Homeಮುಖಪುಟನೀರಾವರಿ ಹಗರಣ ಪ್ರಕರಣದಲ್ಲಿ ಎಸಿಬಿಯಿಂದ ಕ್ಲೀನ್‌ ಚಿಟ್‌ ಪಡೆದ ಅಜಿತ್‌ ಪವಾರ್‌

ನೀರಾವರಿ ಹಗರಣ ಪ್ರಕರಣದಲ್ಲಿ ಎಸಿಬಿಯಿಂದ ಕ್ಲೀನ್‌ ಚಿಟ್‌ ಪಡೆದ ಅಜಿತ್‌ ಪವಾರ್‌

- Advertisement -
- Advertisement -

ನೀರಾವರಿ ಹಗರಣ ಪ್ರಕರಣದಲ್ಲಿ ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎನ್‌ಸಿಪಿ ಪಕ್ಷದ ನಾಯಕ ಅಜಿತ್ ಪವಾರ್ ಅವರಿಗೆ ಕ್ಲೀನ್‌ ಚಿಟ್‌ ನೀಡಿದೆ.

ನವಂಬರ್‌ 27ನೇ ತಾರೀಖಿನ 16 ಪುಟಗಳ ಅಫಿಡವಿಟ್‌ನಲ್ಲಿ ನೀರಾವರಿ ಗ್ರಾಂಟ್‌ಗಳನ್ನು ನೀಡುವಲ್ಲಿ ಅಜಿತ್‌ ಪವಾರ್‌ರವರ ಯಾವುದೇ ಪಾತ್ರವಿಲ್ಲ ಎಂದು ಉಲ್ಲೇಖಿಸಲಾಗಿದೆ. ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಎಸಿಬಿ ಅಧೀಕ್ಷಕಿ ರಶ್ಮಿ ನಂದೇಡ್ಕರ್ ಅವರು ಅಫಿಡವಿಟ್ ಸಲ್ಲಿಸಿದ್ದಾರೆ.

1999-2004ರ ಅವಧಿಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಎನ್‌ಸಿಪಿಗೆ ಸೇರಿದ ಅಜಿತ್‌ ಪವಾರ್ ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಸಚಿವರಾಗಿದ್ದರು. ಆಗ ಹಲವು ಸಾವಿರ ಕೋಟಿ ರೂಗಳ ಹಗರಣ ನಡೆದಿದೆ ಎಂಬ ಆರೋಪ ಅಜಿತ್‌ ಪವಾರ್‌ ಮೇಲಿತ್ತು.

ವಿಚಾರಣೆ / ತನಿಖೆಯ ಅವಧಿಯಲ್ಲಿ ಸಂಗ್ರಹಿಸಲಾದ ಸಂಗತಿಗಳು ಮತ್ತು ಸಾಕ್ಷ್ಯಗಳನ್ನು ಗಮನಿಸಿದರೆ, ವಿಐಡಿಸಿ ಅಧ್ಯಕ್ಷರ (ಜಲಸಂಪನ್ಮೂಲ ಇಲಾಖೆಯ ಸಚಿವ) ಕಡೆಯಿಂದ ಯಾವುದೇ ಕ್ರಿಮಿನಲ್ ಹೊಣೆಗಾರಿಕೆ ಇಲ್ಲ ಎಂದು ಗಮನಿಸಲಾಗಿದೆ” ಎಂದು ಸಲ್ಲಿಸಲಾದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಈ ಕ್ಲೀನ್ ಚಿಟ್ ಬಹಳ ಆಶ್ಚರ್ಯಕರವಾಗಿದೆ. ಎಸಿಬಿ ಈಗಾಗಲೇ ಸಲ್ಲಿಸಿರುವ ಅಫಿಡವಿಟ್ ಅನ್ನು ಮತ್ತೊಂದು ಅಫಿಡವಿಟ್‌ ಹೇಗೆ ವಿರೋಧಿಸಬಹುದು. ನಾನು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ ಮತ್ತು ನ್ಯಾಯಾಲಯ ಇದನ್ನು ಒಪ್ಪುವುದಿಲ್ಲ ಎಂದು ನನಗೆ ಖಾತ್ರಿಯಿದೆ ”ಎಂದು ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...