Homeಚಳವಳಿಅಧಿಸೂಚಿತವಲ್ಲದ ವಿದ್ಯಾರ್ಥಿ ಯೂನಿಯನ್ ಜೊತೆ ಮಾತುಕತೆ ಇಲ್ಲ : ಜೆಎನ್ ಯು ಡೀನ್

ಅಧಿಸೂಚಿತವಲ್ಲದ ವಿದ್ಯಾರ್ಥಿ ಯೂನಿಯನ್ ಜೊತೆ ಮಾತುಕತೆ ಇಲ್ಲ : ಜೆಎನ್ ಯು ಡೀನ್

- Advertisement -
- Advertisement -

ಹಾಸ್ಟೆಲ್ ಶುಲ್ಕ ಹೆಚ್ಚಳ, ಡ್ರೆಸ್ ಕೋಡ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಅಧಿಸೂಚಿತವಲ್ಲದೆ ವಿದ್ಯಾರ್ಥಿಗಳ ಯೂನಿಯನ್ ಜೊತೆಗೆ ಮಾತುಕತೆ ನಡೆಸುವುದಿಲ್ಲ ಎಂದು ಜವಾಹರಲಾಲ್ ವಿಶ್ವವಿದ್ಯಾಲಯದ ಡೀನ್ ಉಮೇಶ್ ಕದಮ್ ಖಚಿತಪಡಿಸಿದ್ದಾರೆ.

ಕೆಲವು ಅಧ್ಯಾಪಕರು ಆಡಳಿತ ಮಂಡಳಿಗೆ ಬೆಂಬಲ ವ್ಯಕ್ತಪಡಿಸಿದ್ದು ಆಯ್ಕೆಗೊಂಡಿರುವ ಹಾಸ್ಟೆಲ್ ಪ್ರತಿನಿಧಿಗಳ ಜೊತೆ ಮಾತ್ರ ಮಾತುಕತೆ ನಡೆಸಲು ಆಡಳಿತ ಮಂಡಳಿ ಸಿದ್ದವಿದೆ ಎಂದು ಕದಮ್ ಹೇಳಿದ್ದಾರೆ.

ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ವಿದ್ಯಾರ್ಥಿಗಳು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ. ಇದುವರೆಗೂ ವಿದ್ಯಾರ್ಥಿ ಯೂನಿಯನ್ ಅನ್ನು ಅಧಿಸೂಚಿತಗೊಳಿಸಿಲ್ಲ. ಹಾಗಾಗಿ ಅವರ ಜೊತೆ ಮಾತನಾಡುವುದಿಲ್ಲ ಎಂದಿದ್ದಾರೆ. ಆದರೆ ಆಯ್ಕೆಗೊಂಡಿರುವ ಹಾಸ್ಟೆಲ್ ಪ್ರಿತಿನಿಧಿಗಳ ಜೊತೆ ಮಾತುಕತೆಗೆ ಸಿದ್ದ ಎಂದು ತಿಳಿಸಿದ್ದಾರೆ.

ಜೆಎನ್ ಯು ನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದೆ. ಆದರೆ ಇದುವರೆಗೂ ಫಲಿತಾಂಶವನ್ನು ಪ್ರಕಟಿಸಲಾಗಿಲ್ಲ. ಚುನಾವಣಾ ಫಲಿತಾಂಶದ ಸೀಲು ಮಾಡಿದ ಕವರ್ ನನ್ನ ಕಚೇರಿಯಲ್ಲಿಯೇ ಇದೆ. ನನ್ನಿಂದ ಸೀಲು ಮಾಡಿದ ಕವರ್ ಪಡೆಯದೆ ಚುನಾವಣಾ ಸಮಿತಿ ಫಲಿತಾಂಶವನ್ನು ಪ್ರಕಟಿಸಲು ಬರುವುದಿಲ್ಲ.

ಫಲಿತಾಂಶ ನನ್ನ ಬಳಿಯೇ ಇದೆ. ಹಾಗಾಗಿ ನಾವು ವಿದ್ಯಾರ್ಥಿ ಯೂನಿಯನ್ ಆಯ್ಕೆಯಾಗಿದೆ ಎಂದು ಹೇಗೆ ಘೋಷಿಸಲು ಸಾಧ್ಯ. ಮುಕ್ತ ಮಾತುಕತೆ ನಡೆಯುವುದಾದರೆ ಅದು ಆಯ್ಕೆಗೊಂಡ ಹಾಸ್ಟೆಲ್ ಪ್ರತಿನಿಧಿಗಳ ಜೊತೆಗೇ ಹೊರತು ಅಧಿಸೂಚಿತವಲ್ಲದ ವಿದ್ಯಾರ್ಥಿ ಯೂನಿಯನ್ ಜೊತೆ ಅಲ್ಲ ಎಂದು ಕದಮ್ ಸ್ಪಷ್ಟಪಡಿಸಿದ್ದಾರೆ.

ಅಧಿಕೃತವಲ್ಲದ ವಿದ್ಯಾರ್ಥಿ ಒಕ್ಕೂಟದ ಜೊತೆ ಆಡಳಿತ ಮಂಡಲಿಯೇಕೆ ಮಾತುಕತೆ ನಡೆಸಬೇಕು ಎಂದು ಪ್ರಶ್ನಿಸಿರುವ ಅವರು ಫಲಿತಾಂಶ ಪ್ರಕಟವಾದ ಬಳಿಕವೇ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...