Homeಮುಖಪುಟಮಹರಾಷ್ಟ್ರದ ಚುನಾವಣಾ ಫಲಿತಾಂಶದ ಸುತ್ತ ಒಂದು ನೋಟ

ಮಹರಾಷ್ಟ್ರದ ಚುನಾವಣಾ ಫಲಿತಾಂಶದ ಸುತ್ತ ಒಂದು ನೋಟ

- Advertisement -
ಶ್ರಿರಂಜನ್ ಅವತೆ,  ಸಾವಿತ್ರಿಬಾಯಿ ಫುಲೆ ಯುನಿವರ್ಸಿಟಿ, ಪುಣೆ
- Advertisement -

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದ ನಾಲ್ಕನೇ ಮತ್ತು ಕೊನೆಯ ಹಂತದ ಮತದಾನ ಏಪ್ರಿಲ್ 29ರಂದು ನಡೆಯಿತು. 48 ಕ್ಷೇತ್ರಗಳಿರುವ ಇಲ್ಲಿ 2014ರಲ್ಲಿ 60.32% ಮತದಾನ ಆಗಿದ್ದರೆ ಈ ಸಲ 60.68% ಮತದಾನ ಆಯಿತು. ಮತದಾನದ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದಿದ್ದರೂ ಮತದಾನದ ಮಾದರಿ ಗಮನಾರ್ಹವಾಗಿ ಬದಲಾಗಿದೆ. 2014ರಲ್ಲಿ ಹಿಂದಿ ಹೃದಯಭಾಗದಲ್ಲಿ ಇದ್ದ ಮೋದಿ ಅಲೆ ಮಹಾರಾಷ್ಟ್ರದಲ್ಲೂ ಇತ್ತು. ಈಗ ಆ ಅಲೆ ಕಣ್ಮರೆಯಾಗಿದೆ. ಹಾಗೂ ಮೋದಿಯ ಜನಪ್ರಿಯತೆಯ ಹೊರತಾಗಿಯೂ ಕೇಂದ್ರದ ಪ್ರಬಲ ನಿರೂಪಣೆಯ ಶಕ್ತಿ ಕುಂದಿದೆ. ಹಾಗಾಗಿ, ಈ ಚುನಾವಣೆಗಳಲ್ಲಿ ಸ್ಥಳೀಯ ಲೆಕ್ಕಾಚಾರಗಳು ನಿರ್ಣಾಯಕವಾಗಿವೆ. ಪ್ರಚಾರದುದ್ದಕ್ಕೂ ರಾಜಕೀಯ ಪಕ್ಷಗಳು ಅಳವಡಿಸಿದ ತಂತ್ರಗಾರಿಕೆಯಿಂದ ಬದಲಾದ ಮೂಡ್ ಸ್ಪಷ್ಟವಾಗಿತ್ತು.

ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ
ಮಹಾರಾಷ್ಟ್ರದ ರಾಜಕಾರಣದಲ್ಲಿ ನಾಲ್ಕು ಪ್ರಮುಖ ಪಕ್ಷಗಳಿದ್ದರೂ, ಸ್ಪರ್ಧೆ ಇರುವುದು ಕಾಂಗ್ರೆಸ್-ಎನ್‍ಸಿಪಿ ಕೂಟ ಮತ್ತು ಶಿವಸೇನೆ-ಬಿಜೆಪಿಯ ಮಧ್ಯೆ. ಮೂರನೇ ತುದಿಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ಭಾರತೀಯ ರಿಪಬ್ಲಿಕ್ ಪಾರ್ಟಿ ಮತ್ತು ಅಸಾದುದ್ದಿನ್ ಒವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್ ಮುಸ್ಲಿಮೀನ್ ಮಧ್ಯದ ಏರ್ಪಟ್ಟ ಮೈತ್ರಿಕೂಟವಾದ ವಂಚಿತ್ ಬಹುಜನ್ ಅಘಾಡಿ (ವಿಬಿಏ) ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಇವರೆಡರ ವಿರುದ್ಧ ನಮ್ಮ ಹೋರಾಟ ಎಂದು ವಿಬಿಏ ಹೇಳಿಕೊಂಡರೂ ಯುಪಿಏ ಮತ್ತು ವಿಬಿಏದ ಮತದಾರರ ಬೇಸ್ ಕೆಲವು ಕ್ಷೇತ್ರಗಳಲ್ಲಿ ವಿಭಜಿತವಾಗುವ ಸಾಧ್ಯತೆ ಇರುವುದರಿಂದ ಯುಪಿಏಗೆ ಈ ಹೊಸ ಮೈತ್ರಿಕೂಟದಿಂದ ತೊಂದರೆ ಆಗಬಹುದಾಗಿದೆ.
ಬಿಜೆಪಿ ಈ ಎರಡು ತಂತ್ರಗಾರಿಕೆಗಳನ್ನು ಬಳಸುತ್ತಿದೆ:

