Homeಅಂತರಾಷ್ಟ್ರೀಯ40 ಟನ್ ತೂಕವಿರುವ ಬೃಹತ್ ಲಾರಿಯೊಂದನ್ನು 2000 ದ್ರೋನ್‌ಗಳು ಎತ್ತಿಕೊಂಡು ಹಾರಬಹುದೇ? ವಿಡಿಯೋ ನೋಡಿ

40 ಟನ್ ತೂಕವಿರುವ ಬೃಹತ್ ಲಾರಿಯೊಂದನ್ನು 2000 ದ್ರೋನ್‌ಗಳು ಎತ್ತಿಕೊಂಡು ಹಾರಬಹುದೇ? ವಿಡಿಯೋ ನೋಡಿ

- Advertisement -
- Advertisement -

World of Engineering ಎನ್ನುವ ಟ್ವಿಟ್ಟರ್ ಹ್ಯಾಂಡಲ್‌ನಿಂದ “40 ಟನ್ ತೂಕವಿರುವ ಬೃಹತ್ ಲಾರಿಯೊಂದನ್ನು 2000 ದ್ರೋನ್‌ಗಳು ಎತ್ತಿಕೊಂಡು ಹಾರಬಹುದೇ? ಕ್ರೆಡಿಟ್ ಟು ಸ್ಕ್ಯಾನಿಯ ಗ್ರೂಪ್ ಎಂಬ ತಲೆಬರಹದೊಂದಿಗೆ ಸಾವಿರಾರು ದ್ರೋನ್‌ಗಳು ಭಾರೀ ಲಾರಿಯೊಂದನ್ನು ಎತ್ತುವ 10 ಸೆಕೆಂಡ್‌ಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 80 ಸಾವಿರ ಜನ ಅದನ್ನು ನಂಬಿ ಲೈಕ್ ಮಾಡಿದ್ದಾರೆ.

ಸ್ಕ್ಯಾನಿಯ ಅತ್ಯಾಧುನಿಕ ತಂತ್ರಜ್ಞಾನದ ವಾಹನ ತಯಾರಿಕ ಕಂಪನಿಯಾಗಿದೆ. ಹಾಗಾಗಿ ಜನ ಈ ಸುದ್ದಿಯನ್ನು ನಿಜವೆಂದು ನಂಬಿದ್ದಾರೆ. ಸ್ಕ್ಯಾನಿಯ ಕಂಪನಿಯ ಉದ್ಯೋಗಿಯೊಬ್ಬರು ಇದೇ ರೀತಿಯ ವಿಡಿಯೋವನ್ನು ಷೇರ್ ಮಾಡಿದ್ದಾರೆ. 13 ಲಕ್ಷಕ್ಕೂ ಹೆಚ್ಚು ಜನ ಆ ವಿಡಿಯೋ ನೋಡಿದ್ದಾರೆ. ಆ ಕಂಪನಿಯ ಯೂಟೂಬ್‌ನಲ್ಲಿ ಇದೇ ಮಾದರಿಯ ವಿಡಿಯೋ ಸಹ ಇದೆ.

ಆದರೆ ಈ ಸುದ್ದಿ ನಿಜವಲ್ಲ. ಕಂಪನಿಯ ಪುಟದ ಕೊನೆಯಲ್ಲಿ ಫ್ಯುಚರ್ ರೂಂ ಎಂಬ ವೆಬ್‌ಸೈಟ್ ಇದೆ. ಈ ಎಲ್ಲಾ ವಿಡಿಯೋಗಳಿಗೂ ಅದೇ ಆಧಾರವಾಗಿದ್ದು ಅದರಲ್ಲಿ ಈ ವಿಡಿಯೋಗಳು ಭವಿಷ್ಯದಲ್ಲಿ ನಮ್ಮ ಕಲ್ಪನೆ ಹೇಗಿದೆ ಎಂಬುದನ್ನು ತಿಳಿಸುವ ವಿಡಿಯೋಗಳೇ ಹೊರತು ಪ್ರಸ್ತುತ ಇರುವ ತಂತ್ರಜ್ಞಾನವಲ್ಲ ಎಂದು ಬರೆದುಕೊಂಡಿದೆ. ಅಂದರೆ ಈ ಸುದ್ದಿ ಸುಳ್ಳು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...