Homeರಂಜನೆಕ್ರೀಡೆವಿಶ್ವಕಪ್ ಕ್ರಿಕೆಟ್: ಭಾರತ ನ್ಯೂಝಿಲೆಂಡ್ ಆಟಕ್ಕೆ ಮಳೆ ಅಡ್ಡಿ: ಮುಂದೇನಾಗುತ್ತೇ ಗೊತ್ತೆ?

ವಿಶ್ವಕಪ್ ಕ್ರಿಕೆಟ್: ಭಾರತ ನ್ಯೂಝಿಲೆಂಡ್ ಆಟಕ್ಕೆ ಮಳೆ ಅಡ್ಡಿ: ಮುಂದೇನಾಗುತ್ತೇ ಗೊತ್ತೆ?

- Advertisement -
- Advertisement -

ಬಹುನಿರೀಕ್ಷಿತ ಸೆಮಿಫೈನಲ್ ಪಂದ್ಯದಲ್ಲಿ ಮಳೆಯದ್ದೇ ಆಟ!

4 ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಹುನಿರೀಕ್ಷಿತ ಘಟ್ಟವಾಗಿದ್ದ ಸೆಮಿಫೈನಲ್ ಪಂದ್ಯ ಇಂದು ಭಾರತ ಮತ್ತು ನ್ಯೂಝಿಲೆಂಡ್ ತಂಡದ ನಡುವೆ ನಡೆಯುತ್ತಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಝಿಲೆಂಡ್ ತಂಡದ ವಿರುದ್ಧ ಭಾರತದ ಬೌಲರ್ ಗಳು ಆರಂಭದಿಂದಲೂ ಕಟ್ಟುನಿಟ್ಟಾದ ಬೌಲಿಂಗ್ ದಾಳಿಯಿಂದಾಗಿ ಅಲ್ಪ ಮೊತ್ತೊಕ್ಕೆ ಕಟ್ಟಿಹಾಕಲು ಸಫಲವಾಗಿತ್ತು. ಆರಂಭದ ಎರಡೂ ಓವರ್ ಅನ್ನು ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಭುಮ್ರಾ ಮೇಡೆನ್ ಸಾಧನೆ ಮಾಡಿದ್ದರು. ನಾಲ್ಕನೇ ಓವರ್ ನ ಹೊತ್ತಿಗೆ 1 ರನ್ ಗೆ ಒಂದು ವಿಕೆಟ್ ಉರುಳಿಸಿ 46.1 ಓವರ್ ಗೆ 5 ವಿಕೆಟ್ ಫತನಕ್ಕೆ ಕೇವಲ 211 ರನ್ ಗೆ ನ್ಯೂಝಿಲೆಂಡ್ ಅನ್ನು ಕಟ್ಟಿಹಾಕಿತ್ತು.

ಈ ಮಧ್ಯೆ ಭಾರಿ ಮಳೆ ಶುರುವಾಗಿದ್ದು ಪಂದ್ಯವನ್ನು ಸ್ಥಗಿತ ಗೊಳಿಸಲಾಗಿದೆ. ಮುಂದಿನ ಎರಡು ಗಂಟೆಗಳ ಕಾಲ ಕಾದು ಹವಮಾನವನ್ನು ಮತ್ತೊಮ್ಮೆ ವೀಕ್ಷಣೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಪಂದ್ಯದ ಅಂಪೈರ್ ಗಳು ತಿಳಿಸಿದ್ದಾರೆ. ಒಂದು ವೇಳೆ ಮಳೆ ನಿಂತು ಆಟವನ್ನು ಡೆಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಆಟವನ್ನು 20 ಓವರ್ ಗೆ ಇಳಿಸಿ ಪಂದ್ಯವನ್ನು ಮುಂದುವರೆಸಿದರೆ ಸಧ್ಯ ಪಂದ್ಯವನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿರುವ ಭಾರತಕ್ಕೆ ಕಷ್ಟದ ಗುರಿ ನೀಡಬಹುದೆಂಬ ಅಸಮಧಾನ ಭಾರತೀಯ ಅಭಿಮಾನಿಗಳಲ್ಲಿ ಮೂಡಿದೆ. ಅಥವಾ ಪಂದ್ಯವನ್ನು 46 ಓವರ್ ಗೆ ಇಳಿಸಿ, 237 ರನ್ ನ ಗುರಿಯನ್ನು ಭಾರತಕ್ಕೆ ನೀಡಬಹುದಾಗಿದೆ.

ಮಳೆ ಇನ್ನೂ ನಿಲ್ಲುವ ಸೂಚನೆ ನೀಡದೇ ಇದ್ದರೆ ಇದೇ ಪಂದ್ಯವನ್ನು (211/5, 46.1ಓವರ್) ನಾಳೆಗೆ ಮುಂದುವರೆಸುವ ನಿಯಮಗಳಿವೆ ಎಂಬ ಅಭಿಪ್ರಾಯವನ್ನು ವೀಕ್ಷಕ ವಿವವರಣೆಯವರು ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ 1999 ರ ಟೂರ್ನಿಯಲ್ಲಿ ಹಾಗೂ 2002 ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಯೂ ಹೀಗೆ ಮುಂದೂಡಲಾಗಿತ್ತು. ಒಟ್ಟಾರೆ ಇನ್ನೂ ಕಲವು ಹೊತ್ತು ಕಾದು ನೋಡಬೇಕಿದೆ. ಮುಂದಿನ ಮಾಹಿತಿಗಾಗಿ ನಮ್ಮ ವೆಬ್ ಹಾಗೂ Naanu Gauri ಫೇಸ್ಬುಕ್ ಪೇಜ್ ನಲ್ಲಿ ನಿರೀಕ್ಷಿಸಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...