Homeಅಂಕಣಗಳುಆಘಾತವಾಣಿ | ವೃದ್ಧಕೋಣದ ಮೂಗಿಗೆ ಹಗ್ಗ ಹಾಕುವ ಆಟ

ಆಘಾತವಾಣಿ | ವೃದ್ಧಕೋಣದ ಮೂಗಿಗೆ ಹಗ್ಗ ಹಾಕುವ ಆಟ

- Advertisement -
- Advertisement -

ಅಟ್ಯಾಕ್ ಹನ್ಮಂತ |

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ. ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ.

ಮಿಷಿನ್ 150, ಮಿಷಿನ್ 150 ಎಂದು ಹೋದಲ್ಲಿ ಬಂದಲ್ಲಿ ಊಳಿಡುತ್ತಿದ್ದ ಬಿಜೇಪೀಪಿ ಪಕ್ಷದ ಧಡಿಯೂರಪ್ಪನ ಮುಸುಡಿಗೆ ಕರ್ನಾಟಕದ ಮತದಾರರು ಎಗರಿಸಿ ಎಡಗಾಲಲ್ಲಿ ಒದ್ದಿರುವ ಸುದ್ದಿ ಇದೀಗಷ್ಟೇ ಲಭ್ಯವಾಗಿದೆ. 150 ಮಿಷೀನು ಅಡ್ಡಡ್ಡ ಮಲಗಿಕೊಂಡು 104 ಸೀಟುಗಳನ್ನ ಮಾತ್ರ ಗೆಲ್ಲಲು ಶಕ್ತವಾದ ಧಡಿಯೂರಪ್ಪನ ಗೋಳಾಟ ಚಾಮರಾಜಪೇಟೆ ಸ್ಮಶಾಣದವರೆಗೂ ತಲುಪಿದೆ. ಅಲ್ಲೇ ಸ್ಮಶಾಣದ ಪಕ್ಕದಲ್ಲಿ `ಹೇ ಶವ ಕೃಪ’ ಎಂಬ ಲಡಾಸು ಮುದುಕರ ಅನಾಥಾಶ್ರಮದಲ್ಲಿ ಚೌಕಾಬಾರ ಆಡುತ್ತಿದ್ದ ಕಂತ್ರಿ-ಕುತಂತ್ರಿಗಳಿಗೂ ಹಾರ್ಟ್ ಅಟ್ಯಾಕ್ ಆಗಿ, ಜೈ ಶ್ರೀಮಾಮ್ ಎಂಬ ಉದ್ಘೋಷದೊಂದಿಗೆ ತಲೆತಿರುಗಿ ಬಿದ್ದಿದ್ದಾರೆಂದು ಬ್ರೇಕಿಂಗ್ ನ್ಯೂಸ್ ಲಭ್ಯವಾಗಿದೆ.

* * * * *

ಬಡವರ ಪರವಾದ ಹತ್ತಾರು ಯೋಜನೆಗಳನ್ನು ಕೊಟ್ಟು, ಸಮಾಜವಾದದ ಆಲದಮರದಂತೆ ಗಟ್ಟಿಯಾಗಿ ನಿಂತಿದ್ದ ಶಿದ್ರಾಮಯ್ಯನ ಪಾರ್ಟಿಗೂ ಈ ಚುನಾವಣೆಯಲ್ಲಿ ಜನರ ಆಶೀರ್ವಾದ ಅರ್ಧಕ್ಕರ್ಧ ಸಿಕ್ಕಿರುವುದು ಆಶ್ಚರ್ಯ ಹುಟ್ಟಿಸಿದೆ. ಎತ್ತಲೂ ಇಲ್ಲದಂತೆ ಇರೋ ಮೂರು ಪಾರ್ಟಿಗಳಿಗೂ ಇಷ್ಟಿಷ್ಟು ಎಂದು ಓಟು ಹಂಚಿರುವ ಮತದಾರರ ಪ್ಲಾನು ಅಸಲಿಗೆ ಏನಾಗಿತ್ತೆಂಬುದು ಯಾರಿಗೂ ತಿಳಿಯದೆ ಎಲ್ಲರೂ ಅವರವರ ಸ್ವಂತ ತಲೆಯ ಮೇಲೆ ಅವರದ್ದೇ ಕೈ ಹೊತ್ತುಕೊಂಡು ಕುಂತಿರುವ ಸನ್ನಿವೇಶ ನಿರ್ಮಾಣವಾಗಿದೆ. ಆಗಿದ್ದಾಗಲೆಂದು ಕೈ ಪಾರ್ಟಿ ಮತ್ತು ದೊಡ್ಡಗೌಡರ ಪಾರ್ಟಿಯು ಫ್ರೆಂಡ್ಶಿಪ್ ಮಾಡಿಕೊಂಡು ಬಿಜೆಪೀಪಿ ಪಕ್ಷಕ್ಕೆ ಈ ಸಲ ಉಣ್ಣಬಾರದ್ದನ್ನು ಉಣ್ಣಿಸೋಣವೆಂದು ತೊಡೆ ತಟ್ಟಿ ನಿಂತ ಸಂದರ್ಭವೂ ಜನರಲ್ಲಿ ಆತಂಕಭರಿತ ಸಂತೋಷವನ್ನು ಹುಟ್ಟಿಸಿದೆ.

