Homeಮುಖಪುಟಚಿನ್ಮಯಾನಂದ್‌ ವಿರುದ್ಧ ಆರೋಪ ಮಾಡಿದ ಯುವತಿಗೆ ಜಾಮೀನು ನಿರಾಕರಣೆ..

ಚಿನ್ಮಯಾನಂದ್‌ ವಿರುದ್ಧ ಆರೋಪ ಮಾಡಿದ ಯುವತಿಗೆ ಜಾಮೀನು ನಿರಾಕರಣೆ..

- Advertisement -
- Advertisement -

ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಚಿನ್ಮಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಕಾನೂನು ವಿದ್ಯಾರ್ಥಿನಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಎರಡು ವಾರಗಳ ಕಾಲ ಎಸ್ಐಟಿ ವಶಕ್ಕೆ ನೀಡಲು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.

ಷಹಜಾನ್ ಪುರ ಮಹಿಳೆಯ ಪರ ವಕೀಲರು ವಾದ ಮಂಡಿಸಿ ನನ್ನ ಕಕ್ಷಿದಾರಳು ಅತ್ಯಾಚಾರ ಸಂತ್ರಸ್ಥೆ ಅವಳ ವಿರುದ್ಧ ಕಲ್ಪಿತ ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ ಮಹಿಳೆಗೆ ಜಾಮೀನು ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಚಿನ್ಮಯಾನಂದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಮಹಿಳೆ ಸುಲಿಗೆ ಪ್ರಮುಖ ಆರೋಪಿಯಾಗಿದ್ದಾರೆ. ಸಾಕಷ್ಟು ಸಾಕ್ಷ್ಯಗಳಿಂದ  ಸಾಬೀತಾಗಿದೆ. ಆದ್ದರಿಂದ ಮಹಿಳೆಗೆ ಜಾಮೀನು ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾನೂನು ವಿದ್ಯಾರ್ಥಿನಿ ಮೇಲೆ ಚಿನ್ಮಯಾನಂದ ಅತ್ಯಾಚಾರ ನಡೆಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ನಮ್ಮ ಬಳಿ ಇವೆ ಎಂದು ಓರ್ವ ಮಹಿಳೆ ಮತ್ತು ಇತರೆ ಮೂವರು 5 ಲಕ್ಷ ನೀಡಬೇಕು. ಇಲ್ಲದಿದ್ದರೆ ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದರು ಎಂದು ಚಿನ್ಮಯಾನಂದ ದೂರು ನೀಡಿದ್ದರು.

ಚಿನ್ಮಯಾನಂದ ವಿರುದ್ಧವೂ ಭಾರತೀಯ ದಂಡ ಸಂಹಿತೆ 376ಸಿ ಕಲಂ ಅಡಿ ಪ್ರಕರಣ ದಾಖಲಿಸಿಕೊಂಡಿರುವ  ಎಸ್ಐಟಿ ಚಿನ್ಮಯಾನಂದ ಪ್ರಕರಣ ಮತ್ತು ಮಹಿಳೆ ಮತ್ತು ಇತರೆ ಮೂವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಸಮಾನಾಂತರವಾಗಿ ತನಿಖೆ ನಡೆಸುತ್ತಿದೆ.

ನ್ಯಾಯಮೂರ್ತಿ ಸಿದ್ಧಾರ್ಥ ಅವರು ಮಹಿಳೆಯನ್ನು ಎರಡು ವಾರ ಎಸ್ಐಟಿ ವಶಕ್ಕೆ ನೀಡ ವಿಚಾರಣೆಯನ್ನು ನವೆಂಬರ್ 6ಕ್ಕೆ ಮುಂದೂಡಿದರು ಮತ್ತು ಚಿನ್ಮಯಾನಂದ ಪರ ವಕೀಲರು ಅಂದು ಪ್ರತ್ಯುತ್ತರ ನೀಡಬೇಕು ಎಂದು ಆದೇಶಿಸಿದರು.

ಈ ಮಧ್ಯೆ ಎಸ್ಐಟಿ ಚಿನ್ಮಯಾನಂದ ಅವರಿಗೆ ಸಂಬಂಧಿಸಿದ ಪ್ರಕರಣ ಯಾವ ಹಂತದಲ್ಲಿದೆ ಎಂಬ ವರದಿಯನ್ನು ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಸಲ್ಲಿಸಿದೆ. ಹೀಗಾಗಿ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ. ಎಸ್ಐಟಿ ಅಂದು ಮತ್ತೊಂದು ವರದಿಯನ್ನು ಸಲ್ಲಿಸಲಿದೆ.

ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರ ಮತ್ತು ಪಂಕಜ್ ಭಾಟಿಯಾ ಅವರು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಮುಂದಿನ ದಿನಾಂಕದೊಳಗೆ ಸಲ್ಲಿಸುವಂತೆ ಎಸ್ಐಟಿಗೆ ನಿರ್ದೇಶನ ನೀಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...