Homeಕರ್ನಾಟಕಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

ಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

- Advertisement -
- Advertisement -

ಸದನದಲ್ಲಿಂದು ಬಹುಮತ ಸಾಬೀತು ಮಾಡಲಾಗದಿದ್ದರೂ ಮೈತ್ರಿ ಪಕ್ಷಗಳ ಶಾಸಕರು ಭರ್ಜರಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ. ಬಸವಕಲ್ಯಾಣದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು ಈ ಕೆಳಗಿನಂತಿವೆ.

ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಸವಣ್ಣನವರನ್ನ ನೆನೆದು ಮಾತು ಆರಂಭಿಸಿದ ಬಿ.ನಾರಾಯಣರಾವ್ ಜನರ ಮಧ್ಯೆ ಹೋರಾಟ ಮಾಡಿ ಮಾಡಿ ಕೊನೆಗೆ ಸಿದ್ಧರಾಮಯ್ಯ, ಪರಮೇಶ್ವರ್ ಅವರು ಟಿಕೇಟ್ ಕೊಟ್ಟಿದ್ದರಿಂದ ನಾನು ಬಂದು ಇಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ. ಮೊದಲು ದೇವೆಗೌಡರು ಟಿಕೇಟ್ ಕೊಟ್ಟಿದ್ದರು ಅಲ್ಲಿ ಸೋತಿದ್ದೆ ಇಲ್ಲಿಗೆ ಬಂದರೆ ಇಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾರೆ, ನಾವು ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗತ್ತಾರೆ ಅಂದುಕೊಂಡಿದ್ದೆವು ಎಂದು ಹೇಳಿದಾಗ ಸದನದ ಸದಸ್ಯರನ್ನು ನಗೆಯ ಅಲೆ ತೇಲಿಹೋದರು.

ಅನ್ನಭಾಗ್ಯ ಯೋಜನೆ ಇಂದು ಬಡವರು ನೆನೆಯುವಂತ ಕಾರ್ಯಕ್ರಮ ಎಂದ ಅವರು, ನಾವು ಪಂಚಾಯಿತಿ ಕಟ್ಟೆಯಿಂದದ ಬಂದವರು, ನನಗೆ ಕೃಷ್ಣಭೈರೆಗೌಡ, ಮಾಧುಸ್ವಾಮಿ ರೀತಿ ಕಾನೂನು ಮಾತಾಡಲು ಬರುವುದಿಲ್ಲ ಆದರೆ ನಮ್ಮ ಮೂರು ಪಕ್ಷದ ಮುಖಂಡರು ಬೇವಿನ ಬೀಜಗಳನ್ನು ಬಿತ್ತಲು ಹೋಗಬೇಡಿ. ಇಲ್ಲಿ ಏನ್ ನಡೆಯುತ್ತಿದೆ ಎಂಬುದನ್ನು ಎಲ್ಲಾ ಜನ ಮಾಧ್ಯಮಗಳಲ್ಲಿ ನೋಡುತ್ತಿದ್ದಾರೆ, ಎಲ್ಲಾರಿಗಿಂತ ಹೆಚ್ಚು ಮತದಾರರು ಗಮನಿಸುತ್ತಿದ್ದಾರೆ. ಅವರು ಚನ್ನಾಗಿ ಅರಿಯುತ್ತಾರೆ ಸಾರ್, ನಾವು ರಾಜಕೀಯ ಮನೆತನದಿಂದ ಬಂದಿಲ್ಲ ದುಡ್ಡಿರೋರು ಮತ್ತೆ ಚುನಾವಣೆಗೆ ಹೋಗತಾರೆ ನಾವು ಬಡವರು ನಾವು ಎಲ್ಲಿಗೆ ಹೋಗಬೇಕು?

ನಮಗೆ ಕೋಟಿ ಕೋಟಿ ದುಡ್ಡು ಕೊಟ್ಟರೆ ನಾವು ಇಡೋಕೆ ಜಾಗ ಇಲ್ಲ. ನಾನು ಪಾನ್ ಕಾರ್ಡ್ ಮಾಡಿಸಿಲ್ಲ , ಸತ್ತರೆ ಉಳೋದಕ್ಕೆ ಜಾಗ ಇಲ್ಲ ಸಾರ್. ಇನ್ನು ಲೋಕಯುಕ್ತರು ಕೇಳಿಯೇ ಕೇಳುತ್ತಾರೆ, ಕದ್ದು ಮುಚ್ಚು ತಗೊಂಡರೆ ವಿಡಿಯೋ ಮಾಡಿದರೆ ಮತ್ತೆ ಜೈಲಿಗೆ ಹೋಗಬೆಕು ಎಂದು ವಿವರಿಸಿದರು. ನಾನು ನಮ್ಮ ಕ್ಷೇತ್ರದ ವಾರ್ಡ್ ನಲ್ಲಿ ತಿರುಗುತ್ತಿದ್ದರೂ ಉಮೇಶ್ ಜಾಧವ್ ಜೊತೆ ಮುಂಬೈನಲ್ಲಿ ವಾಸ್ತವ್ಯ ಅಂತ ಈ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಮಾಡತ್ತಾರೆ. ನಾವು ಮೊದಲೆ ಬಡವರು, ಬಡವ ಸತ್ಯ ಹೇಳಿದರು ನಂಬೊದಿಲ್ಲ. ನನಗೆ ಮಾಲೀಕರು ಮತದಾರರು.

