Homeಮುಖಪುಟಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ: ಇಂದೋರ್ ಬಿಜೆಪಿ ಶಾಸಕನ ಬಂಧನ. ವಿಡಿಯೊ ನೋಡಿ

ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ: ಇಂದೋರ್ ಬಿಜೆಪಿ ಶಾಸಕನ ಬಂಧನ. ವಿಡಿಯೊ ನೋಡಿ

- Advertisement -
- Advertisement -

ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯರವರ ಮಗ ಹಾಲಿ ಇಂದೋರ್ ಶಾಸಕ ಆಕಾಶ್ ವಿಜಯವರ್ಗಿಯ ನಗರಸಭೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಿಂದ ಬಂಧನಕ್ಕೊಳಗಾಗಿದ್ದಾರೆ. ಕ್ರಿಕೆಟ್ ಬ್ಯಾಟ್‍ನಿಂದ ತೀವ್ರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕ್ಯಾಮರದಲ್ಲಿ ಸೆರೆಯಾಗಿದ್ದು ಅದನ್ನವರು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಶಾಸಕ ಮತ್ತು ಆತನ 10 ಬೆಂಬಲಿಗರ ಮೇಲೆ ದೂರು ದಾಖಲಾಗಿದೆ.
ವಿಡಿಯೋ ನೋಡಿ

ಗಂಜಿ ಕಾಂಪೌಂಡ್ ಏರಿಯಾದ ಕಟ್ಟಡ ಧ್ವಂಸ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಕೆಲವು ಮನೆಗಳು ತುಂಬಾ ಹಳೆಯವಾಗಿದ್ದು ಕುಸಿತದ ಹಂತದಲ್ಲಿವೆ. ಆದ್ದರಿಂದ ಅಲ್ಲಿನ ಮನೆಯ ಮಾಲೀಕರು ಅವುಗಳನ್ನು ಧ್ವಂಸಗೊಳಿಸಲು ನಗರಸಭೆಗೆ ಮನವಿ ಮಾಡಿದ್ದರು. ಅದರನುಸಾರ ನಗರಸಭೆಯ ಅಧಿಕಾರಿಗಳು ಧ್ವಂಸ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಇದನ್ನು ಅಲ್ಲಿ ವಾಸಿಸುತ್ತಿರುವ ಕೆಲ ಬಾಡಿಗೆ ನಿವಾಸಿಗಳು ಇಂದೋರ್3ರ ಶಾಸಕರ ಗಮನಕ್ಕೆ ತಂದು ಕಟ್ಟಡ ಧ್ವಂಸದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನಾಕಾರರನ್ನು ಜೊತೆಗೂಡಿದ ಶಾಸಕ ಆಕಾಶ್ ವಿಜಯವರ್ಗಿಯ, ಧ್ವಂಸ ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಶಾಸಕರ ವಿರೋಧದ ನಡುವೆಯು ಧ್ವಂಸ ಕೆಲಸ ಮುಂದುವರೆಸಿದಾಗ ಆಕಾಸ್ ವಿಜಯವರ್ಗಿಯ ಮತ್ತು ಆತನ ಬೆಂಬಲಿಗರು ಅಧಿಕಾರಿಗಳ ಮೇಲೆ ಬ್ಯಾಟ್‍ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಮತ್ತು ಜೆಸಿಬಿ ಸೇರಿದಂತೆ ಇತರ ವಾಹನಗಳ ಕೀ ಕಿತ್ತುಕೊಂಡಿದ್ದಾರೆ. ಪೊಲೀಸರು ಬಂದು ಗಲಾಟೆಯನ್ನು ನಿಲ್ಲಿಸಿದ್ದಾರೆ.

ಘಟನೆಯ ನಂತರ ಆಕಾಸ್ ವಿಜಯವರ್ಗಿಯ ಎಂಜಿ ರಸ್ತೆಯ ಪೊಲೀಸ್ ಠಾಣೆಗೆ ತೆರಳಿದರೆ ನಗರಸಭೆಯ ಅಧಿಕಾರಿಗಳು ಕೆಲಸ ನಿಲ್ಲಿಸಿ ಪ್ರತಿಭಟನೆ ಸೂಚಿಸಿದ್ದಾರೆ.

ಉತ್ತಮವಾಗಿರುವ ಮನೆಗಳನ್ನು ಸಹ ನಗರಸಭೆಯವರು ಕೆಡವುತ್ತಿದ್ದಾರೆ. ನಗರಸಭೆಯ ಅಧಿಕಾರಿಗಳು ಮನೆಯ ಮಾಲೀಕರಿಂದ ಲಂಚ ಪಡೆದು ಈ ಪಿತೂರಿ ನಡೆಸುತ್ತಿದ್ದಾರೆ. ಇದರಿಂದ ನನ್ನ ಕ್ಷೇತ್ರದ ಬಾಡಿಗೆ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ನಾನು ಬೆಳಿಗ್ಗೆಯಿಂದ 10 ಬಾರಿ ಕರೆ ಮಾಡಿದರೂ ಅಧಿಕಾರಿಗಳು ಉತ್ತರಿಸಿಲ್ಲ. ಹಾಗಾಗಿ ಅವರ ಮೇಲೆ ಹಲ್ಲೆ ನಡೆಸಬೇಕಾಯ್ತು ಎಂದು ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಧಿಕಾರಿಗಳ ಜೊತೆ ಕಾಂಗ್ರೆಸ್‍ನವರು ಕೈಜೋಡಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.

ಇದು ಆರಂಭ ಮಾತ್ರ. ನಮ್ಮ ಮನವಿಯವನ್ನು ಕೇಳದಿದ್ದರೆ ಮುಂದೆಯೂ ಇದೇ ರೀತಿ ವರ್ತಿಸಬೇಕಾಗುತ್ತದೆ ಎಂದೂ ಆಕಾಶ್ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...