Homeಅಂಕಣಗಳುಸಾಣೆಹಳ್ಳಿ ಶ್ರೀಗಳು ಸರಿಯಾದವರಿಗೆ ಪ್ರಶಸ್ತಿ ಕೊಡಿ ಎಂದರಲ್ಲಾ..

ಸಾಣೆಹಳ್ಳಿ ಶ್ರೀಗಳು ಸರಿಯಾದವರಿಗೆ ಪ್ರಶಸ್ತಿ ಕೊಡಿ ಎಂದರಲ್ಲಾ..

- Advertisement -
- Advertisement -

| ಯಾಹೂ |

ಹಾದರಕ್ಕೆ ಹುಟ್ಟಿದವರು ಯಾರಿಗೂ ಬೇಡವಾಗಿ ಅನಾಥಾಶ್ರಮ ಸೇರುವಂತೆ, ಅಡ್ನಾಡಿ ಕುಮಾರಣ್ಣನ ಕೊಟ್ಟಿಗೆಯಿಂದ ಕುಲಗೇಡಿ ಎಡೂರಪ್ಪನ ದೊಡ್ಡಿ ಸೇರಿದ್ದ ಅನರ್ಹ ಶಾಸಕರು ಈಗ ಎಡೂರಪ್ಪನಿಗೂ ಬೇಡವಾಗಿದ್ದಾರಂತಲ್ಲಾ. ಬಿಜೆಪಿ ಹುಟ್ಟಿದ ಕಾಲದಿಂದಲೂ ಅವುಗಳ ಹುಟ್ಟುಗುಣವೇನೆಂದರೆ, ನಂಬಿಸಿ ಮೋಸ ಮಾಡುವುದು. ನಿಮ್ಮ ಆಸ್ತಿ ನೋಡಿ ಹತ್ತಿರ ಬರುತ್ತವೆ. ಅದು ಖಾಲಿಯಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತವೆ. ನಿಮ್ಮ ಖ್ಯಾತಿಯನ್ನು ನೋಡಿ ಹತ್ತಿರ ಬರುತ್ತವೆ. ಅಪಖ್ಯಾತಿ ಅಂಟಿಸಿ ಮಾಯವಾಗುತ್ತವೆ. ನಿಮ್ಮ ತುಂಬಿದ ಜೇಬನ್ನು ಗ್ರಹಿಸಿ ಜೊತೆಯಾಗುತ್ತವೆ. ಖಾಲಿ ಜೇಬಾದ ಕೂಡಲೇ ಮಾತು ಬಿಡುತ್ತವೆ. ಹಾದರ ಮಾಡುತ್ತವೆ ಪಾತಿವ್ರತ್ಯ ಬೋಧಿಸುತ್ತವೆ. ಭ್ರಷ್ಟ ಕೆಲಸ ಮಾಡುತ್ತಲೇ ಪ್ರಾಮಾಣಿಕತೆ ಬೋಧಿಸುತ್ತವೆ. ಪಾರ್ಟಿ ನಿಷ್ಠೆ ಬೋಧಿಸುತ್ತವೆ. ಬೇರೆ ಪಾರ್ಟಿಯಿಂದ ಬಾಡಿಗಳನ್ನ ಯಾಮಾರಿಸುತ್ತವೆ. ಈಗ ಸಂದಿಗ್ಧಕ್ಕೆ ಸಿಕ್ಕ ಇಂತಹ ಬಾಡಿಗಳು ಎಡೂರಪ್ಪನ ಮಾತಿಂದ ಯಕ್ಕ ಎದ್ದು ಹೋಗಲಿವೆಯಂತಲ್ಲಾ. ಎಡೂರಪ್ಪನ ಅಂತಹ ಮಾತೇನು ಎಂದರೆ, ಅನರ್ಹ ಶಾಸಕರಿಗೂ ನಮಗೂ ಯಾವ ಸಂಬಂಧವೂ ಇಲ್ಲ. ಅವರು ಎಲ್ಲಿಗಾದರೂ ಹೋಗಲಿ. ಯಾವ ಪಕ್ಷವನ್ನಾದರೂ ಸೇರಲಿ ಎಂಬುದಾಗಿದೆಯಲ್ಲ. ನಂಬಿಕೆದ್ರೋಹವೆಂದರೆ ಇದೇ ಅಲ್ಲವೆ, ಥೂತ್ತೇರಿ.