ಮೊದಲನೇಯದಾಗಿ, ಸ್ಥಳೀಯ ಪ್ರಭಾವಿ ಮತ್ತು ಪ್ರಮುಖ ನಾಯಕರನ್ನು ಹೇಗಾದರೂ ಮಾಡಿ ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಅಹ್ಮದ್‍ನಗರದಿಂದ ವಿಖೆ ಪಾಟಿಲ (ರಾಧಾಕೃಷ್ಣ ವಿಖೆ ಪಾಟೀಲ ಅವರು ವಿರೋಧ ಪಕ್ಷದ ನಾಯಕಾಗಿದ್ದರು) ಮತ್ತು ಮಾಧಾದಿಂದ ಮೊಹಿತೆ ಪಾಟೀಲ್ ಅವರನ್ನು ಯಶಸ್ವಿಯಾಗಿ ಬಿಜೆಪಿಗೆ ಬರಮಾಡಿಕೊಂಡರು.

ಎರಡನೇಯದಾಗಿ, ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಮತ್ತು ಅವರ ತಂಡ ಫುಲ್ವಾಮಾ ಮತ್ತು ಬಾಲಾಕೋಟ್ ಘಟನೆಗಳನ್ನು ಬಳಸಿ ರಾಷ್ಟ್ರೀಯ ಸುರಕ್ಷತೆಯ ವಿಷಯದ ಮೇಲೆ ತೀವ್ರವಾಗಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ಮೋದಿ ಕೂಡ ಇದೇ ವಿಷಯಗಳ ಮೇಲೆ ಪ್ರಚಾರ ಮಾಡಿ ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟನ್ನು ಕಡೆಗಣಿಸಿದರು. ಮತ್ತೊಂದು ಕುತುಹೂಲಕಾರಿ ವಿಷಯವೇನೆಂದರೆ, ಈ ಸಲ ಗುಜರಾತಿನ ಡೆವಲಪ್‍ಮೆಂಟ್ ಮಾಡೆಲ್ ಬಗ್ಗೆ ಮತ್ತು ಅಭಿವೃದ್ಧಿಯ ವಿಷಯಗಳು ಮೋದಿಯ ಭಾಷಣದಲ್ಲಿ ಕಾಣಿಸಿಕೊಳ್ಳಲಿಲ್ಲ. ಅದರ ಬದಲಾಗಿ, ಜಾತಿ ಮತ್ತು ಧರ್ಮದ ಬಗ್ಗೆ ಅವರ ಮಾತುಗಳು ಕೇಂದ್ರೀಕೃತವಾಗಿದ್ದವು.

