Homeಅಂಕಣಗಳುಸಿಇಟಿ ಹೆಸರಲ್ಲಿ ಕಾನೂನು ಉಲ್ಲಂಘಿಸುತ್ತಿದೆ ರಾಜ್ಯ ಸರ್ಕಾರ

ಸಿಇಟಿ ಹೆಸರಲ್ಲಿ ಕಾನೂನು ಉಲ್ಲಂಘಿಸುತ್ತಿದೆ ರಾಜ್ಯ ಸರ್ಕಾರ

- Advertisement -
| ಹೆಚ್.ಎಸ್‍.ದೊರೆಸ್ವಾಮಿ |
ಕರ್ನಾಟಕ ಸರ್ಕಾರ ಅನೇಕ ವರ್ಷಗಳಿಂದ common entrance test ನಡೆಸುತ್ತಿದೆ. 2ನೇ ವರ್ಷದ ಪದವಿ ಪೂರ್ವ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಕೂಡಲು ಅರ್ಹರು. ಸಿಇಟಿ ಪರೀಕ್ಷೆ ಬರೆದವರಿಗೆ ಈ ಪರೀಕ್ಷೆಯಲ್ಲಿ ಬಂದ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು. ಪಿಯುಸಿಯಲ್ಲಿ ಬಂದ ಅಂಕಗಳನ್ನೂ ಈ ಸಂದರ್ಭದಲ್ಲಿ ಪರಿಗಣಿಸಬೇಕಾದ್ದೂ ಅಗತ್ಯ. ಆದರೆ ಅದನ್ನು ಕಡೆಗಣಿಸಲಾಗಿದೆ.
ಸಿಇಟಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದ್ದು ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಸೀಟುಗಳು ಅದಕ್ಕಿಂತ ಕಡಿಮೆ ಇದ್ದ ಕಾರಣದಿಂದ. 2013ರಲ್ಲಿ ಸಲ್ಲಿಸಿದ ರಿಟ್ ಅರ್ಜಿಗೆ ಸಂಬಂಧಪಟ್ಟಂತೆ 3-04-2014ರಲ್ಲಿ ಕರ್ನಾಟಕ ಉಚ್ಛನ್ಯಾಯಾಲಯ ‘ಸೀಟುಗಳು ಹೆಚ್ಚಾಗಿದ್ದು ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಸಿಇಟಿ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಪರಿಸ್ಥಿತಿ ಹೀಗಿದ್ದೂ ಸಿಇಟಿ ಪರೀಕ್ಷೆ ನಡೆಸುವುದು ಅರ್ಥಹೀನ’ ಎಂದು ತೀರ್ಪಿನಲ್ಲಿ ಹೇಳಿತು.
2013ರಲ್ಲಿ ಪಿಯುನಲ್ಲಿ ಉತ್ತೀರ್ಣರಾದ ಒಂದು ಸಾವಿರ ವಿದ್ಯಾರ್ಥಿಗಳು ಡೆಂಟಲ್ ಕಾಲೇಜುಗಳಿಗೆ ನೇರವಾಗಿ ಪ್ರವೇಶ ಪಡೆದರು. ಈ ವಿದ್ಯಾರ್ಥಿಗಳಿಗೆ ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ನೋಟಿಸ್ ನೀಡಿತು. ಆಗ ಈ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೊಕ್ಕಿದ್ದು, ಸಿಇಟಿ ಪರೀಕ್ಷೆಗೆ ಹೋಗದೆ ನೇರವಾಗಿ ಡೆಂಟಲ್ ಕಾಲೇಜು