43 ವರ್ಷದ ಮೇಡಂ ಜೆಎನ್‌ಯುನಲ್ಲಿ ಕಲಿಯುತ್ತಿದ್ದಾರೆ. ಆಶ್ಚರ್ಯವೆಂದರೆ ಆಕೆಯೂ ಮಗಳೂ ಕೂಡ ಅಲ್ಲಿಯ ವಿದ್ಯಾರ್ಥಿನಿ! ನಿಜವೇನು?

ಫ್ಯಾಕ್ಟ್‌ಚೆಕ್‌

ಖಾತ್ಯ ವಿಶ್ವವಿದ್ಯಾಲಯ ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ದಾಖಲಾತಿ ಶುಲ್ಕ 300% ಹೆಚ್ಚಳದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಶುಲ್ಕ ಹೆಚ್ಚಳದ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿ ಒಂದು ವಾರದಿಂದ ನಿರಂತರವಾಗಿ ಧೀರೋದಾತ್ತ ಹೋರಾಟ ನಡೆಸುತ್ತಿದ್ದಾರೆ. ಅವರನ್ನು ದಮನ ಮಾಡಲು ಪೊಲೀಸರು ಹಿಂಸೆಗಿಳಿದಿದ್ದಾರೆ.

ಇಂತಹ ಸಮಯದಲ್ಲಿ “43 ವರ್ಷದ ಮೇಡಂ ಜೆಎನ್‌ಯುನಲ್ಲಿ ಕಲಿಯುತ್ತಿದ್ದಾರೆ. ಆಶ್ಚರ್‍ಯವೆಂದರೆ ಆಕೆಯ ಮಗಳೂ ಕೂಡ ಅಲ್ಲಿಯ ವಿದ್ಯಾರ್ಥಿನಿ!” ಎಂಬ ಸಂದೇಶ ಮತ್ತು ಒಬ್ಬರ ಫೋಟೊ ವೈರಲ್ ಆಗಿದೆ. ಆ ಮೂಲಕ ವಿದ್ಯಾಭ್ಯಾಸ ಮುಗಿದರೂ ಸಹ ಜೆಎನ್‌ಯುನಲ್ಲಿ ಉಳಿದಿದ್ದಾರೆ ಎಂಬ ಭಾವನೆ ಮೂಡಿಸಲು ಮುಂದಾಗಿದ್ದಾರೆ.

ಬಿಜೆಪಿ ಐಟಿ ಸೆಲ್‌ನ ರಂಜಿತ್ ಜಾ ಎಂಬುವವರು ಮೊದಲು ಇದನ್ನು ಪೋಸ್ಟ್ ಮಾಡಿದ್ದು 3500ಕ್ಕೂ ಹೆಚ್ಚು ಜನ ಷೇರ್ ಮಾಡಿದ್ದಾರೆ. ಅಲ್ಲದೇ ಹಲವಾರು ಪೇಜ್‌ಗಳಲ್ಲಿ ಈ ಸುದ್ದಿ ಹರಿದಾಡಿದೆ.

ನಿಜವೇನು?

ಆದರೆ ಸತ್ಯ ಏನೆಂದರೆ ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ನವೆಂಬರ್ 15ರಂದು ಝೀ ನ್ಯೂಸ್‌ನವರು ಹೋರಾಟವನ್ನು ವರದಿ ಮಾಡಲು ಜೆಎನ್‌ಯು ಕ್ಯಾಂಪಸ್ಸಿಗೆ ಹೋದಾಗ ಅಲ್ಲಿ ಗೋದಿ ಮೀಡಿಯಾ, ಮಾರಿಕೊಂಡ ಮಾಧ್ಯಮಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದರು. ಗೋ ಬ್ಯಾಕ್ ಝೀ ನ್ಯೂಸ್ ಎಂದು ಘೋಷಣೆ ಕೂಗಿ ಕ್ಯಾಂಪಸ್ ಒಳಗೆ ಕಾಲಿಡದಂತೆ ತಡೆದರು. ಅದರಲ್ಲಿ ಒಬ್ಬಾಕೆ ಜೋರಾಗಿ ಘೋಷಣೆ ಕೂಗುತ್ತಿದ್ದಳು. ಆಕೆಯ ಹೆಸರು ಶಾಂಭವಿ ಸಿದ್ದಿ ಆಗಿದ್ದು ಅವರ ವಯಸ್ಸು ಕೇವಲ 23. ಫ್ರೆಂಚ್‌ ವಿಭಾಗದಲ್ಲಿ ಆಕೆ ಎಂಎ ಓದುತ್ತಿದ್ದಾಳೆ. ಆಕೆಯನ್ನೇ ಟಾರ್ಗೆಟ್ ಮಾಡಿದ ಕೆಲವರು ಆ ಫೋಟೊವನ್ನೇ ಬಳಸಿ 43 ವರ್ಷದ ಮಹಿಳೆ ಎಂದು ಸುಳ್ಳು ಹಬ್ಬಿಸಿದ್ದಾರೆ ಅಷ್ಟೇ.

ಈ ಕೆಳಗಿನ ವಿಡಿಯೋದಲ್ಲಿ 2.57 ನಿಮಿಷದಲ್ಲಿ ಆಕೆಯ ಘೋಷಣೆ ಕೂಗುವುದು ಕಾಣುತ್ತದೆ ನೋಡಿ.

43 ವರ್ಷವಾದರೂ ಜೆಎನ್‌ಯು‌ನಲ್ಲಿ ಯಾಕಿರಬೇಕು ಎಂದು ಪ್ರಶ್ನಿಸುವ ಮೂಲಕ ಹಾಸ್ಟೆಲ್‌ ಶುಲ್ಕ ಹೆಚ್ಚಳದ ಹೋರಾಟವನ್ನು ದಿಕ್ಕುತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಇದು ಮಾತ್ರವಲ್ಲದೇ ಇನ್ನು ಹತ್ತಾರು ಫೋಟೊಶಾಪ್‌ ಮಾಡಿದ ಕೆಟ್ಟ ಚಿತ್ರಗಳ್ನನು ಹಾಕಿ ಇದು ಜೆಎನ್‌ಯು ಎಂದು ಹೇಳುವು ಮೂಲಕ ತಪ್ಪು ಸಂದೇಶ ಹರಡುತ್ತಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here