ಭೋಪಾಲ್‍ದಿಂದ ಪ್ರಗ್ಯಾ ಠಾಕುರ್ ಅವರು ಸ್ಪರ್ಧಿಸುವುದು ತಿಳಿದ ನಂತರ ಧಾರ್ಮಿಕ ಧೃವೀಕರಣ ತಂತ್ರಗಾರಿಕೆ ಇನ್ನಷ್ಟು ಸ್ಪಷ್ಟವಾಯಿತು. ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಗ್ಯಾ ಠಾಕುರ್ ಮಾಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಲಾತೂರ್‍ನಲ್ಲಿ ಮಾತನಾಡುತ್ತ ಪ್ರಧಾನಿ ಹೇಳಿದ್ದು, “ಮೊದಲ ಬಾರಿ ಮತದಾನ ಮಾಡುವವರಿಗೆ ನಾನು ಕೇಳುವುದೇನೆಂದರೆ, ಬಾಲಾಕೋಟ್ ಏರ್‍ಸ್ಟ್ರೈಕ್‍ನ್ನು ಮಾಡಿದ ಶೂರಸೈನಿಕರಿಗೆ ನೀವು ನಿಮ್ಮ ಮತ ಸಮರ್ಪಿಸಬಲ್ಲಿರಾ? ಫುಲ್ವಾಮಾ ದುರಂತದಲ್ಲಿ ಮಡಿದ ಶೂರ ಹುತಾತ್ಮರ ಹೆಸರಲ್ಲಿ ನಿಮ್ಮ ಮೊದಲ ಮತ ಹಾಕುವುರಾ?” ಆದರೆ 2014ರಂತೆ ಜನರನ್ನು ತನ್ನ ªಮಾತುಗಳಿಂದ ಮೋದಿಯವರಿಗೆ ಹುರುಪು ತುಂಬಲು ಆಗಲಿಲ್ಲ ಅನ್ನುವುದು ನಿಜ.

ಎನ್‍ಡಿಏ ಮುಗ್ಗರಿಸುತ್ತಿರುವ ಸಂದರ್ಭದಲ್ಲಿಯೇ ಯುಪಿಏ ಕೂಡ ದಿಶಾಹೀನವೇ ಆಗಿತ್ತು. ಕಾಂಗ್ರೆಸ್ ಪಕ್ಷವು ಆಂತರಿಕ ಕಲಹಗಳನ್ನು ಎದುರಿಸುತ್ತಿತ್ತು ಹಾಗೂ ಅವುಗಳನ್ನು ನಿರ್ವಹಿಸಿ, ಬಿಜೆಪಿಯನ್ನು ಪ್ರಬಲವಾಗಿ ಎದುರಿಸಲು ಆಗಲಿಲ್ಲ. ಪಶ್ಚಿಮ ಮಹಾರಾಷ್ಟ್ರದಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಎನ್‍ಸಿಪಿಯಿಂದ ಕಣಕ್ಕಿಳಿಸಿದ ಶರದ್ ಪವಾರ್ ಅವರು ಮರಳಿ ತನ್ನ ಶಕ್ತಿಯನ್ನು ಪಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಇತ್ತ ಬಿಜೆಪಿಯ ಮೈತ್ರಿಪಕ್ಷವಾದ ಶಿವಸೇನೆ ಮತದಾರರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲಾಗುತ್ತಿದೆ ಎನ್ನುವ ಸಂಕೇತಗಳಿವೆ ಹಾಗೂ ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ-ಶಾ ಮತ್ತು ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿದ್ದ ಶಿವಸೇನೆ ಚುನಾವಣೆಯ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ತನ್ನ ಸೀಟುಗಳನ್ನು ಕಳೆದುಕೊಳ್ಳಬಹುದು ಎನ್ನುವ ಸಂಕೇತಗಳಿವೆ.

