Homeಎಕಾನಮಿಒಂದೇ ವರ್ಷದಲ್ಲಿ 743 ಕೋಟಿ ಪಾರ್ಟಿ ಫಂಡ್‌ ಪಡೆದ ಬಿಜೆಪಿ: ಇತರ ಪಕ್ಷಗಳಿಗಿಂತ ಮೂರು ಪಟ್ಟು...

ಒಂದೇ ವರ್ಷದಲ್ಲಿ 743 ಕೋಟಿ ಪಾರ್ಟಿ ಫಂಡ್‌ ಪಡೆದ ಬಿಜೆಪಿ: ಇತರ ಪಕ್ಷಗಳಿಗಿಂತ ಮೂರು ಪಟ್ಟು ಹೆಚ್ಚು!

- Advertisement -
- Advertisement -

2019 ರ ಲೋಕಸಭಾ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷವು 2018-19ರ ಆರ್ಥಿಕ ವರ್ಷದಲ್ಲಿ 20,000 ರೂ.ಗಿಂತ ಹೆಚ್ಚು ಪಡೆದ ದೇಣಿಗೆಗಳ ಮೊತ್ತವು 743 ಕೋಟಿ ರೂ ಆಗಿದೆ ಎಂದು ಬಿಜೆಪಿಯು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ತಿಳಿಸಿದೆ. ಇದು ಇತರ ರಾಷ್ಟ್ರೀಯ ಪಕ್ಷಗಳು ಪಡೆದಿದ್ದಕ್ಕಿಂತ ಐದು ಪಟ್ಟು ಹೆಚ್ಚಿನದಾಗಿದೆ ಮತ್ತು ಬಿಜೆಪಿ ಇದುವರೆಗೆ ಸಂಗ್ರಹಿಸಿದ ಅತ್ಯಧಿಕ ಮೊತ್ತವಾಗಿದೆ.

ಭಾರತದಲ್ಲಿ ರಾಜಕೀಯ ಪಕ್ಷಗಳು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ 20,000 ರೂ.ಗಿಂತ ಹೆಚ್ಚಿನ ಮೊತ್ತದ ದೇಣಿಗೆ ಪಡೆದಲ್ಲಿ ಆ ಎಲ್ಲಾ ದೇಣಿಗೆಗಳ ವಿವರಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಆದರೆ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಹಣವನ್ನು, ದಾನಿಗಳ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ.

ಕಾಂಗ್ರೆಸ್ ಸೇರಿದಂತೆ ಇತರ ಆರು ರಾಷ್ಟ್ರೀಯ ಪಕ್ಷಗಳು ಪಡೆದ ದೇಣಿಗೆಗಳ ಒಟ್ಟು ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಿನ ಮೊತ್ತವನ್ನು ಬಿಜೆಪಿಯೊಂದೇ ಪಡೆದಿದೆ. ಇನ್ನು ಕಾಂಗ್ರೆಸ್ 147 ಕೋಟಿ ರೂ. ಪಡೆದಿದೆ, ಇದು ಅತ್ಯಧಿಕ ದೇಣಿಗೆ ಪಡೆದ ರಾಷ್ಟ್ರೀಯ ಪಕ್ಷಗಳಲ್ಲಿ ಎರಡನೆಯ ಸ್ಥಾನವಾಗಿದೆ ಮತ್ತು ಬಿಜೆಪಿಗೆ ದೊರೆತ ಐದನೇ ಒಂದು ಭಾಗವಾಗಿದೆ.

2018-19ರಲ್ಲಿ ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಸಂಸ್ಥೆಯೆಂದರೆ ಪ್ರೋಗ್ರೆಸ್ಸಿವ್ ಎಲೆಕ್ಟರಲ್ ಟ್ರಸ್ಟ್. ಇದೊಂದೇ ಸಂಸ್ಥೆಯು ಬಿಜೆಪಿ ಪಕ್ಷಕ್ಕೆ 357 ಕೋಟಿ ರೂ. ದೇಣಿಗೆ ನೀಡಿದೆ. ಇದು ಬಿಜೆಪಿಗೆ ಬಂದ ಒಟ್ಟು ದೇಣಿಗೆಯ ಅರ್ಧದಷ್ಟಾಗುತ್ತದೆ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಗ್ರಹಿಸಿದ ಅಂಕಿಅಂಶಗಳ ಈ ಮಾಹಿತಿಯನ್ನು ಹೊರಹಾಕಿವೆ.

ಖಚಿತವಾಗಿ ಹೇಳುವುದಾದರೆ, ರಾಜಕೀಯ ಪಕ್ಷಗಳು ಅಂತಹ ದೇಣಿಗೆಗಳಲ್ಲಿ ಸಂಗ್ರಹಿಸುವ ಹಣವು ಅವರ ಒಟ್ಟು ವಾರ್ಷಿಕ ಆದಾಯದ ಒಂದು ಭಾಗ ಮಾತ್ರ. ಚುನಾವಣಾ ಬಾಂಡ್‌ಗಳು ಮತ್ತು ಇತರೆ ಮೂಲಗಳಿಂದ ರಾಜಕೀಯ ಪಕ್ಷಗಳು ಸಾವಿರಾರು ಕೋಟಿ ಹಣ ಪಡೆಯುತ್ತವೆ ಮತ್ತು ಅದು ಲೆಕ್ಕದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...