Homeರಾಜಕೀಯರಾಫೇಲ್‌ನ ಜಡ್ಜ್ಮೆಂಟ್‌ನಲ್ಲಿ ತಪ್ಪು ನುಸುಳಿದೆ: ಕೇಂದ್ರ ಸರ್ಕಾರದಿಂದಲೇ ಅರ್ಜಿ ಸಲ್ಲಿಕೆ

ರಾಫೇಲ್‌ನ ಜಡ್ಜ್ಮೆಂಟ್‌ನಲ್ಲಿ ತಪ್ಪು ನುಸುಳಿದೆ: ಕೇಂದ್ರ ಸರ್ಕಾರದಿಂದಲೇ ಅರ್ಜಿ ಸಲ್ಲಿಕೆ

- Advertisement -
- Advertisement -

ಇದನ್ನು ತಮಾಷೆ ಎನ್ನುವುದೋ, ನಮ್ಮ ದೇಶ ತಲುಪಿರುವ ದುರಂತದ ಸ್ಥಿತಿ ಎನ್ನುವುದೋ ಹೇಳುವುದು ಕಷ್ಟ. ನಿನ್ನೆ ಸುಪ್ರೀಂಕೋರ್ಟಿನಲ್ಲಿ ರಾಫೇಲ್ ಡೀಲ್‌ಗೆ ಸಂಬಂಧಿಸಿದಂತೆ ‘ತಮಗೆ ವಿಜಯ, ಪ್ರತಿಪಕ್ಷ ಕ್ಷಮೆ ಕೇಳಬೇಕು’, ‘ಮೋದಿಗೆ ಕ್ಲೀನ್‌ಚಿಟ್’, ‘ರಾಫೇಲ್ ಡೀಲ್‌ನಲ್ಲಿ ಏನೂ ತಪ್ಪಿಲ್ಲ’ ಎಂದೆಲ್ಲಾ ಬಿಜೆಪಿ ಮತ್ತು ಅದರ ಪಟಾಲಂ ಹಾಗೂ ಗೋದಿ ಮೀಡಿಯಾಗಳು ಕೂಗಾಡಿದ್ದವು. ವಾಸ್ತವದಲ್ಲಿ ಕೋರ್ಟಿಗೆ ಹೋಗಿದ್ದದ್ದು ಪ್ರತಿಪಕ್ಷವಲ್ಲ; ಅವು ಜಂಟಿ ಸಂಸದೀಯ ಸಮಿತಿಯ ರಚನೆಗೆ ಒತ್ತಾಯಿಸಿದ್ದವು. ಸುಪ್ರೀಂಕೋರ್ಟ್ ಏನೂ ತಪ್ಪಾಗಿಲ್ಲ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ತಾನು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಲೇ ಹೆಚ್ಚು ಒತ್ತು ಕೊಟ್ಟಿತ್ತು.

ಈಗ ನೋಡಿದರೆ, ‘ಆ ಜಡ್ಜ್ಮೆಂಟ್‌ನಲ್ಲಿ ತಪ್ಪು ನುಸುಳಿದೆ, ತಾನು ಸೀಲ್ ಮಾಡಿದ ಕವರ್‌ನಲ್ಲಿ ಹೇಳಿದ್ದ ವಾಕ್ಯಗಳ ಆಧಾರದಿಂದಲೇ ಈ ತಪ್ಪು ಆಗಿದೆ’ ಎಂದು ಸ್ವತಃ ಕೇಂದ್ರ ಸರ್ಕಾರವು ಇಂದು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಇದೇಕೆ ನಡೆಯಿತು ಎಂಬುದನ್ನು ನೋಡೋಣ.

ಈ ಡೀಲ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟು ಹೇಳಿದ್ದು 3 ಅಂಶ.

1. ಬೆಲೆಯ ಕುರಿತು ತಾನೇನೂ ಹೇಳಲಾರೆ, ಅದು ಪರಿಣಿತರಿಗೆ ಬಿಟ್ಟಿದ್ದು.
2. ಆಫ್‌ಸೆಟ್ ಪಾರ್ಟ್ನರ್ (ಅಂದರೆ ಅನಿಲ್ ಅಂಬಾನಿಯನ್ನೇ ಡಸಾಲ್ಟ್ನವರು ತೆಗೆದುಕೊಂಡಿದ್ದು) ಆಯ್ದುಕೊಂಡಿದ್ದು ಎರಡು ಕಾರ್ಪೋರೇಟ್ ಕಂಪೆನಿಗಳ ನಡುವಿನ ವ್ಯವಹಾರ.
3. ನಿಯಮಗಳನ್ನು ಸರಿಯಾಗಿ ಪಾಲಿಸಿಯೇ ವ್ಯವಹಾರ ನಡೆದಿದೆ.

