Homeಮುಖಪುಟದೆಹಲಿ ಚುನಾವಣೆ: ಬಿಜೆಪಿಯ ಕಪಿಲ್ ಮಿಶ್ರಾಗೆ 48 ಗಂಟೆಗಳ ಕಾಲ ಪ್ರಚಾರ ನಿಷೇಧ ಮಾಡಿದ ಚುನಾವಣಾ...

ದೆಹಲಿ ಚುನಾವಣೆ: ಬಿಜೆಪಿಯ ಕಪಿಲ್ ಮಿಶ್ರಾಗೆ 48 ಗಂಟೆಗಳ ಕಾಲ ಪ್ರಚಾರ ನಿಷೇಧ ಮಾಡಿದ ಚುನಾವಣಾ ಆಯೋಗ

"ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ"ಯ ಉಲ್ಲಂಘನೆಗಾಗಿ ದೆಹಲಿ ಚುನಾವಣಾ ಅಧಿಕಾರಿಗಳು ಮಿಶ್ರಾ ಅವರಿಗೆ ಶೋ ಕಾಸ್ ನೋಟಿಸ್ ನೀಡಿದ್ದಾರೆ

- Advertisement -
- Advertisement -

ಇಂಡಿಯಾ v/s ಪಾಕ್‌ ಟ್ವೀಟ್‌ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿಯ ಮಾಡೆಲ್ ಟೌನ್ ಕ್ಷೇತ್ರದ ಅಭ್ಯರ್ಥಿ ಕಪಿಲ್ ಮಿಶ್ರಾ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದು, 48 ಗಂಟೆಗಳ ಪ್ರಚಾರಕ್ಕೆ ನಿಷೇಧ ಹೇರಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಸಹ ಚುನಾವಣಾ ಆಯುಕ್ತರು ಸಹಿ ಮಾಡಿದ ನಿಷೇಧದ ಆದೇಶ ಶನಿವಾರ ಸಂಜೆ 5 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿಗೆ ಹಲವು ಕೋಮು ಮತ್ತು ಪ್ರಚೋದನಾಕಾರಿ ಟ್ವೀಟ್‌ಗಳನ್ನು ಮಾಡುತ್ತಿರುವ ಕಪಿಲ್ ಮಿಶ್ರಾ ಅವರು ನಿನ್ನೆ “ಭಾರತ ವಿರುದ್ಧ ಪಾಕಿಸ್ತಾನ, ಫೆಬ್ರವರಿ 8, ದೆಹಲಿ. ಭಾರತ ಮತ್ತು ಪಾಕಿಸ್ತಾನ ದೆಹಲಿಯ ಬೀದಿಗಳಲ್ಲಿ ಸ್ಪರ್ಧಿಸಲಿವೆ.” ಎಂದು ಪೋಸ್ಟ್ ಮಾಡಿದ್ದರು

ಮಿಶ್ರಾ ಅವರ ಟ್ವೀಟ್ ಅನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗವು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್ ಗೆ ಪತ್ರ ಬರೆದಿತ್ತು. ಇಸಿಯ ನಿರ್ದೇಶನಗಳನ್ನು ಅನುಸರಿಸಿ ಟ್ವಿಟರ್ ಶುಕ್ರವಾರ ಅವರ ವಿವಾದಾತ್ಮಕ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದೆ. ಆದರೂ ಅದು ಕಾಣುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

ವರ್ಗಗಳ ನಡುವೆ ದ್ವೇಷವನ್ನು ಉಂಟುಮಾಡುವ ಬಗ್ಗೆ ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125 ರ ಅಡಿಯಲ್ಲಿ ಕಪಿಲ್‌ ಮಿಶ್ರಾ ವಿರುದ್ಧ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಿಸಲಾಗಿದೆ.

“ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ”ಯ ಉಲ್ಲಂಘನೆಗಾಗಿ ದೆಹಲಿ ಚುನಾವಣಾ ಅಧಿಕಾರಿಗಳು ಮಿಶ್ರಾ ಅವರಿಗೆ ಶೋ ಕಾಸ್ ನೋಟಿಸ್ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...