Homeಮುಖಪುಟಮಹಾರಾಷ್ಟ್ರದ ನಂತರ ಗೋವಾದಲ್ಲಿಯೂ ನಮ್ಮದೆ ಸರ್ಕಾರ: BJPಗೆ ಎಚ್ಚರಿಕೆ ಕೊಟ್ಟ ಶಿವಸೇನೆಯ ಸಂಜಯ್‌ ರಾವತ್‌

ಮಹಾರಾಷ್ಟ್ರದ ನಂತರ ಗೋವಾದಲ್ಲಿಯೂ ನಮ್ಮದೆ ಸರ್ಕಾರ: BJPಗೆ ಎಚ್ಚರಿಕೆ ಕೊಟ್ಟ ಶಿವಸೇನೆಯ ಸಂಜಯ್‌ ರಾವತ್‌

- Advertisement -
- Advertisement -

ಮಹಾರಾಷ್ಟ್ರದ ನಂತರ ಗೋವಾದಲ್ಲಿಯೂ ನಮ್ಮದೇ ಸರ್ಕಾರ ರಚಿಸುತ್ತೇವೆ ಎಂದು ಶಿವಸೇನೆಯ ಸಂಜಯ್ ರೌತ್ ಬಿಜೆಪಿಗೆ ಸಂದೇಶ ನೀಡಿದ್ದಾರೆ.

ಮಹಾರಾಷ್ಟ್ರದ ನಂತರ, ಬಿಜೆಪಿ ಆಡಳಿತದ ಗೋವಾದಲ್ಲಿಯೂ ಸಹ ಪವಾಡ ನಡೆಯಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಶುಕ್ರವಾರ ಘೋಷಿಸಿದ್ದಾರೆ. ಅವರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು  ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ಕೂಡಲೇ ಸಂಜಯ್‌ ರಾವತ್‌ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗೋವಾ ಫಾರ್ವರ್ಡ್ ಪಕ್ಷದ ಮಾಜಿ ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ರಾವತ್‌ ಹೇಳಿದ್ದಾರೆ. “ಮಹಾರಾಷ್ಟ್ರದಲ್ಲಿ ನಡೆದಂತೆಯೇ ಗೋವಾದಲ್ಲಿ ಹೊಸ ರಾಜಕೀಯ ಒಕ್ಕೂಟ ರೂಪುಗೊಳ್ಳುತ್ತಿದೆ. ಶೀಘ್ರದಲ್ಲೇ ನೀವು ಗೋವಾದಲ್ಲಿ ಒಂದು ಪವಾಡಕ್ಕೆ ಸಾಕ್ಷಿಯಾಗುತ್ತೀರಿ ಎಂದು ಸಂಜಯ್ ರಾವತ್ ಹೇಳಿದ್ದಾರೆ.

“ಇದು ದೇಶಾದ್ಯಂತ ನಡೆಯಲಿದೆ. ಮಹಾರಾಷ್ಟ್ರದ ನಂತರ ಅದು ಗೋವಾ, ನಂತರ ನಾವು ಇತರ ರಾಜ್ಯಗಳಿಗೆ ಹೋಗುತ್ತೇವೆ. ಈ ದೇಶದಲ್ಲಿ ಬಿಜೆಪಿ ಹೊರತಪಡಿಸಿದ ರಾಜಕೀಯ ಒಕ್ಕೂಟವನ್ನು ಮಾಡಲು ನಾವು ಬಯಸುತ್ತೇವೆ” ಎಂದು ಶಿವಸೇನೆ ಮುಖಂಡರು ಸಾರಿದ್ದಾರೆ.