ಸೇರಿದ್ದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ನ್ಯಾಯಾಲಯ ಅವಕಾಶ ಕಲ್ಪಿಸಿಕೊಟ್ಟಿತು. ಸರ್ಕಾರ ನ್ಯಾಯವಾಗಿ ಹೈಕೋರ್ಟ್‍ನ ಆಜ್ಞೆಯನ್ನು ಪಾಲನೆ ಮಾಡಬೇಕಾಗಿತ್ತು. ಸಿಇಟಿ ರದ್ದುಗೊಳಿಸಬೇಕಾಗಿತ್ತು. ಆದರೆ ಕರ್ನಾಟಕ ಸರ್ಕಾರ, ಎರಡನೇ ವರ್ಷದ ಪರೀಕ್ಷೆಯಲ್ಲಿ ಪಾಸಾದವರನ್ನು ಸಿಇಟಿಗೆ ಕೂಡಿಸುವ ಬದಲು ಎರಡನೇ ವರ್ಷದ ಪಿಯುಸಿಯಲ್ಲಿ ಓದುತ್ತಿದ್ದ, ಇನ್ನೂ ಕೊನೆ ಪರೀಕ್ಷೆ ಬರೆಯದೇ ಇದ್ದವರನ್ನು ಸಿಇಟಿ ಪರೀಕ್ಷೆಗೆ ಕೂಡಿಸುವ ಹುನ್ನಾರ ಮಾಡಿತು. ಹೀಗೆ ಸಿಇಟಿಗೆ ಕೂಡುವ ಎಲ್ಲಾ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗೆ ತಲಾ 500ರೂನಂತೆ ವಿದ್ಯಾರ್ಥಿನಿಗೆ ತಲಾ 250ರೂ ನಂತೆ ಪರೀಕ್ಷೆ ಶುಲ್ಕ ಕಟ್ಟಿಸಿಕೊಳ್ಳಲು ತೀರ್ಮಾನಿಸಿತು. ಅಭ್ಯರ್ಥಿ ಅನುತ್ತೀರ್ಣನಾಗಲಿ ಅಥವಾ ಉತ್ತೀರ್ಣನಾಗಲಿ ಅವರು ಕಟ್ಟಿದ ಹಣವನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಖಚಿತಪಡಿಸಲಾಯಿತು. ಹೀಗೆ ಎರಡನೇ ಪಿಯುಸಿಯಲ್ಲಿ ಇರುವಾಗಲೇ ಸಿಇಟಿಗೆ ಕಟ್ಟಿದ ವಿದ್ಯಾರ್ಥಿಗಳ ವಿವರ ಹೀಗಿದೆ.
ವರ್ಷ ಸಿಇಟಿ ಪರೀಕ್ಷೆಗೆ ಕೂತವರು ಸೀಟಿನ ಅರ್ಹತೆ ಪಡೆದವರು ಅರ್ಹತೆ ಪಡೆಯದವರು
ಡಿಪ್ಲೊಮಾ ಕೊನೇ ವರ್ಷದಲ್ಲಿ ಓದುತ್ತಿದ್ದು ಕೊನೆಯ ಪರೀಕ್ಷೆ ಇನ್ನೂ ನಡೆಯದಿದ್ದಾಗ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವವರ ವಿವರ.
ವರ್ಷ ಸಿಇಟಿ ಪರೀಕ್ಷೆಗೆ ಹಜರಾದವರು ಅರ್ಹತೆ ಪಡೆದವರು ಅರ್ಹತೆ ಪಡೆಯದವರು
ಸರ್ಕಾರಕ್ಕೆ 2016, 17 ಮತ್ತು 18ರಲ್ಲಿ ವಿದ್ಯಾರ್ಥಿಗಳು ಕಟ್ಟಿದ ಹಣ
ಪ್ರತಿ ವರ್ಷ ಸಿಇಟಿಯಲ್ಲಿ ಪಾಸಾದವರೆಲ್ಲರಿಗೂ ಸೀಟು ಸಿಕ್ಕುತ್ತದೆ ಮಾತ್ರವಲ್ಲ, ಅನೇಕ ಕಾಲೇಜುಗಳಲ್ಲಿ ನಿಗದಿತ ಸೀಟು ಭರ್ತಿಯಾಗದೆ ಇರುವ ಪರಿಸ್ಥಿತಿ ಉದ್ಭವಿಸಿದೆ. ಅಂದರೆ ಖಾಸಗಿಯವರಿಗೆ ಕಾಲೇಜು ನಡೆಸಲು ಸರ್ಕಾರ ಉದಾರವಾಗಿ ಅವಕಾಶ ಮಾಡಿಕೊಡಲಾಗುತ್ತಿದೆ.