ಎಲ್ಲಾ 224 ಗೌರವಾನ್ವಿತ ಸದಸ್ಯರೆ ನೀವು ಮತದಾರರ ಕಣ್ಣಲ್ಲಿ ಕೀಳು ಮಟ್ಟದಲ್ಲಿ ಕಾಣಬೇಡಿ. ಮೊಟ್ಟ ಮೊದಲು ಸಂಸತ್ತು ಹುಟ್ಟಿದ್ದು ಬಸವಕಲ್ಯಾಣದಲ್ಲಿ. 700 ಶೋಷಿತ ಸಮುದಾಯಗಳ ನೇತೃದ್ವದಲ್ಲಿ ಸಂಸತ್ತು ಪ್ರಾರಂಭ ಆಗಿದ್ದು ಬಸವಕಲ್ಯಾಣದಲ್ಲಿ, ಅನ್ನದಾಸೋಹ ಪ್ರಾರಂಭ ಮಾಡಿದ್ದು ಬಸವ ಕಲ್ಯಾಣ. ಅನುಭವ ಮಂಟಪಕ್ಕೆ 650ಕೋಟಿ ಕೊಡಬೇಕು ಎಂದು ಮನವಿ ಮಾಡಿದರು.

ನೆಲದ ಕಾನೂನಿನ ಪ್ರಕಾರ ವಿಶ್ವಾಸಮತ ಯಾಚಿಸಲು ಹಿಂದೆ ಮುಂದೆ ಯೋಚನೆ ಮಾಡಬೇಡಿ ಈ ಹಿಂದೆ ದೇವೆಗೌಡರು ಸ್ವಾಭಿಮಾನದಿಂದ ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದ್ದರು. ನೀವು ಒಮ್ಮೆ ನಿಮ್ಮ ತಂದೆಗೆ ನೋವು ತಂದು ಬಿಜೆಪಿ ಸಹವಾಸ ಮಾಡಿದ್ದೀರಿ ಅದನ್ನ ಇಂದು ನಾವೆಲ್ಲ ಅನುಭವಿಸುವಂತಾಗಿದೆ. ಇನ್ನು ಮೇಲೆ ನೀವು ಆ ತಪ್ಪು ಮಾಡಬೇಡಿ ಎಂದು ಹೇಳಿದರು.

ಬಸವಣ್ಣನವರ ಆಶಯದಂತೆ, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದ ಚೌಕಟ್ಟಿನ ಒಳಗಡೆ ಈ ಸಮಸ್ಯೆಯನ್ನ ಬೇಗ ಪರಿಹರಿಸಿ. ಯಾರು ಜಾತ್ಯಾತೀತ ಶಕ್ತಿಗಳು ಒಂದಾಗಬೇಕೆಂದು, ಒಟ್ಟಾಗಿ ಸೇರಿಬೇಕೆಂದು ಮುಖ್ಯಮಂತ್ರಿಯಾದ ನೀವು ಗ್ರಾಮವಾಸ್ತವ್ಯಕ್ಕೆ ಬಂದು ಗಡಿಭಾಗದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೀರಿ. ಮಾಧ್ಯಮಗಳು, ವಿರೋಧ ಪಕ್ಷಗಳು ಗಮನಿಸಿ ನಮ್ಮ ಹಳ್ಳಿಗಳಿಗೆ ಸರಪಂಚ್ ಬರೋದೆ ಕಷ್ಟ ಒಬ್ಬ ಮುಖ್ಯಮಂತ್ರಿ ಬರ್ತಾನೆ ಅಂದರೆ ಅಲ್ಲಿ ಹಬ್ಬದ ವಾತಾವರಣ ಇತ್ತು ಬಸವಕಲ್ಯಾಣಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿ ಮಾತು ಮುಗಿಸಿದರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...