ವಿಜಯ್ ಸರ್ದೇಸಾಯಿ ಅವರು ಸಂಜಯ್ ರಾವತ್ ಅವರನ್ನು ಭೇಟಿ ಮಾಡಿರುವುದನ್ನು ದೃಢಪಡಿಸಿದ್ದಾರೆ. “ಕೇವಲ ಘೋಷಣೆಯ ನಂತರ ಸರ್ಕಾರಗಳು ಬದಲಾಗುವುದಿಲ್ಲ. ಅದು ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಮಹಾರಾಷ್ಟ್ರದಲ್ಲಿ ಏನಾಯಿತು, ಗೋವಾದಲ್ಲಿಯೂ ಸಹ ಆಗಬೇಕು. ಪ್ರತಿಪಕ್ಷಗಳು ಒಗ್ಗೂಡಬೇಕು. ನಾವು ಸಂಜಯ್ ರೌತ್ ಅವರನ್ನು ಭೇಟಿ ಮಾಡಿದ್ದೇವೆ. ಮಹಾರಾಷ್ಟ್ರದಲ್ಲಿ ರಚನೆಯಾದ ‘ಮಹಾ ವಿಕಾಸ್ ಅಘಾಡಿ’ ಗೋವಾಕ್ಕೂ ಕೂಡ ವಿಸ್ತರಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ 19ನೇ ಸಿಎಂ ಆಗಿ ಉದ್ಧವ್‌ ಠಾಕ್ರೆ ಪ್ರಮಾಣ ವಚನ ಸ್ವೀಕಾರ: ಮೊದಲ ಬಾರಿಗೆ ಠಾಕ್ರೆ ಸರ್ಕಾರ್‌ ಶುರು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋವಾದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಗೋವಾ ಫಾರ್ವರ್ಡ್ ಪಕ್ಷ ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡಿತು. 2017 ರಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದಿತ್ತು. ಆದರೆ ಬಿಜೆಪಿ ಕೇವಲ 13 ಸ್ಥಾನಗಳನ್ನು ಪಡೆದಿದ್ದರೂ ಸಹ ಅವರನ್ನು ಮೀರಿಸಿ, ಅದು ಮಿತ್ರಪಕ್ಷಗಳನ್ನು ಒಲೈಸಿ ಸರ್ಕಾರ ರಚಿಸಿತ್ತು.

ವಿಜಯ್ ಸರ್ದೇಸಾಯಿ ಅವರನ್ನು ಬಿಜೆಪಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಆದರೆ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ ನಂತರ ಜುಲೈನಲ್ಲಿ ಇತರ ಗೋವಾ ಫಾರ್ವರ್ಡ್ ಪಕ್ಷದ ಮಂತ್ರಿಗಳೊಂದಿಗೆ ವಿಜಯ್ ಸರ್ದೇಸಾಯಿ ಅವರನ್ನು ಸಹ ಸಂಪುಟದಿಂದ ತೆಗೆದುಹಾಕಲಾಯಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದವರಿಗೆ ಕ್ಯಾಬಿನೆಟ್ ಹುದ್ದೆಗಳನ್ನು ಕೊಡಲಾಗಿದೆ. ಹಾಗಾಗಿ ವಿಜಯ್ ಸರ್ದೇಸಾಯಿ ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದಾರೆ.

ಪ್ರಸ್ತುತ ಗೋವಾದ 40 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಯು 27 ಸದಸ್ಯರನ್ನು ಹೊಂದಿದ್ದು, ಬಹುಮತಕ್ಕೆ ಕನಿಷ್ಟ 21 ಸೀಟುಗಳು ಬೇಕಾಗಿದ್ದು, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಶಿವಸೇನೆ ನಡುವಿನ ಯಾವುದೇ ಮೈತ್ರಿಗೆ ತುತ್ತಾಗುವ ಸಾಧ್ಯತೆಯಿಲ್ಲ. ಆದರೂ ರಾಜಕೀಯ ಬೆಳವಣಿಗೆಗಳು ಏನೇನಾಗಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ.

ತನ್ನ ಚುನಾವಣಾ ಅಫಿಡವಿಟ್‌ನಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳನ್ನು ಮರೆಮಾಚಿದ್ದಕ್ಕಾಗಿ ದೇವೇಂದ್ರ ಫಡ್ನವೀಸ್‌ಗೆ ನ್ಯಾಯಾಲಯದ ಸಮನ್ಸ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಂಜಯ್‌ ರಾವತ್‌ “ನನಗೆ ಗೊತ್ತಿಲ್ಲ, ನಾವು ಈಗ ಗೋವಾ ರಾಜಕೀಯದಲ್ಲಿ ನಿರತರಾಗಿದ್ದೇವೆ. ಮಹಾರಾಷ್ಟ್ರ ರಾಜಕೀಯ ಮುಗಿದಿದೆ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...