Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಓಡಿ ಹೋದ ಹುಡುಗ ಮರಳಿ ಬಂದ ಕಥೆ

ಓಡಿ ಹೋದ ಹುಡುಗ ಮರಳಿ ಬಂದ ಕಥೆ

‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ ಮಕ್ಕಳ ಕಾದಂಬರಿ.

- Advertisement -
| ಡಾ.ಎಸ್.ಬಿ.ಜೋಗುರ |
‘ಓಡಿ ಹೋದ ಹುಡುಗ’ ಇದು ಅಭಿನವ ಪ್ರಕಾಶನ ಪ್ರಕಟಿಸಿರುವ ಕತೆಗಾರ ಬಸು ಬೇವಿನಗಿಡದ ಅವರ  ಮಕ್ಕಳ ಕಾದಂಬರಿ. ಈ ಕಾದಂಬರಿಯ ಬಹುತೇಕ ಪಾತ್ರಗಳು ಮಲ್ಲೂರಲ್ಲಿ ಸುತ್ತಿ ಸುಳಿಯುತ್ತವೆ. ಈ ಕಾದಂಬರಿಯನ್ನು ಓದತೊಡಗಿದಾಗ ಓದುಗರಿಗೆ ತಮ್ಮ ತಮ್ಮ ಬಾಲ್ಯದ ಸ್ವಚ್ಚಂದ ಮನದ ಸುಳಿದಾಟವನ್ನು ನೆನಪಿಸಿಕೊಡುವ ಜೊತೆಗೆ, ಗಜ್ಯಾ ಎಂಬ ಬಾಲಕನ ಮೂಲಕ ಇಡೀ ಊರನ್ನು ನಿದ್ದೆಯಿಂದೆಬ್ಬಿಸಿ ಚಟುವಟಿಕೆಗೆ ನೂಕುವ ಕ್ರಿಯಾಶೀಲತೆಯಂತೆ ಕಾದಂಬರಿಕಾರರು ಗಜ್ಯಾ ಪಾತ್ರವನ್ನು ಸೃಷ್ಟಿಸಿದ್ದಾರೆ. ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಹೊಸತೇನೂ ಮಹತ್ತರವಾಗಿ ಚಿತ್ರಿಸಲಾಗದಿದ್ದರೂ ಮಕ್ಕಳ ಕಾದಂಬರಿಗೆ ತಕ್ಕುದಾದ ಸಕಲ ಸಾಮಗ್ರಿಯನ್ನು ಮೈಗೂಡಿಸಿಕೊಂಡು ಕಾದಂಬರಿ ಮುಂದೆ ಸಾಗುತ್ತದೆ. ಕಾದಂಬರಿಯ ಆರಂಭದಲ್ಲಿ ಕೊಂಚ ಸಾವಧಾನ ಮತ್ತು ಜಡವೆನಿಸುವ ವಿವರಗಳಿವೆಯಾದರೂ ಕ್ರಮೇಣವಾಗಿ ತನ್ನದೇಯಾದ ವಿಶಿಷ್ಟ ಜಾಡಿನಲ್ಲಿ ಮುಂದೆ ಸಾಗುತ್ತದೆ. ಗಜ್ಯಾ ಈ ಕಾದಂಬರಿಯ ನಾಯಕ. ಚಿಕ್ಕ ವಯಸ್ಸಿನಲ್ಲಿಯೇ ಕುಳಿತುಂಡು ಕೆಡಬಾರದು ಎನ್ನುವ ಧೋರಣೆಯನ್ನು ಮೈಗೂಡಿಸಿಕೊಂಡಂತೆ ಬದುಕಿದ ಈ ಗಜ್ಯಾ ಊರಿನ ಅನೇಕರಿಗೆ ಮಾದರಿಯಾಗಿರುವಂತೆ ಉಡಾಳನಾಗಿಯೂ ಗುರುತಿಸಿಕೊಂಡವನು. ಗಜ್ಯಾ ಮತ್ತು ಅವನ ಸ್ನೇಹಿತರಲ್ಲಿ ಆ ವಯಸ್ಸಿಗೆ ತಕ್ಕಂತ ಸಹಜವಾಗಿರಬಹುದಾದ ಹುಡುಗ ಬುದ್ಧ್ಢಿಯ ಗುಣಗಳೂ ಇವೆ. ಎಲ್ಲ ಕಾಲಗಳಲ್ಲಿ ಎಲ್ಲ ಮಕ್ಕಳಲ್ಲಿ ವ್ಯಾಪಕವಾಗಿ ಕಾಣಬಹುದಾದ ಗುಣಗಳವು.