ರಾಜ್ ಠಾಕ್ರೆ ಫ್ಯಾಕ್ಟರ್
ಈ ಸಲದ ಚುನಾವಣಾ ಜ್ವರ ಕಾವೇರದೇ, ತುಂಬಾ ಆಯಾಸಕರವಾಗಿದ್ದ ಸಮಯದಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಮ್‍ಎನ್‍ಎಸ್) ನಾಯಕ ರಾಜ್ ಠಾಕ್ರೆಯ ಪ್ರವೇಶದಿಂದ ವಿರೋಧಪಕ್ಷಕ್ಕೆ ಬಲತುಂಬಿತಂತಾಯಿತು. ಎಮ್‍ಎನ್‍ಎಸ್ ತನ್ನ ಪಕ್ಷದಿಂದ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಹಾಗೂ ರಾಜ್ ಠಾಕ್ರೆಯವರು ಮೋದಿ-ಶಾ ವಿರುದ್ಧ ಗಟ್ಟಿಯಾಗಿ ಪ್ರಚಾರ ಮಾಡಿದರು. ಅವರ ಭಾಷಣಗಳು ತಮ್ಮ ವಾಕ್‍ಚಾತುರ್ಯದೊಂದಿಗೆ ಮೋದಿ-ಶಾ ಅವರ ಆಶ್ವಾಸನೆಗಳನ್ನು ಪರಿಶೀಲಿಸುವ ವೀಡಿಯೋ ಪ್ರೆಸೆಂಟೇಷನ್ ಕೂಡ ಹೊಂದಿರುತ್ತಿದ್ದವು. ರಾಜ್ ಠಾಕ್ರೆಯ ರ್ಯಾಲಿಗಳಲ್ಲಿ ಹಿಂದೆಂದೂ ಕಾಣದಷ್ಟು ಜನರು ಭಾಗವಹಿಸಿದರು ಹಾಗೂ ರಾಜ್ ಠಾಕ್ರೆಯ ಪ್ರಾಬಲ್ಯವಿರುವ ಮುಂಬಯಿ ನಾಶಿಕ್ ಪ್ರದೇಶದಲ್ಲಿ ಮತದಾರರನ್ನು ಬಿಜಪಿ ವಿರುದ್ಧ ಮತಚಲಾಯಿಸುವಂತೆ ಓಲೈಕೆಯಾಗಿರುವ ಸಾಧ್ಯತೆ ಇದೆ. ರಾಜ್ ಠಾಕ್ರೆಯ ಭಾಷಣದ ವಿಡಿಯೋಗಳು ಮತ್ತು ಅವರು ತೋರಿಸುತ್ತಿದ್ದ ವಿಡಿಯೋಗಳನ್ನು ಮಹಾರಾಷ್ಟ್ರದ ಹೊರಗೆ ಸಬ್‍ಟೈಟಲ್‍ಗಳನ್ನು ಹಾಕಿ ತೋರಿಸಲಾಗುತ್ತಿದೆ ಹಾಗು ಅದರಿಂದ ಎನ್‍ಡಿಏ ಹುಟ್ಟುಹಾಕಿದ ರಾಷ್ಟ್ರೀಯ ಸುರಕ್ಷತೆಯ ಕಥನಕ್ಕೆ ವಿರುದ್ಧದ ಕಥನವನ್ನು ಸೃಷ್ಟಿಸುವಂತೆ ಆಗಿದೆ.