ವಿವಿಧ ಕಾಲೇಜುಗಳಲ್ಲಿ ಯಾವ ಯಾವ ವರ್ಷದಲ್ಲಿ ಎಷ್ಟೆಷ್ಡು ಸೀಟುಗಳು ಕೇಳುವವರಿಲ್ಲದೆ ಬಿದ್ದಿದೆ ಎಂಬುದರ ವಿವರ ಇಲ್ಲಿ ನೀಡಲಾಗಿದೆ.
ಒಟ್ಟಿನಲ್ಲಿ ಇಲ್ಲಿ ಕೋರ್ಸ್‍ಗಳಲ್ಲೂ ಖಾಲಿ ಸೀಟುಗಳಿದ್ದು ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಸೀಟುಗಳ ಹಂಚಿಕೆಗೆ ಸಿಇಟಿ ಅಗತ್ಯವಿಲ್ಲ. ಎರಡನೇ ವರ್ಷದ ಪಿಯುಸಿ ಮತ್ತು ಕೊನೇ ವರ್ಷದ ಡಿಪ್ಲೊಮಾ ಕೋರ್ಸ್ ಮುಗಿಸಿದವರಿಗೆ ನೇರವಾಗಿ ಅವರಿಗೆ ಬಂದಿರುವ ಅಂಕಗಳ ಆಧಾರದಲ್ಲಿ ಸೀಟುಗಳನ್ನು ನೀಡಬಹುದಾಗಿದೆ. ಕಾನೂನುರೀತ್ಯಾ ಪಿಯುಸಿ ಮತ್ತು ಡಿಪ್ಲೊಮಾ ಕೋರ್ಸ್ ಮುಗಿಯುವುದಕ್ಕೆ ಮೊದಲು ಸಿಇಟಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಇದ್ದ ಕಾನೂನುಗಳನ್ನೇ ಗಾಳಿಗೆ ತೂರಿದಂತೆ. ಕೋರ್ಟ್ ಆರ್ಡರನ್ನು ಪಾಲಿಸದೆ ತಮ್ಮದೇ ಕಾನೂನುಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿಕೊಳ್ಳುತ್ತಿರುವುದು ಹೇಯಕಾರ್ಯ.
2018ರಲ್ಲಿ ಪಿಯುಸಿ ಮತ್ತು ಡಿಪ್ಲೊಮಾ ಕೋರ್ಸಿನವರಿಂದ ಸರ್ಕಾರ ವಸೂಲ್ಮಾಡಿರುವುದು 15.48 ಕೋಟಿ ರೂಪಾಯಿ. ಸರ್ಕಾರದ ಈ ಹಗಲು ದರೋಡೆಗೆ ಧಿಕ್ಕಾರ.
ಈ ವರ್ಷದಿಂದಲೇ ಸಿಇಟಿ ಕೊನೆಗಾಣಿಸಿ ಕೊನೇ ವರ್ಷದ ಪಿಯುಸಿ ಮತ್ತು ಟಿಪ್ಲೊಮಾ ಕೋರ್ಸ್ ಮುಗಿಸಿರುವವರ ಅಂತಿಮ ಪರೀಕ್ಷೆಯ ಅಂಕಗಳ ಅಧಾರದ ಮೇಲೆ ನೇರವಾಗಿ ವಿವಿಧ ಕೋರ್ಸ್‍ಗಳಿಗೆ ಆಯ್ಕೆ ಮಾಡಬೇಕು.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...