Homeಕರ್ನಾಟಕರಾಜೀನಾಮೆ ನೀಡಿರುವ ಶಾಸಕರು ಈ ವಿಧಾನಸಭೆಯ ಅವಧಿ ಮುಗಿಯುವವರೆಗೆ ಸ್ಪರ್ಧಿಸುವಂತಿಲ್ಲ.: ಇಂದು ಅನರ್ಹತೆ ಘೋಷಿಸಲಿರುವ ಸ್ಪೀಕರ್

ರಾಜೀನಾಮೆ ನೀಡಿರುವ ಶಾಸಕರು ಈ ವಿಧಾನಸಭೆಯ ಅವಧಿ ಮುಗಿಯುವವರೆಗೆ ಸ್ಪರ್ಧಿಸುವಂತಿಲ್ಲ.: ಇಂದು ಅನರ್ಹತೆ ಘೋಷಿಸಲಿರುವ ಸ್ಪೀಕರ್

ನಾಳೆ ಅತೃಪ್ತ ಶಾಸಕರಿಗೆ ಈ ವಿಧಾನಸಭೆಯ ಅವಧಿಯಲ್ಲಿ ಚುನಾವಣೆಗೆ ನಿಲ್ಲದಂತೆ ಅನರ್ಹತೆ ಘೋಷಿಸಲಿರುವ ಸ್ಪೀಕರ್

- Advertisement -
- Advertisement -

ಕಾಂಗ್ರೆಸ್-ಜೆಡಿಎಸ್ ಪಕ್ಷ ತ್ಯಜಿಸಿ ಇಷ್ಟು ದಿನ ಮುಂಬೈನಲ್ಲಿ ಬೀಡುಬಿಟ್ಟಿದ್ದ ಶಾಸಕರಿಗೆ ನಾಳೆ (ಜುಲೈ25) ಈ ವಿಧಾನಸಭಾ ಅವಧಿಪೂರ್ತಿಯ ಅನರ್ಹತೆ ಶಿಕ್ಷೆ ಕಾದು ಕೂತಿದೆ. ಈ ಸರ್ಕಾರ ಬಿದ್ದಿದ್ದಕ್ಕೆ ಸಂತಸವಾಗಿದೆ ಎಂದವರಿಗೆ ನಾಳೆ ಬಿಗ್ ಶಾಕ್ ಕಾದಿರುವುದಂತೂ ಸತ್ಯ.

ಈ ಕುರಿತು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ರವರು ಇಂದು ಸುಳಿವು ನೀಡಿದ್ದಾರೆ. ಫೇಸ್ ಬುಕ್ ನಲ್ಲಿ “ನನ್ನ ತೀರ್ಪು ತಪ್ಪು ಆಗಿದ್ದಲ್ಲಿ ಕ್ಷಮಿಸಿ,. ಸರಿಯಾಗಿದ್ದರೆ ಅನುಭವಿಸಬೇಕಾಗುತ್ತದೆ. ನನ್ನನ್ನು ನಂಬಿರುವ ಎಲ್ಲಾ ಕರ್ನಾಟಕ ಜನತೆಗೆ ಕೃತಜ್ಞತೆಗಳು” ಎಂದು ಸ್ಪೀಕರ್ ರವರು ಒಂದು ಗಂಟೆಯ ಹಿಂದೆಯಷ್ಟೇ ಬರೆದುಕೊಂಡಿದ್ದಾರೆ.

ನಾನು ಗೌರಿ.ಕಾಂ ಸಿಕ್ಕ ಖಚಿತ ಮಾಹಿತಿಗಳ ಪ್ರಕಾರ 17ಜನ ಶಾಸಕರಿಗೂ ನಾಳೆ ಬೆಳಿಗ್ಗೆಯೇ ಅನರ್ಹತೆಯ ಶಿಕ್ಷೆ ಘೋಷಣೆಯಾಗುತ್ತದೆ. ಅದು ಕೂಡ ಈ ವಿಧಾಸಭಾ ಅವಧಿಪೂರ್ತಿ ಅವರನ್ನು ಅನರ್ಹರನ್ನಾಗಿ ಮಾಡಲಾಗುತ್ತದೆ. ಅಂದರೆ ಈ ವಿಧಾನಸಭೆಯ ಅವಧಿ ಮುಗಿಯುವ 2023ರವರೆಗೂ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಮಟ್ಟದ ದೊಡ್ಡ ಶಿಕ್ಷೆ ನಾಳೆ ಘೋಷಣೆಯಾಗುವುದಷ್ಟೇ ಬಾಕಿ ಉಳಿದಿದೆ.