ವಲಯಾವಾರು ಟ್ರೆಂಡ್‍ಗಳು
ಮಹಾರಾಷ್ಟ್ರವು ಐದು ಪ್ರಮುಖ ವಲಯಗಳನ್ನು ಹೊಂದಿದೆ; ವಿದರ್ಭ (10 ಲೋಕಸಭೆ ಕ್ಷೇತ್ರಗಳು), ಮರಾಠವಾಡಾ (8), ಉತ್ತರ ಮಹಾರಾಷ್ಟ್ರ(6), ಮುಂಬಯಿ-ಕೊಂಕಣ್(12) ಹಾಗೂ ಕೆಂದ್ರ/ಪಶ್ಚಿಮ ಮಹಾರಾಷ್ಟ್ರ(12), ಹೀಗೆ ಒಟ್ಟಾರೆ 48 ಲೋಕಸಭೆ ಕ್ಷೇತ್ರಗಳು. ವಿದರ್ಭವು ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ 2014ರಲ್ಲಿ ಮೋದಿ ಪ್ರಧಾನಿ ಆದ ನಂತರ ಮಹಾರಾಷ್ಟ್ರದ ಅಧಿಕಾರ ಕೇಂದ್ರವು ಪಶ್ಚಿಮ ಮಹಾರಾಷ್ಟ್ರದಿಂದ ವಿದರ್ಭಕ್ಕೆ ಸ್ಥಳಾಂತರಗೊಂಡಿತು. ಈ ಸಲ ಮೋದಿ ರ್ಯಾಲಿಗಳಲ್ಲಿ ಕಂಡುಬಂದ ನೀರಸ ಪ್ರತಿಕ್ರಿಯೆಯಿಂದ ಬಿಜೆಪಿ ಆತಂಕೊಂಡಿದೆ. 2014ರ ಚುನಾವಣೆಯಲ್ಲಿ ವಿದರ್ಭದ ಎಲ್ಲಾ ಸೀಟುಗಳಲ್ಲೂ ಎನ್‍ಡಿಏ ಗೆದ್ದಿತ್ತು. ಈ ವಲಯದ ಫಲಿತಾಂಶಗಳು ಕೃಷಿ ಬಿಕ್ಕಟ್ಟಿನ ಬಗ್ಗೆ ಬಿಜೆಪಿಗೆ ಒಂದು ಲಿಟ್ಮಸ್ ಟೆಸ್ಟ್ ಆಗಿ ಪರಿಮಣಿಸಲಿವೆ.

