Homeರಾಜಕೀಯಕಾಫಿ ನಾಡಲ್ಲಿ ಸಡಿಲವಾಗುತ್ತಿದೆ ಬಿಜೆಪಿ ಬಿಗಿ

ಕಾಫಿ ನಾಡಲ್ಲಿ ಸಡಿಲವಾಗುತ್ತಿದೆ ಬಿಜೆಪಿ ಬಿಗಿ

- Advertisement -
  • ಟೀಮ್ ಗೌರಿ |
ಅಪ್ಪಚ್ಚು
ಚಂದ್ರಕಲಾ
ಜೀವಿಜಯ
- Advertisement -

ಕೊಡಗಿನ ಮಡಿಕೇರಿಯ ಹಾಲಿ ಶಾಸಕ ಅಪ್ಪಚ್ಚು ರಂಜನ್. ಈ ಬಾರಿಯೂ ಕಣದಲ್ಲಿದ್ದಾರೆ. ಕಾಂಗ್ರೆಸ್‍ನ ಚಂದ್ರಕಲಾರವರಿಗೆ ಕಡೆಯ ಕ್ಷಣದಲ್ಲಿ ಟಿಕೆಟ್ ಸಿಕ್ಕಿದ್ದು ಕಾಂಗ್ರೆಸ್ಸಿನಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವು ಮಾದಪ್ಪ ಮತ್ತು ಎಂಎಲ್‍ಸಿ ವೀಣಾ ಅಚ್ಚಯ್ಯ ಇಬ್ಬರೂ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸುವ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಹೊರತು ಮಿಕ್ಕ ಸಮಯದಲ್ಲಿ ನಾಪತ್ತೆಯಾಗಿರುತ್ತಾರೆ. ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಇಲ್ಲಿ ಅಧಿಕಾರದಿಂದ ದೂರವಿದ್ದು ಈ ಬಾರಿ ಒಂದೊಳ್ಳೆಯ ಅವಕಾಶವಿದ್ದು ಕಾಂಗ್ರೆಸ್ ತಾನಾಗಿಯೇ ಕೈಚೆಲ್ಲಿಕೊಂಡಂತಾಗಿದೆ. ಜೆಡಿಎಸ್ ಅಭ್ಯರ್ಥಿ ಜೀವಿಜಯ ಅವರ ಬಗ್ಗೆ ಒಳ್ಳೆ ಅಭಿಪ್ರಾಯಗಳೇನೋ ಕೇಳಿಬರುತ್ತಿವೆಯಾದರೂ ಕಳೆದ ಬಾರಿ ಸೋತುಹೋದ ಇವರು ಮತ್ತೆ ಜನರ ಬಳಿ ಬರಲೇ ಇಲ್ಲವೆಂಬ ಆರೋಪವಿದೆ. ಸ್ವಂತ ಊರಿಗೆ 1 ಕಿಲೋಮೀಟರ್ ದೂರದಲ್ಲಿರುವ ಐಗೂರು ಮಸೀದಿಯ ಬಳಿ ಬಹಿರಂಗವಾಗಿ ಕುರಾನ್ ಸುಟ್ಟಾಗ ಸೌಜನ್ಯಕ್ಕೂ ಅಲ್ಪಸಂಖ್ಯಾತರನ್ನು ಸಂತೈಸದಿರುವುದು ಅವರ ಮೇಲೆ ಅಸಮಾಧಾನ ಮೂಡಿಸಿದೆ. ಜೊತೆಗೆ ಕಾಂಗ್ರೆಸ್ ಚಂದ್ರಕಲಾರವರು ಮತ್ತು ಜೆಡಿಎಸ್ ಜೀವಿಜಯ ಇಬ್ಬರೂ ಅರೆಭಾಷೆ ಗೌಡರಾಗಿರುವ ಕಾರಣ ಮತಗಳು ವಿಭಜನೆಯಾಗುವುದು ಖಚಿತವಾಗಿದೆ. ಈ ಕಾರಣಕ್ಕೆ ಬಿಜೆಪಿಯೇತರ ಶಾಸಕರು ಗೆಲ್ಲುವ ಎಲ್ಲ ಸಾಧ್ಯತೆಗಳೂ ಸಹ ಕ್ಷೀಣಿಸುವ ಸಾಧ್ಯತೆಗಳಿವೆ. ಹಾಲಿ ಶಾಸಕ ವಿರೋಧಿ ಅಲೆಯ ನಡುವೆಯೂ ಅಪ್ಪಚ್ಚು ರಂಜನ್ ಮತ್ತೆ ಆಯ್ಕೆಯಾದರೂ ಆಶ್ಚರ್ಯವಿಲ್ಲ.

