Homeರಾಜಕೀಯಸ್ಥಾಪನೆಯೇ ಆಗಿರದ ಜಿಯೋ ಭಾರತದ ಶ್ರೇಷ್ಠ ಶೈಕ್ಷಣಿಕ ಸಂಸ್ಥೆಯಂತೆ!

ಸ್ಥಾಪನೆಯೇ ಆಗಿರದ ಜಿಯೋ ಭಾರತದ ಶ್ರೇಷ್ಠ ಶೈಕ್ಷಣಿಕ ಸಂಸ್ಥೆಯಂತೆ!

- Advertisement -
- Advertisement -

ಕೇಂದ್ರ ಸರಕಾರ ಯುಜಿಸಿಯನ್ನು ಮುಚ್ಚಿ, ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತಾನೇ ನೇರವಾಗಿ ನಿಯಂತ್ರಿಸುವ ಹುನ್ನಾರು ನಡೆಸುತ್ತಿರುವ ಸಂದರ್ಭದಲ್ಲೇ ದೇಶದ ಆರು ಶೈಕ್ಷಣಿಕ ಸಂಸ್ಥೆಗಳನ್ನು  Institution of Eminence ಎಂದು ಪಟ್ಟಿ ಮಾಡಿದೆ. ಹೀಗೆ ಪರಿಗಣಿಸಲ್ಪಟ್ಟ ಸಂಸ್ಥೆಗಳಲ್ಲಿ ಮೂರು ಸರಕಾರಿ ವಲಯಕ್ಕೆ ಸೇರಿದ್ದರೆ, ಉಳಿದ ಮೂರು ಖಾಸಗಿ ವಲಯಕ್ಕೆ ಸೇರಿವೆ.
ಮಾನವ ಸಂಪನ್ಮೂಲ ಸಚಿವಾಲಯ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ , ಐಐಟಿ ಬಾಂಬೆ ಮತ್ತು ಐಐಟಿ ದೆಹಲಿ ಸಂಸ್ಥೆಗಳನ್ನು ಸಾರ್ವಜನಿಕ ವಲಯದಿಂದ ಆಯ್ಕೆ ಮಾಡಿದೆ. ಇದಲ್ಲದೆ 1964ರಲ್ಲಿ ಪ್ರಾರಂಭವಾದ ರಾಜಾಸ್ಥಾನದ ಬಿರ್ಲಾ ಇನ್‍ಸ್ಟ್ಯೂಟ್ ಆಫ್ ಟೆಕ್ನಾಲಜಿ , 1953ರಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಮತ್ತು ರಿಲಯನ್ಸ್ ಸಂಸ್ಥೆಯ ಜಿಯೋ ಇನ್‍ಸ್ಟಿಟ್ಯೂಷನ್‍ಗಳನ್ನು ಆಯ್ಕೆ ಮಾಡಲಾಗಿದೆ.
ಹೀಗೆ ಖಾಸಗಿ ವಲಯದಿಂದ ಆಯ್ಕೆಯಾದ BITS Pilani ಸಂಸ್ಥೆ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಈಗಾಗಲೆ ಹಲವು ದಶಕಗಳ ಕಾಲ ಕಾರ್ಯನಿರ್ವಹಿಸಿ ಪ್ರಸಿದ್ಧಿಗೆ ಬಂದಿವೆ. ಆದರೆ ಈ ಎಮಿನೆನ್ಸ್ ಪಟ್ಟಕ್ಕೇರಿದ ಜಿಯೋ ಇನ್‍ಸ್ಟಿಟ್ಯೂಟ್ ಇನ್ನೂ ಅಸ್ತಿತ್ವಕ್ಕೆ ಬಂದೇ ಇಲ್ಲ ಎಂಬುದು ವಿಚಿತ್ರವಾದರೂ ಸತ್ಯ. ಇನ್ನೂ ಹೇಳಬೇಕೆಂದರೆ, ಜಿಯೋ ಇನ್‍ಸ್ಟಿಟ್ಯೂಟ್ ತನ್ನ ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ  ಅಡಿ ತೆರಿಗೆ ವಿನಾಯಿತಿ ಪಡೆಯಲಿಕ್ಕಾಗಿಯೇ ಜಿಯೋ ಇನ್‍ಸ್ಟಿಟ್ಯೂಟ್‍ನ್ನು ತೆರೆದಿದೆ ಎಂಬ ಆರೋಪವಿದೆ. ಹೀಗೆ ‘ಅಸ್ತಿತ್ವದಲ್ಲಿಯೇ ಇಲ್ಲದ ಈ ಸಂಸ್ಥೆಯನ್ನು ಕೇಂದ್ರ ಸರಕಾರ ಭಾರತದ `ಶ್ರೇಷ್ಠ ಸಂಸ್ಥೆ’  ಎಂದು ಪಟ್ಟಿ ಮಾಡುವ ಜರಾರಾದರೂ ಏನಿತ್ತು?’ ಎಂದು ಖಾಸಗಿ ವಲಯದ ಉನ್ನತ ಶಿಕ್ಷಣ ಸಂಸ್ಥೆಗಳೇ ಪ್ರಶ್ನಿಸುತ್ತಿವೆ. ಕೇಂದ್ರ ಚುನಾವಣಾಧಿಕಾರಿಯಾಗಿದ್ದ ಗೋಪಾಲಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಆಯ್ಕೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಶೀರ್ಷಿಕೆಯಡಿ ಪಟ್ಟಿ ಮಾಡುವಾಗ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಬೇಕು. ಸದರಿ ಸಂಸ್ಥೆಯು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಈಗಾಗಲೆ ಉನ್ನತ ಸಾಧನೆ ಮಾಡಿರಬೇಕು. ತನ್ನ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅಂತರ್‍ಶಿಸ್ತೀಯ ವಿಷಯಗಳನ್ನು ಅಳವಡಿಸಿಕೊಂಡಿರಬೇಕು. ಜೊತೆಗೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಮತ್ತು ಬೋಧಕ ಸಿಬ್ಬಂದಿಯನ್ನು ಹೊಂದಿರಬೇಕು. ಇದಲ್ಲದೆ, ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸವಲತ್ತು ಮತ್ತು ಬೋಧನಾ ವಿಧಾನಗಳನ್ನು ಹೊಂದಿರಬೇಕು. ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಯಲ್ಲಿ ಈ ಎಲ್ಲ ವಿಶೇಷಣಗಳನ್ನು ಕಂಡುಹಿಡಿದ ಪ್ರಭೃತಿಗಳ ಅಂಬಾನಿ ನಿಷ್ಠೆ ಮೆಚ್ಚಲೇಬೇಕು.
ಈ ಆಯ್ಕೆ ಕುರಿತು ಹರಿದು ಬಂದ ಪ್ರಶ್ನೆಗಳಿಗೆ ಎನ್ ಗೋಪಾಲಸ್ವಾಮಿ ಇದುವರೆಗೂ ಉತ್ತರಿಸಿಲ್ಲ. ಆದರೆ, ಮಾನವ ಸಂಪನ್ಮೂಲ ಸಚಿವಾಲಯವು `ದೇಶದ ಶೈಕ್ಷಣಿಕ ವಲಯದಲ್ಲಿ ಖಾಸಗಿ ಬಂಡವಾಳ ಹರಿದು ಬರಬೇಕು. ಆ ಮೂಲಕ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳು ಭಾರತದಲ್ಲಿ ಸ್ಥಾಪನೆಯಾಗುವಂತಾಗಬೇಕು’ ಎಂಬ ಕಾರಣದಿಂದ ಜಿಯೋ ಇನ್‍ಸ್ಟಿಟ್ಯೂಟ್‍ನ್ನು ಶ್ರೇಷ್ಠ ಸಂಸ್ಥೆ ಎಂದು ಪರಿಗಣಿಸಲಾಗಿದೆ ಎಂಬ ಸಮಾಜಾಯಿಷಿಯನ್ನು ನೀಡಿದೆ.
ಈ ಹಿಂದೆ ಜಿಯೋ ಮೊಬೈಲ್ ಸಂಸ್ಥೆಯನ್ನು ಆರಂಭಿಸಿ ಅದರ ಉದ್ಘಾಟನಾ ಸಮಾರಂಭಕ್ಕೆ ದೇಶದ ಪ್ರಧಾನಮಂತ್ರಿಯನ್ನೇ ಆಹ್ವಾನಿಸಿ ಜಿಯೋಗೆ ಅವರನ್ನು ಪ್ರಚಾರ ರಾಯಭಾರಿಯಂತೆ ರಿಲಯನ್ಸ್ ಸಂಸ್ಥೆ ಬಳಸಿತ್ತು. ಈಗ ಅಸ್ತಿತ್ವದಲ್ಲಿಯೇ ಇಲ್ಲದ ತನ್ನ ಸಂಸ್ಥೆಗೆ Institution of Eminence ಸ್ಥಾನಮಾನವನ್ನು ಪಡೆದಿರುವುದು ದೇಶದ ರಾಜಕಾರಣಕ್ಕೆ ಹಿಡಿದ ಕನ್ನಡಿಯಂತಿದೆ.

 

– ಅಲ್ಲಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...