ಅದರಂತೆಯೇ, ರಾಜ್ಯದಲ್ಲಿ ಬರ ಮತ್ತು ಕೃಷಿ ಬಿಕ್ಕಟ್ಟಿನಿಂದ ಅತ್ಯಂತ ಹೆಚ್ಚು ಪೀಡಿತವಾದ ಮರಾಠವಾಡದಲ್ಲೂ ಏನಾಗುವುದೆನ್ನುವುದೂ ಬಿಜೆಪಿಯ ಆಡಳಿತದ ಪರೀಕ್ಷೆಯಾಗಿದೆ. ಉತ್ತರ ಮಹಾರಾಷ್ಟ್ರದಲ್ಲೂ ರೈತರು ಮತ ಚಲಾಯಿಸುವಾಗ ಕೃಷಿ ಬಿಕ್ಕಟ್ಟೇ ಪ್ರಧಾನ ಪಾತ್ರ ವಹಿಸಲಿದೆ. ಇದರ ಹೊರತಾಗಿ ಈ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯಿದೆ ಹಾಗೂ ಆದಿವಾಸಿ ಮತ್ತು ಧನಗರ್ (ಕುರುಬರು) ಅವರ ನಡುವಿನ ಸಂಘರ್ಷದ ವಿಷಯಗಳೂ ನಿರ್ಣಾಯಕ ಪಾತ್ರ ವಹಿಸಲಿವೆ. ಮರಾಠರಿಗೆ 16% ಮೀಸಲಾತಿ ನೀಡುವ ಬಿಜೆಪಿಯ ನಿರ್ಣಯದಿಂದ ಇಲ್ಲಿಯ ಓಬಿಸಿ ಜನರು ಮುನಿಸಿಕೊಂಡಿದ್ದಾರೆ, ಈ ಅಂಶ ಕೇಂದ್ರ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ನಿರ್ಣಾಯಕವಾಗಬಹುದಾಗಿದೆ. ಎನ್‍ಸಿಪಿಯ ಛಗನ್ ಭುಜಬಲ್ ಅವರು ಒಬಿಸಿ ಸಮುದಾಯದ ಮುಖವಾಗಿದ್ದು, ಈ ಸನ್ನಿವೇಶವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಸಾಧ್ಯವಾಷ್ಟು ಪ್ರಯತ್ನ ಮಾಡಿದ್ದಾರೆ. ನಿರುದ್ಯೋಗದ ಸಮಸ್ಯೆ ಎಲ್ಲಾ ವಲಯಗಳಲ್ಲೂ ಇದ್ದೇ ಇದೆ. ನಗರಪ್ರದೇಶದ ಕ್ಷೇತ್ರಗಳ ಹೆಚ್ಚಿನ ಭಾಗ ಬಿಜೆಪಿಗೆ ಬೆಂಬಲ ನೀಡಿದಂತೆ ಕಂಡುಬಂದರೂ, ಗ್ರಾಮೀಣ ಭಾಗದ ಮತದಾರ ಬಿಜೆಪಿಯಿಂದ ಬಹಳ ದೂರ ಸರಿದಿದ್ದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್‍ಗೆ ಗಟ್ಟಿಯಾದ ನಾಯಕತ್ವ ಇಲ್ಲದಿರುವುದು ಹಾಗೂ ಮೈತ್ರಿ ಮಾಡಿಕೊಳ್ಳುವಲ್ಲಿ ಇತರ ಪಕ್ಷಗಳೊಂದಿಗೆ ಸರಿಯಾಗಿ ಕೋ-ಆರ್ಡಿನೇಟ್ ಮಾಡುವಲ್ಲಿ ಸಫಲಾಗಿಲ್ಲ ಹಾಗಾಗಿ ಮಹಾರಾಷ್ಟ್ರದ ರಾಜಕೀಯದಲ್ಲಿ ಶರದ್ ಪವಾರ್ ಮತ್ತು ಅವರ ಎನ್‍ಸಿಪಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಮುನ್ನೋಟ
ಸಂಖ್ಯೆಗಳನ್ನಷ್ಟೇ ನೋಡಬೇಕೆಂದರೆ, ಬಿಜೆಪಿ-ಶಿವಸೇನೆಯ ಸಂಖ್ಯೆ 30ಕ್ಕಿಂತ ಕೆಳಗಿಳಿಯಲಿದೆ ಹಾಗೂ ಕಾಂಗ್ರೆಸ್-ಎನ್‍ಸಿಪಿ 20ನ್ನು ಕ್ರಾಸ್ ಮಾಡಬಹುದಾಗಿದೆ. ಈ ಚುನಾವಣೆಯಲ್ಲಿ ಜನರ ಪ್ರಮುಖ ವಿಷಯಗಳು ಹಿನ್ನೆಲೆಗೆ ಸರಿದಿದ್ದಂತೂ ಸ್ಪಷ್ಟ. ಬಿಜೆಪಿ-ಶಿವಸೇನೆ ಮೈತ್ರಿಕೂಟವು ಹಿಂದುತ್ವ ಮತ್ತು ರಾಷ್ಟ್ರೀಯ ಸುರಕ್ಷತೆಯ ಮೇಲೆಯೇ ತನ್ನ ರಾಜಕೀಯವನ್ನು ಕೇಂದ್ರೀಕರಿಸಿದರೆ, ಕಾಂಗ್ರೆಸ್-ಎನ್‍ಸಿಪಿ ಕೂಟವು, ಎಮ್‍ಎನ್‍ಎಸ್‍ನ ಸಹಾಯದೊಂದಿಗೆ ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟನ್ನು ಮುನ್ನೆಲೆಗೆ ತರಲು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇಷ್ಟೆಲ್ಲಾ ಹೇಳಿದ ನಂತರವೂ, ಜನಾದೇಶದ ಮತ್ತು ರಾಜಕೀಯ ವಾತಾವರಣದ ಸ್ಪಷ್ಟ ಸೂಚನೆಗಳು ಕಾಣುತ್ತಿಲ್ಲವಾದುದರಿಂದ ಮಹಾರಾಷ್ಟ್ರದ ಭವಿಷ್ಯ ನಿಂತಿರುವುದು ಅಸ್ಥಿರವಾದ ನೆಲದ ಮೇಲೆಯೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...