Homeರಂಜನೆತೂಕ ಇಳಿಸಲು ಹೋದ ಬುಲೆಟ್ಟು, ಆಸ್ಪತ್ರೆಗೆ ಅಡ್ಮಿಟ್ಟು

ತೂಕ ಇಳಿಸಲು ಹೋದ ಬುಲೆಟ್ಟು, ಆಸ್ಪತ್ರೆಗೆ ಅಡ್ಮಿಟ್ಟು

- Advertisement -
- Advertisement -

ಮೊನ್ನೆ ಅದ್ಯಾರೋ ಪುಣ್ಯಾತ್ಮರು `ಬುಲೆಟ್ ಪ್ರಕಾಶ್ ಸತ್ತೇ ಹೋದ’ ಅಂತ ಸುದ್ದಿ ಹಬ್ಬಿಸಿದ್ದರು. ಆ ಸುದ್ದಿಗೆ ಸ್ವತಃ ಬುಲೆಟ್ಟೇ ಬೆಚ್ಚಿಬಿದ್ದು, ತಾನು ಮಲಗಿದ್ದ ವಿಕ್ರಂ ಆಸ್ಪತ್ರೆಯ ಬೆಡ್‍ನಲ್ಲೇ ಎಗರೆಗರಿ `ಐ ಆಮ್ ಆಲ್ರೈಟ್ ಮಾರಾಯ್ರೆ’ ಅಂತ ಸ್ಪಷ್ಟನೆ ಕೊಡಬೇಕಾಯ್ತು. ಬದುಕಿರುವ ವ್ಯಕ್ತಿ ಬಗ್ಗೆ ಸತ್ತ ಸುದ್ದಿ ಹಬ್ಬಿಸಿದ್ದು ಬೇಸರದ ಸಂಗತಿ. ಆದ್ರೆ ಅದಕ್ಕಿಂತಲೂ ಬೇಸರದ ಸಂಗತಿ ಅಂದ್ರೆ ಬುಲೆಟ್ ಪ್ರಕಾಶ್ ಆಸ್ಪತ್ರೆ ಸೇರುವಂತೆ ಮಾಡಿದ ಕಾರಣ. ತನ್ನದೇ ಮ್ಯಾನರಿಸಂನಿಂದ ಹಾಸ್ಯನಟನಾಗಿ ಮಿಂಚುತ್ತಿರುವ ಪ್ರಕಾಶನ ಪ್ಲಸ್ ಪಾಯಿಂಟ್ ಅಂದ್ರೆ ಅವನ `ಘನ’ಕಾಯ. ಆದ್ರೆ ಬುಲೆಟ್ಟು ತನ್ನ ತೂಕ ಇಳಿಸಿಕೊಂಡು ಅಂತಹ ಘನಕಾಯವನ್ನೇ `ಮಿನಿ’ಕಾಯವಾಗಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ್ದಾನೆ. ಹೊಸಬರ ಅಲೆಯಲ್ಲಿ ತಾನು ಕೊಚ್ಚಿಹೋಗದೆ ಗಟ್ಟಿಯಾಗಿ ನೆಲೆ ನಿಲ್ಲಲು ತನ್ನ ದೇಹ ಅಡ್ಡಿಯಾಗುತ್ತಿದೆ ಅಂತನ್ನಿಸಿ ತೂಕ ಇಳಿಸಿಕೊಳ್ಳುವ ಸಾಹಸಕ್ಕೆ ಕೈಹಾಕಿದ್ದಾನಂತೆ. `ಲೋ ಕನ್ನಡದ ಕರೀ ಇಡ್ಲಿಯೇ’ ಅಂತ ಪ್ರೀತಿಯಿಂದ ತಲೆನೇವರಿಸಿ, `ನಟನಾಗಿ ಛಾಪು ಮೂಡಿಸಲು ಬೇಕಿರೋದು ನಟನಾ ಕೌಶಲ್ಯವೇ ಹೊರತು, ಸ್ಲಿಮ್ ದೇಹವಲ್ಲ. ಅಷ್ಟಕ್ಕೂ ನಿನ್ನ ಈ ಭಾರೀ ಗಾತ್ರವೇ ನಿನ್ನ ಪ್ಲಸ್ ಪಾಯಿಂಟ್ ಕಣೋ. ಬಡ್ಡೇತದೆ, ಅಡ್ಡದಾರಿ ಹಿಡಿಯದೆ ನಿನ್ನ ಹೆಲ್ತ್ ಬಗ್ಗೆ ಗಮನ ಕೊಡಪ್ಪಾ’ ಎಂಬ ಬುದ್ದಿಮಾತನ್ನು ತುರ್ತಾಗಿ ಆತನಿಗೆ ಯಾರಾದ್ರು ಮುಟ್ಟಿಸಬೇಕಿದೆ. ಬುಲೆಟ್‍ನ ಅವಾಂತರ ಕೇಳಿದಾಗಿನಿಂದ ತೂಕ ಇಳಿಸಿಕೊಳ್ಳುವ ಲೈಪೋಸಕ್ಷನ್ ಫ್ಯಾಟ್ ಸರ್ಜರಿಗೆ ತುತ್ತಾಗಿ ಅಮೆರಿಕಾದಲ್ಲಿ ಪ್ರಾಣವನ್ನೇ ಕಳೆದುಕೊಂಡ ಮೇಣದ ಬೊಂಬೆಯಂತ ಬೆಡಗಿ ಆರತಿ ಅಗರ್ವಾಲ್ ನೆನಪು ಮತ್ತೆಮತ್ತೆ ಕಾಡುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...