ಕಾಂಗ್ರೆಸ್ ನಿಂದ 13 ಜನ ಮತ್ತು ಜೆಡಿಎಸ್ ನಿಂದ 03 ಜನ ಶಾಸಕರಿಗೆ ನಾಳೆ ಶಿಕ್ಷೆಯಾಗುವುದು ನಿಕ್ಕಿಯಾಗಿದೆ.

ನಾಳೆ ಅನರ್ಹತೆ ಘೋಷಿಸಿ, ಕಚೇರಿ ವ್ಯವಹಾರ ಎಲ್ಲಾ ಮುಗಿಸಿದ ನಂತರ ನಾಳಿದ್ದು ಸ್ಪೀಕರ್ ರವರು ಬಹಿರಂಗ ಪತ್ರಿಕಾ ಗೋಷ್ಟಿ ನಡೆಸಿ ತಮ್ಮ ರಾಜೀನಾಮೆಯನ್ನು ಸಹ ಘೋಷಿಸಲಿದ್ದಾರೆ. ಅನರ್ಹರಿಗೆ ಸರಿಯಾಗಿ ಬುದ್ದಿ ಕಲಿಸಿಯೇ ತಾನು ಸ್ಪೀಕರ್ ಸ್ಥಾನದಿಂದ ನಿರ್ಗಮಿಸಬೇಕೆಂದು ಸ್ಪೀಕರ್ ದೃಢಸಂಕಲ್ಪ ಮಾಡಿದ್ದಾರೆ.

ಪಕ್ಷಾಂತರ ಮಾಡಲು ಹೊರಟವರಿಗೆ ತಕ್ಕ ಶಾಸ್ತಿಯಾಯಿತು ಎಂಬ ಭಾವನೆ ಜನರಲ್ಲಿ ಮೂಡುವಂತೆ ಮಾಡುವುದು, ಆ ಮೂಲಕ ಶಾಸಕರಿಗೆ ಕಠಿಣ ಎಚ್ಚರಿಕೆ ನೀಡುವುದು ರಮೇಶ್ ಕುಮಾರ್ ರವರ ಗುರಿಯಾಗಿದೆ. ಆದರೆ ಸ್ಫೀಕರ್ ಅವರ ಈ ಆದೇಶದ ವಿರುದ್ಧ ಸುಪ್ರೀಂಕೋರ್ಟಿಗೆ ಹೋಗುವ ಅವಕಾಶ ಅನರ್ಹಗೊಂಡ ಶಾಸಕರಿಗೆ ಇದ್ದೇ ಇದೆ. ಅದೇನೇ ಆದರೂ ಸಾರ್ವಜನಿಕವಾಗಿ ಒಂದು ಸಂದೇಶ ಹೋಗುವಮಟ್ಟಿಗಂತೂ ಇದರ ಪರಿಣಾಮ ಇರಲಿದೆ.

ಅಂತೂ ಸರ್ಕಾರ ಬಿದ್ದಾಯಿತು. ನಾಳೆ ಅನರ್ಹತೆಯೂ ಘೋಷಣೆಯಾಗಿ ರಾಜ್ಯ ರಾಜ್ಯಕಾರಣ ಒಂದು ಹಂತಕ್ಕೆ ಬಂದು ನಿಲ್ಲಲಿದೆ.

.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

    • ಕೆಳಗಿನ ಬ್ಯಾಂಕ್ ಖಾತೆಯ ಮೂಲಕವೂ ಹಣ ಸಂದಾಯ ಮಾಡಬಹುದು)

      Account Name: Gauri Media Trust

      Account No.: 510101006500878

      Bank: Corporation bank

      Branch: Srinivasa nagara/Srinagara, Bengaluru

      IFSC Code: CORP0000215

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...