Homeಸುಳ್ಳಪ್ಪೋ ಸುಳ್ಳುಚಲಾನಾ... ಜಲಾನಾ... ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

ಚಲಾನಾ… ಜಲಾನಾ… ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

- Advertisement -
- Advertisement -

ಮಿಥ್ಯ: ‘ಹಮ್ ಭಾರತ್ ಬಂದ್ ಕರನಾ ಜಾನತೆ ಹೈ, ತೊ ಹಮ್ ಭಾರತ್ ಜಲಾನಾ ಭೀ ಜಾನತೆ ಹೈ’
(ಭಾರತ್ ಬಂದ್ ಮಾಡುವುದು ಗೊತ್ತಿರುವ ನಮಗೆ ಭಾರತವನ್ನು ಸುಡುವುದೂ ಗೊತ್ತು)

ಭಾರತ ಸುಡುವ ಇಂತಹ ಪ್ರಚೋದನಾತ್ಮಕ ಹೇಳಿಕೆಯನ್ನು ಭೀಮ್ ಆರ್ಮಿ ಸಂಸ್ಥಾಪಕ, ದಲಿತ ನಾಯಕ ಚಂದ್ರಶೇಖರ್ ಅಜಾದ್ ರಾವಣ್ ಬಹಿರಂಗ ಸಭೆಯಲ್ಲಿ ಆಡಿರುವರೆಂದು ಮೂರು ದಿನಗಳ ಹಿಂದೆ ಝೀ ನ್ಯೂಸ್ (ಹಿಂದಿ) ಮತ್ತು ನ್ಯೂಸ್ 18 ಚಾನೆಲ್‌ಗಳು ಅಪಾದಿಸಿವೆ. ತಮ್ಮ ವೆಬ್‌ಸೈಟಿನಲ್ಲಿನ ಲೇಖನ ಮತ್ತು ಟ್ವಿಟರ್‌ನಲ್ಲಿ ಅವು, ‘ಮುಝಾಫರ್ ನಗರದಲ್ಲಿ ದಲಿತ ಸಭೆಯೊಂದರಲ್ಲಿ ಮಾತನಾಡುವಾಗ ಚಂದ್ರಶೇಖರ್ ಅವರು, ಜನರು ನನ್ನ ಸಿಗ್ನಲ್‌ಗೆ ಕಾಯುತ್ತಿದ್ದಾರೆ, ನಾವು ಭಾರತ್ ಬಂದ್ ಮಾಡಬಲ್ಲೆವಾದರೆ, ಭಾರತವನ್ನು ಸುಡಲೂಬಲ್ಲೆವು…,ನಮ್ಮ ಸಹನೆಗೂ ಒಂದು ಮಿತಿಯಿದೆ, ದೌರ್ಜನ್ಯಗಳಿಗೂ ಒಂದು ಮಿತಿ ಇದೆ ಎಂದು ಹೇಳಿಕೆ ನೀಡಿದರು’ ಎಂದಿವೆ.

ಸತ್ಯ: ಸತ್ಯ ಬೇರೇನೇ ಇದೆ. ಅದಕ್ಕೂ ಮೊದಲು ಝೀ ನ್ಯೂಸ್, ನ್ಯೂಸ್ 18ಗಳ ಈ ಸುದ್ದಿಗೆ ‘ಹಿಂದುತ್ವವಾದಿಗಳು’ ಸ್ಪಂದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ್ ವಿರುದ್ಧ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಅತ್ಯಂತ ಪ್ರಚೋದನಾಕಾರಿ ಸಂದೇಶಗಳನ್ನು ಹಾಕಿದ್ದನ್ನು ನೋಡೋಣ.

ತನ್ನನ್ನು ರಾಷ್ಟ್ರೀಯವಾದಿ ಎಂದುಕೊಳ್ಳುವ ‘ಭಯ್ಯಾಜಿ’ (ಟ್ವಿಟರ್ ಹ್ಯಾಂಡಲ್ @shiraloksharma) ಎಂಬ ವ್ಯಕ್ತಿ ಟ್ವೀಟ್ ಮಾಡಿ, ‘ಹಾಗೆ ಭಾರತ ಸುಡುತ್ತೇನೆ ಎಂದು ಬೆದರಿಸುವವರನ್ನು ಅದೇ ಬೆಂಕಿಯಲ್ಲಿ ಹಾಕಿ ಬರ‍್ಯಾನಿ ಮಾಡಿ, ಬೀದಿನಾಯಿಗಳಿಗೆ ಹಾಕುತ್ತೇವೆ. ಪ್ರಯತ್ನ ಮಾಡಿ ನೋಡಿ, ಪರಿಣಾಮ ಏನಾಗುತ್ತೆ ನೋಡಿ’ ಎಂದು ಬೆದರಿಸುತ್ತಾನೆ. ಇದೇ ಬಗೆಯಲ್ಲಿ ಹಲವಾರು ‘ದೇಶಭಕ್ತರು’ ಚಂದ್ರಶೇಖರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದಾರೆ.