ಅಂದರೆ ಮೊದಲೆರಡು ವಿಚಾರಗಳಲ್ಲಿ ಸರಿ ತಪ್ಪು ಏನು ನಡೆದಿದೆ ಎಂದು ಕೋರ್ಟ್ ಏನೂ ಹೇಳಿಲ್ಲ; ಇದರಲ್ಲಿ ಮಧ್ಯಪ್ರವೇಶಿಸುವುದು ಆಗದು ಎಂದು ಹೇಳಿದೆ. ಆದರೆ, ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿದೆ ಎಂಬ ಅಭಿಪ್ರಾಯಕ್ಕೆ ಬರಲು ಅದು ಮುಂದಿಟ್ಟ ಪ್ರಮುಖ ಅಂಶವೆಂದರೆ 25ನೇ ಪ್ಯಾರಾ.

ಅದರ ಪ್ರಕಾರ ಈ ವ್ಯವಹಾರದ ಕುರಿತು ಸಿಎಜಿ ಪರಿಶೀಲಿಸಿದೆ, ಅದನ್ನು ಸಂಸತ್ತಿನ ಲೆಕ್ಕಪತ್ರ ಸಮಿತಿಯು (ಪಿಎಸಿ) ಪರಿಶೀಲಿಸಿದೆ ಮತ್ತು ಪಾರ್ಲಿಮೆಂಟ್‌ನಲ್ಲಿ ಅದರ ಸಾರಾಂಶವು ಮಂಡನೆಯಾಗುವುದರ ಮೂಲಕ ಸಾರ್ವಜನಿಕರಿಗೂ ವಿಷಯ ತಿಳಿಯುತ್ತದೆ.

ಇದು ಹೊರಬಿದ್ದ ಕೂಡಲೇ ಸಂಸತ್ತಿನ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ರಾಹುಲ್‌ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅಂತಹದೊಂದು ವರದಿಯೇ ತಮ್ಮ ಸಮಿತಿಯ ಮುಂದೆ ಬಂದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದರು.

ಅಷ್ಟೇ ಅಲ್ಲದೇ, ಸಿಎಜಿಯನ್ನು ಮತ್ತು ಸುಪ್ರೀಂಕೋರ್ಟಿಗೆ ಈ ಸುಳ್ಳು ಹೇಳಿದ ಅಟಾರ್ನಿ ಜನರಲ್‌ರನ್ನು ಸಮಿತಿಯ ಮುಂದೆ ಕರೆಸಲು, ಇತರ ಸದಸ್ಯರಿಗೂ ಕೇಳುತ್ತೇನೆ ಎಂದು ಖರ್ಗೆ ಗುಡುಗಿದ್ದರು. ಅಲ್ಲಿಗೆ ತಾವು ಸೀಲ್ಡ್ ಕವರ್‌ನಲ್ಲಿ ಸುಪ್ರೀಂಕೋರ್ಟಿಗೆ ಹೇಳಿದ್ದ ಸುಳ್ಳನ್ನು ಆದೇಶದಲ್ಲೂ ಕೋರ್ಟು ಬಿಚ್ಚಿಟ್ಟದ್ದರಿಂದ ಸಿಕ್ಕಿ ಹಾಕಿಕೊಂಡ ಕೇಂದ್ರ ಸರ್ಕಾರವು ಅಡಕತ್ತರಿಗೆ ಸಿಕ್ಕಿಬಿಟ್ಟಿತು. ಇನ್ನು ತಾನು ಪೂರ್ಣ ಸಿಕ್ಕಿಹಾಕಿಕೊಳ್ಳುತ್ತೇನೆ ಎಂದು ಅದಕ್ಕೆ ಗೊತ್ತಾಯಿತು.

ಹಾಗಾಗಿ ಇಂದು ಸ್ವತಃ ತಾನೇ ಅಫಿಡವಿಟ್ ಸಲ್ಲಿಸಿತು. ಅದರಲ್ಲಿ `ತಾನು ನೀಡಿದ ಮಾಹಿತಿಯಲ್ಲಿ ಇಂಗ್ಲಿಷಿನಲ್ಲಿ ವಿವರಿಸಿದ ವಾಕ್ಯಗಳಲ್ಲಿ ತಪ್ಪು ಅರ್ಥ ಉಂಟಾಗಿರಬಹುದು. ಸಾಮಾನ್ಯವಾಗಿ ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸುತ್ತದೆ ಮತ್ತು ಸಾಮಾನ್ಯವಾಗಿ ಅದರ ಸಾರಾಂಶವು ಸಂಸತ್ತಿನಲ್ಲಿ ಮಂಡನೆಯಾಗುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದೇ ಹೊರತು, ಈಗಾಗಲೇ ಸಲ್ಲಿಸಲಾಗಿದೆ ಎಂದಲ್ಲ’ ಎಂದು ಹೇಳಿಕೊಂಡಿದೆ.

ಅಂದರೆ ವಿಚಾರ ಸ್ಪಷ್ಟವಾಗಿದೆ. ಬಿಜೆಪಿ ಪಕ್ಷವು, ಈ ಡೀಲ್‌ನಲ್ಲಿ ನೇರವಾಗಿ ಭಾಗಿಯಾದ ನರೇಂದ್ರ ಮೋದಿಯವರನ್ನು ಬಚಾವು ಮಾಡಲು ಒಂದಾದ ಮೇಲೆ ಒಂದರಂತೆ ಸುಳ್ಳುಗಳನ್ನು ಹೇಳತೊಡಗಿದೆ. ಪ್ರತೀ ಸುಳ್ಳೂ ಅನುಮಾನಗಳನ್ನು ಗಟ್ಟಿ ಮಾಡಿದೆಯೇ ಹೊರತು ಎಲ್ಲಿಯೂ ಅನುಮಾನ ನಿವಾರಣೆಯಾಗುವಂತೆ ಆಗಿಲ್ಲ.

ಹೀಗಾಗಿ
1. ಸುದೀರ್ಘ ಇತಿಹಾಸವುಳ್ಳ ಎಚ್‌ಎಎಲ್‌ನಿಂದ ಕಿತ್ತುಕೊಂಡು ಅನಿಲ್ ಅಂಬಾನಿಗೆ ಕೊಟ್ಟಿದ್ದೇಕೆ?
2. ಅದನ್ನು ನೀಡಬೇಕಾಗಿ ಬಂದಿದ್ದು ಭಾರತದ ಪ್ರಧಾನಿಯ ಕೋರಿಕೆಯ ಮೇರೆಗೆ ಎಂಬ ಹೇಳಿಕೆಯು ಫ್ರಾನ್ಸ್ನಿಂದ ಬಂದಿದ್ದನ್ನು ನೀವು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದೇಕೆ?
3. ಮೂರು ಪಟ್ಟು ಹೆಚ್ಚು ಬೆಲೆಗೆ ಕೊಂಡುಕೊಳ್ಳುತ್ತಿರುವುದೇಕೆ?
4. ಹಿಂದೆ ಭಾರತದಲ್ಲೇ ತಂತ್ರಜ್ಞಾನವನ್ನೂ ಪಡೆದುಕೊಂಡು ಮೇಕ್‌ಇನ್ ಇಂಡಿಯಾ ಮಾಡಲು ಆಗಿದ್ದ ಒಪ್ಪಂದ ಬಿಟ್ಟು ಈಗ ತಂತ್ರಜ್ಞಾನ ವರ್ಗಾವಣೆಯೂ ಇಲ್ಲದೇ ಹೋಗುವಂತಾಗಲು ಹೇಗೆ ಒಪ್ಪಿಕೊಂಡಿರಿ?
5. ರಕ್ಷಣಾ ಸಚಿವರನ್ನೂ ಒಳಗೊಂಡಂತೆ ಯಾರಿಗೂ ಗೊತ್ತಿಲ್ಲದ ವ್ಯವಹಾರವನ್ನು ಪ್ರಧಾನಿ ಕಾರ್ಯಾಲಯ ಮಾತ್ರ ದಿಢೀರ್ ಎಂದು ಮಾಡಿದ್ದು ಏಕೆ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಜಂಟಿ ಸಂಸದೀಯ ಸಮಿತಿಯ ತನಿಖೆ ಅಥವಾ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕಲ್ಲದೇ ಬೇರೆ ದಾರಿಯಿಲ್ಲ.

ಅದನ್ನು ಬಿಟ್ಟು ಮತ್ತಷ್ಟು ಮುಚ್ಚಿ ಹಾಕಲು ಹೊರಟರೆ, ‘ಚೌಕೀದಾರ್ ಚೋರ್ ಹೈ’ ಮಾತು ನಿಜವೆಂದು ಜನರು ಹೆಚ್ಚೆಚ್ಚು ನಂಬುತ್ತಾ ಹೋಗುತ್ತಾರೆ. ಬಿಜೆಪಿಯು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿ ಧೈರ್ಯವನ್ನು ಮೆರೆಯಬೇಕು. ಅದೊಂದೇ ಪರಿಹಾರ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...