* * * * *

ನಾನು ಗೆದ್ದರೆ ಮೋದಿ ಗೆದ್ದಂತೆ, ನಾನು ಗೆದ್ದರೆ ಹಿಂದೂ ಗೆದ್ದಂತೆ, ನಾನು ಗೆದ್ದರೆ ಗುಡೇಮಾರನಳ್ಳಿ ಬಾರ್ ಸಪ್ಲೈಯರ್ ಯಂಕಟಣ್ಣ ಗೆದ್ದಂತೆ ಅಂತ ಕೂಗಾಡಿಕೊಂಡು ತಿರುಗುತ್ತಿದ್ದ ಚಿತ್ರನಟ ಗುಗ್ಗೇಶ್ ಚುನಾವಣೆಯಲ್ಲಿ ಮಕಾಡೆ ಮಲಗಿಕೊಂಡಿದ್ದಾರೆ. ಮೊದಲಿಗೆ ಕೈ ಪಕ್ಷದಲ್ಲಿದ್ದು ನಂತರ ವ್ಯಾಸೆಕ್ಟಮಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡು ಬಿಜೆಪೀಪಿಗೆ ಪಲ್ಟಿ ಹೊಡೆದಿದ್ದ ನಟ ಗುಗ್ಗೇಶ್ ಪೃಷ್ಠಕ್ಕೆ ಬೆಂಗಳೂರಿನ ಯಶವಂತಪುರದ ಮತದಾರರು ಹಾರೆಕೋಲು ಹೆಟ್ಟಿದ್ದಲ್ಲದೇ ಗಾಯಕ್ಕೆ ಬ್ಯಾಂಡೇಜನ್ನೂ ಹಾಕಿಸದೆ ಮನೆಗೆ ಕಳಿಸಿದ್ದಾರೆ. ಎಲ್ಲ ರಾಯರ ಆಶೀರ್ವಾದ ಅಂತ ತಮ್ಮ ಹೀನಾಯ ಸೋಲನ್ನು ಮಂತ್ರಾಲಯಕ್ಕೆ ಅರ್ಪಿಸಿರುವ ಗುಗ್ಗೇಶ್ ಸದ್ಯಕ್ಕೆ ಯಾರಿಗೂ ಮುಖ ತೋರಿಸುವುದು ಬೇಡವೆಂದು ಆಫಘನಿಸ್ಥಾನಕ್ಕೆ ಬೊಬ್ಬೆಯೆದ್ದ ಕಾಲುಗಳಲ್ಲಿ ಪಾದಯಾತ್ರೆ ಹೊರಟಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