ಬಿಜೆಪಿಗಳ ಆಮಿಷ ಮತ್ತು ಕುತಂತ್ರಗಳಿಗೆ ಬಗ್ಗದ ಡಿ.ಕೆ. ಶಿವಕುಮಾರ್ ಇಡಿ ಟ್ರೀಟ್‌ಮೆಂಟುಗಳಿಗೆ ಒಳಗಾಗಿ ಜೈಲುವಾಸ ಅನುಭವಿಸಿ ಬಂದಾಗ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಿಕ್ಕ ಭವ್ಯ ಸ್ವಾಗತ ನೋಡಿದ ಬಿಜೆಪಿಗಳು ಅಪರಾಧ ಮಾಡಿಬಂದವರನ್ನು ಹೀಗೆ ಸ್ವಾಗತಿಸುವುದೆ ಎಂದು ಉದ್ಘಾರ ತೆಗೆದವಲ್ಲಾ. ತಮ್ಮನ್ನು ತಾವು ಎಂದೂ ಬಗ್ಗಿ ನೋಡಿಕೊಳ್ಳದ ಚೆಡ್ಡಿಗಳು ತಮ್ಮವರು ಮಾಡಿದ ಎಲ್ಲ ಅಪರಾಧಗಳ ಸಮಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿವೆ. ಕೊಲೆಗಾರರು ಬಿಡುಗಡೆಯಾದಾಗ, ವಿಜಯೋತ್ಸವ ಆಚರಿಸಿವೆ. ಗಾಂಧಿ ಕೊಂದವನಿಗೆ ಗುಡಿ ಕಟ್ಟಲು ಹೊರಟಿವೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಜೈಲಿಗೆ ಹೋಗಿ ಬಂದ ಎಡೂರಪ್ಪನನ್ನು ಕಂಡ ಕೂಡಲೇ ಲಾಗಾ ಹೊಡೆದಿದ್ದವು. ಆಗ ಮನೆಗೆ ಬಂದ ಎಡೂರಪ್ಪನನ್ನ ನೋಡಿದ ಅವರ ಮೊಮ್ಮಗಳು ’ತಾತ ಜೈಲಿಂದ ಬಂತು ತಾತ ಜೈಲಿಂದ ಬಂತು’ ಎಂದು ಕೂಗಿಕೊಂಡಿತ್ತು. ಸಂಬಂಧಿಕರು ಸುಮ್ಮನಿರಿಸಲು ಯತ್ನಿಸಿದರೂ ಮಗು ಮುಗಿಲು ಮುಟ್ಟುವಂತೆ ಕೂಗುತ್ತ ಸಂಭ್ರಮಿಸಿತಂತಲ್ಲಾ ಥೂತ್ತೇರಿ.