ಬೋಪಯ್ಯ

ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವರದೇ ಮೇಲುಗೈ. ಕಾಂಗ್ರೆಸ್‍ನಿಂದ ಕೊಡವ ಸಮಾಜದ ಅರುಣ್ ಮಾಚಯ್ಯ, ಜೆಡಿಎಸ್‍ನಿಂದ ಸಂಕೇತ ಪೂವಯ್ಯ ಮತ್ತು ಬಿಜೆಪಿ ಕೆ.ಜಿ.ಬೋಪಯ್ಯ ಇವರು ಕಣದಲ್ಲಿದ್ದಾರೆ. ಕೊಡವ ಸಮಾಜ ಇಲ್ಲಿಯವರೆಗೆ ಬಿಜೆಪಿ ಶಾಸಕರನ್ನು ಗೆಲ್ಲಿಸಿಕೊಂಡೇ ಬಂದಿದ್ದು ಅದು ತಮ್ಮ ಪಾರುಪತ್ಯಕ್ಕೆ ಧಕ್ಕೆ ತರಲಾರದು ಎಂದು ಬಲವಾಗಿ ನಂಬಿದೆ. ಆ ಕಾರಣಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೊಡವ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರೂ ಸತತವಾಗಿ ಸೋಲುತ್ತಿದ್ದಾರೆ. ಸ್ವತಃ ಬಿಜೆಪಿಯೇ ಹಿಂದುಮುಂದು ನೋಡಿ ಬೋಪಯ್ಯಗೆ ಟಿಕೆಟ್ ಕೊಟ್ಟರೂ ಕೊಡವರು ಮತ್ತು ಮಲಯಾಳಿ ಈಡಿಗರು ಒಕ್ಕಲಿಗ ಕೆ.ಜಿ.ಬೋಪಯ್ಯರನ್ನೇ ಗೆಲ್ಲಿಸಬೇಕೆಂದು ಬಗೆದಿರುವಂತಿದೆ. ಇಲ್ಲೀವರೆಗೂ ಈ ಎರಡೂ ಜನಾಂಗ ತಮ್ಮಲ್ಲಿರುವ ಅಧಿಕಾರವನ್ನು ಕಾಯ್ದಿರಿಸಿಕೊಳ್ಳಲು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಅದೇ ದಾರಿ ಹಿಡಿಯುವ ಸಾಧ್ಯತೆಗಳೇ ಹೆಚ್ಚಿದೆಯಾದರು ಸದ್ಯದ ಮಟ್ಟಿಗೆ ಕಾಂಗ್ರೆಸ್‍ನ ಅರುಣ್ ಮಾಚಯ್ಯ ಕೂಡಾ ಗೆಲುವಿನ ಸಂಭಾವ್ಯತೆಯನ್ನು ಉಳಿಸಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಸಂವಿಧಾನ ಬದಲಾಯಿಸುವ ಬಯಕೆ ಹೊಂದಿದೆ: ಜೈರಾಮ್‌ ರಮೇಶ್‌

0
ಬಿಜೆಪಿಯ 'ಅಬ್‌ ಕಿ ಬಾರ್‌ 400 ಪಾರ್‌' ರ್ಯಾಲಿಯು ಸಂವಿಧಾನವನ್ನು ಬದಲಾಯಿಸುವ ಬಯಕೆಯನ್ನು ಸೂಚಿಸುತ್ತದೆ.  ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರ ಪರಂಪರೆ ಮತ್ತು ಅವರ ಮೌಲ್ಯಗಳನ್ನು ನಿಜವಾಗಿಯೂ ಗೌರವಿಸುತ್ತಾರೆಯೇ ಎಂದು...