Homeಮುಖಪುಟ`ಅಯೋಧ್ಯೆ ತೀರ್ಪನ್ನು ಗೌರವಿಸುತ್ತೇವೆ, ಆದರೆ ತೃಪ್ತಿಯಿಲ್ಲ': ಸುನ್ನಿ ವಕ್ಫ್ ಬೋರ್ಡ್ ವಕೀಲ

`ಅಯೋಧ್ಯೆ ತೀರ್ಪನ್ನು ಗೌರವಿಸುತ್ತೇವೆ, ಆದರೆ ತೃಪ್ತಿಯಿಲ್ಲ’: ಸುನ್ನಿ ವಕ್ಫ್ ಬೋರ್ಡ್ ವಕೀಲ

- Advertisement -
- Advertisement -

ದಶಕಗಳ ಹಳೆಯ ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಅಂತಿಮ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ವಿವಾದಿತ ಸ್ಥಳವನ್ನು ಸರ್ಕಾರಿ ನೇತೃತ್ವದ ಟ್ರಸ್ಟ್ ಗೆ ವಹಿಸಿದ್ದು, ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಿಸಿಕೊಳ್ಳಲು ಅಯೋಧ್ಯೆಯಲ್ಲೆ ಬೇರೆಡೆ ಐದು ಎಕರೆ ಜಮೀನು ನೀಡುವಂತೆ ಆದೇಶಿಸಿದೆ.

ತೀರ್ಪು ಹೊರಬಿದ್ದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿರುವ ಸುನ್ನಿ ವಕ್ಫ್ ಮಂಡಳಿ ಪರ ವಕೀಲ ಜಫರ್ಯಾಬ್ ಜಿಲಾನಿಯವರು “ನಾವು ತೀರ್ಪನ್ನು ಗೌರವಿಸುತ್ತೇವೆ, ಆದರೆ ತೀರ್ಪಿನ ಬಗ್ಗೆ ನಮಗೆ ತೃಪ್ತಿಯಿಲ್ಲ. ಮುಂದಿನ ಕ್ರಮಗಳ ಬಗ್ಗೆ ನಾವು ಚರ್ಚಿಸಿ ತೀರ್ಮಾನಿಸುತ್ತೇವೆ. ಈ ತೀರ್ಪಿನಲ್ಲಿ ಹಲವು ವೈರುಧ್ಯಗಳಿದ್ದು ಮಂಡಳಿಯು ತೀರ್ಪಿನ ಪ್ರತಿಯನ್ನು ಮತ್ತೊಮ್ಮೆ ಪರಿಶೀಲಿಸಿ,  ತೀರ್ಪು ಮರುಪರಿಶೀಲನೆಯ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆ ಎಂಬ ನಿರ್ಧಾರಕ್ಕೆ ಬರಲಾಗುವುದು” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...