ರಾಜ್ಯೋತ್ಸವದಂದು ಕೊಡಮಾಡುವ ಪ್ರಶಸ್ತಿಗಳನ್ನು ಫಲಾನುಭವಿಗಳು ಪಡೆದಾಗಿದೆ. ಇನ್ನೇನಿದ್ದರೂ ಸರಕಾರದ ಚೆಕ್ಕುಗಳು ಕ್ಯಾಷಾಗಬೇಕಷ್ಟೆ. ಇಂತಿರುವಾಗ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಪ್ರಶಸ್ತಿಗಳನ್ನ ಕೊಡುವಾಗ ವ್ಯಕ್ತಿಯ ನೈತಿಕ ಜೀವನ ಅಳೆದುಕೊಡಬೇಕೆಂದು ಹೇಳಿದ್ದಾರಲ್ಲಾ. ಈ ಮಾತಿನ ಜಾಡನ್ನ ಹಿಡಿದು ನೋಡಿದಾಗ, ಸಿದ್ಧರಾಮಯ್ಯನವರ ಸರಕಾರ ನೇಮಿಸಿದ ನಾಗಮೋಹನದಾಸ್ ರಚಿಸಿ ಕೊಟ್ಟ ಗೈಡ್‌ಲೈನಿನ ಗಡಿ ಮೀರಿದಂತೆ ಕಾಣುತ್ತಿದೆಯಲ್ಲಾ. ಇದಕ್ಕೆ ಸಾಕ್ಷಾಧಾರವಾಗಿ, ಆಯ್ಕೆ ಕಮಿಟಿಯಲ್ಲಿದ್ದ ನಿರುಪಮಾ ಎಂಬುವವರು ನಾನು ಹಗಲುರಾತ್ರಿ ಎಡೂರಪ್ಪನ ಮನೆಗೂ ಸಿ.ಟಿ. ರವಿ ಮನೆಗೂ ಓಡಾಡಿ ಐದು ಜನರಿಗೆ ಪ್ರಶಸ್ತಿ ಕೊಡಿಸಿದೆ ಎಂದಿದ್ದಾರಲ್ಲಾ. ನಿಜಕ್ಕೂ ಇದೊಂದು ಧೀರೋದಾತ್ತ ಸಾಹಸ. ಮುಖ್ಯಮಂತ್ರಿ, ಸಂಸ್ಕೃತಿ ಸಚಿವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಮಿಟಿ ಮೀರಿ ಐದು ಜನರಿಗೆ ಪ್ರಶಸ್ತಿ ಕೊಡಿಸಿದ ನಿರುಪಮಾ ಖಂಡಿತ ನಿರುಪಯುಕ್ತ ಮಹಿಳೆಯಲ್ಲ. ಮುಂದಿನ ವರ್ಷ ಪ್ರಶಸ್ತಿ ಬೇಕಾದವರು ನಿರುಪಮಾನನ್ನು ಹಿಡಿದು ನಿಯತ್ತಿನಿಂದ ನೋಡಿಕೊಂಡರೆ, ನಿಮಗೂ ಪ್ರಶಸ್ತಿ ಗ್ಯಾರಂಟಿ ಎಂದು ಫಲಾನುಭವಿಗಳು ಹೇಳಿಲ್ಲವಂತಲ್ಲಾ, ಥೂತ್ತೇರಿ.

ತನಗೇನೇ ಇನ್ನೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ ಎಂದು ಪ್ರತಿಭಟಿಸಿದ ಸತ್ಯನಾರಾಯಣ ಎಂಬ ಆಸಾಮಿ, ಸರಕಾರಕ್ಕೆ ತರಾಟೆ ತೆಗೆದುಕೊಂಡಿದ್ದಲ್ಲದೆ, ಕೋರ್ಟಿಗೂ ಹೋಗಿದ್ದರಲ್ಲಾ. ಆ ಕಾರಣವಾಗಿ ನಾಗಮೋಹನ ದಾಸ್ ಕಮಿಟಿ ನೇಮಕವಾಗಿ ಪ್ರಶಸ್ತಿ ಸಂಖ್ಯೆ ರಾಜ್ಯೋತ್ಸವ ವರ್ಷದ ಸಂಖ್ಯೆಗೆ ಇಳಿದಿದ್ದು ಮತ್ತು ಅರವತ್ತು ವರ್ಷ ತುಂಬಿರಬೇಕೆಂಬ ನಿಯಮ ಬಂದಿದ್ದು. ಇದಿಲ್ಲದಿದ್ದರೆ, ಈ ಬಿಜೆಪಿಗಳು ಪ್ರತಿ ಜಿಲ್ಲೆಯ ಕನಿಷ್ಟ ಹತ್ತು ಚಡ್ಡಿಗಳಿಗೆ ಪ್ರಶಸ್ತಿ ಕೊಟ್ಟು ಗಬ್ಬೆಬ್ಬಿಸುತ್ತಿದ್ದರು. ಕಳೆದ ಬಾರಿ ಪ್ರಶಸ್ತಿ ವಿಜೇತರ ಪಟ್ಟಿ ತರಿಸಿಕೊಂಡ ಡಿ.ಕೆ. ಶಿವಕುಮಾರ್, ಅತ್ಯಂತ ಯೋಗ್ಯರಾದ ಹತ್ತು ಜನರನ್ನು ತೆಗೆದು ಬಿಸಾಡಿ, ತನ್ನ ಕಡೆಯ ಹತ್ತು ಹೆಸರನ್ನ ಸೇರಿಸಿ ಪ್ರಕಟಿಸಿದ್ದರು. ಇದರಲ್ಲಿ ರಸ್ತೆ ಮಾಡಿದವರು, ಡಿಕೆಶಿಗೆ ಪಾಠ ಹೇಳಿದವರು ಇದ್ದರು. ಈಗ ಸಿ.ಟಿ. ರವಿ ಇನ್ನೂ ಮುಂದೆಹೋಗಿ ತನಗೆ ಹೊಟೇಲಿನಲ್ಲಿ ರೂಮು ಕೊಟ್ಟವನಿಗೊಂದು ಪ್ರಶಸ್ತಿ ಕೊಟ್ಟಿದ್ದಾನಂತಲ್ಲ. ಮುಂದಿನ ವರ್ಷ ರವಿ ಹೆಂಡತಿಯನ್ನು ತುಂಬಾ ಸಮಾರಂಭಗಳಿಗೆ ಅತಿಥಿಯಾಗಿ ಕರೆದವನನ್ನು ಕರೆದು ರಾಜ್ಯೋತ್ಸವ ಪ್ರಶಸ್ತಿ ಕೊಡುವುದು ಗ್ಯಾರಂಟಿ ಎಂದು ಚಿಕ್ಕಮಗಳೂರು ಜನ ಚಿಕ್ಕದಾಗಿ ಬಾಯಿ ತೆರೆದು ದೊಡ್ಡದಾಗಿ ನಕ್ಕರಂತಲ್ಲಾ, ಥೂತ್ತೇರಿ.

