಂದ್ಲ ವಾರ ನೋಡಾಕ್ರಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...