* * * * *

ಗೋವಾ, ನಾಗಾಲ್ಯಾಂಡ್, ಮೇಘಾಲಯ, ಬಿಹಾರ ಇವೆಲ್ಲ ಕಡೆಗಳಲ್ಲಿ ಜುಜುಬಿ ಸೀಟು ಗೆದ್ದ ಬಿಜೆಪೀಪಿ ಪಕ್ಷವು ಒಬ್ಬನಿಗೇ ಹುಟ್ಟಿದ ಹಲ್ಕಾ ಆಟವಾಡಿ ಆ ರಾಜ್ಯಗಳಲ್ಲಿ ಸರ್ಕಾರ ರಚಿಸಿರುವುದನ್ನು ಮರೆತಂತೆ ಕಾಣುತ್ತಿದೆಯೆಂದು ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆಂಬ ಸುದ್ದಿ ಬಂದಿದೆ. ಅದೆಲ್ಲವನ್ನೂ ಮರೆತು, ಇದೀಗ ಕೈ ಮತ್ತು ತೆನೆಮಹಿಳೆ ಪಕ್ಷಗಳು ಒಟ್ಟಿಗೇ ಹೋಗುವುದನ್ನು ಸಹಿಸದ ಬಿಜೆಪೀಪಿ ಪಕ್ಷವು ಇದು ಹೊಲಸು ರಾಜಕೀಯ ಎಂದು ಅರಚಾಡುತ್ತಿದೆ. ಇದೇ ಹೊಲಸು ಸೆಗಣಿಯನ್ನು 4 ರಾಜ್ಯಗಳಲ್ಲಿ ಬಾಚಿಬಾಚಿ ತಿನ್ನುವಾಗ ಏನೂ ಅನ್ನಿಸದಿದ್ದ ಈ ಪಕ್ಷಕ್ಕೆ ಇದೀಗ ನಾಚಿಕೆ-ಮಾನ-ಮರ್ಯಾದೆಗಳು ಸಟಾರೆಂದು ನೆನಪಾಗಿರುವುದು ಜಗತ್ತಿನ 9ನೇ ಅದ್ಭುತ ಎಂದು ಭಾವೀ ಪ್ರಧಾನಿ `ಹುಚ್ಚ ಸಂಕಟ್’ ಅಳುತ್ತ ನುಡಿದಿದ್ದಾರೆ. ಈಗಿರುವ ಪಕೋಡೇಂದ್ರನನ್ನು ಕಿಡ್ನಾಪ್ ಮಾಡಿ ಅರಬ್ಬೀಸಮುದ್ರದಲ್ಲಿ ಬಚ್ಚಿಟ್ಟು ತಾನೇ ಪ್ರಧಾನಿಯಾಗುತ್ತೇನೆಂದು ಹೊರಟಿರುವ ಹುಚ್ಚ ಸಂಕಟ್ ಅವರ ಗೋಳಾಟಕ್ಕೆ ನಾಡಿನ ಎಲ್ಲ ಮಾನಸಿಕ ಅಸ್ವಸ್ಥರೂ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.

* * * * *

ತಾನು ಈ ಬಾರಿ ಮುಖ್ಯಮಂತ್ರಿಯಾಗದೆ ಇದ್ದರೆ ನಿನ್ನ ಬುರುಡೆಗೆ ನನ್ನ ಬುರುಡೆಯನ್ನು ಜಜ್ಜಿ ಜಜ್ಜಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿದ ಧಡಿಯೂರಪ್ಪನನ್ನು ಸಂಭಾಳಿಸುವುದು ಹೇಗೆಂದು ತಿಳಿಯದೆ ಬಿಜೆಪೀಪಿ ಪಕ್ಷದ ಏಕೈಕ ಕುಮಾರಿ ಕೋಭಾ ಶರಂದ್ಲಾಜೆಯವರು ಚಿಂತೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೇ ದುಃಖದಲ್ಲಿ ತನ್ನ ಸಂಕಟವನ್ನು ಚೀಟಿ ರವಿ ಜೊತೆಗೆ ವಾಟ್ಸಾಪ್ ಚಾಟ್ ಮಾಡುವಾಗ ಚೀಟಿ ರವಿಯು `ಚಿಂತೆ ಮಾಡಬೇಡ, ನಾನಿದ್ದೇನೆ… … …’ ಎಂದು ಕೋಭಕ್ಕನಿಗೆ ಪ್ರಾಮಿಸ್ ಮಾಡಿರುವುದು ಬಯಲಾಗಿದೆ. ಈ ವಾಟ್ಸಾಪ್ ಚಾಟ್‍ನ ಸ್ಕ್ರೀನ್ ಶಾಟನ್ನು ಯಾರೋ ದುರುಳರು ಧಡಿಯೂರಪ್ಪನಿಗೆ ಕಳಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

