ವಾಯುಸೇನೆ ದಾಳಿಯ ವಿಡಿಯೋ ಅಲ್ಲ, ಅದು ವಿಡಿಯೋ ಗೇಮ್ ಕ್ಲಿಪ್!

0

ಮಿಥ್ಯ: ಭಾರತೀಯ ವಾಯುಪಡೆ ಫೆಬ್ರವರಿ 26ರಂದು ಪಾಕಿಸ್ತಾನದ ಬಲಾಕೊಟ್ ಮೇಲೆ ನಡೆಸಿದ ದಾಳಿಯ ವಿಡಿಯೋ ಇದು ಎಂದು ಒಂದು ವಿಡಿಯೋವನ್ನು ಹರಿಬಿಡಲಾಗಿದೆ.

ಸತ್ಯ: ಈ ದಾಳಿ ಯಾವ ಬಲಾಕೋಟ್‌ನಲ್ಲಿ (ಈ ಹೆಸರಿನ ಎರಡು ಗ್ರಾಮಗಳಿವೆ. ಒಂದು ನಿಯಂತ್ರಣ ರೇಖೆಗೆ ಹೊಂದಿಕೊಂಡಿದ್ದರೆ, ಇನ್ನೊಂದು ಪಾಕಿಸ್ತಾನ ಪ್ರದೇಶದಲ್ಲಿದೆ) ಆಯಿತು? ನಿಜಕ್ಕೂ ಆ ವೇಳೆಯಲ್ಲಿ ಅಲ್ಲಿ ಭಯೋತ್ಪಾದಕರು ಇದ್ದರೆ? ಪಾಕ್ ಹೇಳಿದಂತೆ ಅವರ ವಾಯುಸೇನೆ ನಮ್ಮ ವಿಮಾನಗಳನ್ನು ಹಿಮ್ಮೆಟ್ಟಿಸಿತೇ? ನಮ್ಮ ಸೇನೆ ಬಾಂಬ್ ಎಸಿದಿದ್ದು ಭಯೋತ್ಪಾದಕರ ಕ್ಯಾಂಪ್ ಮೇಲೋ ಅಥವಾ ಖಾಲಿ ಜಾಗದಲ್ಲೋ?- ಈ ಎಲ್ಲ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟವಾದ, ಅಧಿಕೃತ ಉತ್ತರಗಳಿಲ್ಲ. ಎರಡೂ ದೇಶಗಳ ಅಧಿಕೃತ ಹೇಳಿಕೆಗಳು ಅಸ್ಪಷ್ಟತಿಯಿಂದ ಕೂಡಿದ್ದು, ಗೊದಲ ಹುಟ್ಟಿಸು ರೀತಿಯಲ್ಲಿವೆ, ಆದರೆ ಚಾನೆಲ್‌ಗಳು ಅಲ್ಲಿ 300-400 ಉಗ್ರರ ಹತ್ಯೆಯಾಗಿದೆ ಎನ್ನುತ್ತಿವೆ. ಯಾವುದಕ್ಕೂ ದಾಖಲೆಯಿಲ್ಲ.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಸೇನೆಯ ದಾಳಿ ಎಂದು ಸುಳ್ಳನ್ನು ಹರಡಲಾಗುತ್ತಿದೆ. ವಿಡಿಯೊ ವಿಳಾಸ:

https://www.facebook.com/NaMoFansKarunadu/videos/424845351597546/?t=4

‘ನಮೋ ಫ್ಯಾನ್ಸ್ ಕರುನಾಡು’ ಎಂಬ ’ಬಲಪಂಥಿಯ’ ಗುಂಪು ಕೂಡ ಈ ಫೇಕ್ ವಿಡಿಯೋವನ್ನು ಪ್ರಸಾರ ಮಾಡಿದೆ. ಆದರೆ, ಮೇಲುನೋಟಕ್ಕೇ ಈ ವಿಡಿಯೋ ಸಂಶಯಾತ್ಮಕವಾಗಿದೆ. ಇದರ ಜಾಡು ಹಿಡಿದು ಬೆನ್ನು ಹತ್ತಿದ ಅಲ್ಟ್‌ನ್ಯೂಸ್, ಇದೊಂದು ವಿಡಿಯೋ ಗೇಮ್‌ನ ಕ್ಲಿಪ್ಪಿಂಗ್ ಎಂಬುದನ್ನು ಸಾಬೀತು ಮಾಡಿದೆ. ಇದು 2015ರಲ್ಲಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ’ಅರ್ಮಾ 2’ ಎಂಬ ವಿಡಿಯೋ ಕ್ಲಿಪ್‌ನ ಒಂದು ತುಣುಕು ಅಷ್ಟೇ! ಮೂಲ ವಿಡಿಯೊದಲ್ಲಿ 20 ಸೆಕೆಂಡುಗಳ ನಂತರ ಬರುವ ದೃಶ್ಯಾವಳಿಯನ್ನು ಕಾಪಿ ಮಾಡಿ, ಸೇನಾ ದಾಳಿಯ ವಿಡಿಯೋ ಎಂದು ದಾರಿ ತಪ್ಪಿಸಲಾಗುತ್ತಿದೆ.

ಮೂಲ ವಿಡಿಯೋ ಗೇಮ್ ವಿಳಾಸ: https://youtu.be/E7CnMEhF54o

ನಮಮ ಸೇನೆ ನಿಜಕ್ಕೂ ಭಯೋತ್ಪಾದಕರನ್ನು ಹೊಡೆದು ಹಾಕಿದ್ದರೆ, ಅದಕ್ಕಿಂತ ಹೆಮ್ಮೆಯ ವಿಷಯ ಯಾವುದಿದೆ? ಆದರೆ ಇಡೀ ಘಟನೆಯ ಸುತ್ತದ ವಿವರಗಳೇ ಅಸ್ಪಷ್ಟವಾಗಿವೆ. ಅಂಥದ್ದರಲ್ಲಿ ’ಭಕ್ತರು’ ಫೇಕ್ ವಿಡಿಯೋ ಹಾಕುತ್ತ ಇನ್ನಷ್ಟು ಗೊಂದಲ ಮೂಡಿಸುತ್ತಿದ್ದಾರೆ.

Donate

ಸ್ವತಂತ್ರ ಪತ್ರಿಕೋದ್ಯಮವು ನಿಮ್ಮ ಬೆಂಬಲವಿಲ್ಲದೇ ನಡೆಯಲಾರದು. ವಂತಿಗೆ ನೀಡಲು ಕೆಳಗೆ ಕ್ಲಿಕ್ ಮಾಡಿ.
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here