‘ಭಯ್ಯಾಜಿ’ ಎನ್ನುವಾತನ ಆಕ್ರೋಶಭರಿತ, ದಲಿತವಿರೋಧಿ ಟ್ವೀಟ್

ಆದರೆ, ಆ ಸಭೆಯ ವಿಡಿಯೋವನ್ನು ಪಡೆದು ಪರೀಕ್ಷಿಸಿದಾಗ, ಚಂದ್ರಶೇಖರ್ ಹೇಳಿದ್ದು: ‘ಭಾರತ್ ಚಲಾನಾ’ (ಭಾರತ ನಡೆಸುವುದು, ಭಾರತ ಆಳುವುದು, ರನ್ನಿಂಗ್ ಇಂಡಿಯಾ) ಎಂದೇ ಹೊರತು, ‘ಭಾರತ್ ಜಲಾನಾ’ (ಭಾರತ ಸುಡುವುದು, ಬರ್ನಿಂಗ್ ಇಂಡಿಯಾ) ಎಂದು ಅಲ್ಲವೇ ಅಲ್ಲ.

ಝೀ ನ್ಯೂಸ್, ನ್ಯೂಸ್18 ಮಾಧ್ಯಮಗಳು ಬೇಕೆಂತಲೇ ‘ಚಲಾನಾ’ ಎಂಬುದನ್ನು ‘ಜಲಾನಾ’ ಎಂದು ತಿರುಚಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿವೆ. ಇಂತಹ ಬಹುತೇಕ ಮಾಧ್ಯಮಗಳ ಮಾಲಿಕರು ಮತ್ತು ಮ್ಯಾನೇಜ್‌ಮೆಂಟ್ ದಲಿತ ವಿರೋಧಿ ಆಗಿರುವುದೇ ಇದಕ್ಕೆಲ್ಲ ಕಾರಣ….

ವಿಡಿಯೊ ಲಿಂಕ್ ವಿಳಾಸ:  https://vimeo.com/315073201 (ವಿಡಿಯೊವನ್ನು ಸ್ಲೋ ಮಾಡಿ ಪರೀಕ್ಷಿಸಿದ್ದು)
ಇದಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ‘ಬೇಕೆಂತಲೇ ವಿಷಯ ತಿರುಚಿ ಗದ್ದಲ ಎಬ್ಬಿಸಲು ನೋಡಿದ ಈ ದಲಿತ ವಿರೋಧಿ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ’ ಎಂದಿದ್ದಾರೆ.

ಮಾನಗೇಡಿ ಚಾನೆಲ್‌ಗಳ ವಿರುದ್ಧ ಚಂದ್ರಶೇಖರ್ ಟ್ವೀಟ್

ಚಲಾನಾ ಎಂಬುದನ್ನು ಜಲಾನಾ ಮಾಡಿ ‘ಬೆಂಕಿ ಹಚ್ಚುವ’ ಇಂತಹ ಮಾಧ್ಯಮಗಳಿಗೆ ನಮ್ಮ ಧಿಕ್ಕಾರವಿರಲಿ. ಅಂದಂತೆ, ಜೆಎನ್‌ಯುನಲ್ಲಿ ಕನ್ಹಯ್ಯಕುಮಾರ್ ಮಾಡಿದ ಭಾಷಣದ ತಿರುಚಿದ ವಿಡಿಯೋವನ್ನು ಮೊದಲು ಪ್ರಸಾರ ಮಾಡಿದ್ದೇ ಇದೇ ಝೀ ನ್ಯೂಸ್ (ಹಿಂದಿ) ಚಾನೆಲ್. ಇದು ಮೋದಿ ಮತ್ತು ಬಿಜೆಪಿಯ ಕಾಲು ನೆಕ್ಕುವ ಚಾನೆಲ್ ಎಂದು ಪದೇ ಪದೇ ಸಾಬೀತಾಗಿದೆ.

(ಕೃಪೆ: ಅಲ್ಟ್ನ್ಯೂಸ್.ಕಾಮ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...