* * * * *

ಬಿಜೆಪೀಪಿಯ ವಯೋವೃದ್ಧ ಕೋಣದಂತಿರುವ ಗುಜರಾತಿ ಗುಜ್ಜೂವಾಲಾನನ್ನು ವ್ಯಾಜ್ಯಪಾಲನೆಂದು ಕರ್ನಾಟಕಕ್ಕೆ ಕುಕ್ಕರಿಸಿದ್ದ ಭಂಡಾಟ ಜನರ ಪಕ್ಷದವರು ಇದೀಗ ಅದೇ ವೃದ್ಧಕೋಣದ ಮೂಗಿಗೆ ಹಗ್ಗ ಹಾಕಿ ಕರ್ನಾಟಕದ ಗದ್ದುಗೆ ಹಿಡಿಯಲು ಮುಂದಾಗಿದ್ದಾರೆ. ಈ ಅವಕಾಶ ಕೈಜಾರಿ ಹೋಗಲು ಬಿಟ್ಟರೆ, ವೃದ್ದಾಪ್ಯದಲ್ಲಿ ಪುನರ್ವಸತಿ ಕಲ್ಪಿಸಿದ ತನ್ನವರ ಋಣ ತೀರಿಸಲು ಇದಕ್ಕಿಂತ ಸದಾವಕಾಶ ಈ ಜನ್ಮದಲ್ಲೇ ಮತ್ತೆ ಸಿಗುವುದಿಲ್ಲ ಎಂದು ಮನದಲ್ಲೇ ಲೆಕ್ಕ ಹಾಕಿದ ಈ ಗುಜ್ಜು ಋಣ ತೀರಿಸಲು ಮುಂದಾಗಿದ್ದಾರೆಂದು ವರದಿಯಾಗಿದೆ. ಇವರ ಒಳಮರ್ಮ ಏನೆಂದು ಹಿನ್ನೆಲೆ ಕೆದಕಿ ನೋಡಲಾಗಿ ಈ ಆಸಾಮಿಯ ಜಾತಕವೂ, ಜೈಲುಹಕ್ಕಿಗಳ ಬ್ಲೂಜೇಪಿಗಳ ಜಾತಕವೂ ಒಂದೇ ಆಗಿದೆಯೆಂಬ ಮಾಹಿತಿ ಲಭ್ಯವಾಗಿದೆ.

* * * * *

ತಾನು ನಡೆಸಿದ ಕೊಲೆಗಳ ವಿರುದ್ಧ ತೀರ್ಪು ಕೊಡಲು ಹೊರಟ ನ್ಯಾಯಾಧೀಶರನ್ನೇ ಕೊಂದು ಬಿಸಾಕಿದ ಆರೋಪ ಹೊತ್ತಿರುವ ಗುಜರಾತ್ ಮಾರ್ವಾಡಿ, ಹಳೇ ರೌಡಿ ಶೀಟರ್ `ಸುಮಿತ್ ಶಾ’ ಕುದುರೆಲದ್ದಿ ವ್ಯಾಪಾರ ಮಾಡಲು ಕರ್ನಾಟಕಕ್ಕೆ ಬರುತ್ತಿರುವ ಸುದ್ದಿ ತಿಳಿದುಬಂದಿದೆ. ಈ ಸುದ್ದಿ ತಿಳಿದ ಕುಮಾರಣ್ಣನಿಗೆ ಪಿತ್ಥ ಕೆದರಿ ತಲೆಯೊಳಗಿನ ಹುಳುಗಳೆಲ್ಲ ಥಕಥಕಥಕನೆಂದು ಕುಣಿದು, ನನ್ನ ಪಕ್ಷದ ಒಬ್ಬನನ್ನು ಕದ್ದೊಯ್ದರೆ ಬಿಜೆಪೀಪಿಯ ಒಬ್ಬ ನರಪಿಳ್ಳೆಯನ್ನೂ ಬಿಡದೆ ಕಸತುಂಬಿಕೊಂಡು ಬಂದಂತೆ ಲಾರಿಯಲ್ಲಿ ಅಪಹರಿಸಿಬಿಡುತ್ತೇನೆಂದು ಗುಟುರು ಹಾಕಿದ್ದಾರೆ. ಈ ಗುಟುರಿಗೆ ಉಟ್ಟ ಲಂಗೋಟಿ ಒದ್ದೆ ಮಾಡಿಕೊಂಡ ಸುಮಿತ್‍ಶಾಗೆ ವಾಂತಿ-ಬೇಧಿ ಎರಡೂ ಒಟ್ಟಿಗೇ ಆದ ಸುದ್ದಿ ಇನ್ನೂ ಲಭ್ಯವಾಗಿಲ್ಲ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಇನ್ನೊಂದಷ್ಟು ಎದೆಯೊಡುವ ಸುದ್ದಿಗಳೊಂದಿಗೆ ಮತ್ತೆ ಮುಂದಿನ ವಾರ ಭೇಟಿಯಾಗೋಣ. ಜೈ ಶ್ರೀಮಾಮ್..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...