ಒಬ್ಬರನ್ನೊಬ್ಬರು ದೂರುವ ದ್ವೇಷಿಸುವ, ಮತ್ತೆ ಒಂದುಗೂಡುವ, ಕೂಡಿ ಕದಿಯುವ, ತಿನ್ನುವ, ಸೇಡಿಗಾಗಿ ಹೂಂಕರಿಸುವ ಇಂಥಾ ಹತ್ತಾರು ವಕ್ರಗುಣಂಗಣ ಪಟಾಲಮ್ಮಿನಂತಿರುವ ಆ ಹುಡುಗರು ಹಾಗಾಗಲು ಕಾರಣ ಆ ಆಲದ ಮರದ ಕೆಳಗೆ ವಾಸವಾಗಿರುವ ಅಜ್ಜ ಎನ್ನುವುದು ಹೆತ್ತವರ ದೂರುವಿಕೆ. ಗಜ್ಯಾ ಆಟವಾಡುವ ವಯಸ್ಸಿನಲ್ಲಿಯೇ ಹೊಣೆಗಾರಿಕೆಯನ್ನು ಹೆಗಲಿಗೇರಿಸಿಕೊಂಡು ತಾನು ಶಾಲೆ ಕಲಿಯದಿದ್ದರೂ ತನ್ನ ತಂಗಿಯನ್ನು ಓದಿಸಬೇಕೆಂದು ದುಡಿಯುವ ಅವನ ಗುಣವನ್ನು ಊರಿನ ಅನೇಕರು ಕೊಂಡಾಡುವ ಜೊತೆಗೆ ದಾರಿ ತಪ್ಪಿದ ಮಕ್ಕಳಿಗೆ ಗಜ್ಯಾನನ್ನು ಉದಾಹರಣೆಯಾಗಿ ಕೊಡುವಷ್ಟರ ಮಟ್ಟಿಗೆ ಮಲ್ಲೂರಿನ ಅನೇಕರಿಗೆ ಗಜ್ಯಾ ಇಷ್ಟವಾಗುತ್ತಿದ್ದ. ಗಜ್ಯಾ ಮತ್ತು ಅವನ ಸೈಕಲ್ ಇಡೀ ಮಲ್ಲೂರಿನ ಚಟುವಟಿಕೆಯ ಸಂಕೇತಗಳಾಗಿದ್ದವು. ಆತನ ಸೈಕಲ್ ಬೆಲ್ ಜಾಗೃತಿಯ ಸಂಕೇತದಂತೆ ಬಳಕೆಯಾಗುವದಿತ್ತು. ಕಾದಂಬರಿಕಾರ ಕಾಲನ ಓಟವನ್ನು ಸೈಕಲ್ ಜೊತೆಗೆ ಮತ್ತು ಅದರ ಗಂಟೆಯನ್ನು ಕಾಲ ಸರಿಯುವ ಎಚ್ಚರದ ನಾದವಾಗಿ ಬಳಸಿರುವುದು ಗಮನಾರ್ಹವಾದುದು. ಓಡಿ ಹೋದ ಹುಡುಗ ಇಲ್ಲಿ ಬೇರೆ ಯಾರೂ ಅಲ್ಲ ಆ ಸೈಕಲ್ ಸವಾರ ಗಜ್ಯಾ. ಆತ ದಿಕ್ಕು ದೆಸೆಯಿಲ್ಲದೇ ಓಡಿ ಹೋದವನಲ್ಲ, ಬದುಕನ್ನು ರೂಪಿಸಿಕೊಳ್ಳಲು ಹೋದವನು. ಸಿನೇಮಾ ಒಂದರಲ್ಲಿ ನಟಿಸುವ ಅವಕಾಶ ಸಿಕ್ಕ ಕಾರಣದಿಂದ ಕರೀಕಟ್ಟೆ ಮಾಸ್ತರರ ಜೊತೆಗೆ ಹೋಗಿ ಸಿನೇಮಾದಲ್ಲಿ ಪಾತ್ರ ನಿರ್ವಹಿಸಿ ಮರಳಿ ಬರುವಷ್ಟರಲ್ಲಿ ಮಲ್ಲೂರಿನ ಪಾಲಿಗೆ, ಗಜ್ಯಾನ ಜೊತೆಗಾರರಿಗೆ ಆತ ಓಡಿ ಹೋದ ಹುಡುಗನಾಗಿರುತ್ತಾನೆ. ಗಜ್ಯಾ ದಿನಾಲು ಊರಲ್ಲಿ ಸುತ್ತಿ ಸುಳಿಯುವಾಗ ಕಾಣದ ಅವನ ಹರಕತ್ತು ಒಂದೆರಡು ದಿನ ಅವನಿಲ್ಲದಿರುವಾಗ ಎದ್ದು ತೋರುವ ಜೊತೆಗೆ, ಅವನಿಗಾಗಿ ಇಡೀ ಊರಿನ ಬೆಟ್ಟ ಗುಡ್ಡಗಳನ್ನು ಹತ್ತಿ ಹುಡುಕುವ ರೀತಿಯಲ್ಲಿಯೇ ಓಡಿ ಹೋದ ಹುಡುಗನ ಪಾತ್ರದ ಹಿಕಮತ್ತು ಓದುಗನಿಗೆ ಮನದಟ್ಟಾಗುತ್ತದೆ.
ಇದು ಹೇಳೀ ಕೇಳೀ ಮಕ್ಕಳ ಕಾದಂಬರಿ. ಹೀಗಾಗಿ ಕಾದಂಬರಿಕಾರ ತಕ್ಕ ಮಟ್ಟಿಗೆ ಭಾಷೆಯನ್ನು ಸಡಿಲುಗೊಳಿಸಿ ಕತೆ ಹೇಳುತ್ತಾ ಹೋಗಿರುವದಿದೆ. ಜೊತೆಗೆ ಕತೆಯ ಹಂದರ ಜಾಳುಜಾಳಾಗದಂತೆ ಎಚ್ಚರವಹಿಸುವ ಜೊತೆಗೆ ಒಂದು ಮಕ್ಕಳ ಕಾದಂಬರಿಯ ಸೊಗಸಿಗೆ ಏನು ಸಾಮಗ್ರಿ ಬೇಕೋ ಅದೆಲ್ಲವನ್ನು ಒದಗಿಸಿಕೊಟ್ಟು ಕಾದಂಬರಿಗೆ ಪೂರಕವಾಗಿ ಸಲ್ಲಬಹುದಾದ ಹಿತಕರ ಪರಿಸರವನ್ನು ಕಾದಂಬರಿಕಾರ ಕಟ್ಟಿಕೊಟ್ಟಿದ್ದಾರೆ. ಈ ಕಾದಂಬರಿಯ ಭಾಷೆ, ವಸ್ತು, ತಂತ್ರ, ವಿನ್ಯಾಸ, ನಿರೂಪಣೆ ಎಲ್ಲವೂ ಮಕ್ಕಳ ಕಾದಂಬರಿಗೆ ಸಲ್ಲುವಂತಿದೆ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...