ಹಾಗೆ ನೋಡಿದರೆ ಸಾಣೆಹಳ್ಳಿ ಶ್ರೀಗಳು ಹೇಳಿದ್ದಕ್ಕೆ ಸಾಕ್ಷಾಧಾರಗಳು ದಾವಣಗೆರೆ ಜಿಲ್ಲೆಯಲ್ಲೇ ಸಿಗುತ್ತದಂತಲ್ಲಾ. ದಾವಣಗೆರೆ ಜಿಲ್ಲೆಯ ಚನ್ನಪ್ಪನವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಸದಾ ಸಮಾಜ ಸೇವೆಗಾಗಿ ದುಡಿಯುವ ಚನ್ನಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಎಂದೊ ಹುಡುಕಿಕೊಂಡು ಬರಬೇಕಿತ್ತು. ಈ ಚೆನ್ನಪ್ಪನವರ ಸಮಾಜ ಸೇವೆಯಲ್ಲಿ ಪ್ರಶಸ್ತಿಗೆ ಯೋಗ್ಯವಾದ ಸಾಧನೆಯಾವುದೆಂದರೆ, ಯಾರದ್ದೊ ಮನೆಯಲ್ಲಿ ಸಂತಾನಭಾಗ್ಯವಿಲ್ಲ. ಆಗ ಹೋರಿ ಕರುವಿನಂತೆ ಓಡಾಡುತ್ತಿದ್ದ ಚನ್ನಪ್ಪನನ್ನು ಕರೆದ ಅಜ್ಜಿ ’ಚನ್ನಪ್ಪ ನನ್ನ ಮೊಮ್ಮಗಳಿಗೆ ಮಗು ಇಲ್ಲ ಕಣಪ್ಪ. ಅದರ ಹೊಟ್ಟೇಲಿ ಯಂತದಾರ ಹುಳ ನೋಡಿ ಸಾಯಬೇಕು ಅನ್ನಿಸಿದೆ. ಮಾಡಿಕೊಡಪ್ಪ’ ಎಂದಿತಂತೆ. ಕರಗಿಹೋದ ಚನ್ನಪ್ಪ ನಮ್ಮ ಎಸ್ಸೆಲ್ ಭೈರಪ್ಪ ಹೇಳಿದಂತಹ ನಿಯೋಗ ಸಾಧನೆಯಿಂದ ಅಜ್ಜಿ ಮನೆ ವಂಶ ಬೆಳೆಸಿದರಂತೆ. ಇದನ್ನು ನಾವು ಚನ್ನಪ್ಪನವರ ಆತ್ಮಕತೆಯಿಂದ ತೆಗೆದು ದಾಖಲಿಸುತ್ತಿದ್ದೇವೆಯೇ ಹೊರತು, ನಮ್ಮ ಕಿಡಿಗೇಡಿತನದಿಂದಲ್ಲ. ಅಂತೂ ಚಡ್ಡಿಗಳು ಹಂಚುವ ಪ್ರಶಸ್ತಿಗಳು ಚೆಡ್ಡಿ ಸಮಸ್ಯೆಯನ್ನು ಪರಿಗಣಿಸುತ್ತಿವೆಯಲ್ಲಾ, ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...